ಬಾಪು ಸ್ಮರಣೆ: ಕಾಫಿನಾಡಲ್ಲಿ ಗಾಂಧೀಜಿ ನೆನಪಿನಲ್ಲಿ ದೇವಾಲಯ ನಿರ್ಮಾಣ..!

ಕತ್ತಲೆಯ ದಾಸ್ಯದಿಂದ ಭಾರತೀಯರಿಗೆ ಸ್ವಾತಂತ್ರ್ಯ ತಂದುಕೊಟ್ಟ ಮಹಾತ್ಮನಿಗಾಗಿ ಗುಡಿಯೊಂದನ್ನೇ ನಿರ್ಮಿಸಿ ಹಳ್ಳಿಯೊಂದರಲ್ಲಿ ದೇವರಂತೆ ಪೂಜಿಸಲಾಗುತ್ತಿದೆ.

news18
Updated:October 2, 2018, 11:14 AM IST
ಬಾಪು ಸ್ಮರಣೆ: ಕಾಫಿನಾಡಲ್ಲಿ ಗಾಂಧೀಜಿ ನೆನಪಿನಲ್ಲಿ ದೇವಾಲಯ ನಿರ್ಮಾಣ..!
ಕತ್ತಲೆಯ ದಾಸ್ಯದಿಂದ ಭಾರತೀಯರಿಗೆ ಸ್ವಾತಂತ್ರ್ಯ ತಂದುಕೊಟ್ಟ ಮಹಾತ್ಮನಿಗಾಗಿ ಗುಡಿಯೊಂದನ್ನೇ ನಿರ್ಮಿಸಿ ಹಳ್ಳಿಯೊಂದರಲ್ಲಿ ದೇವರಂತೆ ಪೂಜಿಸಲಾಗುತ್ತಿದೆ.
  • Advertorial
  • Last Updated: October 2, 2018, 11:14 AM IST
  • Share this:
- ವೀರೇಶ್ ಜಿ ಹೊಸೂರ್ ನ್ಯೂಸ್ 18 ಕನ್ನಡ

ಚಿಕ್ಕಮಗಳೂರು ( ಅ.02) : ಈ ದೇವಾಲಯ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ನೆನಪಿಗಾಗಿ ಕಟ್ಟಿರೋ ದೇವಾಲಯ. ಕತ್ತಲೆಯ ದಾಸ್ಯದಿಂದ ಭಾರತೀಯರಿಗೆ ಸ್ವಾತಂತ್ರ್ಯ ತಂದುಕೊಟ್ಟ ಮಹಾತ್ಮನಿಗಾಗಿ ಗುಡಿಯೊಂದನ್ನೇ ನಿರ್ಮಿಸಿ, ಗಾಂಧಿ ಜಯಂತಿ ಸೇರಿದಂತೆ ರಾಷ್ಟ್ರೀಯ ಹಬ್ಬದಂದು ಈ ಐತಿಹಾಸಿಕ ಗುಡಿಯ ಪುಟ್ಟ ಗಾಂಧಿಜೀಯನ್ನು ದೇವರಂತೆ ಪೂಜಿಸುತ್ತಾರೆ. ದೇಶದಲ್ಲೇ ಗಾಂಧೀಜಿ ದೇವಾಲಯಗಳಿರೋದೆ ತುಂಬಾ ವಿರಳ. ಅಂತಾದ್ರಲ್ಲಿ ಆ ಗುಡಿ ಇರುವ ಗ್ರಾಮವಾದರೂ ಯಾವುದು ಅನ್ನೋ ಕುತೂಹಲವೇ. ಈ  ಸುದ್ದಿ ಓದಿ...

ಇದು ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲ್ಲೂಕಿನ ನಿಡಗಟ್ಟ ಗ್ರಾಮ. ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಗಾಂಧೀಜಿ ಚಿಕ್ಕಮಗಳೂರು ಹಾಗೂ ನಿಡಗಟ್ಟ ಗ್ರಾಮಕ್ಕೆ ಭೇಟಿ ನೀಡಿದರು. ಗಾಂಧೀಜಿ ಈ ಗ್ರಾಮದಲ್ಲಿ ಕೂತು ಭಾಷಣ ಮಾಡಿದ ಜಾಗವೇ ಇವತ್ತು ಈ ಗಾಂಧಿ ಗುಡಿ. ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಕೊಟ್ಟಿದ್ದ ಹೋರಾಟದ ಕರೆಗೆ ನಿಡಗಟ್ಟ ಗ್ರಾಮದ 20ಕ್ಕೂ ಹೆಚ್ಚು ಯುವಕರು ಸ್ವಾತಂತ್ರ್ಯ ಹೋರಾಟಕ್ಕೆ ಧುಮುಕಿದರು.

ಹೋರಾಟದ ಹಾದಿಯಲ್ಲಿ ಜೈಲುವಾಸದ ರುಚಿಯನ್ನೂ ಕಂಡಿದರು. ಗಾಂಧಿಯ ಅವಿರತ ಪ್ರಯತ್ನದ ಫಲವಾಗಿ ದೇಶಕ್ಕೆ ಸ್ವಾತಂತ್ರ್ಯ ಬಂದಾಗ ಈ ಗ್ರಾಮದ ಪ್ರತಿ ಮನೆಯಲ್ಲೂ ಹಬ್ಬ. ಆದ್ರೆ, 1948 ಜನವರಿ 30 ರಂದು ಗೂಡ್ಸೆಯ ಗುಂಡಿಗೆ ಗಾಂಧಿ ಬಲಿಯಾದಾಗ ಈ ಗ್ರಾಮದ ಹೋರಾಟಗಾರರು ಕಂಗಾಲಾಗಿದರು. ಗಾಂಧಿ ನಿಧನರಾದ 21ನೇ ದಿನಕ್ಕೆ ಆ ದಿವ್ಯಚೇತನದ ಸ್ಮರಣಾರ್ಥವೇ ಈ ಗುಡಿ ನಿರ್ಮಾಣವಾಯಿತು. .

ದೇಶದ ಎಲ್ಲಾ ರಾಷ್ಟ್ರಿಯ ಹಬ್ಬಗಳಂದು ಈ ಗಾಂಧೀಜಿಯ ಮೂರ್ತಿಯನ್ನು ಗ್ರಾಮಸ್ಥರು, ಶಾಲಾ ಮಕ್ಕಳು ದೇವರಂತೆ ಪೂಜಿಸುತ್ತಾರೆ. ತ್ಯಾಗ ಬಲಿದಾನದ ಸಂಕೇತವಾಗಿರುವ ಈ ಐತಿಹಾಸಿಕ ಗಾಂಧಿ ಗುಡಿ ಸಣ್ಣದಾದ ಕಟ್ಟಡದಿಂದ ಕೂಡಿದೆ, ಗಾಂಧೀಜಿಯವರ ನೆನಪಿಗಾಗಿ ಸ್ವಾತಂತ್ರ್ಯ ಸಿಕ್ಕಿದ ಸಂದರ್ಭವೇ ನಿರ್ಮಿಸಲಾದ ಈ ಐತಿಹಾಸಿಕ ಸ್ಮಾರಕ ಮಾತ್ರ ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದ ಸೊರಗುತ್ತಿದೆ. ಮೌಲ್ಯಗಳು ಕಳೆದು ಹೋಗುತ್ತಿರುವ ಈ ಕಾಲದಲ್ಲಿ ಹೊಸ ತಲೆಮಾರಿನ ಯುವಕರಿಗೆ ಗಾಂಧಿಯ ವಿಚಾರ ಧಾರೆಗಳನ್ನು ಗಾಂಧಿ ಗುಡಿ ಮೂಲಕ ತಿಳಿಸುತ್ತಿರೋದು ಹೆಮ್ಮೆಯ ವಿಷಯ ಅಂತಾರೆ ಸ್ಥಳೀಯರು.

ಮಹಾತ್ಮಾ ಗಾಂಧೀಜಿಯ ನೆನಪಿನಲ್ಲಿ ದೇಶದಲ್ಲಿ ನಿರ್ಮಿಸಲಾಗಿರುವ ದೇವಾಲಯಗಳು ಬೆರಳೆಣಿಕೆಯಷ್ಟು. ಕರ್ನಾಟಕದಲ್ಲಿ ಮಂಗಳೂರು, ಮಂಡ್ಯ ಬಿಟ್ಟರೆ ಚಿಕ್ಕಮಗಳೂರಿನಲ್ಲಿ ಮಾತ್ರ ಗಾಂಧಿಗುಡಿ ಇರೋದು, ಹಾಗಾಗಿ ಇದು ಜಿಲ್ಲೆಯ ಜನರ ಪಾಲಿಗೆ ಹೆಮ್ಮೆಯ ವಿಚಾರ.
First published:October 2, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ