Ganesh Chaturthi 2022: ಮುತ್ತಮ್ಮನ ಕೈಯಲ್ಲಿ ಜೀವತಳೆಯುವ ಸಾಂಪ್ರದಾಯಿಕ ಗಣಪ! ಮನೆಮಂದಿಯಿಂದಲೂ ಮೂರ್ತಿ ತಯಾರಿಕೆ

ಸಾಂಪ್ರದಾಯಿಕ ರೀತಿಯಲ್ಲಿ ನಾವು ಗಣೇಶ ಮೂರ್ತಿಗಳನ್ನು ತಯಾರಿಸುವುದರಿಂದ ಮೈಸೂರು ಶೈಲಿಯ ಗಣೇಶ ಮೂರ್ತಿಗಳಿಗೆ ಹೆಚ್ಚು ಬೇಡಿಕೆ ಇದೆ. ಜೊತೆಗೆ ದಿನದಿಂದ ದಿನಕ್ಕೆ ಮಣ್ಣಿನ ಗಣೇಶ ಮೂರ್ತಿಗಳ ಬೇಡಿಕೆ ಹೆಚ್ಚಾಗುತ್ತಿದ್ದು, ಅದಕ್ಕೆ ತಕ್ಕಂತೆ ನಾವು ಮೂರ್ತಿಗಳ ನಿರ್ಮಾಣ ಮಾಡಿ ಗ್ರಾಹಕರಿಗೆ ನೀಡುತ್ತಿದ್ದೇವೆ ಅಂತಾರೆ ಮುತ್ತಮ್ಮ.

ಮುತ್ತಮ್ಮನ ಕೈಯಲ್ಲಿ ತಯಾರಾಗುವ ಸಾಂಪ್ರದಾಯಿಕ ಗಣಪ

ಮುತ್ತಮ್ಮನ ಕೈಯಲ್ಲಿ ತಯಾರಾಗುವ ಸಾಂಪ್ರದಾಯಿಕ ಗಣಪ

  • Share this:
ಆನೇಕಲ್: ಪಿಓಪಿ (POP) ಗಣಪತಿ ಮೂರ್ತಿಗಳ (Ganapathi Idols) ಪೈಪೋಟಿ ನಡುವೆಯೂ ಇಲ್ಲೊಂದು ಕುಟುಂಬ (Family) ಇಂದಿಗೂ ಸಹ ಸಾಂಪ್ರದಾಯಿಕ (Traditional) ಪರಿಸರ ಸ್ನೇಹಿ (Eco Friendly) ಮಣ್ಣಿನ ಗಣಪತಿ ಮೂರ್ತಿಗಳ (Clay Ganpati idol) ತಯಾರಿಕೆಯಲ್ಲಿ ತೊಡಗಿಕೊಂಡಿದೆ. ಹೌದು ಆನೇಕಲ್ (Anekal) ಪಟ್ಟಣದ ಚಿತ್ರಗಾರ ಮುತ್ತಮ್ಮ ಎಂಬುವರ ಕುಟುಂಬ ಇಂದಿಗೂ  ಮಣ್ಣಿನ ಗಣಪತಿ ಮೂರ್ತಿ, ಅದರಲ್ಲೂ ಸಾಂಪ್ರದಾಯಿಕ ಶೈಲಿಯ ಗಣಪತಿ ಮತ್ತು ಗೌರಮ್ಮ (Gowramma) ಮೂರ್ತಿಗಳ ತಯಾರಿಕೆಯಲ್ಲಿ ಹೆಸರುವಾಗಿಯಾಗಿದೆ. ಕಳೆದ ಅರ್ಧ ಶತಮಾನದಿಂದ ವಂಶಪಾರಂಪರ್ಯವಾಗಿ ಪರಿಸರ ಸ್ನೇಹಿ ಗಣೇಶ ಗೌರಿ ಮೂರ್ತಿಗಳ ತಯಾರಿಕೆಯಲ್ಲಿ ಮುತ್ತಮ್ಮ ಮತ್ತು ಕುಟುಂಬ ತೊಡಗಿಕೊಂಡಿದೆ.

ಶತಮಾನಗಳಿಂದ ಗೌರಿ ಗಣೇಶ ಮೂರ್ತಿ ತಯಾರಿಕೆ

ಚಿತ್ರಗಾರ ಮುತ್ತಮ್ಮನ ಮನೆ ಮಂದಿಯೆಲ್ಲ ಹೀಗೆ ಪರಿಸರ ಸ್ನೇಹಿ ಮಣ್ಣಿನ ಗಣೇಶ ಮತ್ತು ಗೌರಮ್ಮ ಮೂರ್ತಿಗಳ ತಯಾರಿಕೆಯಲ್ಲಿ ತೊಡಗಿಕೊಂಡಿರುವ ದೃಶ್ಯ ಕಂಡುಬರುವುದು ಆನೇಕಲ್ ಪಟ್ಟಣದ ಬ್ರಾಹ್ಮಣರ ಬೀದಿಯಲ್ಲಿ. ಕಳೆದ ಅರ್ಧ ಶತಮಾನದಿಂದ ವಂಶಪಾರಂಪರ್ಯವಾಗಿ ಪರಿಸರ ಸ್ನೇಹಿ ಗಣೇಶ ಗೌರಿ ಮೂರ್ತಿಗಳ ತಯಾರಿಕೆಯಲ್ಲಿ ಮುತ್ತಮ್ಮ ಮತ್ತು ಕುಟುಂಬ ತೊಡಗಿಕೊಂಡಿದೆ.

ಮೂರ್ತಿ ತಯಾರಿಕೆಯಲ್ಲಿ ನಿರತ ಮುತ್ತಮ್ಮ


ತಂದೆಯಿಂದ ಬಂದ ಬಳುವಳಿಯೇ ಮೂರ್ತಿ ತಯಾರಿಕೆ

ತಂದೆಯಿಂದ ಬಳುವಳಿಯಾಗಿ ಬಂದ ಈ ಕಸುಬನ್ನು ಮಕ್ಕಳಿಗೆ ಧಾರೆಯೆರೆದಿದ್ದು, ಇಡೀ ಕುಟುಂಬ ಇಂದಿಗೂ ಪರಿಸರಕ್ಕೆ ಮಾರಕವಾದ ಪಿಓಪಿ ಬಳಸದೇ, ಸ್ಥಳೀಯವಾಗಿ ದೊರೆಯುವ ಕೆರೆ ಮಣ್ಣನ್ನು ಬಳಸಿಕೊಂಡು ಕೈಯಲ್ಲೇ ತಿದ್ದಿ ತೀಡಿ ಮೂರ್ತಿಗಳನ್ನು ತಯಾರಿಸುತ್ತಾರೆ. ಗ್ರಾಹಕರ ಬೇಡಿಕೆಗೆ ತಕ್ಕಂತೆ ಗಣೇಶ ಮೂರ್ತಿಗಳನ್ನು ನಿರ್ಮಿಸಿ ಕೊಡಲಾಗುತ್ತದೆ ಎಂದು ಗಣೇಶ ಮೂರ್ತಿ ತಯಾರಕಿ ಮುತ್ತಮ್ಮ ತಿಳಿಸಿದ್ದಾರೆ.

ನೈಸರ್ಗಿಕ ಬಣ್ಣಗಳ ಬಳಕೆ


ಇದನ್ನೂ ಓದಿ: Ganesh Chaturthi 2022: ಎಲ್ಲೆಲ್ಲೂ ನೀನಿರುವೆ ಮಹಾಗಣೇಶ! ಪತ್ತೆಯಾಯ್ತು 13ನೇ ಶತಮಾನದ ಪುಟ್ಟ ಗಣಪನ ಮೂರ್ತಿ!

ಮೈಸೂರು ಶೈಲಿ ಗಣೇಶನ ಮೂರ್ತಿಗೆ ಬೇಡಿಕೆ

ಸಾಂಪ್ರದಾಯಿಕ ರೀತಿಯಲ್ಲಿ ನಾವು ಗಣೇಶ ಮೂರ್ತಿಗಳನ್ನು ತಯಾರಿಸುವುದರಿಂದ ಮೈಸೂರು ಶೈಲಿಯ ಗಣೇಶ ಮೂರ್ತಿಗಳಿಗೆ ಹೆಚ್ಚು ಬೇಡಿಕೆ ಇದೆ. ಜೊತೆಗೆ ದಿನದಿಂದ ದಿನಕ್ಕೆ ಮಣ್ಣಿನ ಗಣೇಶ ಮೂರ್ತಿಗಳ ಬೇಡಿಕೆ ಹೆಚ್ಚಾಗುತ್ತಿದ್ದು, ಅದಕ್ಕೆ ತಕ್ಕಂತೆ ನಾವು ಮೂರ್ತಿಗಳ ನಿರ್ಮಾಣ ಮಾಡಿ ಗ್ರಾಹಕರಿಗೆ ನೀಡುತ್ತಿದ್ದೇವೆ ಅಂತಾರೆ ಮುತ್ತಮ್ಮ.

ಮನೆಮಂದಿಯ ಸಾಥ್


ಪರಿಸರ ಸ್ನೇಹಿ ಗಣಪನಿಗೆ ತಮಿಳುನಾಡಲ್ಲೂ ಬೇಡಿಕೆ

ಪಿಓಪಿ ಬಳಸದೇ ಜೇಡಿ ಮಣ್ಣು, ತೆಂಗಿನ ನಾರು, ಬತ್ತದಹುಲ್ಲು, ಬತ್ತದ ಒಟ್ಟು ಬಳಸಿ ಗಣೇಶ ತಯಾರಿಸಲಾಗುತ್ತದೆ. ಜೊತೆಗೆ ಎಷ್ಟೆ ಡಿಮ್ಯಾಂಡ್ ಇದ್ರು ಸಹ ಪರಿಸರಕ್ಕೆ ಹಾನಿಕಾರಕವಾದ ಬಣ್ಣ ಬಲಸದೇ ವಾಟರ್ ಕಲರ್ ಬಳಸಿ ಗಣೇಶ ತಯಾರಿಕೆ ಮಾಡುತ್ತಿದ್ದೆವೆ. ಹಾಗಾಗಿ ತಮಿಳುನಾಡು ಸೇರಿದಂತೆ ನಗರದ ವಿವಿಧ ಕಡೆಯಿಂದ ಗಣೇಶ ಮೂರ್ತಿಗಳನ್ನು  ಖರೀದಿಸಲು ಗ್ರಾಹಕರು ಆಗಮಿಸುತ್ತಾರೆ.

ತಮಿಳುನಾಡಲ್ಲೂ ಮೂರ್ತಿಗೆ ಬೇಡಿಕೆ


ಈ ಬಾರಿ ಪೌರಾಣಿಕ ಮುದ್ಗಲ್ ಗಣೇಶನ ತಯಾರಿ

ಈ ಬಾರಿ ಪೌರಾಣಿಕ ಮುದ್ಗಲ್ ಗಣೇಶ ಮೂರ್ತಿಗಳನ್ನು ತಯಾರಿಸಿರುವುದು ವಿಶೇಷವಾಗಿದೆ. ಹಾಗೂ ಗ್ರಾಹಕರ ಬೇಡಿಕೆಯಂತೆ ಮೂರ್ತಿಗಳನ್ನು ನಿರ್ಮಿಸಿ ನೀಡಲಾಗುತ್ತಿದೆ ಎಂದು ಗಣೇಶ ತಯಾರಕಿ ಮುತ್ತಮ್ಮ  ಕುಟುಂಬದವರು ತಿಳಿಸಿದ್ದಾರೆ.

ಇದನ್ನೂ ಓದಿ: Southadka: ಘಂಟೆಗೆ ಒಲಿಯುತ್ತಾನೆ ಈ ಗಣೇಶ! ಸೌತಡ್ಕದ ಬಯಲಲ್ಲಿ ಗಣಪ ನಿಂತ ಕಥೆಯೇ ರೋಚಕ

ಪರಿಸರ ಸ್ನೇಹಿ ಗಣಪನಿಗಿರಲಿ ನಿಮ್ಮ ಬೆಂಬಲ

ಒಟ್ನಲ್ಲಿ ಲಾಭಕ್ಕಾಗಿ ಪರಿಸರಕ್ಕೆ ಮಾರಕವಾದ ಪಿಓಪಿ ಗಣೇಶನ ಮೂರ್ತಿಗಳನ್ನು ಕಾನೂನುಬಾಹಿರವಾಗಿ ಮಾರಾಟ ಮಾಡುವವರ ನಡುವೆ ಇಂದಿಗು ಪರಿಸರ ಸ್ನೇಹಿ ಗಣೇಶ ಮೂರ್ತಿಗಳನ್ನು ತಯಾರಿಕೆಯಲ್ಲಿ ತೊಡಗಿಕೊಂಡಿರುವ ಮುತ್ತಮ್ಮ ಪರಿಸರಕ್ಕೆ ಅಳಿಲು ಸೇವೆ ಮಾಡುತ್ತಿದ್ದು,  ನಾವೆಲ್ಲರೂ ಸಹ ಮಣ್ಣಿನ ಗಣೇಶನನ್ನೆ ಕೊಂಡು ಪೂಜಿಸುವ ಮೂಲಕ ಪರಿಸರ ಮಾಲಿನ್ಯ ತಡೆಯುಗಟ್ಟಬೇಕಿದೆ.
Published by:Annappa Achari
First published: