ವಿಜ್ಞಾನ ವಿಭಾಗದಲ್ಲಿ ಶೇ.95 ಪಡೆದ ಕೂಲಿ ಕಾರ್ಮಿಕರ ಮಗಳು: ಶಿಕ್ಷಣಕ್ಕೆ ಸಹಾಯ ಭರವಸೆ ನೀಡಿದ ಸಿಸಿ ಪಾಟೀಲ್​

ಈ ಸಂಬಂಧ ಮಾಡಿದ ನ್ಯೂಸ್ 18 ಕನ್ನಡದ ವರದಿಗೆ ಸ್ಪಂದಿಸಿದ ಸಚಿವ ಸಿ.ಸಿ ಪಾಟೀಲ್, ವಿದ್ಯಾರ್ಥಿನಿ ಪ್ರಿಯಾಂಕಾ ರಾಂಪೂರ ಮುಂದಿನ ಶಿಕ್ಷಣಕ್ಕೆ ಬೇಕಾಗುವ ಸಹಾಯ ಮಾಡುವ ಭರವಸೆ ನೀಡಿದ್ದಾರೆ.

ವಿಜ್ಞಾನ ವಿಭಾಗದಲ್ಲಿ ಶೇ.95 ಪಡೆದ ಕೂಲಿ ಕಾರ್ಮಿಕರ ಮಗಳು: ಶಿಕ್ಷಣಕ್ಕೆ ಸಹಾಯ ಭರವಸೆ ನೀಡಿದ ಬಿಸಿ ಪಾಟೀಲ್​

ವಿಜ್ಞಾನ ವಿಭಾಗದಲ್ಲಿ ಶೇ.95 ಪಡೆದ ಕೂಲಿ ಕಾರ್ಮಿಕರ ಮಗಳು: ಶಿಕ್ಷಣಕ್ಕೆ ಸಹಾಯ ಭರವಸೆ ನೀಡಿದ ಬಿಸಿ ಪಾಟೀಲ್​

  • Share this:
ಗದಗ(ಜು.14): ಅವಳು ಬಡತನ ಬೆಂದು ಬೆಂಡಾದ ಕುವರಿ. ಈಗ ಸದ್ಯ ಅದೇ ಬಡತನವನ್ನೇ ಮೆಟ್ಟಿ ನಿಂತು ಅವರಳಿದ ತಾವರೆಯಾಗಿ ಬೆಳೆಯುತ್ತಿದ್ದಾಳೆ. ಇಂದು ಬಂದಿರುವ ದ್ವಿತೀಯ ಪಿಯುಸಿಯ ಫಲಿತಾಂಶದಲ್ಲಿ ಶೇಕಡ 94.33ರಷ್ಟು ಅಂಕ ಪಡೆಯುವ ಮೂಲಕ ಮಾದರಿಯಾಗಿದ್ದಾಳೆ. ಅವಳು 13 ವರ್ಷದ ಹಿಂದೇ ತಂದೇಯನ್ನು ಕಳೆದುಕೊಂಡ ತಾಯಿಯ ಜೊತೆಗೆ ಕಷ್ಟ ಸುಖದ ಜೀವನ ಸಾಗಿಸಿದ ಯುವತಿ ಯಶಸ್ಸಿನ ಹಾದಿಯಲ್ಲಿ ಸಾಗುತ್ತಿದ್ದಾಳೆ.

ತಾಯಿಯ ದಿನ ಕೂಲಿ ಕೆಲಸಕ್ಕೆ ಹೋದ್ರೆ ಮಾತ್ರ ಒಂದು ದಿನದ ತುತ್ತು ಊಟಕ್ಕೆ ಸಿಗುವ ಪರಿಸ್ಥಿತಿ ಅವಳದ್ದು. ಅಂತಹ ಕಷ್ಟದ ಜೀವನದಲ್ಲಿ ಬೆಳೆದು ಬಂದಿದ್ದಾಳೆ. ಅವಳು ಗದಗ ಜಿಲ್ಲೆಯ ನರಗುಂದ ತಾಲೂಕಿನ ಬೆನಕನಕೊಪ್ಪ ಗ್ರಾಮದ ಪ್ರಿಯಾಂಕಾ ರಾಂಪೂರ ಎಂಬ ವಿದ್ಯಾರ್ಥಿನಿ. ಇವಳು ಧಾರವಾಡದ ಸೃಷ್ಟಿ ಕಾಲೇಜ್​​ನ ವಿಜ್ಞಾನ ವಿಭಾಗದಲ್ಲಿ ದ್ವಿತೀಯ ಪಿಯುಸಿ ವ್ಯಾಸಂಗ ಮಾಡಿದ್ದಾಳೆ.

ಪ್ರಿಯಾಂಕಾ ರಾಂಪೂರ ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ಶೇಕಡಾ 94.33 ರಷ್ಟು ಅಂಕಗಳು ಗಳಿಸಿದ್ದಾಳೆ. ಕನ್ನಡದ 96, ಇಂಗ್ಲಿಷ್ 83, ಭೌತಶಾಸ್ತ್ರ 100, ರಾಸಾಯನಿಕ ಶಾಸ್ತ್ರ 93, ಗಣಿತ ಶಾಸ್ತ್ರ 98, ಜೈವಿಕ ವಿಷಯದಲ್ಲಿ 96 ಅಂಕ ಪಡೆಯುವ ಮೂಲಕ ಒಟ್ಟು 566 ಮಾರ್ಕ್ಸ್​​ ಪಡೆದಿದ್ದಾಳೆ.

ಅವಳು ಯಶಸ್ಸಿನ ಹಿಂದೇ ಅವಳ ತಾಯಿ ಲಲಿತಾಳ ಪಾತ್ರ ಬಹಳ ಮುಖ್ಯವಾಗಿದೆ.‌ ತಂದೇ ಸಾವಿನ ನೋವನ್ನ ಮೆರೆಸಿ ಮಗಳಿಗೆ ಆತ್ಮ ಧೈರ್ಯ ತುಂಬಿ ಪ್ರಿಯಾಂಕಾಳಗೆ ಉನ್ನತ ಮಟ್ಟದ ಶಿಕ್ಷಣ ನೀಡುವ ಉದ್ದೇಶದಿಂದ ಹಗಲು ರಾತ್ರಿ ಎನ್ನದೇ ಕೇಲಸ ಶ್ರಮಿಸಿದ್ದಾಳೆ. ಲಲಿತಾ ದಿನ ನಿತ್ಯ ಕೂಲಿ ನಾಲಿ ಮಾಡಿ ಮಗಳ ಓದಿಗಾಗಿ ಶ್ರಮಿಸಿದ್ದಾಳೆ. ತಾಯಿ ಶ್ರಮಕ್ಕೆ ಪ್ರತಿಫಲವನ್ನ ಪ್ರಿಯಾಂಕಾ ಫಲಿತಾಂಶದ ಮೂಲಕ ನೀಡಿದ್ದಾಳೆ.

ಪ್ರಿಯಾಂಕಾಳ ಪ್ರಾಥಮಿಕ ಶಿಕ್ಷಣವನ್ನ ಸರ್ಕಾರ ಶಾಲೆಯಲ್ಲಿ ಆರಂಭಿಸಿದ್ದಾಳೆ. ಗದಗ ಜಿಲ್ಲೆಯ ನರಗುಂದ ತಾಲೂಕಿನ ಬೆನಕನಕೊಪ್ಪ ಗ್ರಾಮದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕನ್ನಡ ಮಾಧ್ಯಮದಲ್ಲಿ ಪ್ರಾಥಮಿಕ ಶಿಕ್ಷಣ ಮುಗಿಸಿದ್ದಾಳೆ. ಪ್ರೌಢಶಾಲಾ ಶಿಕ್ಷಣವನ್ನ ನರಗುಂದ ತಾಲೂಕಿನ ಚಿಕ್ಕನರಗುಂದ ಗ್ರಾಮದ ಡಿಎಸ್ ಕೆ ಕರ್ನಾಟಕ ಪಬ್ಲಿಕ್ ಸ್ಕೂಲ್​​ನಲ್ಲಿ 9ರಿಂದ 10ನೇ ತರಗತಿವರಿಗೆ ವ್ಯಾಸಂಗ ಮಾಡಿದ್ದಾಳೆ/

ಪ್ರಿಯಾಂಕಾ ಒಂದು ಅರಳು ತಾವರೆ. SSLCಯಲ್ಲೂ ಸಹ ಶೇಕಡಾ 97.76 ರಷ್ಟು ಅಂಕ ಪಡೆದಿದ್ದಾಳೆ. ಹೀಗಾಗಿ ಅವಳು ವಿಜ್ಞಾನ ವಿಭಾಗದಲ್ಲಿ ಆಸಕ್ತಿ ಹೊಂದಿದ್ದರಿಂದ ಅವಳ ತಾಯಿ ಧಾರವಾಡದ ಸೃಷ್ಟಿ ಸೈನ್ಸ್ ಕಾಲೇಜಿನ ಪ್ರವೇಶ ಪಡೆದು ಅಲ್ಲಿಯು ಸಹ ಶೇಕಡಾ 94.33 ಅಂಕಗಳನ್ನು ಗಳಿಸಿದ್ದಾಳೆ.. ಇವಳ ಪ್ರತಿಭೆಗೆ ತಾಯಿಯ ಶ್ರಮಕ್ಕೆ ಪ್ರತಿಫಲ ಸಿಕ್ಕಂತಾಗಿದೆ.

ಪ್ರಿಯಾಂಕಾಳ ಮುಂದಿನ ಶಿಕ್ಷಣಕ್ಕೆ ಸಂಘ ಸಂಸ್ಥೆಗಳು ಸಹಕಾರ ನೀಡಿದ್ದರೆ ಮುಂದಿನ ದಿನಗಳಲ್ಲಿ ಉನ್ನತ ಮಟ್ಟದ ಶಿಕ್ಷಣ ಪಡೆಯಲು ಅನುಕೂಲವಾಗುತ್ತದೆ. ಪ್ರಿಯಾಂಕಾಳಂತಹ ನಕ್ಷತ್ರಗಳಿ ತಮ್ಮ ಪ್ರತಿಭೆ ಅನಾವರಣ ಮಾಡಲು ಅವಕಾಶ ಸಿಕ್ಕಂತೆ ಆಗುತ್ತದೆ.

ಈ ಸಂಬಂಧ ಮಾಡಿದ ನ್ಯೂಸ್ 18 ಕನ್ನಡದ ವರದಿಗೆ ಸ್ಪಂದಿಸಿದ ಸಚಿವ ಸಿ.ಸಿ ಪಾಟೀಲ್, ವಿದ್ಯಾರ್ಥಿನಿ ಪ್ರಿಯಾಂಕಾ ರಾಂಪೂರ ಮುಂದಿನ ಶಿಕ್ಷಣಕ್ಕೆ ಬೇಕಾಗುವ ಸಹಾಯ ಮಾಡುವ ಭರವಸೆ ನೀಡಿದ್ದಾರೆ.

ಇದನ್ನೂ ಓದಿ: Bihar Lockdown: ಕೋವಿಡ್​​-19 ಕಾವು: ಬಿಹಾರದಲ್ಲಿ ಜುಲೈ 16ನೇ ತಾರೀಕಿನಿಂದ 30ರವರೆಗೂ ಸಂಪೂರ್ಣ ಲಾಕ್​ಡೌನ್​​

ಗದಗ ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ ಪಾಟೀಲ್, ಬಡತನದಲ್ಲಿ ಕಷ್ಟ ಪಟ್ಟು ವಿದ್ಯಾಭ್ಯಾಸ ಮಾಡಿ ಉತ್ತಮ ಅಂಕ ಪಡೆದ ಪ್ರಿಯಾಂಕಾಳ ಮುಂದಿನ ಶಿಕ್ಷಣಕ್ಕೆ ಸಹಾಯ ಸಹಕಾರ ಮಾಡುತ್ತೇನೆ. ಈಗಾಗಲೇ ವಿದ್ಯಾರ್ಥಿನಿಯ ಶೇಕಡಾ 94.33 ಅಂಕ ಪಡೆದು ಮಾದರಿಯಾಗಿದ್ದಾಳೆ. ನಂಗೆ ಖುಷಿ ತಂದಿದೆ. ಎಲ್ಲರೂ ಪ್ರಿಯಾಂಕಾ ತರ ಉತ್ತಮ ಮಟ್ಟದ ಫಲಿತಾಂಶ ನೀಡಲು ಶ್ರಮಿಸಬೇಕು. ಅಂತವರಿಗೆ ಸಹಾಯ ಮಾಡುತ್ತೇನೆ ಎಂದು ಸಚಿವ ಸಿ.ಸಿ.ಪಾಟೀಲ್‌.
Published by:Ganesh Nachikethu
First published: