ಮೊದಲ ಬಾರಿ ಮತ ಚಲಾಯಿಸಿದ ಸಂತಸದಲ್ಲಿ ಜನಾರ್ದನ​​ ರೆಡ್ಡಿ ಮಗ ಕಿರೀಟಿ; ಮತದಾನಕ್ಕಾಗಿ ಲಂಡನ್​ನಿಂದ ಆಗಮನ

ಇದೇ ಮೊದಲ ಬಾರಿ ಸಾರ್ವತ್ರಿಕ ಚುನಾವಣೆಯಲ್ಲಿ ಮತ ಚಲಾಯಿಸಿದ ಬಗ್ಗೆ ಮಾತನಾಡಿದ ಅವರು, ಮತದಾನ ಪ್ರತಿಯೊಬ್ಬರ ಕರ್ತವ್ಯ. ನನ್ನ ಹಕ್ಕು ಚಲಾಯಿಸುವುದಕ್ಕಾಗಿ ಲಂಡನ್​ನಿಂದ ನಾಲ್ಕು ದಿನಗಳ ಮುಂಚೆಯೇ ನಾನು ನಗರಕ್ಕೆ ಆಗಮಿಸಿದೆ ಎಂದಿದ್ದಾರೆ.

Seema.R | news18
Updated:April 23, 2019, 3:33 PM IST
ಮೊದಲ ಬಾರಿ ಮತ ಚಲಾಯಿಸಿದ ಸಂತಸದಲ್ಲಿ ಜನಾರ್ದನ​​ ರೆಡ್ಡಿ ಮಗ ಕಿರೀಟಿ; ಮತದಾನಕ್ಕಾಗಿ ಲಂಡನ್​ನಿಂದ ಆಗಮನ
ಕಿರೀಟಿ
  • News18
  • Last Updated: April 23, 2019, 3:33 PM IST
  • Share this:
ಬಳ್ಳಾರಿ (ಏ.23): ರಾಜ್ಯದ 14 ಕ್ಷೇತ್ರಗಳಿಗೆ ಇಂದು ಮತದಾನ ನಡೆಯುತ್ತಿದೆ. ಈ ಬಾರಿ ಚುನಾವಣೆಯಲ್ಲಿ ಅನೇಕರು ಮೊದಲ ಬಾರಿ ಮತ ಚಲಾಯಿಸಿದ ಸಂಭ್ರಮದಲ್ಲಿದ್ದಾರೆ. ಇದೇ ಸಂತಸದಲ್ಲಿ ಮಾಜಿ ಸಚಿವ ಗಾಲಿ ಜನಾರ್ದನ  ರೆಡ್ಡಿ ಮಗ ಕಿರೀಟಿ ಕೂಡ ಇದ್ದಾರೆ.

ಇದೇ ಮೊದಲ ಬಾರಿ ಸಾರ್ವತ್ರಿಕ ಚುನಾವಣೆಯಲ್ಲಿ ಮತ ಚಲಾಯಿಸಿದ ಬಗ್ಗೆ ಮಾತನಾಡಿದ ಅವರು, ಮತದಾನ ಪ್ರತಿಯೊಬ್ಬರ ಕರ್ತವ್ಯ. ನನ್ನ ಹಕ್ಕು ಚಲಾಯಿಸುವುದಕ್ಕಾಗಿ ಲಂಡನ್​ನಿಂದ ನಾಲ್ಕು ದಿನಗಳ ಮುಂಚೆಯೇ ನಾನು ನಗರಕ್ಕೆ ಆಗಮಿಸಿದೆ ಎಂದಿದ್ದಾರೆ.

ಅಮ್ಮ ಲಕ್ಷ್ಮೀ ಅರುಣಾ, ಅಕ್ಕ ಬ್ರಹ್ಮಣಿ ಜೊತೆ ಮೊದಲಬಾರಿಗೆ ಮತಚಲಾಯಿಸಿದ ಅವರಿಗೆ ಅಪ್ಪ ಜೊತೆಯಲ್ಲಿಲ್ಲ ಎಂಬ ನೋವು ಕೂಡ ಮೂಡಿದೆ. ಗಣಿ ಹಗರಣ ಪ್ರಕರಣದಲ್ಲಿ ಈಗಾಗಲೇ ಸೆರೆವಾಸ ಅನುಭವಿಸಿರುವ ಜನಾರ್ದನ ರೆಡ್ಡಿ ಜಾಮೀನಿನ ಮೇಲೆ ಹೊರಗಿದ್ದಾರೆ. ಆದರೆ ಬಳ್ಳಾರಿಗೆ ಹೋಗುವಂತಿಲ್ಲ ಎಂದು ನ್ಯಾಯಾಲಯ ಆದೇಶ ನೀಡಿದೆ. ಈ ಹಿನ್ನೆಲೆಯಲ್ಲಿ ತಂದೆಯ ಗೈರಿನಲ್ಲಿ ಕಿರೀಟಿ ತಮ್ಮ ಹಕ್ಕು ಚಲಾಯಿಸಿದ್ದಾರೆ.

https://www.facebook.com/galijanardhanreddy/videos/328102407728063/

ಲಂಡನಿನಲ್ಲಿ ರಾಜಕೀಯ ವಿಷಯ ಅಧ್ಯಯನ ಮಾಡುತ್ತಿರುವ ಅವರು ತಮ್ಮ ಹಕ್ಕು ಚಲಾಯಿಸಲು ದೂರದೂರಿನಿಂದ ಆಗಮಿಸಿದ್ದು ವಿಶೇಷ. ಮುಂದೆ ತಂದೆಯ ರೀತಿ  ರಾಜಕೀಯಕ್ಕೆ ಬರುವ ಆಲೋಚನೆ ಇದೆಯಾ ಎಂಬ ಕುರಿತು ಮತನಾಡಿದ ಅವರು, ರಾಜಕೀಯ ಕ್ಷೇತ್ರಕ್ಕೆ ಬರುವ ಯಾವುದೇ ಆಲೋಚನೆ ಇಲ್ಲ. ಸಿನಿಮಾ ನಟನಾಗುವ ಇಚ್ಛೆ ಹೊಂದಿದ್ದೇನೆ. ಸಮಾಜ ಸೇವೆ ಮಾಡುವುದು ನನ್ನ ಮೊದಲ ಆದ್ಯತೆ ಎಂದಿದ್ದಾರೆ.

ಬಳ್ಳಾರಿ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ವೈ.ದೇವೇಂದ್ರಪ್ಪ ಅವರು ಕಾಂಗ್ರೆಸ್​ನ ​ ಹಾಲಿ ಸಂಸದ ವಿ.ಎಸ್.ಉಗ್ರಪ್ಪ ವಿರುದ್ಧ ಕಣಕ್ಕೆ ಇಳಿದಿದ್ದಾರೆ.

First published:April 23, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading