ಗದಗದಲ್ಲಿ ಪ್ರಾಣಿಗಳಂತೆ ಗಿಡ-ಮರಗಳನ್ನು ದತ್ತು ಪಡೆಯುವ ಯೋಜನೆ

ಮೊದಲ ಹಂತದಲ್ಲಿ ದತ್ತು ಸ್ವೀಕಾರದಡಿ 1 ಸಾವಿರ ಗಿಡಗಳನ್ನು ನೆಡಲು ಉದ್ದೇಶಿಸಿದ್ದು, ಸುಮಾರು ಐದು ಲಕ್ಷ ರೂ. ಆದಾಯ ನಿರೀಕ್ಷಿಸಲಾಗಿದೆ. ಅದನ್ನು ಬ್ಯಾಂಕಿನಲ್ಲಿ ಠೇವಣಿ ಇರಿಸಿ, ಅದರಿಂದ ಬರೋ‌ ಬಡ್ಡಿ ಹಣವನ್ನು ಕಾರ್ಮಿಕ ವೇತನಕ್ಕೆ ಬಳಸುವುದು ಇದರ ಸದುದ್ದೇಶವಾಗಿದೆ ಅಂತಾರೆ ಅಧಿಕಾರಿಗಳು.

ಗಿಡ-ಮರ ದತ್ತು ಪಡೆಯುವ ಯೋಜನೆ

ಗಿಡ-ಮರ ದತ್ತು ಪಡೆಯುವ ಯೋಜನೆ

  • Share this:
ಗದಗ(ಸೆ.07): ಗದಗ ಜಿಲ್ಲಾ ಅರಣ್ಯ ಇಲಾಖೆ ಒಂದು ಹೊಸ ಐಡಿಯಾದೊಂದಿಗೆ ಜನರ ಮುಂದೆ ಬಂದಿದೆ. ನನ್ನ ಹೆಸರಿನ ಮನೆ, ನನ್ನ ಹೆಸರಿನ ವಾಹನ, ನನ್ನ ಹೆಸರಿನ ಜಮೀನು.. ಹೀಗೆ ಯಾವುದೂ ಸಹ ನಿಮ್ಮ ಹಿಂದೆ ಬರದೇ ಇದ್ರೂ ನಿಮ್ಮ ಹೆಸರಿನ ಆಸ್ತಿ ಅಂತ ಏನೆಲ್ಲ ಮಾಡುತ್ತೀರಾ, ಆದರೆ ನಿಮ್ಮ ಜೀವನದುದ್ದಕ್ಕೂ ಉಸಿರಾಗಿ, ನೆರಳಾಗಿ, ನೀವು ಹೋದ ನಂತರವೂ ಮನುಕುಲಕ್ಕೆ ಒಳಿತು ಮಾಡೋ ಒಂದೇ ಒಂದು ಮರ ನಮ್ಮ ಹೆಸರಿನದಾಗಿದ್ದರೆ, ಹೇಗಿರುತ್ತೆ ಅಲ್ವಾ? ಇಂತಹ ಚಿಂತನೆ  ಇದೀಗ ಮುದ್ರಣ ಕಾಶಿ ಗದಗನಲ್ಲಿ ಆರಂಭವಾಗಿದೆ. ಈಗಾಗಲೇ ಅರಣ್ಯ ಇಲಾಖೆಯ ವನ್ಯಜೀವಿ ದತ್ತು ಸ್ವೀಕಾರ ಮಾದರಿಯಲ್ಲೇ ಗದಗ ಅರಣ್ಯ ಇಲಾಖೆ ರಾಜ್ಯದಲ್ಲಿಯೇ ಮೊದಲ ಬಾರಿಗೆ ಗಿಡ-ಮರಗಳ ದತ್ತು ಸ್ವೀಕಾರ ಯೋಜನೆ ಜಾರಿಗೆ ತಂದಿದೆ. ಇಲ್ಲಿ ಯಾರೇ ಆಗಲಿ ತಲಾ ಒಂದೊಂದು ಸಸಿಯನ್ನು ದತ್ತು ಪಡೆಯಬಹುದು. ಸಸಿಯೊಂದಕ್ಕೆ 500 ರೂ. ಶುಲ್ಕ ನಿಗದಿಗೊಳಿಸಲಾಗಿದೆ.ಹೀಗೆ ಪ್ರಾಯೋಜಿತ ಸಸಿಗಳನ್ನು ಬಿಂಕದಕಟ್ಟಿ ಸಾಲು ಮರದ ತಿಮ್ಮಕ್ಕ ಸಸ್ಯೋದ್ಯಾನದಲ್ಲಿ ದಾನಿಗಳ ಮೂಲಕವೇ ನೆಡಸಲಾಗುತ್ತಿದೆ. ಬಳಿಕ ಆ ಸಸಿಗಳ ಪೋಷಣೆ,‌ ಪಾಲನೆ ಇಲಾಖೆಯೇ ನಿರ್ವಹಿಸಲಿದೆ. ಹೀಗಾಗಿ ಗದಗ ಜಿಲ್ಲೆಯ ಜನ್ರು ನಾ ಮುಂದೆ ತಾ ಮುಂದೆ ಅಂತಾದತ್ತು ಪಡೆಯುತ್ತಿದ್ದಾರೆ. ಅರಣ್ಯ ಇಲಾಖೆಯ ಈ ಪ್ಲಾನ್ ಜನರ ಮೆಚ್ಚುಗೆ ಕಾರಣವಾಗಿದೆ.ಚಿಕ್ಕಮಗಳೂರಿನ ಸೊಬಗು ನೋಡಲು ಹರಿದು ಬಂದ ಜನ; ಒಂದೇ ದಿನ 8 ಸಾವಿರಕ್ಕೂ ಹೆಚ್ಚು ಪ್ರವಾಸಿಗರ ಭೇಟಿ

ಕೊರೋನಾ ಹಾವಳಿಯಿಂದ ವನ್ಯಜೀವಿಧಾಮ ಹಾಗೂ ಕಿರು ಪಾರ್ಕ್ ಸೇರಿದಂತೆ ಪ್ರವಾಸೋದ್ಯಮದಿಂದ ಬರುವ ಆದಾಯ ನೆಲಕಚ್ಚಿದೆ. ಸುಮಾರು 200 ಎಕರೆ ಪ್ರದೇಶದಲ್ಲಿರುವ ಸಸ್ಯೋದ್ಯಾನದಲ್ಲಿ ಸಾವಿರಾರು ಗಿಡಗಳನ್ನು ಬೆಳೆಸಬಹುದಾಗಿದೆ. ದತ್ತು ಪಡೆದ ಗಿಡದ ಮುಂದೆ ದಾನಿಗಳು ಬಯಸಿದ ನಾಮಫಲಕ ಅಳವಡಿಸಲಾಗ್ತಿದೆ. ಜೊತೆಗೆ ಮರದ ಸಂಖ್ಯೆ, ತಳಿ ಹಾಗೂ ದಾನಿಗಳು ಹಾಕಿಸಿದ ಹೆಸರು‌ ಒಳಗೊಂಡಿರೋ ಪ್ರಮಾಣ ಪತ್ರ ಸಹ ನೀಡಲಾಗ್ತಿದೆ.ಮೊದಲ ಹಂತದಲ್ಲಿ ದತ್ತು ಸ್ವೀಕಾರದಡಿ 1 ಸಾವಿರ ಗಿಡಗಳನ್ನು ನೆಡಲು ಉದ್ದೇಶಿಸಿದ್ದು, ಸುಮಾರು ಐದು ಲಕ್ಷ ರೂ. ಆದಾಯ ನಿರೀಕ್ಷಿಸಲಾಗಿದೆ. ಅದನ್ನು ಬ್ಯಾಂಕಿನಲ್ಲಿ ಠೇವಣಿ ಇರಿಸಿ, ಅದರಿಂದ ಬರೋ‌ ಬಡ್ಡಿ ಹಣವನ್ನು ಕಾರ್ಮಿಕ ವೇತನಕ್ಕೆ ಬಳಸುವುದು ಇದರ ಸದುದ್ದೇಶವಾಗಿದೆ ಅಂತಾರೆ ಅಧಿಕಾರಿಗಳು.

ಒಟ್ಟಾರೆ ತಮ್ಮ ಮಕ್ಕಳ,‌ ತಂದೆ, ತಾಯಂದಿರ ನೆನಪಿಗೋಸ್ಕರ ಇಂತಹ ಪ್ರಕೃತಿದತ್ತ ಒಳ್ಳೆ‌ ಕಾರ್ಯಕ್ಕೆ ಜನತೆ ಮುಂದಾಗಬೇಕಾಗಿದೆ. ಅಲ್ಲದೇ ಇಂದಿನ ಯುವಸಮೂಹ ತಮ್ಮ ಹುಟ್ಟುಹಬ್ಬ, ಮದುವೆ ವಾರ್ಷಿಕೋತ್ಸವ ನೆಪದಲ್ಲಿ ಏನೆಲ್ಲ ಮಾಡೋ ಬದಲಾಗಿ ಬಡಜನತೆಗೂ ಸಹಕಾರಿ ಮತ್ತು ಪರಿಸರ ಲೋಕಕ್ಕೂ ಒಂದು ಅಲ್ಪ‌ ಕೊಡುಗೆ ನೀಡುವಲ್ಲಿ ಮನಸ್ಸು ಮಾಡಬೇಕಾಗಿದೆ. ಜನರ ಭಾವನಾತ್ಮಕ ಸಂದರ್ಭವನ್ನು ಸದಾ ಕಾಲ ಹಸಿರಾಗಿಸುವ ಪ್ರಯತ್ನ ಮಾಡ್ತಿರೋ ಗದಗ ಅರಣ್ಯ ಇಲಾಖೆಗೆ ನಮ್ಮ ಕಡೆಯಿಂದ ಸಲಾಂ.
Published by:Latha CG
First published: