Ganesh Chaturthi 2020: ಬೆಂಗಳೂರಿನಲ್ಲಿ ಗೌರಿ-ಗಣೇಶ ಹಬ್ಬದ ಸಂಭ್ರಮ; ಗಗನಕ್ಕೇರಿದ ಹೂವು-ಹಣ್ಣಿನ ಬೆಲೆ

ಕೊರೋನಾ ಹಿನ್ನೆಲೆ, ಗೌರಿ-ಗಣೇಶ ಹಬ್ಬವಿದ್ದರೂ ಬೆಂಗಳೂರಿನ ಮಾರುಕಟ್ಟೆಗಳು ಸಾರ್ವಜನಿಕರಿಲ್ಲದೇ ಬಿಕೋ ಎನ್ನುತ್ತಿವೆ. ಮಲ್ಲೇಶ್ವರಂ ಮಾರುಕಟ್ಟೆ ಮುಂಜಾನೆ 4 ಗಂಟೆಗೆ ತೆರೆದಿದ್ದರೂ ಖಾಲಿ ಖಾಲಿ ಹೊಡೆಯುತ್ತಿದೆ. ಹೂವು ಕೊಳ್ಳುವವರಿಲ್ಲದೇ ಬಿಕೋ ಎನ್ನುತ್ತಿದೆ. ಪ್ರತಿ ಬಾರಿ ಹಬ್ಬ-ಹರಿದಿನಗಳಲ್ಲಿ ಭರ್ಜರಿ ವ್ಯಾಪಾರ ಆಗುತ್ತಿತ್ತು. ಆದರೆ ಈ ಸಲ ಸಾರ್ವಜನಿಕರು ಮಾರುಕಟ್ಟೆ ಕಡೆ ಮುಖ ಮಾಡಿಲ್ಲ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ಬೆಂಗಳೂರು(ಆ.21): ಕೊರೋನಾ ಭೀತಿ ನಡುವೆಯೂ ಎಲ್ಲೆಡೆ ಗೌರಿ-ಗಣೇಶ ಹಬ್ಬದ ಸಂಭ್ರಮ ಮನೆಮಾಡಿದೆ. ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿಯೂ ಜನರು ಗೌರಿ-ಗಣೇಶ ಹಬ್ಬ ಮಾಡುವ ಸಿದ್ದತೆಯಲ್ಲಿದ್ದಾರೆ.  ಆದರೆ ಹಬ್ಬದ ಹಿನ್ನೆಲೆ ಬೆಂಗಳೂರು ನಗರದಲ್ಲಿ ಹೂವು-ಹಣ್ಣಿನ ಬೆಲೆ ಗಗನಕ್ಕೇರಿದೆ.  ಸಾರ್ವಜನಿಕರಿಲ್ಲದೇ ಮಾರುಕಟ್ಟೆಗಳು  ಬಿಕೋ ಎನ್ನುತ್ತಿದ್ದರೂ ಸಹ ಹೂವು-ಹಣ್ಣಿನ ಬೆಲೆ ತುಸು ದುಬಾರಿಯೇ ಆಗಿದೆ.

  ಬನಶಂಕರಿ ಮಾರುಕಟ್ಟೆಯಲ್ಲಿ ಹೂಗಳ ದರ ಇಂತಿದೆ.

  ಮಲ್ಲಿಗೆ ಮೊಗ್ಗು - 80 ರೂ. ಒಂದು ಮೊಳ
  ಬಿಡಿ ಹೂ - 1/4 kg 100 ರೂ.
  ಸೇವಂತಿಗೆ - 120 ರೂ. ಮಾರು, ಒಂದು ಮೊಳ 40 ರೂ.
  ಒಂದು ಡೇರಿ ಹೂ - 20 ರೂಪಾಯಿ
  ಸಂಪಿಗೆ ಹೂ ಡಜನ್ - 100 ಗ್ರಾಂ 50 ರೂ.
  ತಾವರೆ ಹೂ ಜೋಡಿ - 80 ರೂ.
  ಒಂದು ಎಕ್ಕೆ ಹಾರ - 50 ರೂ.

  ಹಣ್ಣುಗಳ ದರ

  ಸೇಬು - 180-250 ರೂ. ಒಂದು ಕೆಜಿ
  ಮೋಸಂಬಿ - 80 ರೂ. ಒಂದು ಕೆಜಿ
  ದಾಳಿಂಬೆ - 130 ರೂ. ಒಂದು ಕೆಜಿ
  ದ್ರಾಕ್ಷಿ - 200 ರೂ. ಒಂದು ಕೆಜಿ
  ಬಾಳೆಹಣ್ಣು - 70 ರೂ. ಕೆಜಿ
  ಸೀತಾಫಲ - 80 ರೂ. ಕೆಜಿ

  ಕೇಂದ್ರ ಸರ್ಕಾರದ ವಿರುದ್ದ ರೈತರು ದಂಗೆ ಏಳಲಿದ್ದಾರೆ; ಕಾಂಗ್ರೆಸ್ ಕಿಸಾನ್ ಕೇತ್ ರಾಜ್ಯಾಧ್ಯಕ್ಷ್ಯ‌ ಸಚಿನ್ ಮಿಗಾ ಎಚ್ಚರಿಕೆ

  ಹೂವಿನ ದರ 1 ಕೆಜಿಗೆ

  ಕನಕಾಂಬರ- 1 ಕೆಜಿ 1600 ರೂ.
  ಕಾಕಡ ಹೂವು- 1 ಕೆಜಿ 600 ರೂ.
  ಮಲ್ಲಿಗೆ - 1 ಕೆಜಿ 1000 ರೂ.
  ಸೇವಂತಿ- 1 ಕೆಜಿ 200 ರೂ.

  ಮಾರುಕಟ್ಟೆಗಳತ್ತ ಮುಖ ಮಾಡದ ಜನರು

  ಕೊರೋನಾ ಹಿನ್ನೆಲೆ, ಗೌರಿ-ಗಣೇಶ ಹಬ್ಬವಿದ್ದರೂ ಬೆಂಗಳೂರಿನ ಮಾರುಕಟ್ಟೆಗಳು ಸಾರ್ವಜನಿಕರಿಲ್ಲದೇ ಬಿಕೋ ಎನ್ನುತ್ತಿವೆ. ಮಲ್ಲೇಶ್ವರಂ ಮಾರುಕಟ್ಟೆ ಮುಂಜಾನೆ 4 ಗಂಟೆಗೆ ತೆರೆದಿದ್ದರೂ ಖಾಲಿ ಖಾಲಿ ಹೊಡೆಯುತ್ತಿದೆ. ಹೂವು ಕೊಳ್ಳುವವರಿಲ್ಲದೇ ಬಿಕೋ ಎನ್ನುತ್ತಿದೆ. ಪ್ರತಿ ಬಾರಿ ಹಬ್ಬ-ಹರಿದಿನಗಳಲ್ಲಿ ಭರ್ಜರಿ ವ್ಯಾಪಾರ ಆಗುತ್ತಿತ್ತು. ಆದರೆ ಈ ಸಲ ಸಾರ್ವಜನಿಕರು ಮಾರುಕಟ್ಟೆ ಕಡೆ ಮುಖ ಮಾಡಿಲ್ಲ. ಹೂವಿನ ವ್ಯಾಪಾರಿಗಳು ಬಗೆ ಬಗೆಯ ಹೂವುಗಳನ್ನ ಅಲಂಕಾರಿಕವಾಗಿ ಪೋಣಿಸಿಕೊಂಡು ಗ್ರಾಹಕರಿಗಾಗಿ ಕಾಯುತ್ತಿದ್ದಾರೆ.

  ಬೆಂಗಳೂರಿನ ಬನಶಂಕರಿ, ಬಸವನಗುಡಿ ಮಾರುಕಟ್ಟೆಯಲ್ಲಿಯೂ ಕಡಿಮೆ ಜನರು ಬರುತ್ತಿದ್ದಾರೆ. ಹಬ್ಬ ದಿನಗಳಲ್ಲಿ ಯಾವಾಗಲೂ ಮಾರುಕಟ್ಟೆ ಫುಲ್‌ ಇರುತ್ತಿತ್ತು. ಹೆಚ್ಚಿನ ಗ್ರಾಹಕರ ನಿರೀಕ್ಷೆಯಲ್ಲಿ ಹೂ-ಹಣ್ಣು ವ್ಯಾಪಾರಿಗಳು ಕಾಯುತ್ತಿದ್ದಾರೆ. ಕೊರೋನಾ ಸಂದಿಗ್ಧತೆಯಲ್ಲಿ ಈ ಬಾರಿ ಗೌರಿಗಣೇಶ ಸಂಭ್ರಮ ಮನೆಮಾಡಿದೆ. ಮನೆಯಲ್ಲಿ ಹಬ್ಬಕ್ಕೆ ಬೇಕಾದ ಹೂಹಣ್ಣು, ಎಲೆ ಖರೀದಿಗೆ ಜನರು ವಿರಳವಾಗಿ ಆಗಮಿಸುತ್ತಿದ್ದಾರೆ. ವಾರ್ಡಿಗೆ ಒಂದೇ ಗಣೇಶ ಪ್ರತಿಷ್ಟಾಪನೆ ಹಿನ್ನೆಲೆ ಈ ಬಾರಿ ವ್ಯಾಪಾರ ಡಲ್ ಆಗಿದೆ.

  ಕಲಾಸಿಪಾಳ್ಯ ಮಾರುಕಟ್ಟೆಯಲ್ಲಿ ಹೂವಿನ ವ್ಯಾಪಾರ ಜೋರಾಗಿದೆ. ಸಾರ್ವಜನಿಕರು ಬೆಳಗ್ಗೆಯಿಂದ ಹೂವು ಹಣ್ಣು ಖರೀದಿಸಲು ಆಗಮಿಸುತ್ತಿದ್ದಾರೆ. ಗಣೇಶ ಚತುರ್ಥಿ ಹಿನ್ನಲೆ ಕಲಾಸಿಪಾಳ್ಯ ಮಾರುಕಟ್ಟೆಯಲ್ಲಿ ವ್ಯಾಪಾರ ವಹಿವಾಟು ಜೋರಾಗಿದೆ. ಇದೇ ವೇಳೆ ಹೂವಿನ ಬೆಲೆಯಲ್ಲಿ ಭಾರಿ ಏರಿಕೆಯಾಗಿದೆ.
  Published by:Latha CG
  First published: