ದೀಪಾವಳಿ ದಿನವೇ ಗದಗದಲ್ಲಿ ಕೈಚಳಕ ತೋರಿದ ಕಳ್ಳ; ಮರಕ್ಕೆ ಕಟ್ಟಿ ಹಿಗ್ಗಾಮುಗ್ಗ ಥಳಿಸಿದ ಜನರು

ಗದಗದಲ್ಲಿ ಬೈಕ್‌ ಕಳ್ಳತನ ಮಾಡುತ್ತಿದ್ದ ವ್ಯಕ್ತಿಯನ್ನು ಹಿಡಿದು ಮರಕ್ಕೆ ಕಟ್ಟಿ ಹಾಕಿರುವಂತಹ ಘಟನೆ ಇಂದು ಬೆಳಗ್ಗೆ ನಡೆದಿದೆ.‌

ಗದಗದಲ್ಲಿ ಕುಮಾರ ಎಂಬ ಕಳ್ಳನನ್ನು ಸ್ಥಳೀಯರೇ ಹಿಡಿದು ಮರಕ್ಕೆ ಕಟ್ಟಿ ಹಾಕಿದ್ದಾರೆ.

ಗದಗದಲ್ಲಿ ಕುಮಾರ ಎಂಬ ಕಳ್ಳನನ್ನು ಸ್ಥಳೀಯರೇ ಹಿಡಿದು ಮರಕ್ಕೆ ಕಟ್ಟಿ ಹಾಕಿದ್ದಾರೆ.

  • Share this:
ಗದಗ: ಬೆಳಕಿನ ಹಬ್ಬ ದೀಪಾವಳಿ ದಿನದಂದು ಕಳ್ಳ ತನ್ನ ಕೈಚಳಕ ತೋರಿಸಲು ಹೋಗಿ ರೆಡ್​ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾನೆ. ಮುದ್ರಣ ಕಾಶಿ ಗದಗ ನಗರದಲ್ಲಿ ಬೆಳ್ಳಂಬೆಳ್ಳಗೆ ಕಳ್ಳ ಫೀಲ್ಡ್​ಗೆ ಇಳಿದು ಕಳ್ಳತನ ಮಾಡಲು ಮುಂದಾಗಿದ್ದಾಗ ಸ್ಥಳೀಯರು ನೋಡಿ ಆತನಿಗೆ ಧರ್ಮದೇಟು ನೀಡಿದ್ದಾರೆ. ಎಲ್ಲಾ ಜನರು ದೀಪಾವಳಿ ಹಬ್ಬದ ಸಡಗರದಲ್ಲಿ ಇದ್ದರೆ ಕಳ್ಳ ತನ್ನ ಕೈಚಳಕ ತೋರಿಸಲು ಹೋಗಿ ಹಿಗ್ಗಾಮುಗ್ಗ ಥಳಿತಕ್ಕೆ ಒಳಗಾಗಿದ್ದಾನೆ.

ಗದಗದಲ್ಲಿ ಬೈಕ್‌ ಕಳ್ಳತನ ಮಾಡುತ್ತಿದ್ದ ವ್ಯಕ್ತಿಯನ್ನು ಹಿಡಿದು ಮರಕ್ಕೆ ಕಟ್ಟಿ ಹಾಕಿರುವಂತಹ ಘಟನೆ ಇಂದು ಬೆಳಗ್ಗೆ ನಡೆದಿದೆ.‌ ನಗರದ ಠಾಗೋರ್ ರಸ್ತೆಯಲ್ಲಿ ಕುಮಾರ ಎಂಬ ಕಳ್ಳನನ್ನು ಸ್ಥಳೀಯರೇ ಹಿಡಿದು ಮರಕ್ಕೆ ಕಟ್ಟಿ ಹಾಕಿದ್ದಾರೆ. ಆತ ನಕಲಿ ಕೀ ಬಳಸಿ ಮನೆ‌ ಮುಂದೆ ನಿಲ್ಲಿಸಿದ್ದ ಬೈಕ್ ಹಾಗೂ ಪೆಟ್ರೋಲ್ ಕಳ್ಳತನ ಮಾಡುತ್ತಿದ್ದ.ಇಂದು ಮುಂಜಾನೆ ಸ್ಥಳೀಯ ಶರಣು ಪಾಟೀಲ್ ಎಂಬುವವರಿಗೆ ಸೇರಿದ ಸ್ಕೂಟಿ ಕಳ್ಳತನ ಮಾಡುವ ವೇಳೆ ಸಿಕ್ಕಿ ಬಿದ್ದಿದ್ದಾನೆ.

ಇದನ್ನೂ ಓದಿ: Bangalore Crime: ಬೆಂಗಳೂರಿನ ಜ್ಯುವೆಲರಿ ಮಳಿಗೆಗೆ ನುಗ್ಗಿದ ನಕಲಿ ಪೊಲೀಸರಿಂದ 800 ಗ್ರಾಂ ಚಿನ್ನಾಭರಣ ದರೋಡೆ

ಬೆಳಗಿನ ಜಾವ ಸ್ಕೂಟಿ ವಾಹನ ಕಳ್ಳತನ ಮಾಡಿಕೊಂಡು ಪರಾರಿಯಾಗುವ ವೇಳೆ ಸ್ಥಳೀಯರಿಗೆ ಅನುಮಾನಗೊಂಡು ಹಿಡಿದು ಮರಕ್ಕೆ ಕಟ್ಟಿ ಹಾಕಿ, ಹೊಡೆದಿದ್ದಾರೆ. ನಂತರ ಪೊಲೀಸರಿಗೆ ಒಪ್ಪಿಸಿದ್ದಾರೆ. ಗದಗದ ಬೆಟಗೇರಿ ಬಡಾವಣೆ ಪೊಲೀಸ್ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಆರೋಪಿ ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ.

ಗದಗದ ಠಾಗೋರ್ ರಸ್ತೆ ಸೇರಿದಂತೆ ಅನೇಕ‌ ಕಡೆಗಳಲ್ಲಿ ಇಂತಹ ಪ್ರಕರಣಗಳು ನಡೆಯತ್ತಲೇ ಇವೆ. ಸಂಬಂಧಿಸಿದ ಅಧಿಕಾರಿಗಳು ಪತ್ತೆಹಚ್ಚಿ ಶಿಸ್ತು ಕ್ರಮ ಜರುಗಿಸಬೇಕು ಅಂತಿದ್ದಾರೆ ಸಾರ್ವಜನಿಕರು.
Published by:Sushma Chakre
First published: