70 ಕೆಜಿ ಚಿನ್ನದಿಂದ ಗಣಪನಿಗೆ ಸಿಂಗಾರ: ಭದ್ರತೆಗಾಗಿ ಏನು ಮಾಡಿದ್ದಾರೆ ಗೊತ್ತಾ?


Updated:September 13, 2018, 4:44 PM IST
70 ಕೆಜಿ ಚಿನ್ನದಿಂದ ಗಣಪನಿಗೆ ಸಿಂಗಾರ: ಭದ್ರತೆಗಾಗಿ ಏನು ಮಾಡಿದ್ದಾರೆ ಗೊತ್ತಾ?

Updated: September 13, 2018, 4:44 PM IST
ನ್ಯೂಸ್​ 18 ಕನ್ನಡ

ಮುಂಬೈ(ಸೆ.13): ಇಂದು ಗಣೇಶ ಚತುರ್ಥಿ. ದೇಶದಾದ್ಯಂತ ಈ ಬಾರಿ ಸಪ್ಟೆಂಬರ್​ 13 ರಿಂದ 23ರವರೆಗೆ ಆಚರಿಸಲಾಗುತ್ತದೆ. ಭಗವಂತ ಗಣಪತಿಯು ಭದ್ರಪದ ಶುಕ್ಲ ಚತುರ್ಥಿಯ ಮಧ್ಯಕಾಲದಲ್ಲಿ ಜನಿಸಿದ್ದರು. ಹೀಗಾಗಿ ಪ್ರತಿ ವರ್ಷ ಇದೇ ದಿನದಂದು ಗಣೇಶ ಚತುರ್ಥಿ ಆಚರಿಸಲಾಗುತ್ತದೆ. ದೇಶದೆಲ್ಲೆಡೆ ಗಣೇಶ ಮೂರ್ತಿಯನ್ನಿಟ್ಟು ಪೂಜಿಸಲಾಗುತ್ತದೆ. ಆದರೆ ಮುಂಬೈನಲ್ಲಿ ಗಣೇಶ ಮೂರ್ತಿಯನ್ನು ಚಿನ್ನದಿಂದ ಸಿಂಗರಿಸಲಾಗುತ್ತದೆ.

ಮುಂಬೈನ ಜಿಎಸ್​ಬಿ ಸೇವಾಮಂಡಲ ಪ್ರತಿಷ್ಠಾಪಿಸಿರುವ ಗಣಪತಿ ಮೂರ್ತಿಯನ್ನು 70 ಕೆಜಿಯಷ್ಟು 23 ಕ್ಯಾರೆಟ್​ ಶುದ್ಧತೆಯ ಚಿನ್ನದಲ್ಲಿ ಸಿಂಗಾರ ಮಾಡಲಾಗಿದೆ. ಇನ್ನು ಇದರ ಭದ್ರತೆಗಾಗಿ ಡ್ರೋನ್​ ಕ್ಯಾಮರಾಗಳನ್ನು ಬಳಸಲಾಗಿದೆ. ಇನ್ನು ಸುರಕ್ಷತೆಯ ದೃಷ್ಟಿಯಿಂದ ಗಣೇಶ ಮೂರ್ತಿ ಹಾಗೂ ದರ್ಶನಕ್ಕಾಗಮಿಸುವ ಭಕ್ತರ ನಡುವೆ ಅಂತರವನ್ನೂ ಇಡಲಾಗಿದೆ. ಈ ಮೂಲಕ ಇಲ್ಲಿ ಬಿಗಿ ಬಂದೋಬಸ್ತ್​ ಕಲ್ಪಿಸಲಾಗಿದೆ. ಜನಸಂದಣಿ ಹೆಚ್ಚಾಗದಿರುವಂತೆ ಬ್ಯಾರಿಕೇಡ್​ಗಳನ್ನೂ ಅಳವಡಿಸಲಾಗಿದೆ. ಈ ಮೂಲಕ ಭಕ್ತರು ಸರತಿ ಸಾಲಿನಲ್ಲಿ ಬಂದು ದರ್ಶನ ಪಡೆಯುವುದು ಸುಲಭವಾಗುತ್ತದೆ.ಗಣಪತಿ ದೇವರ ಪೂಜೆ ಹೇಗೆ ಮಾಡಬೇಕು?

ಈ ಪೂಜೆಯು ಹತ್ತನೆ ದಿನದಂದು ಬರುವ ಅನಂತ ಚತುರ್ದಶಿಯಂದು ಕೊನೆಗೊಳ್ಳುತ್ತದೆ. ಗಣಪತಿಯನ್ನು ಪ್ರತಿಷ್ಠಾಪಿಸುವ ವಿಧಿ-ವಿಧಾನಗಳು ಅಷ್ಟೇನು ಕಷ್ಟವಲ್ಲ. ಕೇವಲ ಕೆಲವು ವಸ್ತುಗಳನ್ನು ತಯಾರಿ ಮಾಡಿಕೊಳ್ಳುವ ಮೂಲಕ ನೀವು ಗಣಪತಿಯನ್ನು ಪ್ರತಿಷ್ಠಾಪಿಸಬಹುದು. ಗಣಪತಿಯನ್ನು ಪ್ರತಿಷ್ಠಾಪಿಸುವ ವಿಧಿಯು 16 ಹಂತಗಳನ್ನು ಹೊಂದಿದೆ. ನೀವು ಮೊದಲನೆ ದಿನದಂದು ಅಥವಾ ಚತುರ್ಥಿಯಂದು ಪೂಜೆಯನ್ನು ಮಾಡುವುದಾದರೆ ಈ ವಿಧಿಗಳನ್ನು ತಪ್ಪದೆ ಪಾಲಿಸಿ.
Loading...

ಮೂರ್ತಿಯನ್ನು ಸ್ಥಾಪಿಸುವುದು

ಗಣಪತಿಯು ಭಾದ್ರಪದ ಮಾಸದ ಶುಕ್ಲಪಕ್ಷದ ಚತುರ್ಥಿಯಂದು ಮಧ್ಯಾಹ್ನ ಸುಮಾರು ಒಂದು ಗಂಟೆಗೆ ಜನಿಸಿದನು ಎಂದು ಪ್ರತೀತಿ. ಆದ್ದರಿಂದ ಮೂರ್ತಿಯನ್ನು ಮಧ್ಯಾಹ್ನ 12:30 ರಿಂದ 1 ಗಂಟೆಯೊಳಗೆ ಸ್ಥಾಪಿಸಬೇಕು. ಈ ಮೂರ್ತಿಯು ನಿಮ್ಮ ಕಣ್ಣಿಗೆ ಸದಾ ಬೀಳುವಂತಹ ಸ್ಥಳದಲ್ಲಿರಬೇಕು. ಪ್ರತಿಷ್ಟಾಪಿಸುವ ಸ್ಥಳವನ್ನು ಶುದ್ಧಗೊಳಿಸಬೇಕು ಮತ್ತು ಒಂದು ಬಟ್ಟೆಯನ್ನು ಹಾಸಬೇಕು (ಕೆಂಪು ಬಟ್ಟೆಯಾದರೆ ಒಳ್ಳೆಯದು). ಆ ಬಟ್ಟೆಯ ಮೇಲೆ ಸ್ವಲ್ಪ ಅಕ್ಕಿಯನ್ನು ಹರಡಿ ಅದರ ಮೇಲೆ ಗಣಪತಿಯನ್ನು ಸ್ಥಾಪಿಸಿ.
First published:September 13, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ