ಹುಲಕೋಟಿ ಗ್ರಾಮ ದೇಶಕ್ಕೆ ನಂಬರ್‌ ಒನ್; ಕೇಂದ್ರ ಸರ್ಕಾರದ ಅಂತ್ಯೋದಯ ಸಮೀಕ್ಷೆಯಲ್ಲಿ ನಂಬರ್‌ ಶ್ರೇಣಿ

ಕೇಂದ್ರ ಸರ್ಕಾರದ ಅಂತ್ಯೋದಯ ಸಮೀಕ್ಷೆ 2020 ರ ಸಾಲಿನಲ್ಲಿ, 141 ಪ್ರಶ್ನಾವಳಿಯ ಒಟ್ಟು 100 ಅಂಕಗಳ ಪೈಕಿ‌ ಗರಿಷ್ಠ 90 ಅಂಕಗಳನ್ನು ಪಡೆದುಕೊಂಡು ದೇಶದಲ್ಲಿ ನಂಬರ್‌ ಒನ್ ಸ್ಥಾನವನ್ನು ಪಡೆದುಕೊಂಡಿದೆ

ಕೇಂದ್ರ ಸರ್ಕಾರದ ಅಂತ್ಯೋದಯ ಸಮೀಕ್ಷೆ 2020 ರ ಸಾಲಿನಲ್ಲಿ, 141 ಪ್ರಶ್ನಾವಳಿಯ ಒಟ್ಟು 100 ಅಂಕಗಳ ಪೈಕಿ‌ ಗರಿಷ್ಠ 90 ಅಂಕಗಳನ್ನು ಪಡೆದುಕೊಂಡು ದೇಶದಲ್ಲಿ ನಂಬರ್‌ ಒನ್ ಸ್ಥಾನವನ್ನು ಪಡೆದುಕೊಂಡಿದೆ

ಕೇಂದ್ರ ಸರ್ಕಾರದ ಅಂತ್ಯೋದಯ ಸಮೀಕ್ಷೆ 2020 ರ ಸಾಲಿನಲ್ಲಿ, 141 ಪ್ರಶ್ನಾವಳಿಯ ಒಟ್ಟು 100 ಅಂಕಗಳ ಪೈಕಿ‌ ಗರಿಷ್ಠ 90 ಅಂಕಗಳನ್ನು ಪಡೆದುಕೊಂಡು ದೇಶದಲ್ಲಿ ನಂಬರ್‌ ಒನ್ ಸ್ಥಾನವನ್ನು ಪಡೆದುಕೊಂಡಿದೆ

  • Share this:
ಗದಗ: ತಾಲೂಕಿನ ಹುಲಕೋಟಿ ಗ್ರಾಮ ಹೈಟೆಕ್ ನಗರಗಳಿಗೆ ಸವಾಲ್ ಹಾಕುವಷ್ಟು ಅಭಿವೃದ್ಧಿಯಾಗಿದೆ. ಶುದ್ಧ ಕುಡಿಯುವ ನೀರು, ಒಳ ಚರಂಡಿ ವ್ಯವಸ್ಥೆ, ಶಾಲೆ ಸೇರಿದಂತೆ ಮೂಲ ಸೌಕರ್ಯಗಳನ್ನು ನೀಡಿ,  ಇಡೀ ದೇಶವೇ ಒಂದು ಸಾರಿ ತಿರುಗಿ ನೋಡುವಂತೆ ಅಭಿವೃದ್ಧಿ ಕಂಡಿದೆ. ಹಾಗಾಗಿಯೇ ಈ ಗ್ರಾಮ ಈವಾಗ ದೇಶದ ನಂಬರ್‌ ಒನ್ ಗ್ರಾಮ ಎನ್ನುವ ಕೀರ್ತಿಗೆ ಪಾತ್ರವಾಗಿದೆ. ಅಚ್ಚುಕಟ್ಟಾದ ರಸ್ತೆಗಳು, ಸರ್ವಧರ್ಮ ಮುಕ್ತಿ ಮಂದಿರ. ಇಡೀ ಗ್ರಾಮಕ್ಕೆ ಒಳ ಚರಂಡಿ ವ್ಯವಸ್.. ಶುದ್ಧ ಕುಡಿಯುವ ನೀರಿನ ಘಟಕಗಳು. ಹೈಟೆಕ್ ಜೀವನ ಶೈಲಿ ಅಳವಡಿಸಿಕೊಂಡ ಗ್ರಾಮಸ್ಥರು ಈ ಎಲ್ಲಾ ದೃಶ್ಯಗಳು ಈ ಗ್ರಾಮದಲ್ಲಿ ಕಂಡು ಬರುತ್ತಿದ್ದು, ಇದು ಹಳ್ಳಿಯೋ ನಗರವೋ ಎಂಬ ಅನುಮಾನ ಶುರುವಾಗುವುದು ಖಂಡಿತ. ಆ ರೀತಿ ಗ್ರಾಮದ ಅಭಿವೃದ್ಧಿಯಾಗಿದೆ.  ತಾಲೂಕಿನ ಹುಲಕೋಟಿ ಗ್ರಾಮಕ್ಕೆ ಅಭಿವೃದ್ಧಿಯ ಹೊಳೆ ಹರಿಯುತ್ತಿದೆ ಸರ್ಕಾರ ನೀಡುವ ಅನುದಾನವನ್ನು ಸರಿಯಾಗಿ ಬಳಸಿಕೊಂಡು ಅಚ್ಚುಕಟ್ಟಾಗಿ ಗ್ರಾಮವನ್ನು ಕಟ್ಟುವ ಕೆಲಸ ಮಾಡಲಾಗಿದೆ. ಹಾಗಾಗಿಯೇ ಇದು ಈವಾಗ ಇಡೀ ದೇಶದ ಗಮನವನ್ನು ಸೆಳೆಯುತ್ತಿದೆ.ಅಂದಹಾಗೆ ಗ್ರಾಮೀಣ ಜನರ ಆದಾಯ ಅವರ ಜೀವನ ಮಟ್ಟವನ್ನು ಹೆಚ್ವಿಸುವ ನಿಟ್ಟಿನಲ್ಲಿ ಗ್ರಾಮ ಪಂಚಾಯತಿಗಳು ಕೈಗೊಂಡ ಕ್ರಮಗಳನ್ನು ಆಧರಿಸಿ ರ್ಯಾಂಕಿಂಗ್ ನೀಡಲಾಗುತ್ತದೆ. ಕೇಂದ್ರ ಸರ್ಕಾರದ ಅಂತ್ಯೋದಯ ಸಮೀಕ್ಷೆ 2020 ರ ಸಾಲಿನಲ್ಲಿ, 141 ಪ್ರಶ್ನಾವಳಿಯ ಒಟ್ಟು 100 ಅಂಕಗಳ ಪೈಕಿ‌ ಗರಿಷ್ಠ 90 ಅಂಕಗಳನ್ನು ಪಡೆದುಕೊಂಡು ದೇಶದಲ್ಲಿ ನಂಬರ್‌ ಒನ್ ಸ್ಥಾನವನ್ನು ಪಡೆದುಕೊಂಡಿದೆ. ಹೀಗಾಗಿ ನಂಬರ್‌ ಸ್ಥಾನ ಪಡೆಯಲು ಶ್ರಮಿಸಿದ ಎಲ್ಲಾ ಸದಸ್ಯರು ಹಾಗೂ ಶಾಸಕರಿಗೆ ಅಭಿನಂದನೆ ಹೇಳುತ್ತಾರೆ ಅಭಿವೃದ್ಧಿ ಅಧಿಕಾರಿ ಎಫ್ ಎಸ್ ಮುತ್ತಲಗೇರಿ ಅವರು.ಹುಲಕೋಟಿ ಗ್ರಾಮದಲ್ಲಿ ಸುಮಾರು 10 ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಹೊಂದಿದ್ದು, ಮೂರು ಸಾವಿರ ಕುಟುಂಬಗಳು ವಾಸವಾಗಿವೆ. ಗ್ರಾಮದಲ್ಲಿ 6 ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಅಳವಡಿಸಲಾಗಿದೆ. ಇಡೀ ರಾಜ್ಯದಲ್ಲಿ ಪ್ರಥಮ ಭಾರಿಗೆ 42 ಕಿಲೋಮೀಟರ್ ಉದ್ದದ ಒಳ ಚರಂಡಿ ವ್ಯವಸ್ಥೆ ಮಾಡಲಾಗಿದೆ. ಒಳ ಚರಂಡಿಯ ತ್ಯಾಜ್ಯ ಹಾಗೂ ಕಲುಷಿತ ನೀರನ್ನು ಫಿಲ್ಟರ್ ಮಾಡಿ ಕೃಷಿ ಜಮೀನಿಗೆ ಬಳಸಲಾಗುತ್ತದೆ. ಇನ್ನು, ಗ್ರಾಮದಲ್ಲಿ ಸರ್ವಧರ್ಮ ಮುಕ್ತಿವನ ನಿರ್ಮಾಣ ಮಾಡಲಾಗಿದ್ದು, ಇದು ಕೂಡಾ ಇಡೀ ದೇಶಕ್ಕೆ ಮಾದರಿಯಾಗಿದೆ.

ಇದನ್ನು ಓದಿ: ಯಡಿಯೂರಪ್ಪ ಅವರೇ ನಮ್ಮ ಮುಖ್ಯಮಂತ್ರಿ ಎಂಬ ಮಾತು ಶಾಸಕರಿಂದ ಬರಬೇಕು; ರಾಮದಾಸ್

ಇಡೀ ಗ್ರಾಮದಲ್ಲಿ ಅಚ್ಚುಕಟ್ಟಾದ ರಸ್ತೆಗಳನ್ನು ನಿರ್ಮಾಣ ಮಾಡಲಾಗಿದ್ದು, ವಸತಿ ಯೋಜನೆಯಲ್ಲಿ ಮನೆಗಳನ್ನು ನಿರ್ಮಾಣ ಮಾಡಿಕೊಡಲಾಗಿದೆ. ಶೈಕ್ಷಣಿಕವಾಗಿ ಸರಕಾರಿ ಶಾಲೆ ಸೇರಿದಂತೆ ಖಾಸಗಿ ಶಿಕ್ಷಣ ಸಂಸ್ಥೆಗಳ‌ ಮೂಲಕ ಗುಣಮಟ್ಟದ ಶಿಕ್ಷಣವನ್ನು ನೀಡಲಾಗುತ್ತಿದೆ. ಉದ್ಯೋಗ ಖಾತ್ರೆ ಯೋಜನೆ ಅಡಿಯಲ್ಲಿ ಉದ್ಯೋಗವಕಾಶಗಳನ್ನು ನೀಡಲಾಗುತ್ತಿದೆ. ಎಲ್ಲಾ ಸದಸ್ಯರ ಸತತ ಪರಿಶ್ರಮ ಹಾಗೂ ಗ್ರಾಮಸ್ಥರ ಪ್ರೋತ್ಸಾಹದಿಂದ ನಂಬರ್‌ ಒನ್ ಸ್ಥಾನ ಬಂದಿರೋದುರು ಖುಷಿ ತಂದಿದೆ ಎನ್ನುತ್ತಾರೆ ಗ್ರಾಮಸ್ಥ ಮೋಹನ್ ಅವರು.

ಕೇಂದ್ರ ಸರ್ಕಾರದ ಸಮೀಕ್ಷೆಯಲ್ಲಿ ಈ ಗ್ರಾಮ ಎರಡು ಬಾರಿ ಐದನೇಯ ಸ್ಥಾನವನ್ನು ಪಡೆದುಕೊಂಡಿತ್ತು. ಆದ್ರೆ, ಈ ಬಾರಿ ಒಂದನೇ ಸ್ಥಾನ ಪಡೆದುಕೊಳ್ಳುವ ಮೂಲಕ ನಂಬರ್‌ ಒನ್ ಸ್ಥಾನಕ್ಕೆ ಏರಿದೆ. ಹಾಗೇ ದೇಶದ ಟಾಪ್‌ 10 ಗ್ರಾಮ ಪಂಚಾಯತಿಗಳ ಪೈಕಿ ಬೆಳಗಾವಿ ಜಿಲ್ಲೆಯ ಎರಡು ಗ್ರಾಮ ಪಂಚಾಯತಿ ಸ್ಥಾನ ಪಡೆದುಕೊಂಡಿವೆ. ಆದ್ರೆ ಗದಗ ಜಿಲ್ಲೆಯ ಈ ಹುಲಕೋಟಿ ಗ್ರಾಮ,  ಈವಾಗ ದೇಶದ ನಂಬರ್‌ ಒನ್ ಗ್ರಾಮ ಎಂದು ಕೀರ್ತಿಗೆ ಪಾತ್ರವಾಗಿದ್ದು, ರಾಜ್ಯಕ್ಕೆ ಸಂತಸ ತಂದಿದೆ.

(ವರದಿ: ಸಂತೋಷ ಕೊಣ್ಣೂರ)
Published by:Seema R
First published: