ಗದಗ ತಾಲೂಕಿನ ಸಂಭಾಪೂರ (Sambhapura, Gadag) ಗ್ರಾಮದ ಮುತ್ತಪ್ಪ ಅಲಿಯಾಸ್ ಅಪ್ಪು ಹೊನರೆಡ್ಡಿ ಎಂಬ ಅಭಿಮಾನಿ ಅಪ್ಪುವಿನ ಪ್ರೀತಿಯಲ್ಲಿ (Puneeth Rajkumar Fan) ಮುಳಗಿದ್ದಾರೆ. ಇವರನ್ನ ಮುತ್ತಪ್ಪ ಅಂದ್ರೆ ಯಾರೂ ಗುರುತಿಸಲ್ಲ. ಜೂನಿಯರ್ ಅಪ್ಪು (Junior Appu) ಅಂದ್ರೆ ಕೈ ಹಿಡಿದು ಇವರ ಬಳಿ ಕರೆದುಕೊಂಡು ಹೋಗುತ್ತಾರೆ. ಪುನೀತ್ ರಾಜ್‍ಕುಮಾರ್ ಅವರ ಅಪ್ಪು ಫಿಲ್ಮ್ ನೋಡಿ ಅಪ್ಪಟ ಅಭಿಮಾನಿಯಾಗಿದ್ದಾರೆ. ಅಂದಿನಿಂದ ಅವರ ಯಾವುದೇ ಸಿನಿಮಾ ಬರಲಿ ಫಸ್ಟ್ ಶೋ ಮಿಸ್ ಮಾಡದೇ ನೋಡ್ತಾರೆ. ಅಪ್ಪು ನಿಧನ ಸುದ್ದಿ ತಿಳಿದು ಹಮಾಲಿ ಕೆಲಸ ಬಿಟ್ಟು ಬೆಂಗಳೂರುಗೆ ಹೋಗಿದ್ದರು. ಮೂರು ದಿನ ಸಮಾಧಿ ಬಳಿ ಸೇವೆ ಮಾಡಿ ಅಭಿಮಾನ ವ್ಯಕ್ತಪಡಿಸಿದ್ದರು. ಜೊತೆಗೆ ಕುಟುಂಬಸ್ಥರು ಹೇಗೆ ತಿಥಿ ಕಾರ್ಯಗಳನ್ನು ಮಾಡ್ತಾರೇ ಅದೇ ರೀತಿ ತಾನೂ ಸಹ ಸಕಲ ಕಾರ್ಯಗಳನ್ನು ಮಾಡಿದ್ದಾರೆ.
ನಿತ್ಯ ಮನೆಯ ಜಗುಲಿ ಅಪ್ಪು ಭಾವಚಿತ್ರಕ್ಕೆ ಪೂಜೆ ಮಾಡ್ತಾರೆ. ಪುನೀತ್ ರಾಜ್ ಕುಮಾರ್ ಅಭಿಮಾನ ಕಡಿಮೆ ಆಗದಂತೆ ಎದೆ ಮೇಲೆ ಭಾವಚಿತ್ರದ ಹಚ್ಚೆ ಹಾಕಿಸಿಕೊಂಡಿದ್ದಾರೆ. ಜೊತೆಗೆ ಕೈ ಹಾಗೇ ಬೆನ್ನಲ್ಲಿ ಸ್ಟಾರ್ ನಲ್ಲಿ ನಟ ಸಾರ್ವಭೌಮನ 30 ಹೆಸರುಗಳ ಹಚ್ಚೆ ಹಾಕಿಸಿಕೊಂಡು ಅಭಿಮಾನ ಮೆರೆದಿದ್ದಾರೆ.
ಇದನ್ನೂ ಓದಿ: ಅಪ್ಪು ನೆನೆದು ಮತ್ತೆ ಮಗುವಿನಂತೆ ಅತ್ತ ಶಿವಣ್ಣ: ಮರೆಯಲಾಗುತ್ತಿಲ್ಲ ಪುನೀತ್ ರಾಜಕುಮಾರ್ ನಗು ಮುಖವ..!
ನನ್ನ ಉಸಿರು ಇರೋವರೆಗೂ ಅವರ ಹೆಸರು ನನ್ನಲ್ಲಿ ಅಜರಾಮರವಾಗಿರಲೆಂದು ಶಾಶ್ವತವಾದ ಹಚ್ಚೆ ಹಾಕಿಸಿಕೊಂಡಿದ್ದೇನೆ ಎಂದು ಮುತ್ತಪ್ಪ ಹೇಳುತ್ತಾರೆ.
ಸಿನಿಮಾ ರಿಲೀಸ್ ದಿನ ಹಬ್ಬ
ಗದಗ ಜಿಲ್ಲೆ ಸಂಭಾಪೂರದ ಜೂನಿಯರ್ ಅಪ್ಪು ಅಲಿಯಾಸ್ ಮುತ್ತಪ್ಪ ಹಮಾಲಿ ಹಾಗೂ ಕೃಷಿ ಕಾಯಕ ಮಾಡುತ್ತಾರೆ. ಬಡವನಾದ್ರೂ ಅಪ್ಪುವಿನ ಮೇಲಿನ ಅಭಿಮಾನಕ್ಕೆನು ಬಡತನವಿಲ್ಲ. ಯುವರಾಜನ ಯಾವುದೇ ಫಿಲ್ಮ್ ಬರಲಿ, ಫಸ್ಟ್ ಶೋ ಸಂದರ್ಭದಲ್ಲಿ ಬ್ಯಾನರ್, ಕಟೌಟ್ ಗೆ ಹಾರ, ತುರಾಯಿ, ಹಾಲಿನ ಅಭಿಷೇಕ, ಪಟಾಕಿ ಸಿಡಿಸಿ, ಸಿಹಿ ಹಂಚಿ ಹತ್ತಾರು ಸಾವಿರ ಖರ್ಚು ಮಾಡಿ ಸಂಭ್ರಮಿಸುತ್ತಿದ್ದರು.
ಮಕ್ಕಳಿಗೆ ನಟನ ಹೆಸರಿಟ್ಟಿರುವ ಅಭಿಮಾನಿ
ಸದ್ಯ ದೇವರಂತೆ ಮನೆಯ ಜಗುಲಿ ಮೇಲೆ ಪುನೀತ್ ಅವರ ಭಾವಚಿತ್ರವಿಟ್ಟು ನಿತ್ಯ ಪೂಜೆ ಮಾಡ್ತಾರೆ. ಮುತ್ತಪ್ಪ ಅವರಿಗೆ ಇಬ್ಬರು ಗಂಡು ಮಕ್ಕಳಿದ್ದು, ಹಿರಿಯ ಮಗನಿಗೆ ಅಪ್ಪು, ಕಿರಿಯ ಪುತ್ರನಿಗೆ ಅಭಿ ಎಂದು ಹೆಸರಿಟ್ಟಿದ್ದಾರೆ. ಇನ್ನು ಮನೆಯ ತುಂಬೆಲ್ಲ ಪುನೀತ್ ಅವರ ಫೋಟೋಗಳನ್ನು ನೋಡಬಹುದು.
ಇದನ್ನೂ ಓದಿ: Puneeth Rajkumar: ಚಂದನವನದಿಂದ ಕಾಣೆಯಾದ `ಬೆಟ್ಟದ ಹೂ’: ಅಣ್ಣಾವ್ರ ಮತ್ತು ಅಪ್ಪು ಸಾವಿನಲ್ಲಿ ಸಾಮ್ಯತೆ!
ಕೆಎಂಎಫ್ನಿಂದ ಕರುನಾಡ ರತ್ನನಿಗೆ `ಕ್ಷೀರ’ ನಮನ
ಕೆಎಂಎಫ್ (KMF) ಕೂಡ ಅಪ್ಪು ಅವರಿಗೆ ವಿಶೇಚವಾಗಿ ಗೌರವ ಸಲ್ಲಿಸಿದೆ. ಇದನ್ನು ಕಂಡ ಅಭಿಮಾನಿಗಳು (Fans) ಭಾವುಕರಾಗಿದ್ದಾರೆ. ಯಾವುದೇ ಹಣ ಪಡೆಯದೇ ಅಪ್ಪು ನಂದಿನಿ ಜಾಹೀರಾತಿನಲ್ಲಿ ನಟಿಸಿದ್ದರು. ಬ್ರ್ಯಾಂಡ್ ಅಂಬಾಸಿಡರ್ (Brand Ambassador) ಆಗಿದ್ದರು. ಅದರಂತೆ ಇದೀಗ ಕೆಎಂಎಫ್ ವತಿಯಿಂದ ಅವರಿಗೆ ವಿಶೇಷ ಗೌರವ ಸಲ್ಲಿಸಲಾಗಿದೆ.
ಹಾಲಿನ ಪ್ಯಾಕೇಟ್ ಮೇಲೆ ಅಪ್ಪು ಫೋಟೋ!
ನಂದಿನ ಹಾಲಿನ ಪ್ಯಾಕೆಟ್ ಮೇಲೆ ಪುನೀತ್ ರಾಜ್‍ಕುಮಾರ್ ಭಾವಚಿತ್ರವನ್ನ ಮುದ್ರಿಸುವ ಮೂಲಕ ವಿಶೇಷ ಗೌರವವನ್ನ ತೋರಿಸಲಾಗಿದೆ. ಇನ್ನು ಡಾ. ರಾಜ್ ಕುಮಾರ್ ಕೂಡ ಸಾಮಾಜಿಕ ಕಳಕಳಿಯನ್ನ ಹೊಂದಿದ್ದ ಮೇರು ನಟನಾಗಿದ್ದರು. ಬಲಗೈಯಲ್ಲಿ ಮಾಡಿದ ಸಹಾಯ ಎಡಗೈಗೆ ಗೊತ್ತಾಗಬಾರದು ಎಂಬ ಮಾತಿಗೆ ತಕ್ಕಂತೆ ನಡೆದುಕೊಂಡವರು ಅಣ್ಣಾವ್ರು. ಅಂದು ನಂದಿನಿ ಹಾಲಿನ ಜಾಹೀರಾತು ರಾಯಭಾರಿಯಾಗಿದ್ದ ಡಾ. ರಾಜ್‍ಕುಮಾರ್, ಯಾವುದೇ ಸಂಭಾವನೆ ತೆಗೆದುಕೊಳ್ಳದೆ ರೈತರ ಪರ ನಿಂತಿದ್ದರು. ಪುನೀತ್ ರಾಜ್‍ಕುಮಾರ್ ಕೂಡ ಅಣ್ಣಾವ್ರ ಹಾದಿಯನ್ನು ಹಿಡಿದ್ದಿದ್ದರು. ಹೀಗಾಗಿ ಕೆಎಂಎಫ್ವಿಶೇಷವಾಗಿ ಅಪ್ಪುಗೆ ಗೌರವ ಸಲ್ಲಿಸಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ