• Home
  • »
  • News
  • »
  • state
  • »
  • Gali Janardhana Reddy: ಮಗಳ ಹೆರಿಗೆ ಇದೆ ಬಳ್ಳಾರಿಗೆ ಹೋಗಲು ಅವಕಾಶ ಕೊಡಿ, ಸುಪ್ರೀಂ ಮೆಟ್ಟಿಲೇರಿದ ಗಣಿಧಣಿ

Gali Janardhana Reddy: ಮಗಳ ಹೆರಿಗೆ ಇದೆ ಬಳ್ಳಾರಿಗೆ ಹೋಗಲು ಅವಕಾಶ ಕೊಡಿ, ಸುಪ್ರೀಂ ಮೆಟ್ಟಿಲೇರಿದ ಗಣಿಧಣಿ

ಗಾಲಿ ಜನಾರ್ದನ ರೆಡ್ಡಿ

ಗಾಲಿ ಜನಾರ್ದನ ರೆಡ್ಡಿ

Gali Janardhana Reddy: ಕೆಲ ದಿನಗಳಲ್ಲೇ ತನ್ನ ಮಗಳಿಗೆ ಹೆರಿಗೆಯಾಗಲಿದೆ. ಇಂತಹ ಪರಿಸ್ಥಿತಿಯಲ್ಲಿ ಕನಿಷ್ಠ ಒಂದು ತಿಂಗಳಾದರೂ ತನಗೆ ಬಳ್ಳಾರಿಗೆ ಎಂಟ್ರಿಯಾಗಲು ಅನುಮತಿ ನೀಡುವಂತೆ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಸುಪ್ರೀಂ ಕೋರ್ಟ್​ಗೆ ಮನವಿ ಮಾಡಿದ್ದಾರೆ.

  • Share this:

ನವದೆಹಲಿ(ಸೆ.30): ಅಕ್ರಮ ಗಣಿ ಹಗರಣ (Illegal Mining Case) ಪ್ರಕರಣವನ್ನೆದುರಿಸುತ್ತಿರುವ ಗಣಿಧಣಿ, ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ (Gali Janardhana Reddy) ತನಗೆ ಬಳ್ಳಾರಿಗೆ ಹೋಗಲು ಅವಕಾಶ ನೀಡುವಂತೆ ಕೋರಿ ಮತ್ತೆ ಸುಪ್ರೀಂಕೋರ್ಟ್ (Supreme Court) ಮೆಟ್ಟಿಲೇರಿದ್ದಾರೆ. ಕೆಲ ದಿನಗಳಲ್ಲೇ ತನ್ನ ಮಗಳಿಗೆ ಹೆರಿಗೆಯಾಗಲಿದೆ (Delivery). ಇಂತಹ ಪರಿಸ್ಥಿತಿಯಲ್ಲಿ ಕನಿಷ್ಠ ಒಂದು ತಿಂಗಳಾದರೂ ತನಗೆ ಬಳ್ಳಾರಿಗೆ ಎಂಟ್ರಿಯಾಗಲು ಅನುಮತಿ ನೀಡುವಂತೆ ಮನವಿ ಮಾಡಿದ್ದಾರೆ. ಆದರೆ ಸಿಬಿಐ ಎರಡು ತಿಂಗಳ ಕಾಲ ಜನಾರ್ದನ ರೆಡ್ಡಿ ಬಳ್ಳಾರಿಯಲ್ಲಿ ವಾಸ್ತವ್ಯ ಹೂಡಲು ಆಕ್ಷೇಪ ವ್ಯಕ್ತಪಡಿಸಿತ್ತು. ಇನ್ನು ನ್ಯಾ. ಎಂಆರ್.ಶಾ ನೇತೃತ್ವದ ದ್ವಿಸದಸ್ಯ ಪೀಠವು ಅರ್ಜಿ ವಿಚಾರಣೆಯನ್ನು ಕೈಗೆತ್ತಿಕೊಂಡಿದ್ದು ಶುಕ್ರವಾರ ವಿಚಾರಣೆ ನಡೆಸಲಿದೆ.


ಗಣಿಧಣಿಗೆ ಬಳ್ಳಾರಿ ಪ್ರವೇಶಿಸದಂತೆ ನಿರ್ಬಂಧ


ಬಹುಕೋಟಿ ಗಣಿ ಹಗರಣಕ್ಕೆ ಸಂಬಂಧಿಸಿದಂತೆ 2009ರಲ್ಲಿ ಗಾಲಿ ಜನಾರ್ದನ ರೆಡ್ಡಿಗೆ ಜಾಮೀನು ನೀಡಿದ್ದ ಸುಪ್ರೀಂ ಕೋರ್ಟ್ ಕರ್ನಾಟಕದ ಬಳ್ಳಾರಿ, ಆಂಧ್ರಪ್ರದೇಶದ ಕಡಪಾ ಮತ್ತು ಅನಂತಪುರ ಜಿಲ್ಲೆಗಳಿಗೆ ಪ್ರವೇಶಿಸದಂತೆ ಕಠಿಣ ನಿರ್ಬಂಧ ಹೇರಿತ್ತು. ಹೀಗಿದ್ದರೂ ಗಣಿಧಣಿ ಜನಾರ್ದನ ರೆಡ್ಡಿ ಮಗಳ ಮದುವೆ ಕಾರ್ಯಕ್ರಮ ಸೇರಿ ಕೆಲವೊಂದು ವಿಶೇಷ ಸಂದರ್ಭಗಳಲ್ಲಿ ನ್ಯಾಯಾಲಯದ ಅನುಮತಿ ಮೇರೆಗೆ ಬಳ್ಳಾರಿಗೆ ಪ್ರವೇಶಿಸಿದ್ದರು.


ಇದನ್ನೂ ಓದಿ: Janardhan Reddy Wife: ರವಿವರ್ಮನ ಕುಂಚದಿಂದ ಮೂಡಿದವರಲ್ಲ, ಇವರು ಜನಾರ್ದನ ರೆಡ್ಡಿ ಪತ್ನಿ! ವಿಭಿನ್ನ ಫೋಟೋ ಶೂಟ್ ಮಾಡಿಸಿದ ಅರುಣ ಲಕ್ಷ್ಮೀ


ಮಗಳ ಹೆರಿಗೆ ಇದೆ


ಸದ್ಯ ಗಣಿ ಹಗರಣ ಪ್ರಕರಣದ ವಿಚಾರಣೆ ನಡೆಯುತ್ತಿದ್ದು, ಇಂತಹ ಸಂದರ್ಭದಲ್ಲಿ ಜನಾರ್ದನ ರೆಡ್ಡಿಗೆ ಬಳ್ಳಾರಿ ಪ್ರವೇಶಕ್ಕೆ ಅವಕಾಶ ನೀಡಬಾರದೆಂದು ಪ್ರಕರಣದ ತನಿಖೆ ನಡೆಸುತ್ತಿರುವ ಸಿಬಿಐ ಆಕ್ಷೇಪ ವ್ಯಕ್ತಪಡಿಸಿತ್ತು. ಒಂದು ವೇಳೆ ಅನುಮತಿ ನೀಡಿದರೆ ಸಾಕ್ಷಿನಾಶ ಮಾಡುವ ಸಾಧ್ಯತೆ ಇದೆ ಎಂದು ಸಿಬಿಐ ವಾದಿಸಿದ್ದರಿಂದ ನ್ಯಾಯಾಲಯ ಎರಡು ತಿಂಗಳು ಬಳ್ಳಾರಿಗೆ ಪ್ರವೇಶಿಸಿದಂತೆ ಜನಾರ್ದನ ರೆಡ್ಡಿಗೆ ಆದೇಶಿಸಿತ್ತು. ಹೀಗಿರುವಾಗಲೇ ಮಾಜಿ ಸಚಿವ ರೆಡ್ಡಿ ಮಗಳ ಹೆರಿಗೆ ಹತ್ತಿರ ಬಂದಿರುವುದರಿಂದ ಕನಿಷ್ಠ ಒಂದು ತಿಂಗಳಾದರೂ ಬಳ್ಳಾರಿ ಪ್ರವೇಶಕ್ಕೆ ಅನುಮತಿ ಕೊಡಿ ಎಂದು ಜನಾರ್ದನ ವಕೀಲರ ಮೂಲಕ ಸುಪ್ರೀಂ ಕೋರ್ಟಿಗೆ ಮನವಿ ಮಾಡಿಕೊಂಡಿದ್ದಾರೆ.


ಅಜ್ಜನಾಗುತ್ತಿರುವ ಸಂಭ್ರಮ ಹಂಚಿಕೊಂಡಿದ್ದ ರೆಡ್ಡಿ


ಇನ್ನು ಸಮಾಜಿಕ ಜಾಲತಾಣಗಳಲ್ಲಿ ಬಹಳಷ್ಟು ಸಕ್ರಿಯರಾಗಿರುವ ಜನಾರ್ದನ ರೆಡ್ಡಿ, ಆಗಸ್ಟ್​ ತಿಂಗಳಲ್ಲಿ ಪೋಸ್ಟ್​ ಒಂದನ್ನು ಮಾಡಿದ್ದರು. ಇದು ಬಹಳಷ್ಟು ವೈರಲ್ ಆಗಿತ್ತು. ಈ ಪೋಸ್ಟ್​ನಲ್ಲಿ ಅವರು ಜೀವನದ ಮತ್ತೊಂದು ಘಟ್ಟಕ್ಕೆ, ಎರಡನೇ ಬಾರಿ ತಾತನಾಗುತ್ತಿರುವ ಸಂಭ್ರಮ. ಇಂದು ನಾನು ಮಗಳು ಬ್ರಹ್ಮಣಿ, ಅಳಿಯ ರಾಜೀವ್, ಮೊಮ್ಮಗಳು ಬ್ರಮರ ಹಾಗೂ ಧರ್ಮಪತ್ನಿ ಶ್ರೀಮತಿ ಲಕ್ಷ್ಮಿ ಅರುಣಾ ಅವರೊಂದಿಗೆ ವಿಶ್ವ ವಿಖ್ಯಾತ ಹಂಪಿಯ, ದಕ್ಷಿಣ ಭಾರತದ ಕಾಶಿ ಎಂದೇ ಪ್ರಸಿದ್ಧವಾಗಿರುವ ಶ್ರೀ ವಿರೂಪಾಕ್ಷೇಶ್ವರನ ದರ್ಶನ ಪಡೆದು ಕೃತಾರ್ಥರಾದೆವು ಎಂದು ಬರೆದಿದ್ದರು.


ಇದನ್ನೂ ಓದಿ: Janardhana Reddy Son: ಜನಾರ್ಧನ್ ರೆಡ್ಡಿ ಪುತ್ರ ಕಿರೀಟಿ ಮೊದಲ ಚಿತ್ರದ ಟೈಟಲ್ ನಾಳೆ ರಿವೀಲ್


ಮಗಳ ಫೋಟೋ ಕೂಡಾ ಪೋಸ್ಟ್


ಅಲ್ಲದೇ ಈ ಪೋಸ್ಟ್​​ ಜೊತೆ ಎರಡನೇ ಮಗುವಿನ ನಿರೀಕ್ಷೆಯಲ್ಲಿರುವ ಮಗಳು ಬ್ರಹ್ಮಣಿ ಜೊತೆಗಿದ್ದ ಫೋಟೋವನ್ನೂ ಹಂಚಿಕೊಂಡಿದ್ದ ಜನಾರ್ದನ ರೆಡ್ಡಿ ಮಗಳು ಬ್ರಹ್ಮಣಿ ಎರಡನೇ ಮಗುವಿನ ನೀರಿಕ್ಷೆಯಲ್ಲಿದ್ದು ಅದರ ಸಂಭ್ರಮವನ್ನು ಐತಿಹಾಸಿಕ ಹಂಪೆಯ ಪ್ರಮುಖ ಸ್ಥಳಗಳಲ್ಲಿ ತೆಗೆದುಕೊಂಡ ಛಾಯಾ ಚಿತ್ರಗಳನ್ನು ತಮ್ಮೊಂದಿಗೆ ಹಂಚಿಕೊಳ್ಳಲು ಅತೀವ ಸಂತೋಷವಾಗುತ್ತಿದೆ. ನಿಮ್ಮೆಲ್ಲರ ಶುಭ ಹಾರೈಕೆ ಸದಾ ನಮ್ಮ ಕುಟುಂಬದ ಮೇಲಿರಲಿ ಎಂದೂ ಬರೆದಿದ್ದರು.

Published by:Precilla Olivia Dias
First published: