Ganesh Chaturthi 2020: ಈ ಬಾರಿ ಅರಿಶಿಣ ಪುಡಿಯಿಂದ ತಯಾರಿಸಲಾದ ಆರೋಗ್ಯಸ್ನೇಹಿ ಗಣಪನನ್ನು ಆರಾಧಿಸಿ!

Eco Friendly Ganesh Chaturthi: ಅರಿಶಿಣ ಪುಡಿ ಹೆಚ್ಚಿನ ನಿರೋಧಕ ಶಕ್ತಿ ಹೊಂದಿರುವುದರಿಂದ ಮಾಲಿ್ನಯ ನಿಯಂತ್ರಣ ಮಂಡಳಿ ಅರಿಶಿಣ ಪುಡಿಯನ್ನೇ ಬಳಸಿಕೊಂಡು ಆರೋಗ್ಯ ಸ್ನೇಹಿ ಅರಿಶಿಣ ಗಣಪನನ್ನು ಮಾಡುವ ವಿಧಾನದ ಬಗ್ಗೆ ಒಂದು ನಿಮಿಷದ ವಿಡಿಯೋ ಸಿದ್ಧಪಡಿಸಿದೆ.

ಅರಿಶಿಣದಿಂದ ಸಿದ್ಧಪಡಿಸಲಾದ ಆರೋಗ್ಯಸ್ನೇಹಿ ಗಣಪ

ಅರಿಶಿಣದಿಂದ ಸಿದ್ಧಪಡಿಸಲಾದ ಆರೋಗ್ಯಸ್ನೇಹಿ ಗಣಪ

  • Share this:
ಮಂಗಳೂರು (ಆ. 22): ನಾವೆಲ್ಲ ಪರಿಸರಸ್ನೇಹಿ ಗಣಪನನ್ನು ನೋಡಿದ್ದೇವೆ, ಆರಾಧಿಸಿದ್ದೇವೆ. ಆದರೆ, ಈ ಬಾರಿ ಗಣೇಶ ಚತುರ್ಥಿಗೆ 'ಆರೋಗ್ಯ ಸ್ನೇಹಿ' ಗಣಪನನ್ನು ನಾವು ಆರಾಧಿಸಬಹುದು.‌ ಯಾರೆಲ್ಲ ಮನೆಯಲ್ಲಿಯೇ ಕೂತು ಸಿಂಪಲ್ ಆಗಿ ವಿಘ್ನ ವಿನಾಶಕನನ್ನು ಪೂಜಿಸುವರೋ, ಅಂಥವರಿಗಾಗಿಯೇ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು ಇಂಥದ್ದೊಂದು ಟಿಪ್ಸ್ ನೀಡಿದೆ.

ಈ ಬಾರಿಯ ಗಣೇಶ ಚತುರ್ಥಿ ಹಬ್ಬ ಆಚರಿಸಲು ಸರಕಾರ ಒಂದಿಷ್ಟು ನಿಯಮಗಳನ್ನು ವಿಧಿಸಿದೆ. ಆ ನಿಯಮಗಳ ಅನುಸಾರವಾಗಿಯೇ ವಿಘ್ನ ನಿವಾರಕನನ್ನು ಭಕ್ತರು ಪೂಜಿಸಬಹುದು.‌ ಆದರೆ, ನಾಡಿಗೆ ಅಂಟಿರುವ ಕೊರೋನಾ ಮಹಾಮಾರಿ ನಡುವೆ ಬೀದಿಗಿಳಿಯುವುದೇ ಕಷ್ಟಕರವೆನಿಸಿದೆ. ಇಂತಹ ಸಂದಿಗ್ಧತೆಯಲ್ಲಿ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು ಆರೋಗ್ಯ ಸ್ನೇಹಿ ಗಣಪನನ್ನು ಆರಾಧಿಸುವಂತೆ ಮನವಿ ಮಾಡುತ್ತಿದೆ. ಮಾತ್ರವಲ್ಲದೆ ಇದಕ್ಕೆ ಬೇಕಾದ ಮಾರ್ಗದರ್ಶನವನ್ನೂ ಮಂಡಳಿಯೇ ತನ್ನ ಅಧಿಕೃತ ವೆಬ್​ಸೈಟ್ ಮೂಲಕ ಸಿಂಪಲ್ ಆಗಿ ನೀಡುತ್ತಿದೆ.



ಇದನ್ನೂ ಓದಿ: ಸ್ವಾತಂತ್ರ್ಯ ಪೂರ್ವದಿಂದಲೂ ಗಣೇಶನನ್ನು ತಯಾರಿಸುತ್ತಿದೆ ಮಂಗಳೂರಿನ ಈ ಕುಟುಂಬ: ಅಮೆರಿಕಾ, ಲಂಡನ್​ಗೂ ರವಾನೆ!

ಕೊರೋನಾ ಸೋಂಕು ತೀವ್ರವಾಗುತ್ತಲೇ ಜನರು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಸಾಮಗ್ರಿಗಳ ಮೊರೆ ಹೋಗುತ್ತಿದ್ದಾರೆ. ಅಂತೆಯೇ ಅರಿಶಿಣ ಪುಡಿ ಅತೀ ಹೆಚ್ಚಿನ ನಿರೋಧಕ ಶಕ್ತಿ ಹೊಂದಿರುವುದರಿಂದ ಮಂಡಳಿಯು ಅರಿಶಿಣ ಪುಡಿಯನ್ನೇ ಬಳಸಿಕೊಂಡು ಆರೋಗ್ಯ ಸ್ನೇಹಿ ಅರಿಶಿಣ ಗಣಪನನ್ನು ಮಾಡುವ ವಿಧಾನದ ಬಗ್ಗೆ ಒಂದು ನಿಮಿಷದ ವಿಡಿಯೋ ಮೂಲಕ ತಿಳಿಯಪಡಿಸಿದೆ. ಅಲ್ಲದೆ, ಪ್ರಥಮ ಪೂಜಿತನಿಗೆ ಅದ್ಯಾವ ರೀತಿಯಾಗಿ ಸುಂದರ ರೂಪ ಕೊಡಬಹುದು ಎಂಬುದನ್ನು ಕೂಡ ವೀಡಿಯೋ ಮೂಲಕ ಸರಳವಾಗಿ ತೋರಿಸಲಾಗಿದೆ.

https://www.facebook.com/kspcbofficial/posts/1724196424386303

ಇದನ್ನೂ ಓದಿ: Ganesh Chaturthi 2020: ಬೆಂಗಳೂರಿನಲ್ಲಿ ಇಂದು ಸಂಭ್ರಮದ ಗಣೇಶ ಚತುರ್ಥಿ; ಮಾಂಸ ಮಾರಾಟ ನಿಷೇಧ

ಹಿಂದೆಲ್ಲ ಪರಿಸರ ಸ್ನೇಹಿ ಗಣಪನನ್ನು ಆರಾಧಿಸಲು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು ಕರೆ ನೀಡುತ್ತಿತ್ತು. ಆದರೆ, ಈ ಬಾರಿ ಕೊರೊನಾ ಕಾರಣದಿಂದ ಆರೋಗ್ಯ ಸ್ನೇಹಿ ಗಣಪನನ್ನು ತಯಾರಿಸಿ, ಆರಾಧಿಸುವಂತೆ ವಿವಿಧ ಹಂತಗಳಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ಒಟ್ಟಿನಲ್ಲಿ ಆರೋಗ್ಯ ಸ್ನೇಹಿ ಗಣಪ ನಾಡಿಗೆ ಕೊರೊನಾ ನಿವಾರಕನಾಗಿ ಆಶೀರ್ವದಿಸಲಿ ಅನ್ನೋದು‌ ನಮ್ಮ ಆಶಯ.
Published by:Sushma Chakre
First published: