ಭಕ್ತನನ್ನು ಸಲಿಂಗ ಕಾಮಕ್ಕೆ ಕರೆದ ಡೋಂಗಿ ಬಾಬಾ; ಜನರಿಂದ ಬಿತ್ತು ಗೂಸಾ

ಸಮಸ್ಯೆ ಪರಿಹಾರಕ್ಕೆ ಬಂದ  ಯುವಕರನ್ನು ಲೈಂಗಿಕ ಕ್ರಿಯೆಗೆ ಬರುವಂತೆ ಆಮಿಷ ಒಡ್ಡುತ್ತಿದ್ದ. ಈತನ ಅಸಲಿ ಬಣ್ಣ ಬಯಲಾದ ಬಳಿಕ ಜನರು ಆತನಿಗೆ ಹಿಡಿದು ಹಿಗ್ಗಾಮುಗ್ಗಾ ಥಳಿಸಿದಾಗ ನಿಜ ವಿಷಯ ಬಯಲಾಗಿದೆ. 

ಡೋಂಗಿ ಬಾಬಾ

ಡೋಂಗಿ ಬಾಬಾ

 • Share this:
  ಗದಗ (ಜು. 12): ಕುದಿಯುವ ಎಣ್ಣೆಯಲ್ಲಿ ಕೈ ಹಾಕಿ ಬಜ್ಜಿ ತೆಗೆಯುವುದು, ಮೈ ಮೇಲೆ ದೇವರು ಬಂದಂತೆ ನಟಿಸುತ್ತಿದ್ದ ಈ ಡೋಂಗಿ ಬಾಬಾ ತಾನೊಬ್ಬ ಪವಾಡ ಪುರುಷ ಎಂದು ಜನರನ್ನು ನಂಬಿಸಿದ್ದ, ಈತನ ಚಮತ್ಕಾರಗಳಿಗೆ ಬೆರಗಾದ ಜನರು ಕೂಡ ಈತನ ಆರಾಧನೆ ಮಾಡಲು ಶುರು ಮಾಡಿದರು. ಜನರ ಮೂರ್ಗತನವನ್ನೇ ಬಂಡಾವಳ ಮಾಡಿಕೊಂಡ ಈತ ಕೂಡ ನಗರದ ಜನ ಪ್ರಖ್ಯಾತಿ ಬಾಬಾ ಎಂದು ಹೆಸರು ಪಡೆದಿದ್ದ. ಇದನ್ನೇ ಬಂಡಾವಳ ಮಾಡಿಕೊಂಡ ಈತ ಅವರನ್ನು ನಂಬಿಸಿ ಮಂಕು ಬೂದಿ ಎರಚುತ್ತಿದ್ದ. ಅಲ್ಲದೇ ತನ್ನ ಎಂಬಲನ್ನೇ ಪ್ರಸಾದವಾಗಿ ನೀಡುತ್ತಿದ್ದ. ಯುವಕರು , ಮಹಿಳೆಯರು ಕೂಡ ಈತನ ಪೂರ್ವ ಪರ ತಿಳಿಯದೇ ಆರಾಧಿಸುತ್ತಿದ್ದರು. ಹೀಗೆ ತನ್ನ ಪವಾಡಕ್ಕೆ ಬೆರಗಾದ ಭಕ್ತನೊಬ್ಬನಿಗೆ ಸಲಿಂಗ ಕಾಮಕ್ಕೆ ಆಹ್ವಾನ ನೀಡಿ ಪೀಡಿಸಿ ಕಡೆಗೆ ಜನರಿಂದಲೇ ಪೆಟ್ಟು ತಿಂದಿದ್ದಾನೆ ಈ ಡೋಂಗಿ ಬಾಬಾ. 

  ಸದ್ಯ ಜನರಿಂದ ಸರಿಯಾಗಿ ಗೂಸಾ ತಿಂದಿರುವ ಈತನ ಹೆಸರು ಆಸೀಫ್ ಜಾಗಿರದಾರ​ ಎಂದು. ನಗರದ ಗಂಗಿಮಡಿ ಆಶ್ರಯ ಕಾಲೋನಿಯ ಜನರಿಗೆ ವಂಚಿಸಿದ್ದ ಡೋಂಗಿ ಬಾಬಾ. ಮೂಲತಃ ವಿಜಯಪುರ‌ ಜಿಲ್ಲೆಯವನಾದ ಈತನ ನಗರದ ಎಸ್ ಎಮ್ ಕೃಷ್ಣಾ ನಗರದ ಆಶ್ರಯ ಕಾಲೋನಿಯಲ್ಲಿರು ತನ್ನ ಹೆಂಡತಿ ಮನೆಯಲ್ಲಿ ವರ್ಷಗಳಿಂದಲೂ ಬಿಡು ಬಿಟ್ಟಿದ್ದಾನೆ.  ತನ್ನ ಮೈ ಮೇಲೆ ದೇವರು ಬರುತ್ತಾನೆ ಎಂದು ಜನರನ್ನು ನಂಬಿಸಿ ಮೋಸ ಮಾಡುತ್ತಿದ್ದ.

  ಇದನ್ನು ಓದಿ: ಮೈಸೂರು ಅರಸು ಮನೆತನದ ಹೆಸರಲ್ಲಿ ವಂಚನೆ; ಓದಿದ್ದು 7ನೇ ಕ್ಲಾಸ್​ ಆದ್ರೂ ವಿದೇಶಿ ಭಾಷೆಯಲ್ಲಿ ನಿಪುಣ  ಯುವಕರನ್ನೇ ಗುರಿಯಾಗಿಸಿ ಕೊಂಡು ವಂಚಿಸುತ್ತಿದ್ದ ಈತ ಅವರಿಗೆ ಸುಳ್ಳು ಪುರಾಣಗಳನ್ನು ಹೇಳಿ ನಂಬಿಸುತ್ತಿದ್ದನಂತೆ. ಅಷ್ಟೇ ಅಲ್ಲದೇ,  ಸಮಸ್ಯೆ ಪರಿಹಾರಕ್ಕೆ ಬಂದ  ಯುವಕರನ್ನು ಲೈಂಗಿಕ ಕ್ರಿಯೆಗೆ ಬರುವಂತೆ ಆಮಿಷ ಒಡ್ಡುತ್ತಿದ್ದ. ಈತನ ಅಸಲಿ ಬಣ್ಣ ಬಯಲಾದ ಬಳಿಕ ಜನರು ಆತನಿಗೆ ಹಿಡಿದು ಹಿಗ್ಗಾಮುಗ್ಗಾ ಥಳಿಸಿದಾಗ ನಿಜ ವಿಷಯ ಬಯಲಾಗಿದೆ.

  ಅಲ್ಲದೇ ಈತನನ್ನು ಗದಗ ಗ್ರಾಮೀಣ ಪೊಲಿಸರಿಗೆ ಒಪ್ಪಿಸಿದ್ದಾರೆ. ಸಾರ್ವಜನಿಕರಿಂದ ಧರ್ಮದೇಟು ಬೀಳುತ್ತಲೂ ನಾನು ಮಾಡಿದ್ದು ತಪ್ಪಾಗಿದೆ. ನಾನು ಮಾಡಿದ್ದೆಲ್ಲ ಮೋಸ ಅಂತ ತಪ್ಪಾಗಿದೆ ಕ್ಷಮಿಸಿ, ನನ್ನನ್ನು ಬಿಟ್ಟುಬಿಡಿ ಅಂತ ಅದೆಷ್ಟೇ ಕೈ ಕಾಲು ಹಿಡಿದು ಬೇಡಿಕೊಂಡರೂ ಜನ ಮಾತ್ರ ಡೋಂಗಿ ಬಾಬಾನಿಗೆ ಚಳಿ ಬಿಡಿಸಿದ್ದೇ ಬಿಡಿಸಿದ್ದಾರೆ. ಸದ್ಯ ಪೊಲೀಸರ ವಶದಲ್ಲಿರುವ ಡೋಂಗಿ ಬಾಬಾನ ವಿರುದ್ಧ ಪ್ರಕರಣ ದಾಖಲಾಗಿದೆ.

  ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಲಾಕ್​​ಡೌನ್​ ನಿಯಮಗಳನ್ನು ಕಟ್ಟುನಿಟ್ಟಿನಿಂದ ಪಾಲಿಸಿ ಸೋಂಕಿನಿಂದ ತಮ್ಮನ್ನು ತಾವು ಕಾಪಾಡಿಕೊಳ್ಳುವ ಪ್ರತಿಜ್ಞೆ ತೆಗೆದುಕೊಳ್ಳಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು
  Published by:Seema R
  First published: