ಕುರಿಗಾಹಿಯಲೊಬ್ಬ ಅದ್ಬುತ ಗಾಯಕ ಹನುಮಂತ ಬಟ್ಟೂರ

news18
Updated:June 11, 2018, 5:28 PM IST
ಕುರಿಗಾಹಿಯಲೊಬ್ಬ ಅದ್ಬುತ ಗಾಯಕ ಹನುಮಂತ ಬಟ್ಟೂರ
news18
Updated: June 11, 2018, 5:28 PM IST
- ಸಂತೋಷ್ ಕೊಣ್ಣೂರ, ನ್ಯೂಸ್ 18 ಕನ್ನಡ

ಗದಗ ( ಜೂನ್. 11) :  ಇಲ್ಲೊಬ್ಬ ಕುರಿಗಾಹಿ ಯುವಕ ತನ್ನ ಕಂಠಸಿರಿಯಿಂದ ಹಾಡನ್ನ ಹಾಡಿ ಸೆಲ್ಫಿ ರೆಕಾರ್ಡ್ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾನೆ. ಆ ಸಿನಿಮಾ ಹಾಡು ಇದೀಗ ಟ್ರೆಂಡ್​ ಕ್ರಿಯೇಟ್​ ಆಗಿದ್ದು, ಸೋಶಿಯಲ್​ ಮಿಡಿಯಾದಲ್ಲಿ ಸಿಕ್ಕಾಪಟ್ಟೆ ಮೆಚ್ಚುಗೆ ಪಡೆದುಕೊಳ್ತಿದೆ.

ರಾತ್ರೋ ರಾತ್ರಿಯೇ ಸಿಂಗರ್​ ಆಗಿದ್ದು, ಸೆಲೆಬ್ರಿಟಿ ಆಗಿದ್ದು, ಯೂತ್​ ಐಕಾನ್​ ಆಗಿರುವ ಬಗ್ಗೆ ಎಷ್ಟೋ ಉದಾಹರಣೆಗಳುಂಟು. ಅದಕ್ಕೆ ಸಾಕ್ಷಿಯಾಗಿ ಕಣ್ಣಸನ್ನೆ ಚೆಲುವೆ ಪ್ರಿಯಾ ವಾರಿಯರ್​ ಅವರೇ ಜೀವಂತ ಸಾಕ್ಷಿ. ಹಾಗೇ ಗದಗ ಜಿಲ್ಲೆಯ ಶಿರಹಟ್ಟಿ ಪಟ್ಣದ ಯುವಕ ಹನುಮಂತ ಬಟ್ಟೂರ. ಕುರಿ ಕಾಯುವ ಕಸುಬು ಮಾಡಿಕೊಂಡು ಜೊತೆಯಲ್ಲಿಯೇ ಹಾಡು ಹಾಡುತ್ತಿದ್ದನು. ಇದೀಗ ಹನುಮಂತನ ಹಾಡಿಗೆ ತಲೆದೂಗುತ್ತಿದ್ದಾರೆ ಅವನ ಅಭಿಮಾನಿಗಳು.

ಗ್ರಾಮೀಣದಲ್ಲಿ ಇಂತಹ ಎಲೆಮರೆ ಪ್ರತಿಭೆಗೆ ಸಾಮಾಜಿಕ ಜಾಲತಾಣ ವೇದಿಕೆಯಾಗಿದೆ. ಕುರಿಗಾಹಿಯಲ್ಲೂ ಅದ್ಭುತ ಕಲೆಯಿರುತ್ತೆ ಅನ್ನೋದಕ್ಕೆ ಈ ಕಲಾವಿದ ಸಾಕ್ಷಿ. ಯಾಕಂದ್ರೆ ಹನಮಂತ ಎನ್ನುವ ಕುರಿಗಾಹಿ ದಿನ ಬೆಳಗಾಗುವದರೊಳಗೆ ಇಡೀ ರಾಜ್ಯದಲ್ಲಿ ಫೇಮಸ್ಸ್ ಆಗಿದ್ದಾನೆ.

First published:June 11, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...