HOME » NEWS » State » GADAG GOVERNMENT SCHOOL GIRLS BUILD BOAT FROM WASTE BOTTLE SKG SESR

ನಿರುಪಯುಕ್ತ ಬಾಟಲ್​ ಮೂಲಕ ಜೀವ ರಕ್ಷಕ ದೋಣಿ; ಗದಗದ ಸರ್ಕಾರಿ ಶಾಲಾ ಮಕ್ಕಳ ಯಶಸ್ಸಿನ ಕಥೆ!

ಅಲೆಮಾರಿ ಮಕ್ಕಳ ಮನದಲ್ಲಿ ಈ ತೇಲುವ ದೋಣಿ ಮಾಡುವ ವಿಚಾರ ಬಂದಿದ್ದು ಹೇಗೆ ಎನ್ನುವ ಕಥೆ ಬಲು ರೋಚಕವಾಗಿದೆ.

news18-kannada
Updated:March 26, 2021, 10:03 PM IST
ನಿರುಪಯುಕ್ತ ಬಾಟಲ್​ ಮೂಲಕ ಜೀವ ರಕ್ಷಕ ದೋಣಿ; ಗದಗದ ಸರ್ಕಾರಿ ಶಾಲಾ ಮಕ್ಕಳ ಯಶಸ್ಸಿನ ಕಥೆ!
ದೋಣಿ ಆವಿಷ್ಕಾರಿಸಿದ ಶಾಲಾ ಮಕ್ಕಳು
  • Share this:
ಗದಗ (ಮಾ. 26) : ಶಾಲೆ ಅಂದ್ರೆ ಮೂಗು ಮುರಿಯೋ ಜನ್ರೇ ಹೆಚ್ಚು. ಅಲ್ಲಿ ಶಿಕ್ಷಕರು ಸರಿಯಾಗಿ ಪಾಠ ಮಾಡಲ್ಲ. ಸೌಲಭ್ಯ ಇರಲ್ಲ ಅನ್ನೋ ಆರೋಪ ಸಾಮಾನ್ಯ. ಆದ್ರೆ, ಆ ಸರ್ಕಾರಿ ಶಾಲೆಯ ಮಕ್ಕಳ ಅದ್ಭುತ ಆವಿಷ್ಕಾರ ಖಾಸಗಿ ಶಾಲೆಗಳು ನಾಚಿಸುವಂತಿದೆ. ಹೌದು ಸ್ಲಂ ಮಕ್ಕಳ ಈ ಸಾಧನೆ ಎಲ್ಲರನ್ನೂ ಬೆರಗು ಮಾಡುವಂತಿದೆ.  ಗದಗ ನಗರದ ಶ್ರೀರಾಮ ನಗರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳ ಸಾಧನೆ ಎಲ್ಲರನ್ನು ದಂಗು ಬಡಿಸಿದೆ. ಹೀಗೆ ನೀರಿನಲ್ಲಿ ತೇಲುತ್ತಿರೋ ದೋಣಿ ಮಾಡಿದ್ದು, ಇದೇ ಸರ್ಕಾರಿ ಶಾಲೆಯ ವಿದ್ಯಾರ್ಥಿನಿಯರಾದ ಸರೋಜಾ ಡೊಕ್ಕನ್ನವರ. ಲಕ್ಷ್ಮೀ ವಿಭೂತಿ ವೇಸ್ಟ್ ಬಾಟಲ್ ಗಳಿಂದ ತೇಲವ ದೋಣಿ ಮಾಡುವ ಮೂಲಕ ಸಾಧನೆ ಮಾಡಿದ್ದಾರೆ. ಆದರೆ, ಈ ಅಲೆಮಾರಿ ಮಕ್ಕಳ ಮನದಲ್ಲಿ ಈ ತೇಲುವ ದೋಣಿ ಮಾಡುವ ವಿಚಾರ ಬಂದಿದ್ದು ಹೇಗೆ ಎನ್ನುವ ಕಥೆ ಬಲು ರೋಚಕವಾಗಿದೆ.

ಆರನೇಯ ತರಗತಿಯಲ್ಲಿ ಓದುವ ಸರೋಜಾ ನಗರದ ಭೀಷ್ಮ ಕೆರೆಯಲ್ಲಿ ಖಾಲಿ ಬಾಟಲಿಗಳು ತೇಲಾಡುವುದನ್ನು ನೋಡಿದ್ದಾಳೆ. ಆ ನಿರುಪಯುಕ್ತ ಬಾಟಲ್ ಗಳಿಂದ ದೋಣಿ ನಿರ್ಮಾಣ ಮಾಡಿದರೆ ಚನ್ನಾಗಿ ಇರುತ್ತದೆ ಎಂದು  ವಿಜ್ಞಾನ ಶಿಕ್ಷಕ ಜಿ ಬಿ ಹಾವನೂರು ಅವರಿಗೆ ಹೇಳಿದ್ದಾಳೆ. ಅವರು ಸಹ ಈ ಕುರಿತು ಅಧ್ಯಾಯನ ಮಾಡಿ ವಿದ್ಯಾರ್ಥಿಗಳಿಗೆ ತಿಳಿಸಿದ್ದಾರೆ.ಆಗ ಶಿಕ್ಷಕರ ಮಾರ್ಗದರ್ಶನದಲ್ಲಿ ಸುಮಾರು 1 ಲೀಟರ್​ನ 195 ಖಾಲಿ ಕುಡಿಯವ ನೀರಿನ ಬಾಟಲ್ ಗಳನ್ನು ಸಂಗ್ರಹ ಮಾಡಿದ್ದಾರೆ. ಬಿದರಿನ ಕಟ್ಟಿಗೆ ಬಳಸಿಕೊಂಡು ಉದ್ದ ಮೂರು ಅಡಿ ಅಗಲ ಮೂರು ಅಡಿ ಆಕಾರದಲ್ಲಿ ತೇಲುವ ದೋಣಿ ನಿರ್ಮಾಣ ಮಾಡಿದ್ದಾರೆ. ಈ ದೋಣಿ ಸುಮಾರು 90 ಕೆಜಿ ಭಾರ ಹೊತ್ತು ನೀರಿನಲ್ಲಿ ತೆಲುತ್ತದೆ. ವಿದ್ಯಾರ್ಥಿಗಳು ಪೂರ್ಣ ಮಾಡಿದ ಬಳಿಕ  ನಗರದ ಜಿಲ್ಲಾ ಕ್ರೀಡಾಂಗಣದ ಈಜುಕೊಳದಲ್ಲಿ ಶಿಕ್ಷಕರು ಹಾಗೂ ಮಕ್ಕಳು ದೋಣಿಯಲ್ಲಿ ಕುಳಿತು ಪ್ರಯೋಗ ಮಾಡಿ ಯಶಸ್ವಿಯಾಗಿದ್ದಾರೆ.

ಜಿಲ್ಲೆಯಲ್ಲಿ ಮಲಪ್ರಭಾ, ಬೆಣ್ಣೆ ಹಳ್ಳ ಹಾಗೂ ತುಂಗಭದ್ರಾ ನದಿ ಉಕ್ಕಿ ಹರಿಯುವಾಗ ಪ್ರವಾಹ ಉಂಟಾಗುತ್ತದೆ. ಅಂತಹ ವೇಳೆಯಲ್ಲಿ ಇಂತಹ ಕಡಿಮೆ ವೆಚ್ಚದ ದೋಣಿ ನಿರ್ಮಾಣ ಮಾಡಿಕೊಂಡು ಜೀವವನ್ನು ರಕ್ಷಣೆ ಮಾಡಿಕೊಳ್ಳಬಹುದು ಎನ್ನುವ ವಿದ್ಯಾರ್ಥಿಗಳ ಯೋಜನೆಗೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ.

(ವರದಿ: ಸಂತೋಷ ಕೊಣ್ಣೂರ)
Published by: Seema R
First published: March 26, 2021, 9:55 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories