HOME » NEWS » State » GADAG POLICE COLLECT 6 LAKH 68 THOUSAND FINE ON MASK SKG SESR

ಮಾಸ್ಕ್​ನಿಂದಲೇ 6ಲಕ್ಷದ 68 ಸಾವಿರ ರೂ ದಂಡ ಸಂಗ್ರಹಿಸಿದ ಗದಗ ಪೊಲೀಸರು

ಮಾಸ್ಕ್ ಧರಿಸದೆ ಇದ್ದ ಒಟ್ಟು 5493  ಜನರ ವಿರುದ್ದ ಪ್ರಕರಣಗಳನ್ನು ದಾಖಲಿಸಿ, ರೂ 6,68,000  ಗಳನ್ನು ದಂಡ ವಸೂಲಿ ಮಾಡಲಾಗಿದೆ.   

news18-kannada
Updated:April 30, 2021, 10:43 PM IST
ಮಾಸ್ಕ್​ನಿಂದಲೇ 6ಲಕ್ಷದ 68 ಸಾವಿರ ರೂ ದಂಡ ಸಂಗ್ರಹಿಸಿದ ಗದಗ ಪೊಲೀಸರು
file photo
  • Share this:
ಗದಗ (ಏ. 30) : ಕೊರೋನಾ ಎರಡನೇ ಅಲೆ ಹರಡುವುದನ್ನು ತಡೆಗಟ್ಟುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಜಾರಿಗೊಳಿಸಿದ ಮಾರ್ಗಸೂಚಿಗಳನ್ವಯ ಜನತಾ ಕಫ್ರ್ಯೂ ವಿಧಿಸಿ ಆದೇಶ ಮಾಡಿದೆ, ಸರಕಾರದ ನಿರ್ದೇಶನ, ಮಾರ್ಗಸೂಚಿಗಳನ್ನು ಅನುಷ್ಠಾನಗೊಳಿಸುವ ಹಿನ್ನೆಲೆಯಲ್ಲಿ  ಜಿಲ್ಲೆಯ ಎಲ್ಲ ಠಾಣೆ, ವೃತ್ತ, ಉಪ ವಿಭಾಗದ ಅಧಿಕಾರಿ, ಸಿಬ್ಬಂದಿಗಳು ಸೇರಿ ಮಾರ್ಗಸೂಚಿಗಳನ್ನು ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ನಿರಂತರವಾಗಿ ಆಯಾ ಹದ್ದಿಯಲ್ಲಿ ಪೆಟ್ರೋಲಿಂಗ್, ಪಿಕ್ಸ್‍ಪಾಯಿಂಟ್ ಹಾಗೂ ಸೂಕ್ತವಾದ ಬಂದೋಬಸ್ತ್ ನಿಯೋಜಿಸಿ ಕ್ರಮ ಕೈಗೊಂಡಿದ್ದಾರೆ. ಇನ್ನು ಗದಗ- ಬೆಟಗೇರಿ ಅವಳಿ ನಗರದಲ್ಲಿ ಟೈಟ್ ಜನತಾ ಕರ್ಫ್ಯೂ ಜಾರಿಯಾರಿಯಲ್ಲಿದೆ. ಜನರು ವಿನಾಕಾರಣ ರಸ್ತೆಗೆ ಬರುತ್ತಿದ್ದಾರೆ. ಬೇಕಾಬಿಟ್ಟಿಯಾಗಿ ರಸ್ತೆಗೆ ಇಳಿದ ವಾಹನ ಸವಾರರಿಗೆ ಬಿಸಿ ಮುಟ್ಟಿಸುತ್ತಿದ್ದಾರೆ ಪೋಲಿಸ್ ರು‌.  ಮಹಾತ್ಮ ಗಾಂಧಿ ಸರ್ಕಲ್, ಮುಳಗುಂದ ನಾಕ್, ಭೂಮರೆಡ್ಡಿ ಸರ್ಕಲ್ ಸೇರಿದಂತೆ ಪ್ರಮುಖ ಸರ್ಕಲ್ ವಿನಾಕಾರಣ ರಸ್ತೆಗೆ ಬಂದ್ ವಾಹನಗಳು ಸೀಜ್ ಮಾಡಿ ದಂಡಹಾಕುತ್ತಿದ್ದಾರೆ.

ಹೀಗಾಗಿ ಸರಕಾರದ ಮಾರ್ಗಸೂಚಿಗಳ ಉಲ್ಲಂಘನೆಗೆ ಸಂಬಂಧಿಸಿದಂತೆ ಸಾರ್ವಜನಿಕವಾಗಿ ಮಾಸ್ಕ್ ಧರಿಸದೆ ಇದ್ದ ಒಟ್ಟು 5493  ಜನರ ವಿರುದ್ದ ಪ್ರಕರಣಗಳನ್ನು ದಾಖಲಿಸಿ, ರೂ 6,68,000  ಗಳನ್ನು ದಂಡ ವಸೂಲಿ ಮಾಡಲಾಗಿದೆ.   ಸರಕಾರದ ನಿಯಮಗಳನ್ನು ಪಾಲನೆ ಮಾಡದೇ ಇದ್ದಂತ ಸಾರ್ವಜನಿಕರ ವಿರುದ್ದ  Karnataka Epidemic Disease Act  2020 ರಡಿ 11 ಪ್ರಕರಣಗಳನ್ನು ದಾಖಲಿಸಿ ಕಾನೂನು ಕ್ರಮ ಜರುಗಿಸಲಾಗಿದೆ.

ಇದನ್ನು ಓದಿ: ಲಸಿಕೆ ಇನ್ನು ಬಂದಿಲ್ಲ, ಬಂದ ತಕ್ಷಣ ಕೊಡುತ್ತೇವೆ; ಸಿಎಂ ಬಿಎಸ್​ವೈ

ಸರಕಾರದ ನಿರ್ದೇಶನಗಳು, ಮಾರ್ಗಸೂಚಿಗಳನ್ನು ಸಾರ್ವಜನಿಕರು ಕಡ್ಡಾಯವಾಗಿ ಪಾಲಿಸಬೇಕಿದೆ. ಸಾಮಾಜಿಕ ಅಂತರ, ಮಾಸ್ಕ್ ಧರಿಸುವುದು, ಸ್ಯಾನಿಟೈಜರ್ ಉಪಯೋಗ ಮಾಡಿ  ವೈರಾಣು ಹರಡುವುದನ್ನು ತಡೆಗಟ್ಟಲು ಸಹಕಾರ ನೀಡಲು ಸಾರ್ವಜನಿಕರಿಗೆ ಕೋರಲಾಗಿದೆ. ಸಾರ್ವಜನಿಕರು ಅನಾವಶ್ಯಕವಾಗಿ ರಸ್ತೆಯ ಮೇಲೆ ಓಡಾಡದಂತೆ ಕ್ರಮ ವಹಿಸಲು ಕೋರಿದೆ. ಅಲ್ಲದೇ ಸರಕಾರದ ನಿಯಮಾವಳಿಗಳನ್ನು ಉಲ್ಲಂಘನೆ ಮಾಡಿದವರ ವಿರುದ್ದ ಕಟ್ಟುನಿಟ್ಟಿನ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಯತೀಶ್ ಎನ್ ತಿಳಿಸಿದ್ದಾರೆ.

ಒಟ್ಟಿನಲ್ಲಿ ಕೊರೋನಾ ನಿಯಂತ್ರಣ ಮಾಡುವ ನಿಟ್ಟಿ ಅಧಿಕಾರಿಗಳು ಜೀವದ ಹಂಗು ತೊರೆದು ಕೆಲಸ ಮಾಡುತ್ತಿದ್ದಾರೆ. ಮಾಸ್ಕ್ ಹಾಕದೆ ಬೇಜವಾಬ್ದಾರಿ ತೋರಿದ ಜನರಿಗೆ ಅಧಿಕಾರಿಗಳ ದಂಡಹಾಕುತ್ತಿದ್ದಾರೆ. ದಂಡದ ಬಿಸಿ ಮುಟ್ಟಿಸಿದರೂ ಕೆಲವು ಮಾತ್ರ ಭಯವಿಲ್ಲದೇ ಬೇಕಾಬಿಟ್ಟಿಯಾಗಿ ಓಡಾಡುತ್ತಿದ್ದಾರೆ. ಇನಾದರೂ ಕರೋನಾ ವೈರಸ್ ಬಗ್ಗೆ ಎಚ್ಚೆತ್ತಗೊಂಡ ತಪ್ಪದೇ ಮನೆಯಿಂದ ಹೊರಗೆ ಬರುವ ಮುನ್ನ  ಮಾಸ್ಕ್ ಹಾಕಿ ಜೀವ ಉಳಿಸಿಕೊಳ್ಳಿ. ನಿಮ್ಮ ಜೀವ ಕುಟುಂಬಸ್ಥರ ರಕ್ಷಣೆ ನಿಮ್ಮ ಕೈಯಲ್ಲಿದೆ. ಮಾಸ್ಕ್ ಹಾಕಿಕೊಳ್ಳಿ ಸ್ಯಾನಿಟೈಜರ್ ಬಳಸಿ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕಿದೆ

(ವರದಿ: ಸಂತೋಷ ಕೊಣ್ಣೂರ)
Published by: Seema R
First published: April 30, 2021, 10:41 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories