• ಹೋಂ
 • »
 • ನ್ಯೂಸ್
 • »
 • ರಾಜ್ಯ
 • »
 • Crime: ಇಜಾಜ್​ನನ್ನು ಪ್ರೀತಿಸಿ ಮದ್ವೆಯಾಗಿದ್ದ ಅಪೂರ್ವ, ಡಿವೋರ್ಸ್​ ಬಗ್ಗೆ ಗೊತ್ತಾದಾಗ ಆಕೆ ಮೇಲೆ ಡೆಡ್ಲಿ ಎಟ್ಯಾಕ್

Crime: ಇಜಾಜ್​ನನ್ನು ಪ್ರೀತಿಸಿ ಮದ್ವೆಯಾಗಿದ್ದ ಅಪೂರ್ವ, ಡಿವೋರ್ಸ್​ ಬಗ್ಗೆ ಗೊತ್ತಾದಾಗ ಆಕೆ ಮೇಲೆ ಡೆಡ್ಲಿ ಎಟ್ಯಾಕ್

ಅಪೂರ್ವ-ಇಜಾಜ್

ಅಪೂರ್ವ-ಇಜಾಜ್

ಸ್ಕೂಟಿ ಕಲಿಯುತ್ತಿದ್ದ ಅಪೂರ್ವಾಗೆ ಬರೋಬ್ಬರಿ 23 ಬಾರಿ ಮಚ್ಚಿನಿಂದ ಹಲ್ಲೆ ಮಾಡಿದ್ದಾನೆ. ರಕ್ತದ ಮಡುವಿನಲ್ಲಿದ್ದ ಅಪೂರ್ವಾಳನ್ನ ಅಲ್ಲೇ ಬಿಟ್ಟು ಪರಾರಿಯಾಗಿದ್ದ.

 • Share this:

ಗದಗ(ಮಾ.12): ಪತಿಯೇ ಪರದೈವ ಅಂತಿದ್ದ ಆ ಹೆಣ್ಣಿಗೆ ಗಂಡ ಸೈತಾನ ಅಂತಾ ಗೊತ್ತಾಗಿದ್ದೇ ತಡ ಆಕೆ ಆತನಿಂದ ಅಂತರ ಕಾಯ್ದುಕೊಂಡಿದ್ಲು. ಕಿರುಕುಳದ ಕಿರಾತಕನಿಂದ ಕಾಯಂ ಆಗಿ ದೂರ ಇರ್ಬೇಕು ಅಂತಾ ನಿರ್ಧರಿಸಿದ್ಲು, ಡಿವೋರ್ಸ್ ಗೆ ಕೂಡ ಅಪ್ಲೈ ಮಾಡಿದ್ಲು. ಇದ್ರಿಂದ ಸಿಟ್ಟಿಗೆದ್ದಿದ್ದ ಪಾಪಿ ಪತಿ ಹೆಂಡತಿಗೆ ಮನಬಂದಂತೆ ಹಲ್ಲೆ (Attack) ಮಾಡಿದ್ದ. ಅಮಾನುಷವಾಗಿ ಹಲ್ಲೆ ಮಾಡಿ ಓಡಿಹೋಗಿದ್ದ ಆರೋಪಿ ಸದ್ಯ ಪೊಲೀಸರ (Police) ಅತಿಥಿಯಾಗಿದ್ದಾನೆ. ಮಾರ್ಚ್ 10 ನೇ ತಾರೀಕು ಗದಗ (Gadag) ನಗರದ ಲಾಯನ್ಸ್ ಸ್ಕೂಲ್ ಸಮೀಪದ ಪ್ಲೇಗ್ರೌಂಡ್ ಅಕ್ಷರಶಃ ರಕ್ತಸಿಕ್ತವಾಗಿತ್ತು. ಗದಗ ನಗರದ ಹುಡ್ಕೋ ಬಡಾವಣೆಯ ನಿವಾಸಿ ಅಪೂರ್ವಾ ಪುರಾಣಿಕ್ ಅನ್ನೋ ಮಹಿಳೆ ಮೇಲೆ ಇಜಾಜ್ ಶಿರೂರ್ ಅನ್ನೋ ವ್ಯಕ್ತಿ ಮೃಗದಂತೆ ಎರಗಿದ್ದ.


ಸ್ಕೂಟಿ ಕಲಿಯುತ್ತಿದ್ದ ಅಪೂರ್ವಾಗೆ ಬರೋಬ್ಬರಿ 23 ಬಾರಿ ಮಚ್ಚಿನಿಂದ ಹಲ್ಲೆ ಮಾಡಿದ್ದಾನೆ. ರಕ್ತದ ಮಡುವಿನಲ್ಲಿದ್ದ ಅಪೂರ್ವಾಳನ್ನ ಅಲ್ಲೇ ಬಿಟ್ಟು ಪರಾರಿಯಾಗಿದ್ದ. ಅಪೂರ್ವಾಳಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನೆ ನಡೆದು ಕೇವಲ 24 ಗಂಟೆಯಲ್ಲಿ ಹಲ್ಲೆ ಮಾಡಿ ತಲೆ ಮರೆಸಿಕೊಂಡಿದ್ದ ಇಜಾಜ್ ನನ್ನ ಪೊಲೀಸರು ಹೆಡೆಮುರಿಕಟ್ಟಿದ್ದಾರೆ.


ದರ್ಗಾವೊಂದರಲ್ಲಿ ಮದುವೆಯಾಗಿದ್ದ ಜೋಡಿ


ಅಪೂರ್ವಾ ಹಾಗೂ ಇಜಾಜ್ ಗಂಡಾ ಹೆಂಡತಿ. ನಾಲ್ಕು ವರ್ಷದ ಹಿಂದೆ ವಿಜಯಪುರದ ದರ್ಗಾವೊಂದ್ರಲ್ಲಿ ವಿವಾಹವಾಗಿದ್ರು. ಅಪೂರ್ವಾ ತನ್ನನ್ನ ತಾನು ಇಜಾಜ್ ಗೆ ಅರ್ಪಿಸಿಕೊಂಡಿದ್ಲು. ತನ್ನ ಹೆಸರು ಅಸ್ಥಿತ್ವ ಬದಲಾತಿಸಿಕೊಂಡಿದ್ಲು. ಅರ್ಫಾಬಾನು ಅಗಿ ಬದಲಾಗಿದ್ಲು. ಮುದ್ದಾದ ಮಗುವಿಗೆ ಜನ್ಮ ನೀಡಿ ಪತಿಯೊಂದಿಗೆ ಹುಬ್ಬಳ್ಳಿಯ ಕೌಲಬಜಾರ್ ನಲ್ಲಿ ವಾಸವಿದ್ಲು. ಆರಂಭದಲ್ಲಿ ಗದಗ ನಗರದಲ್ಲಿ ಆಟೋ ಓಡಿಸಿಕೊಂಡಿದ್ದ ಇಜಾಜ್ ನಂತ್ರ ಹುಬ್ಬಳ್ಳಿಗೆ ಶಿಫ್ಟ್ ಆಗಿದ್ದ. ಅಲ್ಲೇ ಸಣ್ಣದೊಂದು ಮೊಬೈಲ್ ಅಂಗಡಿ ಇಟ್ಕೊಂಡಿದ್ದ.


ಅತಿಯಾದ ಕುಡಿತ:


ಅತಿಯಾದ ಕುಡಿತದ ಹುಚ್ಚು ಇಜಾಜ್ ಗೆ ಜೀವನ ನಡೆಸೋದಕ್ಕೆ ಬಿಟ್ಟಿರಲಿಲ್ಲ ಅನ್ಸುತ್ತೆ. ಹೀಗಾಗಿ ಪೋಲಿ ಅಲಿತೋದು‌, ಹೆಂಡತಿಯನ್ನ ಪೀಡಿಸೋದನ್ನೆ ಇಜಾಜ್ ಫುಲ್ ಟೈಮ್ ಬ್ಯೂಸಿನೆಸ್ ಮಾಡಿಕೊಂಡಿದ್ದಾ. ಯಾವಾಗ ಇಜಾಜ್ ಸೈತಾನನಾನಿ ಬದಲಾಗ್ತಿದ್ನೋ ಆಗ್ಲೆ ಅಪೂರ್ವಾ ತವರು ಮನೆ ಸೇರಿದ್ದಳು. ತಾಯಿ ಅಶ್ವನಿ ಅಪೂರ್ವಾಳನ್ನ ಸಾಕುವ ನಿರ್ಧಾರ ಮಾಡಿದ್ರು.


ಇದನ್ನೂ ಓದಿ: Murder: ಗಂಡ-ಹೆಂಡತಿ ಜಗಳಕ್ಕೆ ಬಲಿಯಾದ ಗ್ರಾಮದ ಮುಖಂಡ, ಸಂಧಾನ ಮಾಡಲು ಹೋಗಿದ್ದೆ ತಪ್ಪಾಯ್ತಾ?


ಎಂಬಿಎ ಪದವೀಧರೆ ಪ್ರೀತಿಯಲ್ಲಿ ಎಡವಿಬಿದ್ದಳು


ಎಮ್ ಬಿಎ ಪಧವೀಧರೆಯಾಗಿದ್ದ ಅಪೂರ್ವಳಿಗೆ ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಕೆಲಸವೂ ಸಿಕ್ಕಿತ್ತು. ವರ್ಕ್ ಫ್ರಾಮ್ ಹೋಮ್ ಇರೋದ್ರಿಂದ ಗದಗದಿಂದಲೇ ಅಪೂರ್ವ ಕೆಲಸ ಮಾಡ್ಕೊಂಡಿದ್ಲು. ಹಳೆಯದನ್ನ ಮರೆತು ಹೊಸ ಜೀವನ ನಡೆಸಿದ್ಲು. ದೂರವಾಗಿದ್ದ ಇಜಾಜ್ ನಿಂದ ಪರ್ಮನೆಂಟ್ ಆಗಿ ದೂರ ಆಗ್ಬೇಕು ಅಂತಾ ಅಪೂರ್ವಾ ನಿರ್ಧರಿಸುತ್ತಾಳೆ. ಅದ್ಯಾವಾಗ ಅಪೂರ್ವಾ ಡೈವರ್ಸ್ ಗೆ ಅಪ್ಲೈ ಮಾಡಿದ್ದ ಸುದ್ದಿ ಇಜಾಕ್ ಕಿವಿಗೆ ಬೀಳೋತ್ತೋ ಆಗಲೇ ಇಜಾಜ್ ಕುದ್ದು ಹೋಗ್ತಾನೆ. ಆಕೆಯನ್ನ ಬೇರಾರೂ ಮದ್ವೆ ಆಗ್ಬಾರ್ದು ಹಾಗೇ ಮಾಡ್ರೀನಿ ಅಂತಾ ಹೇಳಿಕೊಂಡಿರ್ತಾನೆ.


ಹತ್ಯೆಗೂ ಪ್ಲಾನ್ ಮಾಡಿದ್ದ


ಹತ್ಯೆಗೂ ಒಂದು ದಿನದ ಹಿಂದೆ ಅಪೂರ್ವಾ ಚಲನವಲನ ಗಮನಿಸಿದ್ದ ಇಜಾಜ್, ಕೊಲೆ ಮಾಡುವ ಉದ್ದೇಶದಿಂದ ಪ್ಲಾನ್ ಮಾಡಿರ್ತಾನೆ.. ಕಂಠಮಟ್ಟಕ್ಕೆ ಕುಡಿದು ತಯಾರಾಗ್ತಾನೆ.. ನಿನ್ನೆ ಅಂದ್ರೆ 10 ನೇ ತಾರೀಕು ಎಂದಿನಂತೆ ಬೆಳಗಿನ ಜಾವ 6:30 ಗಂಟೆಗೆ ಅಪೂರ್ವಾ ಸ್ಕೂಟಿ ಕಲೆಯೋದಕ್ಕೆ ಪ್ಲೇಗ್ರೌಂಡ್ ಗೆ ಬಂದಿದ್ದಳು. ಹೊಂಚು ಹಾಕಿ ಪಕ್ಕದ ಮುಳ್ಳಿನ ಪೊದೆಯಲ್ಲಿ ಕೂತಿದ್ದ ಇಜಾಜ್, ಸ್ಕೂಟಿ ಗ್ರೌಂಡ್ ನ ಅಂಚು ಸಮೀಪಿಸುತ್ತಿದ್ದಂತೆ ಮೃಗದಂತೆ ಹಾರಿದ್ದ.


ಇದನ್ನೂ ಓದಿ: Gadag: ಹಾಡಹಗಲೇ ಪತ್ನಿ ಮೇಲೆ ಡೆಡ್ಲಿ ಅಟ್ಯಾಕ್, 23 ಬಾರಿ ಮನಸೋ ಇಚ್ಚೆ ಮಚ್ಚಿನಿಂದ ಇರಿದು ಹಲ್ಲೆ


ಮಚ್ಚಿನಿಂದ ಬೇಕಾಬಿಟ್ಟಿ ಹಲ್ಲೆ


ಉಸಿರು ನಿಲ್ಲಿಸಬೇಕು ಅನ್ನೋ ಉದ್ದೇಶದಿದ್ಲೆ ಮಚ್ಚಿನಿಂದ ಹಲ್ಲೆ ಮಾಡಿದ್ದ. ಮೊದಲಿಗೆ ತಲೆಯ ಭಾಗಕ್ಕೆ ಬರೋಬ್ಬರಿ 8 ರಿಂದ 10 ಬಾರಿ ಕೊಚ್ಚಿದ್ದಾನೆ. ರಕ್ಷಣೆಗೆ ಕೈ ಅಡ್ಡ ಹಾಕಿದಕ್ಕ ಅಪೂರ್ವಾ ಮುಂಗೈಗೆ ಎರಡೇಟು ಬಿದ್ದಿವೆ. ನೋವು ತಡೆಯದೇ ತಪ್ಪಿಸಿಕೊಳ್ಳಲೆತ್ನಿಸಿದ ಅಪೂರ್ವಳ ಬೆನ್ನಿಗೂ ಬಲವಾದ ಗಾಯ ಮಾಡಿದಾನೆ ಸ್ಕೂಟಿ ಕಲಿಸಲು ಬಂದ ಬಾಲಕ ಕೂಗಿ ಜನರನ್ನ ಸೇರಿಸಿದ್ದ. ಸ್ಥಳೀಯರ ಸಹಾಯದಿಂದ ಗಾಯಾಳು ಅಪೂರ್ವಾಳನ್ನ ಜಿಮ್ಸ್ ಆಸ್ಪತ್ರೆಗೆ ಸೇರಿಸಲಾಯ್ತು. ಹೆಚ್ಚಿನ ಚಿಕಿತ್ಸೆಗೆ ಹುಬ್ಬಳ್ಳಿಯ ಕಿಮ್ಸ್ ಗೆ ಅಪೂರ್ವಾ ಶಿಫ್ಟ್ ಮಾಡಲಾಗಿದೆ‌.


ಬದುಕುಳಿದಿದ್ದಾಳೆ ಅಪೂರ್ವ

top videos


  ಅಪೂರ್ವಳಾ ಆಯಸ್ಸು ಗಟ್ಟಿಇತ್ತು ಅನ್ಸುತ್ತೆ. ಬಲವಾದ ಹೊಡೆತದ ಬಳಿಕವೂ ಬದುಕುಳಿದಿದ್ದಾಳೆ. ತಾಯಿ ಅಶ್ವಿನಿ ಮಗಳೊಂದಿಗಿದ್ದಾರೆ. ಮುಖದ ಭಾಗ ಗಂಭೀರವಾಗಿ ಗಾಯವಾಗಿದ್ದರಿಂದ ಮುಂದಿನ ಭವಿಷ್ಯ ಹೇಗೆ ಅನ್ನೋ ಚಿಂತ ಅಪೂರ್ವಾ ಕುಟುಂಬವನ್ನ ಕಾಡ್ತಿದೆ. ಸದ್ಯ ಉಜಾಜ್ ಸಿಕ್ಕಿದಾನೆ. ಆತನ ವಿರುದ್ಧ ಕಠಿಣ ಕ್ರಮ ಆಗ್ಬೇಕು. ಮುಂದೆ ಇಂಥ ಕೃತ್ಯಗಳಾಗದಂತೆ ನೋಡಿಕೊಳ್ಳಬೇಕಿದೆ.

  First published:

  ಸುದ್ದಿ 18ಕನ್ನಡ ಟ್ರೆಂಡಿಂಗ್

  ಮತ್ತಷ್ಟು ಓದು