HOME » NEWS » State » GADAG NEWS DUPLICATE ROAD CONSTRUCTION AT GADAG SKG LG

ಗದಗ: 1‌ ಕೋಟಿ ರೂ. ವೆಚ್ಚದ ರಸ್ತೆ ಕಾಮಗಾರಿ ಕಳಪೆ; ಕಟ್ಟಿಗೆಯಿಂದ ಚುಚ್ಚಿದರೆ ಕಿತ್ತು ಬರುತ್ತೆ ಡಾಂಬರ್...!

ಡಾಂಬರೀಕರಣ ಪೂರ್ಣವಾಗಿಲ್ಲ, ಅಷ್ಟರಲ್ಲೇ ಡಾಂಬರ ಕಿತ್ತು ಹೋಗುತ್ತಿದೆ. ಕೋಟುಮಚಗಿ ಹಾಗೂ ಕಣಗಿನಹಾಳ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ರೈತರು ಸಂಚಾರ ಮಾಡ್ತಾರೆ. ಹೀಗಾಗಿ ಗುತ್ತಿಗೆದಾರ ಮನಸಿಗೆ ಬಂದ ಹಾಗೆ ರಸ್ತೆಯನ್ನು ನಿರ್ಮಾಣ ಮಾಡಿದ್ದಾನೆ.

news18-kannada
Updated:March 29, 2021, 3:19 PM IST
ಗದಗ: 1‌ ಕೋಟಿ ರೂ. ವೆಚ್ಚದ ರಸ್ತೆ ಕಾಮಗಾರಿ ಕಳಪೆ; ಕಟ್ಟಿಗೆಯಿಂದ ಚುಚ್ಚಿದರೆ ಕಿತ್ತು ಬರುತ್ತೆ ಡಾಂಬರ್...!
ರಸ್ತೆ ಕಾಮಗಾರಿ
  • Share this:
ಗದಗ(ಮಾ.29): ಗದಗ ತಾಲೂಕಿನ ಕಣಗಿನಹಾಳ ಹಾಗೂ ಕೋಟುಮಚಗಿ ಭಾಗದ ಜನರು ಕಳೆದ 10 ವರ್ಷಗಳಿಂದ ಸೂಕ್ತವಾದ ರಸ್ತೆ ಇಲ್ಲದೆ ಪರದಾಟ ನಡೆಸಿದರು. ಎರಡು ಬಾರಿ ರಸ್ತೆ ಕಾಮಗಾರಿ ಮಾಡಿದರೂ ಸುಗಮವಾದ ಸಂಚಾರಕ್ಕೆ ಯೋಗ್ಯವಾಗಿರಲಿಲ್ಲ. ಈಗ ಮೂರನೇ ಬಾರಿಗೆ ರಸ್ತೆ ಕಾಮಗಾರಿ ಆರಂಭ ಮಾಡಲಾಗಿದೆ. ಆದ್ರೆ, ರಸ್ತೆ ನಿರ್ಮಾಣ ಹಂತದಲ್ಲಿ ಇರುವಾಗಲೇ ಡಾಂಬರ್ ರಸ್ತೆ ಕಿತ್ತು ಹೋಗುತ್ತಿದೆ. ಹೀಗಾಗಿ ಮತ್ತೆ ಕಳಪೆ ಕಾಮಗಾರಿ ಮಾಡಲಾಗಿದೆ ಎನ್ನುವ ಆರೋಪ ಕೇಳಿ ಬಂದಿದೆ.

ಸರ್ಕಾರ ಸುಗಮವಾದ ಸಂಚಾರಕ್ಕೆ ಅನುಕೂಲವಾಗಲಿ ಎಂದು ಕೋಟ್ಯಾಂತರ ರೂಪಾಯಿ ಅನುದಾನ ಬಿಡುಗಡೆ ಮಾಡುತ್ತದೆ. ಆದ್ರೆ, ಗುತ್ತಿಗೆದಾರರು ಆ ಅನುದಾನ ಬಳಸಿಕೊಂಡು ಕಳಪೆ ಕಾಮಗಾರಿ ಮಾಡಿ, ಜನರಿಗೂ ಹಾಗೂ ಸರ್ಕಾರಕ್ಕೆ ಮಕ್ಮಲ್ ಟೋಪಿ ಹಾಕ್ತಾರೆ ಎನ್ನುವುದಕ್ಕೆ ಇದೊಂದು ಬೆಸ್ಟ್ ಉದಾಹರಣೆ. ಅಂದಹಾಗೆ ಗದಗ ತಾಲೂಕಿನ ಕೋಟುಮಚಗಿ ಗ್ರಾಮದಿಂದ ಕಣಗಿನಹಾಳ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ 9 ಕಿಲೋಮೀಟರ್ ರಸ್ತೆಯನ್ನು ದುರಸ್ತಿ  ಮಾಡಲಾಗುತ್ತಿದೆ.

Suez Canal - ಸುಯೆಜ್ ಕಾಲುವೆಯಲ್ಲಿ ವಾರದಿಂದ ಟ್ರಾಫಿಕ್ ಜಾಮ್; ಅಡ್ಡವಿದ್ದ ಹಡಗು ತೆರವು

ಒಂದು ಕೋಟಿ ರೂಪಾಯಿ ವೆಚ್ಚದಲ್ಲಿ, ರಸ್ತೆಯ ಅಕ್ಕಪಕ್ಕದ ಗಿಡಕಂಟಿಗಳನ್ನು ತೆರವು ಮಾಡಿ, ರಸ್ತೆಯ ಮೇಲೆ ತಗ್ಗುಗಳಿದ್ದಲ್ಲಿ ಮೆಟ್ಲಿಂಗ್ ಮಾಡಿ, ರೂಲರ್ ಮೂಲಕ‌ ಗಟ್ಟಿಗೊಳಿಸಿ, 20 ಎಮ್‌ಎಮ್ ಡಾಂಬರೀಕರಣ ಮಾಡಬೇಕು. ಡಾಂಬರೀಕರಣ ಮಾಡಿದ ನಂತ್ರ ರಸ್ತೆ ಪಕ್ಕದಲ್ಲಿ ಕಲ್ಲು ಮಿಶ್ರಿತ ಕೆಂಪು ಮಣ್ಣು ಹಾಕಬೇಕು. ಆದ್ರೆ   ಈ ಗುತ್ತಿಗೆದಾರ ಮಾತ್ರ ಹಳೇ ರಸ್ತೆಯ ಮೇಲೆ ನೇರವಾಗಿ ಡಾಂಬರೀಕರಣ ಮಾಡಿದ್ದಾನೆ. ಹೀಗಾಗಿ ರಸ್ತೆ ಗಟ್ಟಿಯಾಗದೆ ಕೇವಲ ಕಟ್ಟಿಗೆಯಿಂದ ಚುಚ್ಚಿದರೆ ಡಾಂಬರ್ ಕಿತ್ತು ಬರ್ತಾಯಿದೆ. ಹೀಗಾಗಿ ಕಳಪೆ ಕಾಮಗಾರಿಯಾಗಿದೆ ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಪರಿಶೀಲನೆ ನಡೆಸಬೇಕು ಅಂತಾ ಸ್ಥಳೀಯರು ಒತ್ತಾಯ ಮಾಡಿದ್ದಾರೆ.

ಇನ್ನೂ ಡಾಂಬರೀಕರಣ ಪೂರ್ಣವಾಗಿಲ್ಲ, ಅಷ್ಟರಲ್ಲೇ ಡಾಂಬರ ಕಿತ್ತು ಹೋಗುತ್ತಿದೆ. ಕೋಟುಮಚಗಿ ಹಾಗೂ ಕಣಗಿನಹಾಳ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ರೈತರು ಸಂಚಾರ ಮಾಡ್ತಾರೆ. ಹೀಗಾಗಿ ಗುತ್ತಿಗೆದಾರ ಮನಸಿಗೆ ಬಂದ ಹಾಗೆ ರಸ್ತೆಯನ್ನು ನಿರ್ಮಾಣ ಮಾಡಿದ್ದಾನೆ. ಇನ್ನೂ ಕೆಲವು ಕಡೇ ಡಾಂಬರ್ ಹಾಕದೇ ಹಾಗಿ ಬಿಟ್ಟು ಹೋಗಿದ್ದಾರೆ. ಹೀಗಾಗಿ ಈ ರಸ್ತೆ ಕಾಮಗಾರಿ ‌ಕಳಪೆಯಾಗಿದ್ದು, ಇದರಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಸ್ಥಳೀಯರು ಆರೋಪ ಮಾಡಿದ್ದಾರೆ. ಇನ್ನೂ ಕುರಿತು ಎಇಇ, ಎಮ್ ಎಸ್ ದಿವಟರ ಅವರನ್ನು ಕೇಳಿದ್ರೆ, ನಾನು ಕೂಡಾ ಎರಡು ಬಾರಿ ಕಾಮಗಾರಿ ಪರಿಶೀಲನೆ ನಡೆಸಿದ್ದೇನೆ.‌ ಹಾಗೇನಾದರೂ ಕಳಪೆ ಕಾಮಗಾರಿಯಾದ್ರೆ, ಮತ್ತೊಮ್ಮೆ ರಸ್ತೆ ದುರಸ್ತಿ ಮಾಡಿಸುತ್ತೇವೆ, ಅವರ ಮೇಲೆ ಕ್ರಮ ಕೈಗೊಳ್ಳುತ್ತೇನೆ ಅಂತಾರೆ ಎಮ್ ಎಸ್ ದಿವಟರ್, ಎಇಇ ಗದಗ ಅವರು.
Youtube Video

ಪದೇ ಪದೇ ರಸ್ತೆ ಕಾಮಗಾರಿ ಕಳಪೆಯಾಗುತ್ತಿದ್ದು, ಈ ಭಾಗದ ಜನ್ರು‌ ರೋಸಿ ಹೋಗಿದ್ದಾರೆ. ಇನ್ನಾದರೂ ಸಬೂಬು ಹೇಳೋದನ್ನು ಬಿಟ್ಟು ಅಧಿಕಾರಿಗಳು ರಸ್ತೆ ಕಾಮಗಾರಿ ಪರಿಶೀಲನೆ ನಡೆಸಬೇಕಾಗಿದೆ. ಉತ್ತಮ ರಸ್ತೆ ನಿರ್ಮಿಸಿ, ಗ್ರಾಮೀಣ ಭಾಗದ ಜನರಿಗೆ ಅನುಕೂಲ ಮಾಡಿಕೊಡಬೇಕಾಗಿದೆ.
Published by: Latha CG
First published: March 29, 2021, 3:09 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories