ಜಮ್ಮು ಕಾಶ್ಮೀರದಲ್ಲಿ ಶತ್ರುಗಳ ಗುಂಡೇಟಿಗೆ ಗದಗದ ಯೋಧ ವೀರೇಶ ಕುರಹಟ್ಟಿ ಹುತಾತ್ಮ; ಇಂದು ಸ್ವಗ್ರಾಮದಲ್ಲಿ ಅಂತ್ಯ ಸಂಸ್ಕಾರ
ಜಮ್ಮು-ಕಾಶ್ಮೀರದ ಉರಿ ಪ್ರದೇಶದಲ್ಲಿ ಡಿ. 25ರ ಬೆಳಗಿನ ಜಾವ ನೆಡದಿದ್ದ ಗುಂಡಿನ ದಾಳಿಯಲ್ಲಿ ವೀರೇಶ ಕುರಹಟ್ಟಿ ಸಾವನ್ನಪ್ಪಿದ್ದಾರೆ. ಶತ್ರು ರಾಷ್ಟ್ರದ ಸೈನಿಕರೊಂದಿಗೆ ನಡೆದ ಗುಂಡಿನ ಕಾಳಗದಲ್ಲಿ ವೀರೇಶ ಬಲಿಯಾಗಿದ್ದಾರೆ.
ಗದಗ (ಡಿ. 27): ದೇಶದ ಗಡಿಯಲ್ಲಿ 29 ವರ್ಷಗಳ ಕಾಲ ಸೈನಿಕನಾಗಿ ಸೇವೆ ಸಲ್ಲಿಸಿದ್ದ ಗದಗ ಜಿಲ್ಲೆಯ ಯೋಧ ಉಗ್ರರ ಗುಂಡೇಟಿಗೆ ಬಲಿಯಾಗಿದ್ದಾರೆ. 3 ದಶಕಗಳಿಂದ ಭಾರತೀಯ ಸೇನೆಯ 18ನೇ ಮರಾಠಾ ಲೈಟ್ ಇನ್ಫೆಂಟ್ರಿ ರೆಜಿಮೆಂಟ್ನಲ್ಲಿ ಸೇವೆ ಸಲ್ಲಿಸುತ್ತಿದ್ದ ರೋಣ ತಾಲೂಕು ಕರಮುಡಿ ಗ್ರಾಮದ ವೀರೇಶ ಕುರಹಟ್ಟಿ ಎಂಬ 47 ವರ್ಷದ ಯೋಧ 2 ದಿನಗಳ ಹಿಂದೆ ಗುಂಡೇಟಿಗೆ ಬಲಿಯಾಗಿದ್ದಾರೆ.
1990ರಲ್ಲಿ ಭಾರತೀಯ ಸೇನೆ ಸೇರಿದ್ದ ವೀರೇಶ ಕುರಹಟ್ಟಿ 3 ಬಾರಿ ತಮ್ಮ ಸೇವೆಯನ್ನು ವಿಸ್ತರಿಸಿಕೊಂಡಿದ್ದರು. ಇನ್ನು 3 ತಿಂಗಳ ನಂತರ ನಿವೃತ್ತಿ ಪಡೆಯಬೇಕೆಂದು ಕೊಂಡಿದ್ದ ವೀರೇಶ ಶವವಾಗಿ ತಮ್ಮ ಮನೆಯನ್ನು ಸೇರಿದ್ದಾರೆ. ಇಂದು ಬೆಳಗ್ಗೆ ಗದಗ ಜಿಲ್ಲೆಯ ರೋಣ ತಾಲೂಕಿನ ಕರಮುಡಿ ಎಂಬ ಸ್ವಗ್ರಾಮಕ್ಕೆ ಮೃತದೇಹವನ್ನು ತರಲಾಗಿದೆ.
ಜಮ್ಮು-ಕಾಶ್ಮೀರದ ಉರಿ ಪ್ರದೇಶದಲ್ಲಿ ಡಿ. 25ರ ಬೆಳಗಿನ ಜಾವ ನೆಡದಿದ್ದ ಗುಂಡಿನ ದಾಳಿಯಲ್ಲಿ ವೀರೇಶ ಕುರಹಟ್ಟಿ ಸಾವನ್ನಪ್ಪಿದ್ದಾರೆ. ಶತ್ರು ರಾಷ್ಟ್ರದ ಸೈನಿಕರೊಂದಿಗೆ ನಡೆದ ಗುಂಡಿನ ಕಾಳಗದಲ್ಲಿ ವೀರೇಶ ಬಲಿಯಾಗಿದ್ದಾರೆ. ಉರಿ ಪ್ರದೇಶದಲ್ಲಿ ನಡೆದ ಗುಂಡಿನ ಚಕಮಕಿಯಲ್ಲಿ ಗುಂಡು ತಾಗಿ ವೀರೇಶ ಮರಣ ಹೊಂದಿದ್ದಾರೆ. 2020ರ ಮಾರ್ಚ್ 28ಕ್ಕೆ ವೀರೇಶ ಅವರ 30 ವರ್ಷದ ಸೇವಾವಧಿ ಪೂರ್ಣವಾಗುತ್ತಿತ್ತು. ಹೀಗಾಗಿ, ಇನ್ನು ಮೂರು ತಿಂಗಳಲ್ಲಿ ಅವರು ನಿವೃತ್ತಿ ಹೊಂದಲು ನಿರ್ಧರಿಸಿದ್ದರು.
(ವರದಿ: ಸಂತೋಷ್ ಕೊಣ್ಣೂರು)
Published by:Sushma Chakre
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ