ಬೆಟಗೇರಿಗೆ ಬಂದಿದ್ದ ಗಾಂಧಿ - ಅರ್ಧಕ್ಕೇ ನಿಂತ ಗಾಂಧಿಗುಡಿ

news18
Updated:October 2, 2018, 3:27 PM IST
ಬೆಟಗೇರಿಗೆ ಬಂದಿದ್ದ ಗಾಂಧಿ - ಅರ್ಧಕ್ಕೇ ನಿಂತ ಗಾಂಧಿಗುಡಿ
  • Advertorial
  • Last Updated: October 2, 2018, 3:27 PM IST
  • Share this:
- ಸಂತೋಷ ಕೊಣ್ಣೂರ,  ನ್ಯೂಸ್ 18 ಕನ್ನಡ 

ಗದಗ ( ಅ.02) : ರಾಷ್ಟ್ರಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಮಹಾತ್ಮ ಗಾಂಧೀಜಿಯವರ ನೆನೆಪು ಬರುವುದು ಅಕ್ಟೋಬರ್ ನಲ್ಲಿ. ರಾಷ್ಟ್ರಪಿತನಿಗೆ ಇಲ್ಲಿ ಯಾವ ರೀತಿಯ ಮರ್ಯಾದೆ ದೊರೆಯುತ್ತಿದೆ ಎಂಬುದನ್ನು ಗಾಂಧಿ ಕಟ್ಟಡ ನೋಡಿದಾಗಲೇ ಗೊತ್ತಾಗುತ್ತೆ. ಗಾಂಧೀಜಿ ಸ್ಮಾರಕ ಕಟ್ಟಡ ಪ್ರಾರಂಭವಾಗಿ ಹತ್ತಾರು ವರ್ಷಗಳು ಕಳೆದರೂ ಕೆಲವು ಪಟ್ಟಭದ್ರ ಹಿತಾಸಕ್ತಿಗಳ ನಿಷ್ಕಾಳಜಿಯಿಂದ ನೆನಗುದ್ದಿಗೆ ಬಿದ್ದಿದೆ. ಗದುಗಿನ ಗಾಂಧಿಗುಡಿ ಕುರಿತಾದ ಒಂದು ವರದಿ ಇಲ್ಲಿದೆ  ಓದಿ...

1944 ರಲ್ಲಿ ಮಹಾತ್ಮ ಗಾಂಧೀಜಿಯವರು ಗದುಗಿಗೆ ಭೇಟಿಕೊಟ್ಟಿದ್ದ ಸಂಧರ್ಭದಲ್ಲಿ ಬೆಟಗೇರಿಯ ನೇಕಾರರ ಓಣಿಗೂ ಬಂದಿದ್ದರು. ಇಲ್ಲಿ ಬೃಹತ್ ಜನಾಂದೋಲನ ಸಭೆ ಮಾಡಿದ್ದರು. ಗಾಂಧೀಜಿ ಮರಣದ ನಂತರ ಇದರ ನೆನಪಾರ್ಥವಾಗಿ ಅವರ ಚಿತಾಭಸ್ಮ ತಂದಿಟ್ಟು ಒಂದು ಸ್ಮಾರಕ ನಿರ್ಮಿಸುತ್ತಿದ್ದರು. ಆದರೆ ಹಲವು ಕಾರಣಗಳಿಂದಾಗಿ ಗಾಂಧಿಗುಡಿ ನಿರ್ಮಾಣ ಕಾರ್ಯ ಅರ್ಧಕ್ಕೆ ನಿಂತುಹೋಗಿದೆ.

ಮಹಾತ್ಮ ಗಾಂಧಿಗುಡಿ ಕಾಮಗಾರಿ ಅರ್ಧಕ್ಕೆ ನಿಂತು ಹತ್ತು ವರ್ಷಗಳೆ ಕಳೆದಿವೆ. ಆದರೆ ಬೆಟಗೇರಿಯ ಜನ ಮಾತ್ರ ಗಾಂಧಿ ಚಿತಾಭಸ್ಮಕ್ಕೆ ಪೂಜೆ ನಿತ್ಯ ಸಲ್ಲಿಸುತ್ತಾರೆ. ಈ ಭಾಗದಿಂದ ಶಾಲೆಗೆ ಹೊಗುವ ಶಾಲಾ ಮಕ್ಕಳೆಲ್ಲಾ ಇದಕ್ಕೆ ನಮಸ್ಕರಿಸಿಯೇ ಹೊಗುತ್ತಾರೆ. ಈ ಭಾಗದ ಹಿರಿಯ ಸ್ವಾತಂತ್ರ್ಯ ಹೋರಾಟಗಾರರು ಪ್ರತಿನಿತ್ಯ ಈ ಗಾಂಧಿಗುಡಿಗೆ ನಮಸ್ಕರಿಸಿಯೇ ಮುನ್ನಡೆಯುತ್ತಾರೆ. ದೇಶಸೇವೆ ಮಾಡಿದ ರಾಷ್ಟ್ರಪಿತನ ಗುಡಿ ಗುಂಡಾಂತರವಾಗುತ್ತಿದೆ.

ಆದರೆ  ಇದ್ಯಾವದೂ ಜಿಲ್ಲಾಡಳಿ ಹಾಗೂ ಶಾಸಕರುಗಳ ಕಣ್ಣಿಗೆ ಕಂಡಿಲ್ಲವೆನಿಸುತ್ತೆ. ಗಾಂಧಿ ಜಯಂತಿ ವೇಳೆ ಬಂದ ಅಧಿಕಾರಿಗಳು ಕೇವಲ ಭರವಸೆ ನೀಡುತಾರೆ. ನಮ್ಮ ದುರಾದೃಷ್ಟವೆನೋ ಗೊತ್ತಿಲ್ಲ. ಇಲ್ಲಿ ಬರಿ ಕಲ್ಲಿಗೆ ಪೂಜೆ ಮಾಡುವ ಪರಸ್ಥಿತಿ ಬಂದಿದೆ ಎಂದಿದ್ದಾರೆ ಇಲ್ಲಿಯ ಜನರು.

ಗಾಂಧಿ ಪ್ರತಿಮೆಯನ್ನ ನಗರಸಭೆಯಲ್ಲಿ ತಂದಿಟ್ಟು ಆರು ವರ್ಷಗಳು ಕಳೆದಿವೆ. ಆದರೆ ಗಾಂಧಿಗುಡಿ ಜಿರ್ಣೋದ್ದಾರ ಮಾಡಿ ಪ್ರತಿಷ್ಠಾಪಿಸಲು ಮುಂದಾಗುತ್ತಿಲ್ಲ. ಹಲವು ಯೋಜನೆಗಳಿಗೆ ಅನಾವಶ್ಯಕವಾಗಿ ಹಣವನ್ನು ಪೋಲು ಮಾಡುತಾರೆ. ಆದರೆ ನಾಡಿನ ಹೆಸರಾಂತ ವ್ಯಕ್ತಿಗಳ ಸ್ಮಾರಕವನ್ನು ಪೂರ್ಣಗೊಳಿಸಿದಿರುವುದು ವಿಪರ್ಯಾಸ. ಇನ್ನು ಮುಂದಾದರು ಸಂಬಂಧಿಸಿದವರು ಗಾಂಧಿ ಗುಡಿಗೆ ಮುಕ್ತಿ ನೀಡಲಿ ಎಂಬುದು ನಮ್ಮಯ ಆಸೆಯ.

 
First published:October 2, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ