ಗದಗ (ಡಿ. 5): ಬಯಲು ಸೀಮೆಯನಾಡಾದ ಜಿಲ್ಲೆಯಲ್ಲಿ ಪ್ರಗತಿಪರ ರೈತನೊಬ್ಬ ಮಲೆನಾಡಿನ ವೈಭವ ಸೃಷ್ಟಿಸಿ ಎಲ್ಲರಲ್ಲಿಯೂ ಅಚ್ಚರಿ ಮೂಡಿಸಿದ್ದಾನೆ. ಹೇಮರಡ್ಡಿ ಭೂಮ್ಮಕನವರ ಪರಿಶ್ರಮದಿಂದ ಬರದ ಭೂಮಿ ಈಗ ಚಿನ್ನದ ಭೂಮಿಯಾಗಿದೆ. ಖಾಸಗಿ ಕಂಪನಿ ಉದ್ಯೋಗಿಯಾಗಿದ್ದ ಹೇಮರಡ್ಡಿ ಭೂಮ್ಮಕ್ಕನವರ 10 ವರ್ಷಗಳ ಕಾಲ ನಗರದ ಖಾಸಗಿ ಕಂಪನಿಯಲ್ಲಿ ಕಾರ್ಯನಿರ್ವಹಿಸಿದವರು. ಬಳಿಕ ಸ್ವಾವಲಂಬನೆಯ ಬದುಕು ಕಟ್ಟಿಕೊಳ್ಳಬೇಕು ಎಂದು ಹುದ್ದೆ ತೊರೆದಿದ್ದಾರೆ. ಅದರಲ್ಲಿಯೂ ಸಾಂಪ್ರಾದಾಯಿಕ ಸಾವಯವ ಕೃಷಿಯಲ್ಲಿ ಏನಾದರೂ ಸಾಧಿಸಬೇಕೆಂಬ ಛಲದಿಂದ ಬರದ ನಾಡಿನಲ್ಲಿ ತೋಟಗಾರಿಕೆ ಬೆಳೆ ಬೆಳೆದು ಲಕ್ಷಾಂತರ ರೂಪಾಯಿ ಆದಾಯದ ಮಾರ್ಗ ಕಂಡುಕೊಂಡಿದ್ದಾರೆ. ಈ ಮೂಲಕ ಅನೇಕರಿಗೆ ಸ್ಪೂರ್ತಿಯಾಗಿದ್ದಾರೆ.
ತಾಲೂಕಿನ ಅಸುಂಡಿ ಗ್ರಾಮದ ನಿವಾಸಿಯಾಗಿರುವ ಹೇಮರಡ್ಡಿ ಬಿಎ ಪದವೀಧರರು. ಓದು ಮುಗಿಸಿ ಪಟ್ಟಣದಲ್ಲಿ 10 ವರ್ಷ ಜೀವನ ಕಟ್ಟಿಕೊಂಡಿದ್ದರು. ಕೃಷಿಯಲ್ಲಿ ಏನಾದರು ಸಾಧನೆ ಮಾಡುವ ಹುಮ್ಮಸಿನಿಂದ ಸ್ವಗ್ರಾಮಕ್ಕೆ ಬಂದು ಕೃಷಿಯಲ್ಲಿ ತೊಡಗಿಕೊಂಡರು. ಮೊದಮೊದಲು ವಾಣಿಜ್ಯ ಬೆಳೆಗಳಾದ ಹತ್ತಿ,ಗೋವಿನ ಜೋಳ ಗೋಧಿ ಮೊದಲಾದ ಬೆಳೆಗಳನ್ನು ಬೆಳೆಯುತ್ತಿದ್ದರು. ವಾಣಿಜ್ಯ ಬೆಳೆಗಳಲ್ಲಿ ಹೆಚ್ಚಿನ ಲಾಭದಾಯಕವಿಲ್ಲ ಎಂದು ತೋಟಗಾರಿಕಾ ಬೆಳೆ ಬೆಳೆಯಲು ಮುಂದಾದರು.
ಈ ಹಿನ್ನಲೆ ತೋಟಗಾರಿಕೆ ಇಲಾಖೆಯ ಅಧಿಕಾರಿಗಳನ್ನು ಭೇಟಿಯಾಗಿ ಸಲಹೆ ಪಡೆದು, ಸಾಂಪ್ರದಾಯಕ ಸಾವಯುವ ಕೃಷಿಯ ಪದ್ದತಿಯನ್ನು ಅವಳವಡಿಸಿಕೊಳ್ಳಲು ಮುಂದಾದರು. ತಮ್ಮ ಆರು ಎಕರೆ ಜಮೀನಲ್ಲಿ ತೋಟಗಾರಿಕೆ ಬೆಳೆಯಾದ ಬಾಳೆ ಹಣ್ಣು ಬೆಳೆಯಲು ಆರಂಭಿಸಿದರು. ಕಳೆದ ವರ್ಷ ಆರು ಎಕರೆಗೆ 130 ಟನ್ ಇಳುವರಿ ತಗೆಯುವ ಮೂಲಕ ಸೈ ಎನ್ನಿಸಿಕೊಂಡರು. ಕಳೆದ ವರ್ಷ ಟನ್ ಬಾಳೆಗೆ 10-15 ಸಾವಿರ ರೂಪಾಯಿ ವರಿಗೆ ಮಾರಾಟವಾಗಿತ್ತು. ಹೀಗಾಗಿ ಕಳೆದ ವರ್ಷ ಹೇಮರಡ್ಡಿವರು 15 ಲಕ್ಷ ಆದಾಯ ಗಳಿಸಿದರು. ಕಡಿಮೆ ಖರ್ಚಿನಲ್ಲಿ ಅಧಿಕ ಲಾಭದಾಯಕ ಬೆಳೆಯಾಗಿರುವ ಬಾಳೆ ಹಣ್ಣು ಹೆಚ್ಚಿನ ಪ್ರಮಾಣದಲ್ಲಿ ಬೆಳೆಯಲು ಉತ್ಸಾಹ ತೋರಿಸಿದರು.
ಇದನ್ನು ಓದಿ: ಕಾವೇರಿ ಎಂಪೋರಿಯಂನಲ್ಲಿ ಪ್ರೊಬೇಷನರಿ ಅಧಿಕಾರಿಯಂತೆ ಕಲಿಕೆ ನಡೆಸಿರುವ ಡಿ. ರೂಪಾ
ಈ ವರ್ಷ ಸುಮಾರು 7 ಎಕರೆ ಜಮೀನಲ್ಲಿ ಸುಮಾರು 200 ಟನ್ ಗೂ ಅಧಿಕ ಇಳುವರಿ ತಗೆದಿದ್ದಾರೆ. ಈ ವರ್ಷ ಕೊರೋನಾ ಹಾವಳಿಯಿಂದ ಬಾಳೆಹಣ್ಣಿ ಮಾರುಕಟ್ಟೆಗೆ ಹೊಡೆತ ಬಿದ್ದಿದೆ. ಹೀಗಾಗಿ ಬಾಳೆಹಣ್ಣಿ ಬೆಳೆಗೆ ಮಾರುಕಟ್ಟೆಯಲ್ಲಿ ಬೆಲೆ ಕಡಿಮೆ ಇದೆ. ಒಂದು ಟನ್ ಬಾಳೆ ಹಣ್ಣಿಗೆ ಐದು ಸಾವಿರ ಮಾರಾಟವಾಗುತ್ತಿದೆ. ಹೀಗಾಗಿ ಐದು ಸಾವಿರ ಮಾರಾಟವಾದ್ರು ನಮ್ಗೆ 7-8 ಲಕ್ಷ ರೂಪಾಯಿ ಆದಾಯ ಬರಲಿದೆ ಎನ್ನುತ್ತಾರೆ
ಜಿ-9 ಎಂಬ ಬನಾನಾ ತಳಿಯನ್ನು ಎಕರೆಗೆ 1200 ಸಸಿಯಂತೆ ನಾಟಿ ಮಾಡಿದ್ದಾರೆ. ಅವರು ನಾಟಿ ಮಾಡುವ ವೇಳೆ ಸೊರಗು ರೋಗ, ಜಂತು ಬಾದೆ ಬರದಂತೆ ತಡೆಯಲು ಪೋರೇಟ್, ಬೇವಿನ ಹಿಂಡಿ,ತಿಪ್ಪೆ ಗೊಬ್ಬರ ಅಧಿಕ ಪ್ರಮಾಣದಲ್ಲಿ ಬಳಿಸಿದ್ದಾರೆ. ಇದ್ದರಿಂದ ಅವರಿಗೆ ಅಧಿಕ ಪ್ರಮಾಣದ ಇಳುವರಿ ಬರಲು ಸಾಧ್ಯವಾಗಿದೆ. ಒಂದು ಬಾಳೆ ಗೊನೆಗಳು 40-45 ಕೆಜಿಯವರಿಗೆ ತೂಕ ಬಂದಿದೆ. ಬಾಳೆ ತೋಟಕ್ಕೆ ನೀರಿನ ಕೊರತೆ ಯಾಗದಂತೆ ಕೊಳವೆ ಬಾಯಿಂದ ಹನಿ ನೀರಾವರಿ ಪದ್ದತಿ ಅಳವಡಿಸಿಕೊಂಡಿದ್ದಾರೆ. ಹೇಮರಡ್ಡಿವರಿಗೆ ತೋಟಗಾರಿಕೆ ಇಲಾಖೆಯಿಂದ ಸಹ ಸಹಾಯಧನ ನೀಡಲಾಗಿದೆ. ಮಹಾತ್ಮ ಗಾಂಧಿ ಉದ್ಯೋಗ ಖಾತರಿ ಯೋಜನೆಯಾಡಿಯಲ್ಲಿ ಕ್ಷೇತ್ರ ವಿಸ್ತರಣೆಗೆ ಹಾಗೂ ಹನಿ ನೀರಾವರಿ ಪದ್ದತಿ ಅವಳವಡಿಸಿಕೊಳ್ಳಲು ಸಹಾಯ ಧನವನ್ನು ಪಡೆದುಕೊಂಡಿದ್ಧಾರೆ. ಕಡಿಮೆ ಖರ್ಚು ಮಾಡಿ ಅಧಿಕ ಪ್ರಮಾಣದ ಇಳುವರಿ ತಗೆದು ಸೈ ಎನ್ನಿಸಿಕೊಂಡಿರುವ ಅವರು ಅನೇಕರಿಗೆ ಮಾದರಿಯಾಗಿದ್ದಾರೆ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ