HOME » NEWS » State » GADAGA NATIONAL MOUNTAIN CYCLING CHAMPIONSHIP HELD IN GADAG FOR THE FIRST TIME IN KARNATAKA SKG SCT

ಗದಗದಲ್ಲಿ ಆರಂಭವಾಗಿದೆ ರಾಷ್ಟ್ರೀಯ ಮೌಂಟೇನ್ ಬೈಕ್ ಸೈಕ್ಲಿಂಗ್ ಸ್ಪರ್ಧೆ

ಇದೇ ಮೊದಲ ಬಾರಿಗೆ ಕರ್ನಾಟಕದ ಗದಗ ಜಿಲ್ಲೆಯಲ್ಲಿ ರಾಷ್ಟ್ರೀಯ ಮೌಂಟೇನ್ ಬೈಕ್ ಸೈಕ್ಲಿಂಗ್ ಚಾಂಪಿಯನ್ ಶಿಪ್ ನಡೆಯುತ್ತಿದೆ‌.

news18-kannada
Updated:February 21, 2021, 8:55 AM IST
ಗದಗದಲ್ಲಿ ಆರಂಭವಾಗಿದೆ ರಾಷ್ಟ್ರೀಯ ಮೌಂಟೇನ್ ಬೈಕ್ ಸೈಕ್ಲಿಂಗ್ ಸ್ಪರ್ಧೆ
ಗದಗದಲ್ಲಿ ಸೈಕ್ಲಿಂಗ್
  • Share this:
ಗದಗ: ಅದು ನಡೆದಾಡಲು ಆಗದಂತಹ ಗುಡ್ಡಗಾಡು ಪ್ರದೇಶ, ಆ ತಗ್ಗು ದಿಣ್ಣೆಯಲ್ಲಿ ಮೌಂಟೇನ್ ಬೈಕ್ ಸೈಕಲ್ ಗಳ ಸವಾರಿ. ನಾ ಮುಂದೆ ತಾ ಮುಂದೆ ಎಂದು ಕಿರಿದಾದ ರಸ್ತೆಯಲ್ಲಿ ಸ್ಪರ್ಧಾಳುಗಳ ಕಸರತ್ತು. ಹೌದು, ಇದೇ ಮೊದಲ ಬಾರಿಗೆ ಕರ್ನಾಟಕದಲ್ಲಿ ಅದರಲ್ಲೂ ಗದಗ ಜಿಲ್ಲೆಯಲ್ಲಿ ರಾಷ್ಟ್ರೀಯ ಮೌಂಟೇನ್ ಬೈಕ್ ಸೈಕ್ಲಿಂಗ್ ಚಾಂಪಿಯನ್ ಶಿಪ್ ನಡೆಯುತ್ತಿದೆ‌.

17 ನೇ ರಾಷ್ಟ್ರೀಯ ಸೀನಿಯರ್, ಜ್ಯೂನಿಯರ್ ಮತ್ತು ಸಬ್ ಜ್ಯೂನಿಯರ್ ಮೌಂಟೇನ್ ಬೈಕ್ ಸೈಕ್ಲಿಂಗ್ ಮುದ್ರಣ ಕಾಶಿ ಗದಗ ಜಿಲ್ಲೆಯಲ್ಲಿ ನಡೆಯುತ್ತಿದೆ. ಹೌದು ಇದೇ ಮೊದಲ ಭಾರಿ ರಾಜ್ಯದಲ್ಲಿ ಅದರಲ್ಲೂ ಮೊದಲ ಭಾರಿಗೆ ಗದಗನಲ್ಲಿ ನಡೆಯುತ್ತಿರುವದು ಹೆಮ್ಮೆಯ ವಿಷಯವೇ ಸರಿ. ನಗರದ ಸಾಲುಮರದ ತಿಮ್ಮಕ್ಕ ಸಸ್ಯೋದ್ಯಾನದಲ್ಲಿ ಸೈಕ್ಲಿಸ್ಟ್ ಕಲವರ ಬಲು ಜೋರಾಗಿತ್ತು. ಕಲ್ಲು, ತಗ್ಗು, ಹದಗೆಟ್ಟ ರಸ್ತೆಯಲ್ಲಿ ಸರವೇಗದಲ್ಲಿ ಸೈಕ್ಲಿಸ್ ಗಳ ಸಹಾಸ ಮೈ ಜುಮ್ಮ ಎನ್ನುವಂತ್ತಿತ್ತು. ಮೂರು ದಿನಗಳ‌ ಕಾಲ ನಡೆಯುವ, 17 ನೇ ರಾಷ್ಟ್ರೀಯ ಮೌಂಟೆನ್ ಬೈಕ್ ಚಾಂಪಿಯನ್ ಶಿಪ್ ನಲ್ಲಿ, ಪಂಜಾಬ್, ದೆಹಲಿ, ಮಹಾರಾಷ್ಟ್ರ, ರಾಜಸ್ಥಾನ್, ಬಿಹಾರ್ ಹರಿಯಾಣ, ಜಮ್ಮು ಕಾಶ್ಮೀರ ಸೇರಿ ದೇಶದ 28 ರಾಜ್ಯದ 435 ಕ್ರೀಡಾಪಟುಗಳು ಭಾಗಿಯಾಗಿದ್ದಾರೆ.

ಇದನ್ನೂ ಓದಿ: ಇಂದು ಪಂಚಮಸಾಲಿ ಸಮಾವೇಶ; ಬೆಂಗಳೂರಿನ ಕೆಲವು ರಸ್ತೆಗಳ ಮಾರ್ಗ ಬದಲಾವಣೆ

ಅದರಲ್ಲೂ ರಾಜ್ಯದ 18 ಬಾಲಕರು ಹಾಗೂ 16 ಬಾಲಕಿಯರು ಭಾಗವಹಿಸಿದ್ದಾರೆ. ಇಂದು ಜೂನಿಯರ್ ಮೌಂಟೇನ್ ಬೈಕ್ ಸೈಕ್ಲಿಂಗ್ ಸ್ಪರ್ಧೆ ನಡೆದಿದ್ದು, ಕ್ರೀಡಾಪಟುಗಳ ಮದ್ಯ ಒಂದು ನಿಮಿಷದ ಅಂತರದಲ್ಲಿ ಚಾಲನೆ ನೀಡಲಾಯಿತು. ಯಾರು ವೇಗವಾಗಿ ಬರುತ್ತಾರೋ ಅಂಥವರಿಗೆ ಪ್ರಥಮ, ದ್ವಿತೀಯ, ತೃತೀಯ ಎಂದು ಬಹುಮಾನ ನೀಡಲಾಗುತ್ತದೆ. ಏರಿಳಿತ, ಕಲ್ಲುಗಳಿಂದ ಕೂಡಿದ್ದ ಗುಡ್ಡಗಾಡು ಪ್ರದೇಶದಲ್ಲಿ 14, 16, 18 ವರ್ಷದೊಳಗಿನ ಯುವಕ, ಯುವತಿಯರು ಭಾಗಿಯಾಗಿದ್ದರು.

National Mountain Bike Cycling Championship held in Gadag for the First Time in Karnataka.
ಗದಗದಲ್ಲಿ ಮೌಂಟೇನ್ ಸೈಕ್ಲಿಂಗ್


ಇದೇ ಮೊದಲ ಬಾರಿ ರಾಜ್ಯದಲ್ಲಿ ನಡೆಯುವ ಗುಡ್ಡಗಾಡು ಸೈಕ್ಲಿಂಗ್ ಚಾಂಪಿಯನ್ ಶಿಪ್​ನಲ್ಲಿ ಕನ್ನಡನಾಡಿನ ಸೈಕ್ಲಿಸ್ಟ್ ಗಳು ತುದಿಗಾಲಿನಲ್ಲಿ ನಿಂತಿದ್ದಾರೆ. ನಮ್ಮದೇ ನಾಡಿನಲ್ಲಿ ನಡೆಯುವ ಚಾಂಪಿಯನ್ ಶಿಪ್​ನಲ್ಲಿ ಚಿನ್ನದ ಹುಡುಗ, ಹುಡುಗಿಯರಾಗಿ ಸಾಹಸ ಮಾಡುತ್ತಿದ್ದಾರೆ. ಮೌಂಟೇನ್ ಬೈಕ್ ಟ್ರಾಕ್ ಚೆನ್ನಾಗಿದ್ದು, ನಮ್ಮ ನಾಡಿನಲ್ಲಿ ನಡೆಯುತ್ತಿರುವುದರಿಂದ ಹೆಮ್ಮೆ ಎನ್ನಿಸುತ್ತಿದೆ ಅಂತಾರೆ ಮೈಸೂರಿನ ಕ್ರೀಡಾಪಟು.
ಇದೇ ಮೊದಲ ಭಾರಿಗೆ ನಡೆಯುತ್ತಿರುವ ಮೌಂಟೇನ್ ಬೈಕ್ ಸೈಕ್ಲಿಂಗ್ ಭರ್ಜರಿಯಾಗಿ ಆರಂಭವಾಗಿದೆ. ಇಕ್ಕಟ್ಟಾದ ರಸ್ತೆಯಲ್ಲಿ ಸೈಕ್ಲಿಂಗ್ ಮಾಡೋದು ಸಾಹಸದ ಕೆಲಸವೇ ಸರಿ. ಆದ್ರೂ ಗುರಿ ಮುಟ್ಟಲು ಕ್ರೀಡಾಪಟುಗಳು ಮಾಡುತ್ತಿದ್ದ ಸಾಹಸ ಮಾತ್ರ ರೋಮಾಂಚಕಾರಿಯಾಗಿತ್ತು.

(ವರದಿ: ಸಂತೋಷ ಕೊಣ್ಣೂರ)
Published by: Sushma Chakre
First published: February 21, 2021, 8:50 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories