• Home
  • »
  • News
  • »
  • state
  • »
  • Janardhan Reddy: ಹೊಸ ಪಕ್ಷ ಸ್ಥಾಪನೆಯಾದ್ರೆ ಗೆಳೆಯರು ನಿಮ್ಮ ಜೊತೆ ಬರ್ತಾರಾ? ಪ್ರಶ್ನೆಗೆ ಗಣಿ ಧಣಿ ಉತ್ತರ ಹೀಗಿತ್ತು

Janardhan Reddy: ಹೊಸ ಪಕ್ಷ ಸ್ಥಾಪನೆಯಾದ್ರೆ ಗೆಳೆಯರು ನಿಮ್ಮ ಜೊತೆ ಬರ್ತಾರಾ? ಪ್ರಶ್ನೆಗೆ ಗಣಿ ಧಣಿ ಉತ್ತರ ಹೀಗಿತ್ತು

ಸಿದ್ಧಾರೂಢ ಮಠದಲ್ಲಿ ಜನಾರ್ದನ ರೆಡ್ಡಿ

ಸಿದ್ಧಾರೂಢ ಮಠದಲ್ಲಿ ಜನಾರ್ದನ ರೆಡ್ಡಿ

ದರ್ಶನ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಜನಾರ್ದನ ರೆಡ್ಡಿ, ಸಿದ್ದಾರೂಢರ ಮಠಕ್ಕೆ ಶುಭ ಸೋಮವಾರ ಬಂದಿದ್ದೇನೆ. ಬೆಳಗ್ಗೆ ತುಮಕೂರು ಸಿದ್ದಗಂಗಾ ಮಠಕ್ಕೂ(Siddaganga Mutt, Tumakuru)  ಭೇಟಿ ನೀಡಿದ್ದೆ. ನಾನೇ ಮಂಗಳಾರತಿ, ವಿಶೇಷ ಪೂಜೆ ಮಾಡಿದ್ದೇನೆ ಎಂದು ತಿಳಿಸಿದರು.

  • Share this:

ಹುಬ್ಬಳ್ಳಿ: ಗೆಳೆಯರು (Friends) ನನ್ನ ಜೊತೆ ಬರ್ತಾರೆ ಅನ್ನೋದನ್ನ ಆ ದೇವರೇ ಬಲ್ಲ. ನನ್ನ ಮುಂದಿನ ನಡೆಯನ್ನ ಡಿಸೆಂಬರ್ 25 ರಂದು ಬಹಿರಂಗಪಡಿಸುತ್ತೇನೆ. ಅಲ್ಲಿಯವರೆಗೂ ಕಾಯಿರಿ ಎಂದು ಮಾಜಿ ಸಚಿವ ಜನಾರ್ದನ ರೆಡ್ಡಿ (Former Minister Janardhan Reddy) ನಿಗೂಢವಾಗಿ ಮಾತನಾಡಿದ್ದಾರೆ. ಹುಬ್ಬಳ್ಳಿಗೆ (Hubballi) ಆಗಮಿಸಿ ಸಿದ್ಧಾರೂಢ ಮಠಕ್ಕೆ (Siddharuda Mutt) ಭೇಟಿ ನೀಡಿದ ಜನಾರ್ದನ ರೆಡ್ಡಿ, ಸಿದ್ಧಾರೂಢ ಹಾಗೂ ಗಳಗನಾಥರ ಗದ್ದುಗೆ ದರ್ಶನ ಪಡೆದು, ವಿಶೇಷ ಪೂಜೆ ಸಲ್ಲಿಸಿದರು. ತಂಬೂರಿ ಹೆಗಲಿಗೆ ಹಾಕಿಕೊಂಡು ಸಿದ್ಧಾರೂಢರ ಆಶೀರ್ವಾದ ಪಡೆದರು.


ದರ್ಶನ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಜನಾರ್ದನ ರೆಡ್ಡಿ, ಸಿದ್ದಾರೂಢರ ಮಠಕ್ಕೆ ಶುಭ ಸೋಮವಾರ ಬಂದಿದ್ದೇನೆ. ಬೆಳಗ್ಗೆ ತುಮಕೂರು ಸಿದ್ದಗಂಗಾ ಮಠಕ್ಕೂ(Siddaganga Mutt, Tumakuru)  ಭೇಟಿ ನೀಡಿದ್ದೆ. ನಾನೇ ಮಂಗಳಾರತಿ, ವಿಶೇಷ ಪೂಜೆ ಮಾಡಿದ್ದೇನೆ ಎಂದು ತಿಳಿಸಿದರು.


ಎಲ್ಲವನ್ನೂ ಬೆಂಗಳೂರಿನಲ್ಲಿಯೇ ಬಹಿರಂಗಪಡಿಸುವೆ


ಸಿದ್ದಾರೂಢರ ಅಂಗಾರ ಜಗಕೆಲ್ಲಾ ಬಂಗಾರ ಎಂಬುದು ಜಗಜ್ಜಾಹೀರು. ನನ್ನ ಭವಿಷ್ಯದ ರಾಜಕೀಯ, ಖಾಸಗಿ ಜೀವನ ರೂಪಿಸಲು ಆಶೀರ್ವಾದ ಪಡೆಯಲು ಬಂದಿದ್ದೇನೆ. ಸಿದ್ದಾರೂಢರ ಜೋಳಿಗೆ ಜಗಕೆಲ್ಲಾ ಹೋಳಿಗೆ ಎಂಬ ವಾಣಿ ಇದೆ. ಸಿದ್ದಾರೂಢರ ಜೋಳಿಗೆಯಿಂದ ನನಗೂ ಒಂದು ಹೋಳಿಗೆ ಕೊಡಲಿ ಅಂತ ಬೇಡಲು ಬಂದಿದ್ದೇನೆ. ಬರುವ ದಿನಗಳಲ್ಲಿ ಬದುಕಲು ಶ್ರೀಗಳ ಆಶೀರ್ವಾದ ಬೇಕು. ಸ್ವಾಮೀಜಿ ಮುಂದೆ ನಾನು ಬೇಡಿಕೊಂಡಿದ್ದನ್ನು ಈಗ ಹೇಳಲ್ಲ. ಬೆಂಗಳೂರಿನಲ್ಲಿ ಎಲ್ಲವನ್ನೂ ಬಹಿರಂಗಪಡಿಸ್ತೇನೆ ಎಂದರು.


ಸಿದ್ಧಾರೂಢ ಮಠದಲ್ಲಿ ಜನಾರ್ದನ ರೆಡ್ಡಿ


ಗಂಗಾವತಿಯಿಂದ ಸ್ಪರ್ಧೆ ಖಚಿತ ಎಂದ ರೆಡ್ಡಿ


ಗಂಗಾವತಿಯಿಂದ (Gangavati) ಸ್ಪರ್ಧೆ ಮಾಡ್ತೇನಿ. ಬಳ್ಳಾರಿ ಜಿಲ್ಲೆಗೆ ಎಂಟ್ರಿ ಕೊಡುವಂತಿಲ್ಲ. ಬಳ್ಳಾರಿಯಿಂದ ಹೊರಗಡೆ ವಿಚಾರ ಮಾಡಿದಾಗ ಸಮೀಪ ಇರುವ ಕ್ಷೇತ್ರ ಗಂಗಾವತಿ ಆಗಿದೆ. ನಾನು ಬೆಳೆದದ್ದೂ ಇದೇ ಪ್ರದೇಶದಲ್ಲಿ. ಹೊಸಪೇಟೆ, ಕಂಪ್ಲಿ, ಗಂಗಾವತಿ ಪರಿಸರದಲ್ಲಿ ಬೆಳೆದಿದ್ದೇನೆ ಎಂದು ತಿಳಿಸಿದರು.


ವಾಯುಪುತ್ರ ಶ್ರೀ ಆಂಜನೇಯನ ಪುಣ್ಯ ಸ್ಥಳವೂ ಗಂಗಾವತಿ ಭಾಗವಾಗಿದೆ. ಆಂಜನೇಯನ ಅಂಜನಾದ್ರಿ ಬೆಟ್ಟವೂ ಇಲ್ಲಿಯೇ ಬರಲಿದೆ. ಹೀಗಾಗಿ ಗಂಗಾವತಿಯಿಂದ ಸ್ಪರ್ಧೆ ಮಾಡಲು ಬಯಸಿದ್ದೇನೆ. ರಾಜಕೀಯ ವಿಷಯ ಈ ಸಮಯದಲ್ಲಿ ಮಾತನಾಡುವುದು ಬೇಡ. ಮಠಕ್ಕೆ ಬಂದಾಗ ರಾಜಕೀಯ ಚರ್ಚೆ ಬೇಡ ಎಂದು ಜನಾರ್ದನ ರೆಡ್ಡಿ ತಮ್ಮ ಮಾತನ್ನು ಅಲ್ಲಿಗೇ ಮೊಟಕುಗೊಳಿಸಿದರು.


ಗೆಳೆಯರು ನನ್ನ ಜೊತೆ ಬರ್ತಾರೆ ಅನ್ನೋದನ್ನ ದೇವರು ನಿರ್ಧರಿಸ್ತಾನೆ


ಇಡೀ ರಾಜ್ಯಕ್ಕೆ ಕಲ್ಯಾಣ ಬಯಸ್ತೇನೆ. ಅದೇ ನಿಟ್ಟಿನಲ್ಲಿ ಮುಂದಿನ ನಡೆ ಇಡ್ತಿದ್ದೇನೆ ಎಂದು ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಅಭಿಪ್ರಾಯಪಟ್ಟಿದ್ದಾರೆ. ಹುಬ್ಬಳ್ಳಿಯ ಸಿದ್ಧಾರೂಢರ ಗದ್ದುಗೆ ದರ್ಶನ ಪಡೆದು ನಂತರ ನ್ಯೂಸ್ 18 ಜೊತೆ ಮಾತನಾಡಿದ ಅವರು, ರಾಜಕುಮಾರ್ ಮತ್ತಿತರರು ಇದೇ ಸಿದ್ಧರೂಢ ಮಠಕ್ಕೆ ನಡೆದುಕೊಳ್ತಿದ್ದರು. ನಾನೂ ಸಹ ನನ್ನ ಏಳ್ಗೆಗಾಗಿ ಆಶೀರ್ವಾದ ಪಡೆದುಕೊಳ್ಳೋಕೆ ಬಂದಿದ್ದೇನೆ. ಖಂಡಿತ ನನಗೆ ಸಿದ್ಧಾರೂಢರ ಆಶೀರ್ವಾದ ಸಿಗುತ್ತೆ ಎಂದರು.


ಸಿದ್ಧಾರೂಢ ಮಠದಲ್ಲಿ ಜನಾರ್ದನ ರೆಡ್ಡಿ


ಇದನ್ನೂ ಓದಿ: Janardhana Reddy: ರೆಡಿಯಾಯ್ತಾ ಜನಾರ್ದನ ರೆಡ್ಡಿ ಹೊಸ ರಾಜಕೀಯ ಅಖಾಡ? ಸಿದ್ದಗಂಗಾ ಮಠದ ಗದ್ದುಗೆ ಬಳಿ ಹೇಳಿದ್ದೇನು?


ಎಲ್ಲವನ್ನೂ ದೇವರೇ ನಿರ್ಧರಿಸುತ್ತಾನೆ


ಬೆಳಗ್ಗೆ ಶಿವಕುಮಾರ ಸ್ವಾಮಿಗಳ ಗದ್ದುಗೆಗೂ ಭೇಟಿ ನೀಡಿದ್ದೆ. ಈಗ ಇಲ್ಲಿಗೆ ಬಂದು ಸಿದ್ಧಾರೂಢರ ಗದ್ದುಗೆ ಭೇಟಿ ನೀಡಿದ್ದೇನೆ. ನನ್ನ ಮುಂದಿನ ನಡೆಯ ಬಗ್ಗೆ ಮಠದಲ್ಲಿ ಹೇಳಲ್ಲ. ಶ್ರೀರಾಮುಲು ಮತ್ತಿತರರು ನನ್ನ ಜೊತೆ ಬರೋದರ ಬಗ್ಗೆ ಈಗಲೇ ಏನೂ ಹೇಳಲ್ಲ. ನನ್ನ ಒಡನಾಡಿಗಳು ನನ್ನ ಜೊತೆ ಬರೋ ಕುರಿತು ದೇವರೇ ನಿರ್ಧರಿಸ್ತಾನೆ ಎಂದು ಹುಬ್ಬಳ್ಳಿಯಲ್ಲಿ ಜನಾರ್ದನ ರೆಡ್ಡಿ ತಿಳಿಸಿದ್ದಾರೆ.

Published by:Mahmadrafik K
First published: