ಗದಗ: ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ (Challenging Star Darshan) ಅವರಿಗೆ ಅಭಿಮಾನಿ ತನ್ನ ಕೈಯಿಂದ ಸಾಕಿ ಸಲುಗಿದ ಟಗರನ್ನು ಗಿಫ್ಟ್ ಮಾಡಿದ್ದಾರೆ. ಆ ಟಗರಿನ ಹೆಸರು ಬೀರ ಅಂತ. ಬೀರನ ಒಡೆಯ ಕಟ್ಟಾ ದರ್ಶನ್ ಫ್ಯಾನ್. ದರ್ಶನ್ ಅಂದ್ರೆ ಪಂಚಪ್ರಾಣ. ಹೀಗಾಗಿ ದರ್ಶನ್ ಗೆ ಏನಾದರೂ ಮರೆಯಲಾರದಂತಹ ಗಿಫ್ಟ್ ಕೊಡಬೇಕು ಅನ್ನೋದು ಅಭಿಮಾನಿಯ ಬಹಳ ದಿನದ ಅಭಿಲಾಷೆಯಾಗಿತ್ತು. ಹೀಗಾಗಿ ಅಕ್ಕರೆಯಿಂದ ಬೆಳಸಿದ ಟಗರನ್ನು ಗಿಫ್ಟ್ ನೀಡಿದ್ದಾನೆ.
ಹೌದು.. ಗದಗ ತಾಲೂಕಿನ ಕಣವಿ ಗ್ರಾಮದ ಶಂಭು ಗಡಗಿ ಎಂಬಾತ ನಟ ದರ್ಶನ್ ಅವರ ಕಟ್ಟಾ ಅಭಿಮಾನಿ. ದರ್ಶನ್ ಅವರನ್ನು ಹಲವು ಬಾರಿ ತುಂಬಾ ಹತ್ತಿರದಿಂದ ನೋಡಿ ಪೋಟೋ ತೆಗೆಸಿಕೊಂಡು ಬಂದಿದ್ದ. ಅವರನ್ನ ಹಲವಾರು ಬಾರಿ ಭೇಟಿಯಾಗಿ ಸಣ್ಣಪುಟ್ಟ ಪೋಟೋ ಫ್ರೇಮ್ ಗಿಫ್ಟ್, ಡಾ. ಪುಟ್ಟರಾಜ ಗವಾಯಿಗಳ ಫೋಟೋ ನೀಡಿದ್ದ. ಆದರೆ ಇದಕ್ಕಿಂತ ಏನಾದರೂ ಒಂದು ಮರೆಯಲಾರದ ಗಿಫ್ಟ್ ಕೊಡಬೇಕು ಅಂತ ಹಂಬಲಿಸುತ್ತಿದ್ದ. ಅದೇ ಸಮಯಕ್ಕೆ ಹುಬ್ಬಳ್ಳಿಯಲ್ಲಿ ರಾಬರ್ಟ್ ಸಿನಿಮಾ ಫ್ರೀ ರಿಲೀಸ್ ಕಾರ್ಯಕ್ರಮ ಏರ್ಪಾಡು ಆಗಿಯೇ ಬಿಡ್ತು. ಇದೇ ಸಮಯಕ್ಕೆ ಕಾಯ್ದು ಕುಳಿತಿದ್ದ ಅಭಿಮಾನಿ ಶಂಭು ತನ್ನ ಪ್ರೀತಿಯ ಬೀರನನ್ನು ಹೊಡಕೊಂಡು ನಸುಕಿನ ಜಾವ ಹುಬ್ಬಳ್ಳಿ ಕಡೆ ಹೊರಟೇ ಬಿಟ್ಟ.
ಫೆಬ್ರವರಿ 28 ರಂದು ರಾಬರ್ಟ್ ಸಿನಿಮಾದ ಫ್ರೀ ಲಾಂಚಿಂಗ್ ಮುಗಿಸಿಕೊಂಡು ಬೆಂಗಳೂರು ಕಡೆ ಹೊರಡುತ್ತಿರುವಾಗ ತನ್ನ ನೆಚ್ಚಿನ ಅಭಿಮಾನಿಯ ಕರೆಗೆ ಓಗೊಟ್ಟು ಕಾರಿನಿಂದ ಇಳಿದು ಬಂದು ಶಂಭು ತಂದಿದ್ದ ಟಗರನ್ನು ಮತ್ತು ಗಾನಯೋಗಿ ಡಾ.ಪಂಡಿತ ಪುಟ್ಟರಾಜ ಗವಾಯಿಗಳ ಪೋಟೋವನ್ನು ಎರಡನ್ನೂ ನಟ ದರ್ಶನ್ ಅವರಿಗೆ ಗಿಫ್ಟ್ ಕೊಟ್ಟು ತನ್ನ ಪ್ರೀತಿಯನ್ನು ತೋರ್ಪಡಿಸಿದ್ದಾನೆ. ಇದನ್ನ ಕಂಡ ದರ್ಶನ್ ತುಂಬಾ ಖುಷಿಯಿಂದ ಗಿಫ್ಟ್ ಸ್ವೀಕಾರ ಮಾಡಿ ಟಗರನ್ನು ಚೆನ್ನಾಗಿ ಬೆಳಿಸಿದಿಯಾ ಅಂತ ಬೆನ್ನು ತಟ್ಟಿ, ಟಗರನ್ನು ತೆಗೆದುಕೊಂಡು ನಿನೇ ಮೈಸೂರಿನ ನನ್ನ ಫಾರ್ಮ್ ಗೆ ಬಾ ಒಂದು ವಾಹನವನ್ನು ಕಳಿಸುತ್ತೇನೆ ಅಂತ ಈತನಿಗೆ ಮೊಬೈಲ್ ನಂಬರ್ ಕೊಟ್ಟು ಹೋಗಿದ್ದಾರೆ.
ಇದನ್ನು ಓದಿ: Darhsan: ವನ್ಯಜೀವಿಗಳನ್ನು ಉಳಿಸಿ ಎಂದು ಮನವಿ ಮಾಡಿದ ನಟ ದರ್ಶನ್..!
ಇನ್ನು ಶಂಭು ಅವರ ತಂದೆ ಮುದುಕಪ್ಪ ಈ ಮೊದಲು ಕುರಿಯನ್ನ ಸಾಕುತ್ತಿದ್ದರು. ಆದ್ರೆ ಇತ್ತೀಚೆಗೆ ಕುರಿ ಸಾಕಾಣಿಕೆ ಬಿಟ್ಟಿದ್ದಾರೆ. ಆದ್ರೆ ಟಗರು ಸಾಕಾದು ಮಾತ್ರ ಇವರ ಹವ್ಯಾಸ. ಅದರಲ್ಲೂ ಸದ್ಯ ಇರುವ ಟಗರು ಅವರ ಮನೆಯ ಸದಸ್ಯರಲ್ಲೊಬ್ಬ ಆಗಿತ್ತು. ಅದನ್ನ ಇಡೀ ಮನೆಮಂದಿ ಚೆನ್ನಾಗಿ ನೋಡಿಕೊಳ್ತಿದ್ರು. ಇದಕ್ಕೆ ಸರಿಯಾದ ಸಮಯಕ್ಕೆ ಎಲ್ಲಾ ರೀತಿಯ ವಿಟಮಿನ್ ಇರುವ ಆಹಾರವನ್ನೇ ಕೊಡ್ತಾರೆ. ಕಾಳು ಕಡಿ, ಹಿಂಡಿ, ಶೇಂಗಾ ಹೊಟ್ಟು ಹೋಗೆ ವೈರ್ಯಾಟಿ ಪುಡ್ ಹಾಕ್ತಾರೆ. ಸದ್ಯ ಇದರ ಕೇಜಿ ಸುಮಾರು 80 ಕೆಜಿ ಇದೆ. ಹಲವು ಬಾರಿ ಟಗರಿನ ಕಾಳಗದಲ್ಲಿ ಪಾಲ್ಗೊಂಡರು ಅದನ್ನ ಇನ್ನೊಂದು ಟಗರಿನ ಜೊತೆಗೆ ಹೊಡೆದಾಡಲು ಬಿಟ್ಟಿಲ್ಲ. ಯಾಕೆಂದರೆ ಅದಕ್ಕೆ ಯಾವುದೇ ರೀತಿ ನೋವಾಗಬಾರದು ಅನ್ನೋದು ಅವರ ಅನಿಸಿಕೆ. ಹೀಗಾಗಲೇ ಹಲವರು ಖರೀದಿಗೆ ಕೇಳಿದ್ದರು. ಸುಮಾರು 30 ರಿಂದ 40 ಸಾವಿರ ರೂ. ಗೆ ಬೆಲೆ ಬಾಳುವ ಟಗರು ಇದಾಗಿತ್ತು. ಆದ್ರೆ ಇದಲ್ಲೆಕ್ಕಿಂತ ಅಭಿಮಾನವೇ ಮುಖ್ಯ ಅಂತ ಕುಟುಂಬಸ್ಥರು ಹೇಳ್ತಿದ್ದಾರೆ.
ವರದಿ: ಸಂತೋಷ ಕೊಣ್ಣೂರ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ