HOME » NEWS » State » GANESH CHATURTHI 2020 KARNATAKA GOVERNMENT STILL NOT RELEASED GANESH FESTIVAL GUIDELINES SCT

Ganesh Chaturthi 2020: ಗಣೇಶ ಚತುರ್ಥಿಗೆ ನಾಲ್ಕು ದಿನ ಬಾಕಿ; ಇನ್ನೂ ಬಿಡುಗಡೆಯಾಗಿಲ್ಲ ಸರ್ಕಾರದ ಮಾರ್ಗಸೂಚಿ

Ganesh Chaturthi 2020: ಉತ್ತರ ಕನ್ನಡ ಜಿಲ್ಲೆಯಲ್ಲಿ ಗಣಪತಿ ಹಬ್ಬದಷ್ಟು ಸಂಭ್ರಮ ಬೇರೆ ಹಬ್ಬಗಳಿಗೆ ಇರುತ್ತಿರಲಿಲ್ಲ. ಹಬ್ಬದ ಆಚರಣೆ ಬಗ್ಗೆ ಸರಕಾರದಿಂದ ಮಾರ್ಗಸೂಚಿ ಬಿಡುಗಡೆ ಆಗದ ಹಿನ್ನೆಲೆಯಲ್ಲಿ ಕಾರವಾರ ಗಣೇಶೋತ್ಸವ ಸಮಿತಿಯವರು ಗೊಂದಲದಲ್ಲೇ ಇದ್ದಾರೆ.

news18-kannada
Updated:August 18, 2020, 10:20 AM IST
Ganesh Chaturthi 2020: ಗಣೇಶ ಚತುರ್ಥಿಗೆ ನಾಲ್ಕು ದಿನ ಬಾಕಿ; ಇನ್ನೂ ಬಿಡುಗಡೆಯಾಗಿಲ್ಲ ಸರ್ಕಾರದ ಮಾರ್ಗಸೂಚಿ
ಸಾಂದರ್ಭಿಕ ಚಿತ್ರ
  • Share this:
ಕಾರವಾರ: ಇನ್ನೇನು ಗಣಪತಿ ಹಬ್ಬಕ್ಕೆ ಒಂದೇ ವಾರ ಉಳಿದಿದೆ. ಇಷ್ಟು ವರ್ಷ ಗಣಪತಿ ಹಬ್ಬ ಬಂತು ಎಂದರೆ ಒಂದು ತಿಂಗಳ ಮೊದಲೇ ಹಬ್ಬದ ಸಂಭ್ರಮ ಸಡಗರ ಮನೆ ಮಾಡುತ್ತಿತ್ತು. ಕಾರವಾರದಲ್ಲಿ ಸಾರ್ವಜನಿಕ ಗಣೇಶೋತ್ಸವ ಸಮಿತಿಯವರ ಸಂಭ್ರಮ ಕಳೆಗಟ್ಟುತ್ತಿತ್ತು. ಆದರೆ, ಈ ಬಾರಿ ಕೊರೋನಾ ಮಹಾಮಾರಿಗೆ ಹಬ್ಬದ ಸಂಭ್ರಮ ಸಡಗರ ಕಳೆ ಕಳೆದುಕೊಂಡಿದೆ. ಹಬ್ಬದ ಆಚರಣೆ ಬಗ್ಗೆ ಸರಕಾರದಿಂದ ಮಾರ್ಗಸೂಚಿ ಬಿಡುಗಡೆ ಆಗದ ಹಿನ್ನೆಲೆಯಲ್ಲಿ ಗಣೇಶೋತ್ಸವ ಸಮಿತಿಯವರು ಗೊಂದಲದಲ್ಲೇ ಇದ್ದಾರೆ.

ಉತ್ತರ ಕನ್ನಡ ಜಿಲ್ಲೆಯಲ್ಲಿ ಗಣಪತಿ ಹಬ್ಬದಷ್ಟು ಸಂಭ್ರಮ ಬೇರೆ ಹಬ್ಬಗಳಿಗೆ ಇರುತ್ತಿರಲಿಲ್ಲ. ಮಹಾರಾಷ್ಟ್ರದ ಸಾಂಪ್ರದಾಯಿಕ ಪದ್ದತಿಯ ಪ್ರಭಾವ ಕಾರವಾರ ಸುತ್ತಮುತ್ತ ಪಸರಿಸಿಕೊಂಡಿದ್ದು ಇಷ್ಟು ವರ್ಷ ಮಹಾರಾಷ್ಟ್ರ ಪದ್ದತಿ ಮತ್ತು ಸ್ಥಳೀಯ ಸಾಂಪ್ರದಾಯಿಕ ಪದ್ದತಿಯೊಂದಿಗೆ ಗಣಪತಿ ಹಬ್ಬವನ್ನ ಅತಿ ಅದ್ಧೂರಿಯಾಗಿ ಆಚರಣೆ ಮಾಡಲಾಗುತ್ತಿತ್ತು. ಈ ಬಾರಿ ಇತಿಹಾಸದಲ್ಲೆ ಮೊದಲು ಎಂಬಂತೆ ಹಬ್ಬಕ್ಕೆ ಮಹಾಮಾರಿ ಕೊರೋನಾ ವಕ್ಕರಿಸಿಕೊಂಡಿದ್ದು ಜನರ ಸಂಭ್ರಮಕ್ಕೆ ಕಡಿವಾಣ ಹಾಕಿ ಸಂಭ್ರಮ ಸಡಗರದ ಕಳೆ ಮಾಯವಾಗಿದೆ. ಸರಕಾರದಿಂದ ಮತ್ತು ಸ್ಥಳೀಯ ಜಿಲ್ಲಾಡಳಿತದಿಂದ ಸಾರ್ವಜನಿಕ ಗಣೇಶೋತ್ಸವ ಆಚರಣೆಗೆ ಸೂಕ್ತ ಮಾರ್ಗಸೂಚಿ ಬಾರದ ಕಾರಣ ಸಾರ್ವಜನಿಕ ಗಣೇಶೋತ್ಸವ ಸಮಿತಿಯವರು ಇನ್ನು ಕೂಡ ಗೊಂದಲದಲ್ಲೆ ಇದ್ದಾರೆ.

ಇದನ್ನೂ ಓದಿ: ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿಯಲ್ಲಿ 5 ದಿನ ಭಾರೀ ಮಳೆ; ಕರ್ನಾಟಕದ ಜಲಾಶಯಗಳ ಇಂದಿನ ನೀರಿನ ಮಟ್ಟ ಹೀಗಿದೆ

ಹಬ್ಬಕ್ಕೆ ಹದಿನೈದು ದಿನದ ಮುಂಚಿವಾಗಿಯೇ ಪೆಂಡಾಲ್ ಹಾಕಿ ತಯಾರಿಯಲ್ಲಿ ತೊಡಗಿಕೊಂಡಿರುತ್ತಿದ್ದ ಸಮಿತಿಯ ಸದಸ್ಯರು ಇನ್ನು ಕೂಡ ಗೊಂದಲದಲ್ಲೆ ಇದ್ದು ಕೇವಲ ಗಣೇಶನ ವಿಗ್ರಹ ನಿರ್ಮಿಸಿ ಕೊಡುವಂತೆ ಮಾತ್ರ ಕಲಾಕಾರರಿಗೆ ಹೇಳಿದ್ದಾರೆ. ಆದರೆ, ಹಬ್ಬದ ಸಂಭ್ರಮ ಮಾತ್ರ ಜಿಲ್ಲೆಯಲ್ಲಿ ಎಲ್ಲೂ ಕಾಣುತ್ತಿಲ್ಲ. ಹಬ್ಬದ ದಿನಾಂಕ ಕಣ್ಣು ಮುಂದೆಯೇ ಇದ್ದರೂ ಕೊರೋನಾ ಹಿನ್ನೆಲೆಯಲ್ಲಿ ಹಬ್ಬದ ಆಚರಣೆಗೆ ಬೇಕಾದ ಮಾರ್ಗಸೂಚಿ ಇನ್ನು ಬಾರದಿರುವುದು ಸಾಕಷ್ಟು ಗೊಂದಲದಲ್ಲೆ ದಿನ ಮುಂದೆ ಹೋಗುತ್ತಿದೆ.

ಇದನ್ನೂ ಓದಿ: ಸಾರ್ವಜನಿಕ ಗಣಪತಿ ಪ್ರತಿಷ್ಠಾಪನೆ ಮಾಡೇ ಮಾಡುತ್ತೇವೆ; ಪ್ರಮೋದ್ ಮುತಾಲಿಕ್ ಸವಾಲು

ಈ ಬಗ್ಗೆ ಜಿಲ್ಲಾಧಿಕಾರಿಯವರನ್ನು ಕೇಳಿದರೆ ಸಾರ್ವಜನಿಕ ಗಣೇಶೋತ್ಸವ ಆಚರಣೆ ಮಾಡುವವರು ಆಯಾ ಸ್ಥಳೀಯ ಆಡಳಿತಕ್ಕೆ ಮಾಹಿತಿ ನೀಡಬೇಕು. ಜತೆಗೆ ಅಗತ್ಯಕ್ಕಿಂತ ಹೆಚ್ಚು ಜನ ಅಲ್ಲಿ ಇರಬಾರದು. ಒಂದೋ ಅಥವಾ ಎರಡೇ ದಿನದಲ್ಲಿ ಹಬ್ಬ ಆಚರಿಸಿ ಮುಗಿಸಬೇಕು ಎನ್ನುತ್ತಾರೆ. ಆದರೆ, ಮಾರ್ಗಸೂಚಿ ಇನ್ನು ಕೂಡ ಸಾರ್ವಜನಿಕವಾಗಿ ಪ್ರಕಟವಾಗದೆ ಇರುವುದು ಸಾಕಷ್ಟು ಗೊಂದಲಕ್ಕೆ ಕಾರಣವಾಗಿದೆ. ಸರಕಾರದ ಕಟ್ಟುನಿಟ್ಟಿನ ಕ್ರಮವನ್ನ ಪಾಲಿಸೋದ್ರ ಜತೆಗೆ ಸಾಮೂಹಿಕವಾಗಿ ಆಚರಿಸುವ ಹಬ್ಬವನ್ನ ಸ್ಥಳೀಯ ಆಡಳಿತಕ್ಕೆ ಬಿಡಲಾಗಿದ್ದು ಧಾರ್ಮಿಕ ಭಾವನೆಗೆ ಧಕ್ಕೆ ಬಾರದ ಹಾಗೆ ಆಚರಣೆ ಮಾಡಬೇಕು ಎಂಬುದು ಅಧಿಕಾರಿಗಳ ಮಾತು.
ಒಟ್ಟಾರೆ ಸಂಭ್ರಮ ಸಡಗರದಿಂದ ಆಚರಿಸುವ ಗಣಪತಿ ಹಬ್ಬಕ್ಕೆ ಕೊರೋನಾ ಮಹಾಮಾರಿ ಅಡ್ಡಗಾಲು ಹಾಕಿದೆ. ಸರಕಾರದ ಮಾರ್ಗಸೂಚಿಯಂತೆ ಹಬ್ಬ ಆಚರಣೆ ಮಾಡಲು ಎಲ್ಲರೂ ತಯಾರಿಯಲ್ಲಿ ಇದ್ದಾರೆ. ಆದರೆ, ಮಾರ್ಗಸೂಚಿ ಇನ್ನೂ ಬಾರದಿರುವುದು ಗೊಂದಲಕ್ಕೆ ಕಾರಣವಾಗಿದ್ದು ಹಬ್ಬ ಹೇಗೆ ಆಚರಣೆ ಆಗುತ್ತದೆ ಎಂಬುದೇ ದೊಡ್ಡ ಪ್ರಶ್ನೆಯಾಗಿದೆ.
Published by: Sushma Chakre
First published: August 15, 2020, 11:32 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories