news18-kannada Updated:January 28, 2021, 8:03 AM IST
ಎಲೆಕ್ಟ್ರಿಕ್ ಸೈಕಲ್ನೊಂದಿಗೆ ಪ್ರಜ್ವಲ್
ಗದಗ (ಜ. 28): ಇತ್ತೀಚೆಗೆ ಪೆಟ್ರೋಲ್ ಬೆಲೆ ಗಗನಕ್ಕೆ ಏರುತ್ತಿದೆ. ಇನ್ನೊಂದೆಡೆ ವಾಯುವ್ಯ ಮಾಲಿನ್ಯ ಕೂಡ ಹೆಚ್ಚಾಗುತ್ತಿದೆ. ಮನೆಗೆ ಒಂದು ಎರಡು ಬೈಕ್ ಇರೋದು ಸಹಜ ಎಂಬಂತಾಗಿದೆ. ಹಾಗೇ ರಸ್ತೆಗೆ ಇಳಿದರೆ ಸಾಕು ಬೈಕ್ ಹಾಗೂ ಕಾರುಗಳು ಸೇರಿದಂತೆ ವಾಹನಗಳಿಂದ ವಾಯುವ್ಯ ಮಾಲಿನ್ಯ. ವಾಯುವ್ಯ ಮಾಲಿನ್ಯ ನಿಯಂತ್ರಣ ಮಾಡಬೇಕು ಅಂತ ಎಷ್ಟೇ ಹೇಳಿದರೂ ಆ ಕಡೆ ಯಾರೂ ಗಮನ ಹರಿಸುತ್ತಿಲ್ಲ. ಹೀಗಾಗಿ, ಗದಗದ ವಿದ್ಯಾರ್ಥಿಯೊಬ್ಬ ಪರಿಸರ ಸ್ನೇಹಿ ಹಾಗೂ ಕಡಿಮೆ ವೆಚ್ಚದಲ್ಲಿ ದೂರು ಸಂಚಾರ ಮಾಡಲು ಎಲೆಕ್ಟ್ರಿಕ್ ಸೈಕಲ್ ರೆಡಿ ಮಾಡಿದ್ದಾನೆ. ಮಾಯು ಮಾಲಿನ್ಯ ಮುಕ್ತ ಭಾರತ ಮಾಡುವ ಕನಸು ಕಂಡಿದ್ದಾನೆ ವಿದ್ಯಾರ್ಥಿ ಪ್ರಜ್ವಲ್.
ಗುಜರಿ ಸೇರಿದ್ದ ಸೈಕಲ್ ಈ ವಿದ್ಯಾರ್ಥಿಯ ಕೈಚಳಕದಿಂದ ಎಲೆಕ್ಟ್ರಿಕ್ ಬೈಸಿಕಲ್ ಆಗಿದೆ. ಅಂದಹಾಗೆ ಗದಗನ ಒಕ್ಕಲಗೇರಿ ನಿವಾಸಿಯಾದ ಪ್ರಜ್ವಲ್ ಹಬೀಬ್ ಎನ್ನುವ ವಿದ್ಯಾರ್ಥಿ ಯಾರ ಸಹಾಯ ಇಲ್ಲದೆ, ಯೂಟ್ಯೂಬ್ ಚಾನೆಲ್ ನೋಡಿ ತನ್ನದೆ ಆದ ಪ್ಲ್ಯಾನ್ ಮಾಡಿಕೊಂಡು ಮನೆಯಲ್ಲಿಯೇ ಎಲೆಕ್ಟ್ರಿಕ್ ಸೈಕಲ್ ತಯಾರಿಸಿದ್ದಾನೆ. ಹೌದು, ಚಿಕ್ಕ ವಯಸ್ಸಿನಲ್ಲಿ ಏನಾದರೂ ಮಾಡಬೇಕು ಅಂತ ಅಂದುಕೊಂಡಿದ್ದ ವಿದ್ಯಾರ್ಥಿ, ಎಸ್ ಎಸ್ ಎಲ್ ಸಿ ಮುಗಿಸಿ ಲಾಕ್ ಡೌನ್ ಸಮಯದಲ್ಲಿ ಮನೆಯಲ್ಲಿದ್ದಾಗ ಈ ಬೈಸಿಕಲ್ ತಯಾರಿಸಿದ್ದಾನೆ.

ಎಲೆಕ್ಟ್ರಿಕ್ ಸೈಕಲ್ನೊಂದಿಗೆ ಪ್ರಜ್ವಲ್
ಈ ಸೈಕಲ್ ಗೆ 12 ವೋಲ್ಟ್ ಎರಡು ಬ್ಯಾಟರಿ, 24 ಗೆರ್ಡ್ ಮೋಟಾರ್, ಅಳವಡಿಸಲಾಗಿದ್ದು, ವಿದ್ಯುತ್ ಸಂಪರ್ಕ ಕಲ್ಪಿಸಿ ಚಾರ್ಜ್ ಮಾಡಿದರೆ ಮುಗಿಯಿತು. ಕೈಯಲ್ಲಿ ಎಕ್ಸಿಲೇಟರ್ ಮೂಲಕ ಸೈಕಲ್ ನಲ್ಲಿ ಓಡಿಸಬಹುದು. ಒಂದು ನಿಮಿಷಕ್ಕೆ 15 ರಿಂದ 20 ಕಿಲೋಮೀಟರ್ ವೇಗದಲ್ಲಿ ಸಂಚರಿಸುತ್ತದೆ. ಹಾಗೇ ಒಂದು ಬಾರಿ ಚಾರ್ಜ್ ಮಾಡಿದರೆ 25-30 ಕಿಲೋಮೀಟರ್ ಹಾಯಾಗಿ ಜರ್ನಿ ಮಾಡಬಹುದು ಅಂತಾನೆ ವಿದ್ಯಾರ್ಥಿ ಪ್ರಜ್ವಲ್ ಹಬೀಬ್.
ಇದನ್ನೂ ಓದಿ: ಗಾಂಧಿ ಹೆಸರಲ್ಲಿ ಮತ ಪಡೆದು, ಗಾಂಧಿಗೆ ದ್ರೋಹ ಮಾಡಿದ ಪಕ್ಷ ಕಾಂಗ್ರೆಸ್; ನಳಿನ್ ಕುಮಾರ್ ಕಟೀಲ್
ಈ ಪ್ರಜ್ವಲ್ ಹಬೀಬ್ ಕೂಡ ಕಡು ಬಡತನದಲ್ಲಿ ಬೆಳೆದಿದ್ದಾನೆ. ತಂದೆ ಪರಶುರಾಮ ಹಬೀಬ್ ಎಗ್ ರೈಸ್ ಅಂಗಡಿಯನ್ನು ಇಟ್ಟುಕೊಂಡು ಜೀವನವನ್ನು ನಡೆಸುತ್ತಿದ್ದಾರೆ. ತಾಯಿ ಲೀಲಾ ಹಬೀಬ್ ಮನೆಯಲ್ಲಿದ್ದ, ಇಬ್ಬರು ಮಕ್ಕಳ ಆರೈಕೆ ಮಾಡ್ತಾರೆ. ಎಸ್ ಎಸ್ ಎಲ್ ಸಿ ಮುಗಿಸಿ ಮನೆಯಲ್ಲಿದ್ದಾಗ ಈ ಎಲೆಕ್ಟ್ರಿಕ್ ಸೈಕಲ್ ತಯಾರಿಸಿದ್ದಾನೆ. ಸದ್ಯ ಈಗ ಗದಗದ ಅಂಜುಮನ್ ಕಾಲೇಜಿನಲ್ಲಿ ಡಿಪ್ಲೊಮಾ ಓದುತ್ತಿದ್ದಾನೆ.
ಈ ಎಲೆಕ್ಟ್ರಿಕ್ ಸೈಕಲ್ ಕೇವಲ 9 ರಿಂದ 10 ಸಾವಿರ ರೂ.ಗೆ ತಯಾರಾಗುತ್ತದೆ. ಹಾಗಾಗಿ, ಶಾಲೆ ಹಾಗೂ ಕಾಲೇಜಿಗೆ ಹೋಗುವ ವಿದ್ಯಾರ್ಥಿಗಳು ಹಾಗೂ ಆಫೀಸ್ ಕೆಲಸಕ್ಕೆ ಹೋಗುವವರು ಕೂಡಾ ಇಂತಹ ಎಲೆಕ್ಟ್ರಿಕ್ ಸೈಕಲ್ ಬಳಸಬಹುದು. ಬಡತನದಲ್ಲಿ ಬೆಳೆದ ನನ್ನ ಮಗ ಎಲೆಕ್ಟ್ರಿಕ್ ಸೈಕಲ್ ಮಾಡಿರೋದು ನನಗೆ ಬಹಳ ಖುಷಿಯಾಗಿದೆ ಅಂತಾರೆ ವಿದ್ಯಾರ್ಥಿಯ ತಂದೆ ಪರಶುರಾಮ ಹಬೀಬ್.
ಒಟ್ಟಿನಲ್ಲಿ, ಗದಗ- ಬೆಟಗೇರಿ ಅವಳಿ ನಗರದಲ್ಲಿ ಈ ಎಲೆಕ್ಟ್ರಿಕ್ ಸೈಕಲ್ ಬಗ್ಗೆ ಮೆಚ್ಚುಗೆ ವ್ಯಕ್ತವಾಗಿದೆ. ವಿದ್ಯಾರ್ಥಿಯ ಕಮಾಲ್ ನೋಡಿ ಎಲ್ಲರೂ ನಿಬ್ಬೆರಗಾಗಿದ್ದಾರೆ. ಸೂಕ್ತವಾದ ಪ್ರೋತ್ಸಾಹ ಸಿಕ್ಕರೆ ಎಲೆಕ್ಟ್ರಿಕ್ ಫೀಲ್ಡ್ ನಲ್ಲಿ ಈ ವಿದ್ಯಾರ್ಥಿ ಅಮೋಘವಾದ ಸಾಧನೆ ಮಾಡುವುದರಲ್ಲಿ ಸಂಶಯ ಇಲ್ಲ.
(ವರದಿ: ಸಂತೋಷ ಕೊಣ್ಣೂರ)
Published by:
Sushma Chakre
First published:
January 28, 2021, 8:03 AM IST