ಜಾಮೀನು ಪಡೆಯಲು ನ್ಯಾಯಾಧೀಶರಿಗೆ ಗಾಲಿ ಜನಾರ್ದನ ರೆಡ್ಡಿ ಕೋಟಿ ಕೋಟಿ ಆಫರ್!

ಓಬಳಾಪುರಂ ಮೈನಿಂಗ್ ಕೇಸ್ನಲ್ಲಿ ಜಾಮೀನು ನೀಡಿದರೆ 40 ಕೋಟಿ ರೂ. ನೀಡುವುದಾಗಿ ನ್ಯಾಯಾಧೀಶರಿಗೆ ರೆಡ್ಡಿ ಹೇಳಿದ್ದರು! ಆದರೆ, ಆಫರ್ ತಿರಸ್ಕರಿಸಿ ಬಿ.ಎನ್ ಶರ್ಮಾ ಜಾಮೀನು ನೀಡಲು ನಿರಾಕರಿಸಿದ್ದರು.

Rajesh Duggumane | news18-kannada
Updated:August 28, 2019, 11:26 AM IST
ಜಾಮೀನು ಪಡೆಯಲು ನ್ಯಾಯಾಧೀಶರಿಗೆ ಗಾಲಿ ಜನಾರ್ದನ ರೆಡ್ಡಿ ಕೋಟಿ ಕೋಟಿ ಆಫರ್!
ಜನಾರ್ದನ ರೆಡ್ಡಿ
  • Share this:
ಬೆಂಗಳೂರು (ಆ.28): ಓಬಳಾಪುರ  ಮೈನಿಂಗ್ ಪ್ರಕರಣದಲ್ಲಿ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಜೈಲು ಸೇರಿದ್ದರು. ಈ ಪ್ರಕರಣದಲ್ಲಿ ಅವರು ಜಾಮೀನು ಪಡೆದು ಹೊರಗಿದ್ದಾರೆ. ಈ ಪ್ರಕರಣಕ್ಕೆ ಈಗ ಹೊಸ ಟ್ವಿಸ್ಟ್​ ಸಿಕ್ಕಿದೆ! ಜಾಮೀನು ಪಡೆಯಲು ರೆಡ್ಡಿ ನ್ಯಾಯಾಧೀಶರಿಗೆ ಬರೋಬ್ಬರಿ 40 ಕೋಟಿ ರೂ. ಆಫರ್​ ಮಾಡಿದ್ದರು ಎನ್ನುವ ವಿಚಾರ ಬೆಳಕಿಗೆ ಬಂದಿದೆ! ಈ ಬಗ್ಗೆ ಆಂಗ್ಲ ಪತ್ರಿಕೆ ಟೈಮ್ಸ್​ ವರದಿ ಮಾಡಿದೆ.

ಓಬಳಾಪುರ  ಮೈನಿಂಗ್ ಪ್ರಕರಣಕ್ಕೆ ಸಂಬಂಧಿಸಿ 2011ರ ಸೆಪ್ಟೆಂಬರ್​ನಲ್ಲಿ ರೆಡ್ಡಿಯನ್ನು ಸಿಬಿಐ ಬಂಧಿಸಿತ್ತು. ಅವರನ್ನು ಹೈದರಬಾದ್​ನ ಚೆಂಚಲಗೂಡ ಜೈಲಿನಲ್ಲಿ ಇಡಲಾಗಿತ್ತು. ಬಳಿಕ ಜಾಮೀನು ನೀಡುವಂತೆ ರೆಡ್ಡಿ ಕೋರ್ಟ್​ ಮೊರೆ ಹೋಗಿದ್ದರು. ಆದರೆ, ಆದರೆ ಕೆಳಹಂತದ ನ್ಯಾಯಾಲಯದಲ್ಲಿ ಜಾಮೀನು ತಿರಸ್ಕಾರವಾಗಿತ್ತು. ಶತಾಯ-ಗತಾಯ ಜಾಮೀನು ಪಡೆಯಲೇಬೇಕು ಎನ್ನುವ ಹಠಕ್ಕೆ ಬಿದ್ದಿದ್ದ ರೆಡ್ಡಿ, ನ್ಯಾಯಾಧೀಶರಿಗೆ ಹಣದ ಆಮಿಷ ತೋರಿಸಿದ್ದರು!

ಈ ಸಮಯದಲ್ಲಿ ಬಿ.ಎನ್ ಶಾರ್ಮಾ ನ್ಯಾಯಾಧೀಶರಾಗಿದ್ದರು. ಓಬಳಾಪುರ ಮೈನಿಂಗ್ ಕೇಸ್ನಲ್ಲಿ ಜಾಮೀನು ನೀಡಿದರೆ 40 ಕೋಟಿ ರೂ. ನೀಡುವುದಾಗಿ ನ್ಯಾಯಾಧೀಶರಿಗೆ ರೆಡ್ಡಿ ಹೇಳಿದ್ದರು! ಆದರೆ, ಆಫರ್ ತಿರಸ್ಕರಿಸಿ ಬಿ.ಎನ್ ಶರ್ಮಾ ಜಾಮೀನು ನೀಡಲು ನಿರಾಕರಿಸಿದ್ದರು.

ಇದನ್ನೂ ಓದಿ: ಟ್ರಬಲ್ ಶೂಟರ್​ಗೆ ಇಂದು ಮಹತ್ವದ ದಿನ; ಇಡಿ ದಾಳಿ ಪ್ರಕರಣದಲ್ಲಿ ಡಿಕೆಶಿಗೆ ಸಿಗಲಿದೆಯಾ ಕ್ಲೀನ್​ಚಿಟ್​?

ನಂತರ ಶರ್ಮಾ ಜಾಗಕ್ಕೆ ಬಂದ ನ್ಯಾ. ಪಟ್ಟಾಭಿರಾಮ್ ರಾವ್​ ರೆಡ್ಡಿಗೆ ಬೇಲ್​ ನೀಡಿದ್ದರು. ನಿನ್ನೆ ಈ ಪ್ರಕರಣ ಸಂಬಂಧ ಹೈದರಬಾದ್ ಭ್ರಷ್ಟಾಚಾರ ನಿಗ್ರಹ ದಳದ ಕೋರ್ಟ್ ವಿಚಾರಣೆ ನಡೆಸಿತ್ತು. ಈ ವೇಳೆ ಶರ್ಮಾ ಈ ಹೇಳಿಕೆ ನೀಡಿದ್ದಾರೆ. ನಂತರ ಪ್ರಕರಣದ ವಿಚಾರಣೆಯನ್ನು ಕೋರ್ಟ್​​ ಸೆ.13 ಕ್ಕೆ ಮುಂದೂಡಿದೆ.

First published:August 28, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading