ಗದಗ (ಜೂ. 23): ಕಳೆದೆರಡು ವರ್ಷಗಳಿಂದ ಕೊರೊನಾ ಲಾಕ್ಡೌನ್ ಆದ ಪರಿಣಾಮ ಜನರ ಆರ್ಥಿಕ ಮಟ್ಟ ಬಹಳಷ್ಟು ಕುಸಿದಿದೆ. ಇದರ ಜೊತೆ ರೈತಾಪಿ ಸಮಸ್ಯೆ ಅವರನ್ನು ಮತ್ತಷ್ಟ ಹೈರಾಣು ಮಾಡಿದೆ. ಈ ನಡುವೆ ಈಗ ಪೆಟ್ರೋಲ್ ಹಾಗೂ ಡಿಸೇಲ್ ದರ ಗಗನಕ್ಕೆ ಏರಿರುವುದ ಗಾಯದ ಮೇಲೆ ಬರೆ ಎಳೆದಂತೆ ಆಗಿದೆ. ಮುಂಗಾರು ಆರಂಭವಾಗಿದ್ದು, ಎಲ್ಲೆಡೆ ರೈತರ ಕೃಷಿ ಚಟುವಟಿಕೆಗಳನ್ನು ಆರಂಭಿಸಿದ್ದಾರೆ. ಜಿಲ್ಲೆಯಲ್ಲಿ ರೈತರ ಕೃಷಿ ಚಟುವಟಿಕೆಗಳು ಗರಿಗೆದರಿದೆ. ಉಳುಮೆ ಬಿತ್ತನೆಗೆ ಮುಂದಾಗಿರುವ ರೈತರಿಗೆ ತೈಲ ಬೆಲೆ ಏರಿಕೆ ಬಿಸಿ ಮುಟ್ಟಿದೆ. ಇದರಿಂದ ಬಿತ್ತನೆ ಮಾಡಲು ಸಾಕಷ್ಟು ಸಮಸ್ಯೆ ಉಂಟಾಗುತ್ತಿದೆ. 100 ಗಡಿಯತ್ತ ಪೆಟ್ರೋಲ್ ದರ ಇರುವ ಹಿನ್ನಲೆ ಆರ್ಥಿಕ ಸಂಕಷ್ಟಕ್ಕೆ ಒಳಗಾದ ರೈತರು ನಗಕ್ಕೆ ಹೆಗಲುಕೊಟ್ಟು ತಾವೇ ಬಿತ್ತನೆ ಮಾಡುವಂತಹ ಪರಿಸ್ಥಿತಿ ಎದುರಾಗಿದೆ.
ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ರಾಮಗಿರಿ ಗ್ರಾಮದ ಅನ್ನದಾತರ ಸಂಕಷ್ಟ ಹೇಳತೀರದಾಗಿದೆ. ಯಾವುದೇ ಎತ್ತು, ವಾಹನ ಸಹಾಯವಿಲ್ದೆ ರೈತರು ಬಿತ್ತನೆಗೆ ಮುಂದಾಗಿದ್ದಾರೆ. ಎತ್ತುಗಳನ್ನು ಉಳುಮೆ ಮಾಡಲು ದಿನಕ್ಕೆ ಎರಡು ಸಾವಿರ ರೂಪಾಯಿ ಕೇಳುತ್ತಾರೆ. ಟ್ರ್ಯಾಕ್ಟರ್ ವಾಹನ ಗಳ ಮೂಲಕ ಉಳುಮೆಗೆ 1500 ರೂ ಕೇಳುತ್ತಿದ್ದಾರೆ. ಬರುವ ಆದಾಯದಲ್ಲಿ ಇಷ್ಟೆಲ್ಲ ಖರ್ಚು ಮಾಡಿ ವ್ಯವಸಾಯ ಮಾಡಲು ಸಾಧ್ಯವಿಲ್ಲ. ಆಳು ಕಾಳುಗಳ ಕೂಲಿ ದರವೂ ದುಬಾರಿ ಆಗಿದ್ದು ನಮ್ಮ ಆರ್ಥಿಕಮಟ್ಟಕ್ಕೆ ತಕ್ಕಂತೆ ಕೃಷಿ ಮಾಡಲು ಸಾಧ್ಯವಾಗ್ತಿಲ್ಲ. ಸರಕಾರ ಪೆಟ್ರೋಲ್ ಡೀಸೆಲ್ ದರ ಇಳಿಕೆ ಮಾಡಬೇಕು.ಇಲ್ಲದೇ ಹೋದ್ರೆ ರೈತರು ವ್ಯವಸಾಯ ಮಾಡೋದು ಕಷ್ಟಕವಾಗುತ್ತೆ ಅಂತ ಅಳಲು ತೋಡಿಕೊಳ್ತಿದ್ದಾರೆ.
ಬಿತ್ತನೆ ಮಾಡಬೇಕು ಎಂದ್ರೆ ಜಾನುವಾರುಗಳು ಬೇಕು ಅವುಗಳು ಸಹ ಸರಿಯಾದ ಸಮಯಕ್ಕೆ ರೈತರಿಗೆ ಸಿಗುತ್ತಿಲ್ಲ ಬಾಡಿಗೆ ತರಬೇಕಾದ್ರೆ ದಿನಕ್ಕೆ ಎರಡು ಸಾವಿರ ರೂಪಾಯಿ ಕೊಡಬೇಕು. ಇರೋದೆ ಅಲ್ಪ ಸ್ವಲ್ಪ ಭೂ ಹೀಗಾಗಿ ನಾವೇ ನಗಕ್ಕೆ ಹೆಗಲು ಕೊಟ್ಟು ದಿನಕ್ಕೆ ಎಷ್ಟು ಆಗುತ್ತೇ ಅಷ್ಟು ಬಿತ್ತನೆ ಮಾಡುತ್ತಿದೇವೆ. ಸರ್ಕಾರಗಳು ದಿನ ದಿಂದ ದಿನಕ್ಕೆ ತೈಲ ಬೆಲೆ ಹಾಗೂ ಅಗತ್ಯ ವಸ್ತಗಳ ಬೆಲೆ ಏರಿಕೆ ಮಾಡೊಕೊಂಡು ಹೊಂಟಿದೆ ಇಂದ್ರಿಂದ ಖರೀದಿಸಲು ಆಗದಂತಹ ಪರಿಸ್ಥಿತಿ ಬಡ ರೈತರದಾಗಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರ ಕಣ್ಣು ತೆರೆದು ರೈತರ ಬಗ್ಗೆ ಕರುಣೆ ತೋರಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ. ಆದಷ್ಟು ಬೇಗಾ ಸರ್ಕಾರ ತೈಲ ಬೆಲೆ ಇಳಿಕೆ ಮಾಡಿದ್ರೆ ರೈತಾಪಿ ವರ್ಗಕ್ಕೆ ಬಹಳ ಅನುಕೂಲವಾಗುತ್ತೇ ಅಂತಿದ್ದಾರೆ.
ಇದನ್ನು ಓದಿ: ಜಮ್ಮು ಮತ್ತು ಕಾಶ್ಮೀರದ ಅಭಿವೃದ್ಧಿಗೆ ಕೇಂದ್ರ ಬದ್ಧ; ಪ್ರಧಾನಿ ಮೋದಿ ಭರವಸೆ
ಇನ್ನು ಪೆಟ್ರೋಲ್ ಡೀಸೆಲ್ ಬೆಲೆ ದುಬಾರಿಯಾಗಿದ್ದೆ ತಡ ಬಾಡಿಗೆ ಬೆಲೆ ದುಬಾರಿಯಾಗಿಬಿಟ್ತು. ಇನ್ನೇನ್ ಮಾಡೋದು ಅಂತ ಈ ಗ್ರಾಮದಲ್ಲಿ ಎಲ್ಲ ರೈತರು ಇದೇ ರೀತಿ ಮಾಡ್ತಿದ್ದಾರೆ. ಮೂರು ಮೂರು ಜನ ಬೆಳಿಗ್ಗೆ ಬಂದು ಬಿತ್ತೋ ನೇಗಲಕ್ಕೆ ಇಬ್ಬರು ಹೆಗಲುಕೊಟ್ಟು, ಒಬ್ಬ ಬಿತ್ತನೆ ಮಾಡ್ತಾನೆ. ಒಂದು ಎಕರೆ ಎರಡು ಮೂರು ದಿನ ಬಿತ್ತನೆ ಮಾಡ್ತಾರಂತೆ. ಇದರ ಜೊತೆಗೆ ನಮ್ಮ ಜೀವನವೂ ದುಸ್ಥರವಾಗಿದೆ. ಎಲ್ಲಾ ಬೆಲೆ ಏರಿಕೆಯಾಗಿದೆ. ಒಂದು ಕೇಜಿ ಬೇಳೆ ಎಣ್ಣಿ ಖರೀದಿ ಮಾಡ್ತಿದ್ದವರು ಈಗ ಅರ್ಧ ಕೇಜಿ ತೊಗೊಳ್ತಿದ್ದೇವೆ. ಹಿಂಗಾದರೆ ಮುಂದೆ ನಮ್ ಗತಿ ಏನು ಅಂತ ಅಳಲು ತೋಡಿಕೊಳ್ತಿದ್ದಾರೆ
ಒಟ್ಟಿನಲ್ಲಿ ಪೆಟ್ರೋಲ್ ಡೀಸೆಲ್ ಬೆಲೆ ಗಗನಕ್ಕೆ ತಲುಪುತ್ತಿದ್ದಂತೆ ಅದರ ಮೇಲೆ ಅವಲಂಭನೆಯಾಗಿರೋ ಕೃಷಿ ಬದುಕು ಸಹ ಅದೋಗತಿಗೆ ಹೋಗ್ತಿದೆ. ಚೆನ್ನಾಗಿ ಮಳೆಯಾಗಿದ್ದರೂ ಸಹ ಬಿತ್ತನೆ ಮಾಡದಂತ ಪರಿಸ್ಥಿತಿ ನಿರ್ಮಾಣವಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ