• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Gadag: 'ಮುದ್ರಣ ಕಾಶಿ' ಈಗ ಶಿಲ್ಪಕಲೆಗೂ ಪ್ರಸಿದ್ಧ, ಇಲ್ಲಿನ ಮರದ ರಥಗಳಿಗೆ ಬಲು ಬೇಡಿಕೆ

Gadag: 'ಮುದ್ರಣ ಕಾಶಿ' ಈಗ ಶಿಲ್ಪಕಲೆಗೂ ಪ್ರಸಿದ್ಧ, ಇಲ್ಲಿನ ಮರದ ರಥಗಳಿಗೆ ಬಲು ಬೇಡಿಕೆ

ರಥದ ನಿರ್ಮಾಣದಲ್ಲಿ ತೊಡಗಿರುವ ಶಿಲ್ಪಿ

ರಥದ ನಿರ್ಮಾಣದಲ್ಲಿ ತೊಡಗಿರುವ ಶಿಲ್ಪಿ

ಹೊರರಾಜ್ಯಗಳಿಂದ ಶಿಲ್ಪಿಗಳನ್ನ ಕರೆತಂದು ಅವರಿಗೆಲ್ಲ ಊಟ ವಸತಿ ಮೂಲಕ ಆಕರ್ಷಕ ವೇತನ ಕೊಟ್ಟು ಈ ನಿರ್ಮಾಣ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಈವರ ಕಾರ್ಯದಂತೆ ಮುದ್ರಣ ಕಾಶಿ ಜೊತೆಗೆ ರಥ ಶಿಲ್ಪಿಗಳ ನಾಡು ಎನ್ನುವ ಕೀರ್ತಿ ಬರುತ್ತಿದೆ ಅಂತಾರೆ ಸ್ಥಳೀಯರು.

  • Share this:

ಗದಗ: ಈ ಜಿಲ್ಲೆಗೆ ಮೊದಲೇ ಮುದ್ರಣಕಾಶಿ ಅಂತ ಹೆಸರಿದೆ. ಗದಗ (Gadag) ನಗರದಲ್ಲಿ ನೂರಾರು ಪ್ರಿಂಟಿಂಗ್​ ಫ್ರೆಸ್​ಗಳು (Printing Press) ತಲೆ ಎತ್ತಿ ಮುದ್ರಣಕಾಶಿ ಅನ್ನೋದಕ್ಕೆ ಹೆಸರುವಾಸಿಯಾಗಿದೆ. ಆದ್ರೆ ಇದೀಗ ಗದಗ ನಗರ (City) ಮತ್ತೊಂದು ಹೆಜ್ಜೆ ಮುಂದೆ ಇಟ್ಟಿದೆ. ಈ ಮುದ್ರಣ ಕಾಶಿಗೆ ಕಿರೀಟಕ್ಕೆ (Crown) ಮತ್ತೊಂದು ಹೆಮ್ಮೆಯ ಗರಿ ಸೇರಿದೆ. ಅದೇನಪ್ಪ ಅಂದ್ರೆ ಗದಗದಲ್ಲಿ ನಿರ್ಮಾಣವಾಗ್ತಿರೋ ಮರದ ರಥಗಳು (Wooden Chariots) ಅಂತರ್ ರಾಜ್ಯಗಳಲ್ಲಿ ಭಾರಿ ಬೇಡಿಕೆ ಹೊಂದಿವೆ. ಈ ಬೇಡಿಕೆ ಹಿನ್ನಲೆಯಲ್ಲಿಯೇ ರಥ ಕಾರ್ಖಾನೆಯೊಂದು (Factory) ತಲೆ ಎತ್ತಿ ನಿಂತಿದೆ. ವಿನ್ಯಾಸ, ಕೆತ್ತನೆ, ರಥಗಳ ಸೌಂದರ್ಯತೆಗೆ ಹೆಸರುವಾಸಿಯಾಗಿದೆ.


ಇಲ್ಲಿನ ಮರದ ರಥಗಳಿಗೆ ಭಾರೀ ಬೇಡಿಕೆ


ಸೂಕ್ಷ್ಮ ಕೆತ್ತನೆಗಳ ಕಲೆಯನ್ನ ಇಲ್ಲಿನ ರಥ ಶಿಲ್ಪಿಗಳು ಕರಗತ ಮಾಡಿಕೊಂಡಂತಿದೆ. ಗದಗನಲ್ಲಿ ನಿರ್ಮಾಣ ಆಗ್ತಿರೋ ರಥಗಳಿಗೆ ದೇಶದಾದ್ಯಂತ ಭಾರಿ ಬೇಡಿಕೆ ಬಂದಿದೆ. ಅದರಲ್ಲೂ ಆಂಧ್ರ ಪ್ರದೇಶ, ಕೇರಳ, ತಮಿಳುನಾಡು ರಾಜ್ಯಗಳ ಬಹುತೇಕ ದೇವಸ್ಥಾನಗಳಿಗೆ ಗದಗದಿಂದ ಮರದ ರಥ ಮಾಡಿ ಕೊಡಲಾಗಿದೆ.


ರಥ ನಿರ್ಮಾಣದಲ್ಲಿ ತೊಡಗಿಕೊಂಡ ಸಹೋದರರು


ಅಂದಹಾಗೆ ಗದಗ ನಗರದ ನಿವಾಸಿಗಳಾದ ಬಸವರಾಜ್ ಆಚಾರ್ಯ ಮತ್ತು ಕಾಳಪ್ಪ ಆಚಾರ್ಯ ಅನ್ನೋ ಸಹೋದರರು ರಥ ನಿರ್ಮಾಣ ಕಾರ್ಯದಿಂದಲೇ ಕರ್ನಾಟಕ ಸೇರಿದಂತೆ ಬೇರೆ ಬೇರೆ ರಾಜ್ಯಗಳಿಗೂ ಚಿರಪರಿಚಿತರಾಗಿದ್ದಾರೆ.


ಇದನ್ನೂ ಓದಿ: Farmer: ಸೇತುವೆ ಸಮಸ್ಯೆಗೆ ಪರಿಹಾರ ಕಂಡುಕೊಂಡ‌ ಕಾಸರಗೋಡಿನ ಕೃಷಿಕ, ಅನ್ನದಾತನ ಸಾಧನೆ ನೀವೇ ನೋಡಿ


‘ಬ್ರಹ್ಮ ಋಷಿ ರಥಶಿಲ್ಪ ಕಲಾಕೇಂದ್ರ’ದಲ್ಲಿ ಕುಸುರಿ ಕೆಲಸ


ಸುಮಾರು 25 ವರ್ಷಗಳಿಂದ ‘ಬ್ರಹ್ಮಋಷಿ ರಥಶಿಲ್ಪ ಕಲಾಕೇಂದ್ರ’ ತೆರೆದಿದ್ದು ಇಲ್ಲಿ ಬ್ರಹ್ಮ ರಥ ಮತ್ತು ಚಿಕ್ಕ ರಥಗಳನ್ನ ನಿರ್ಮಾಣ ಮಾಡಿಕೊಂಡು ಬರ್ತಿದ್ದಾರೆ. ಅಷ್ಟ ಭುಜಾಕೃತಿ, ಷಟ್ಭುಜಾಕೃತಿ, ಚತುರ್ಭುಜಾಕೃತಿ, ಶೈವ ವೈಷ್ಣವ ಧರ್ಮದ ಪ್ರಕಾರ, ಒಂದೊಂದು ರಥಗಳು ಸುಮಾರು 1 ಕೋಟಿಗಿಂತಲೂ ಅಧಿಕ ವೆಚ್ಚದಲ್ಲಿ ನಿರ್ಮಾಣ ಮಾಡಿ ದೇವಸ್ಥಾನಗಳಿಗೆ ಅರ್ಪಿಸುತ್ತಿದ್ದಾರೆ.


ಯೋಗ ನರಸಿಂಹ ದೇಗುಲಕ್ಕೆ ಬ್ರಹ್ಮ ರಥ


ಸದ್ಯ ಈಗ ಆಂಧ್ರ ಪ್ರದೇಶದ ಯೋಗ ನರಸಿಂಹ ದೇವಸ್ಥಾನಕ್ಕೆ ಬ್ರಹ್ಮರಥವನ್ನ ನಿರ್ಮಾಣ ಮಾಡಿಕೊಡ್ತಿದ್ದಾರೆ. ಸುಮಾರು 1 ಕೋಟಿ 50 ಲಕ್ಷ ರೂಪಾಯಿಗಳಿಗೂ ಅಧಿಕ ಬೆಲೆಗೆ ಗುತ್ತಿಗೆ ಪಡೆದಿದ್ದಾರೆ.


ಇನ್ನು ಭಾರತೀಯ ಶಿಲ್ಪಕಲೆಗಳಲ್ಲಿ ರಥ ಶಿಲ್ಪಕಲೆಯೂ ಸಹ ಒಂದು ವಿಶಿಷ್ಟ ಸ್ಥಾನ ಪಡೆದುಕೊಂಡಿದೆ. ವಿಶೇಷ ಅಂದ್ರ ರಥಶಿಲ್ಪ ನಿರ್ಮಾಣದಲ್ಲಿ ವಾಸ್ತುಶಾಸ್ತ್ರವೂ ವಿಶಿಷ್ಟ ಸ್ಥಾನ ಪಡೆದುಕೊಂಡಿದೆ. ವಾಸ್ತುಶಾಸ್ತ್ರ ಮತ್ತು ಮೂರ್ತಿ ಶಿಲ್ಪ ಎರಡನ್ನೂ ಮೇಳೈಸಿಕೊಂಡು ರಥ ನಿರ್ಮಾಣವಾಗುತ್ತದೆ.


ಕಾಶಪ ಶಿಲ್ಪ, ಮಾನಸ ಶಾಸ್ತ್ರ, ಬ್ರಾಹ್ಮಿ ಚಿತ್ರಸೂತ್ರ ಲಕ್ಷಣ ಇವೆಲ್ಲವುಗಳನ್ನು ಒಳಗೊಂಡಿರುತ್ತದೆ. ವೈಷ್ಣವ ತಂತ್ರದಲ್ಲಿ ರಥಗಳನ್ನ ನಿರ್ಮಿಸಲಾಗ್ತಿದೆ.


ಮೈಸೂರು ಸಂಸ್ಥಾನದ ದೇಗುಲಗಳಿಗೂ ರಥ ನಿರ್ಮಾಣ


ಕರ್ನಾಟಕದ ಮೈಸೂರು ಸಂಸ್ಥಾನದಂತ ದೊಡ್ಡ ದೊಡ್ಡ ದೇವಸ್ಥಾನಗಳಿಗೆ ರಥಗಳನ್ನ ನಿರ್ಮಾಣ ಮಾಡಿಕೊಟ್ಟಿದ್ದಾರಂತೆ. ಈ  ಗದಗನಲ್ಲಿ ಬ್ರಹ್ಮಋಷಿ ರಥಶಿಲ್ಪ ಕಲಾಕೇಂದ್ರದ ಮೂಲಕ ಸುಮಾರು 25ಕ್ಕೂ ಹೆಚ್ಚು ಉದ್ಯೋಗಿಗಳಿಗೆ ಕೆಲಸ ಕೊಟ್ಟಿದ್ದಾರೆ.


ಇದನ್ನೂ ಓದಿ: Farmer: 15 ಗುಂಟೆ ಜಮೀನಿನಲ್ಲಿ ದಪ್ಪ ಮೆಣಸಿನಕಾಯಿ ಬೆಳೆದು 11 ಲಕ್ಷ ಲಾಭ ಕಂಡ ರೈತ


ಹೊರರಾಜ್ಯಗಳಿಂದ ಶಿಲ್ಪಿಗಳನ್ನ ಕರೆತಂದು ಅವರಿಗೆಲ್ಲ ಊಟ ವಸತಿ ಮೂಲಕ ಆಕರ್ಷಕ ವೇತನ ಕೊಟ್ಟು ಈ ನಿರ್ಮಾಣ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಈವರ ಕಾರ್ಯದಂತೆ ಮುದ್ರಣ ಕಾಶಿ ಜೊತೆಗೆ ರಥ ಶಿಲ್ಪಿಗಳ ನಾಡು ಎನ್ನುವ ಕೀರ್ತಿ ಬರುತ್ತಿದೆ ಅಂತಾರೆ ಸ್ಥಳೀಯರು.


ಒಟ್ಟಿನಲ್ಲಿ ಗದಗ ಜಿಲ್ಲೆಗೆ ಮೊದಲನಿಂದಲೂ ಒಂದು ವಿಶೇಷ ಹೆಸರು ಇದೆ. ಹತ್ತಿ ಉದ್ಯಮದಲ್ಲಿ ಹೆಸರನ್ನ ಪಡೆದಿತ್ತು. ಇಂತಹ ಹಿರಿಮೆಗಳ ನಡುವೆ ಕಲಾವಿದರ ಬೀಡಾಗಿದೆ. ಇಂತಹ ಭ್ರಹ್ಮರಥಗಳ ನಿರ್ಮಾಣದ ಮೂಲಕ ಗದಗ ನಗರಕ್ಕೆ ಮತ್ತೊಂದು ಗರಿಮೆ ತಂದುಕೊಡ್ತಿದ್ದಾರೆ. ಗದಗ ನಗರದಲ್ಲೊಂದು ಹೊಸ ಕಲಾ ಕ್ರಾಂತಿಗೆ ಹೆಸರಾಗಿದ್ದಾರೆ ಈ ಸಹೋದರರು.

First published: