ಕೊರೋನಾ ಜೊತೆ ನೊಣಗಳ ಕಾಟಕ್ಕೆ ಹೈರಾಣದ ಗದಗದ ಹರ್ತಿ ಗ್ರಾಮಸ್ಥರು

ನೊಣಗಳ ಕಾಟ

ನೊಣಗಳ ಕಾಟ

ಒಂದಡೆ ಕೊರೋನಾ ಹಾವಳಿ, ಮತ್ತೊಂದಡೆ ನೊಣಗಳ ಹಾವಳಿಯಿಂದ ಅನಾರೋಗ್ಯಕ್ಕೆ ಒಳಗಾಗಿ ಇಲ್ಲಿನ ಜನರು ಸಂಕಷ್ಟ ಅನುಭವಿಸುವಂತೆ ಆಗಿದೆ.

  • Share this:

ಗದಗ (ಜೂ. 22):  ಗದಗ ತಾಲೂಕಿನ ಹರ್ತಿ ಗ್ರಾಮದ ಜನ ಏನು ತಪ್ಪು ಮಾಡಿದಾರೋ ಗೊತ್ತಿಲ್ಲ. ಹಳ್ಳಿಯಲ್ಲಿ ನೊಣಗಳ ಹಿಂಡುಗಳು ಲಗ್ಗೆ ಇಟ್ಟು ನಿತ್ಯ ಕಾಟ ಕೊಡ್ತಿವೆ. ನೊಣಗಳ ಕಾಟಕ್ಕೆ ಗ್ರಾಮಸ್ಥರು ನಿತ್ಯ ನರಕಯಾತನೆ ಅನುಭವಿಸುತ್ತಿದ್ದಾರೆ. ಮನೆ ಒಳಗೆ, ಹೊರಗೆ ಎಲ್ಲಿ ಕೂತರು ಸಮಾಧಾನವೇ ಇಲ್ಲದಂತಾಗಿದೆ. ಊಟ, ನಿದ್ರೆ, ವಿಶ್ರಾಂತಿಗೂ ಬಿಡದೆ ಕಾಟ ಕೊಡುತ್ತಿವೆ ಈ ನೊಣಗಳು. ಅಪರಿಮಿತ ಸಂಖ್ಯೆಯ ಈ ನೊಣಗಳ ಹಾವಳಿಂದ ಗ್ರಾಮದಲ್ಲಿ ಸಾಂಕ್ರಾಮಿಕ ರೋಗದ ಭಯ ಹುಟ್ಟಿಕೊಂಡಿದೆ. ಹರ್ತಿ ಗ್ರಾಮದಲ್ಲಿ ಊರ ಪಕ್ಕದ ಕೋಳಿ ಫಾರ್ಮ್‌ನಿಂದ ನೊಣಗಳ ಸಂಖ್ಯೆ ಹೆಚ್ಚಿದ್ದು, ಇದರಿಂದ ಜನರ ನೆಮ್ಮದಿ ಹಾಳಾಗಿದೆ. ಇಲ್ಲಿ ಕೋಳಿ ಫಾರ್ಮ್ ಆಗಿ ನಾಲ್ಕೈದು ವರ್ಷಗಳಿಂದ ನೊಣಗಳ ಕಾಟಕ್ಕೆ ಜನ ಸುಸ್ತಾಗಿದ್ದಾರೆ.


ಇಲ್ಲಿನ ಊರು ಹೊರವಲಯದಲ್ಲಿರುವ ಆಂಧ್ರ ಪ್ರದೇಶ ಮೂಲದ ಚಂದ್ರಶೇಖರ್ ರಾವೀ ಎಂಬವರು ಇಲ್ಲಿ ಕೋಳಿ ಫಾರ್ಮ್ ಮಾಡಿದ್ದಾರೆ. ಈ ಕೋಳಿ ಫಾರ್ಮ್‌ನಲ್ಲಿ ಸ್ವಚ್ಛತೆ, ಔಷಧ ಸಿಂಪಡಣೆ, ತ್ಯಾಜ್ಯ ವಿಲೇವಾರಿ ಸರಿಯಾದ ನಿರ್ವಹಣೆ ಇಲ್ಲದ ಕಾರಣ ನೊಣಗಳು ಹೆಚ್ಚಾಗಿ ಹರ್ತಿ ಜನ್ರರನ್ನು ಕಾಡತೊಡಗಿವೆ. ಅಷ್ಟೇ ಅಲ್ಲದೇ ಸತ್ತ ಕೋಳಿಗಳನ್ನು ಎಲ್ಲೆಂದರಲ್ಲಿ ಬಿಸಾಡುತ್ತಾರೆ ಎಂಬ ಆರೋಪ ಕೇಳಿ ಬರುತ್ತಿದೆ. ಇತ್ತೀಚಿಗೆ ಅತೀ ಹೆಚ್ಚು ನೊಣಗಳು ಉದ್ಭವಿಸಿ ಜನರ ನಿದ್ದೆಗೆಡಿಸಿದೆ.


ಒಂದಡೆ ಕೊರೋನಾ ಹಾವಳಿ, ಮತ್ತೊಂದಡೆ ನೊಣಗಳ ಹಾವಳಿಯಿಂದ ಅನಾರೋಗ್ಯಕ್ಕೆ ಒಳಗಾಗಿ ಇಲ್ಲಿನ ಜನರು ಸಂಕಷ್ಟ ಅನುಭವಿಸುವಂತೆ ಆಗಿದೆ.  ಮಾವು, ಬೇವು ಹಣ್ಣಿನ ಸೀಜನ್‌ನಲ್ಲಿ ನೊಣಗಳು ಹೆಚ್ಚು ಇರುತ್ತವೆ. ಆದರೆ ಮಳೆಗಾಲದಲ್ಲೂ ಎಲ್ಲಿ ಕೂತರು ಸಮಾಧಾನ ಆಗ್ತಿಲ್ಲ. ಅಡಿಗೆ ಮಾಡಿ ಊಟ ಮಾಡಲಿಕ್ಕೂ ಆಗುತ್ತಿಲ್ಲ, ನೀರು ಕುಡಿಯಲಾಗ್ತಿಲ್ಲಾ. ಅಂಗಡಿ, ಹೋಟೆಲ್ ನವರ ಪರಸ್ಥಿತಿ ನೊಣ ಹೊಡೆಯುವುದೇ ಕಾಯಕವಾಗಿದೆ.


ಮಕ್ಕಳು, ವೃದ್ಧರು ಪರಸ್ಥಿತಿ ಕೇಳತೀರದು. ಜಾನುವಾರುಗಳ ಮೇಲು ಜೇನು ಹುಳುವಿನಂತೆ ಈ ನೊಣಗಳು ದಾಳಿ ಮಾಡುತ್ತಿವೆ.  ಇದರಿಂದ ಗ್ರಾಮದಲ್ಲಿ ಅನೇಕರು ವಾಂತಿ, ಬೇಧಿ, ಜ್ವರ ಹೀಗೆ ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ. ಬೇಸಿಗೆನಲ್ಲಿ ಗಾಳಿ ಬೀಸಿಕೊಂಡಂತೆ ಮಳೆಗಾಲದಲ್ಲೂ ನೊಣಗಳ ಕಾಟಕ್ಕೆ ಗಾಳಿ ಬೀಸಿಕೊಳ್ಳಬೇಕಾದ ಪರಸ್ಥಿತಿ ಇವರದ್ದಾಗಿದೆ.


ಇದನ್ನು ಓದಿ: ರಾಜ್ಯದಲ್ಲಿ ಕೋವಿಡ್​ ಮೂರನೇ ಅಲೆ ಸೋಂಕಿಗೆ 3.4 ಲಕ್ಷ ಮಕ್ಕಳು ತುತ್ತಾಗುವ ಸಾಧ್ಯತೆ


ಕೊರೋನಾ ಸಂದರ್ಭದಲ್ಲಿ ಮಕ್ಕಳನ್ನು ಕಟ್ಟಿಕೊಂಡು ವಾಸಿಸದೇ ಊರು ತೊರೆಯುವ ಸಂದರ್ಭ ಬಂದಿದೆ. ಅಧಿಕಾರಿಗಳು ಇತ್ತಕಡೆ ಗಮನ ಹರಿಸಿ, ಕೋಳಿ ಫಾರ್ಮ್‌ಗಳನ್ನು ಬಂದ್‌ಮಾಡಿ, ಜನ್ರ ಆರೋಗ್ಯದ ಮೇಲೆ ಬೀರುವ ದುಷ್ಪರಿಣಾಮ ಹಾಗೂ ತೊಂದರೆಗಳನ್ನು ತಪ್ಪಿಸಬೇಕು ಅಂತಿದ್ದಾರೆ ಸ್ಥಳಿಯರು.


ಗ್ರಾಮ ಪಂಚಾಯತ ನಿಂದ ಕೋಳಿ ಫಾರ್ಮ್‌ಗೆ ಕೇವಲ ಸೂಚನೆ ನೀಡ್ತಾರೆ, ಆದ್ರೆ ಯಾವುದೆ ಕ್ರಮ ಕೈಗೊಂಡಿಲ್ಲ ಎಂಬ ಆರೋಪ ಕೇಳಿಬರುತ್ತಿದೆ. ಜನ್ರಿಗೆ ಮಾರಕವಾಗುವ ಈ ಕೋಳೀ ಫಾರ್ಮ್‌ಗಳನ್ನ ಬಂದ್ ಮಾಡಬೇಕು. ಕೊರೋನಾ ಸಂದರ್ಭದಲ್ಲಿ ಜನ-ಜಾನುವಾರಗಳ ಆರೋಗ್ಯದ ಬಗ್ಗೆ ಕಾಳಜಿ ವಹಿಸಲಿ ಎಂಬುದು ಸ್ಥಳೀಯರ ಒತ್ತಾಯವಾಗಿದೆ.
ಇದುವರೆಗೆ ಗ್ರಾಮ ಪಂಚಾಯತ್ ನಿಂದ ಹತ್ತಾರು ಬಾರಿ ಎಚ್ಚರಿಕೆಯ ನೋಟಿಸ್ ಸಹ ನೀಡಲಾಗಿದೆ. ಆದ್ರು ಕೋಳಿ ಫಾರ್ಮ್ ಮಾಲೀಕರು ಎಚ್ಚೆತ್ತಗೊಂಡಿಲ್ಲ. ಹೀಗಾಗಿ ಇನ್ನು ಕೋಳಿ ಫಾರ್ಮ್ ಮಾಲೀಕರು ಎಂಟು ದಿನಗಳ ಕಾಲಾ ಅವಕಾಶ ಕೊಡಿ ವೈದ್ಯರ ಸಲಹೆ ಪಡೆದು ಉತ್ತಮ ಗುಣಮಟ್ಟದ ಔಷಧೀಯ ಸಿಂಪಡಣೆ ಮಾಡಿ ನೊಣಗಳ ಹಾಳಿ ತಡೆಯುತ್ತೇವೆ ಅಂತಿದ್ದಾರೆ.


(ವರದಿ: ಸಂತೋಷ ಕೊಣ್ಣೂರ)

Published by:Seema R
First published: