Cricket: ಗದಗದಲ್ಲಿ ಆಗಸ್ಟ್‌ನಿಂದ GCL-3ನೇ ಆವೃತ್ತಿ ಪ್ರಾರಂಭ; ಗೆದ್ದವರಿಗೆ ಸಿಗಲಿದೆ ಮೋದಿ ಟ್ರೋಫಿ!

ಪ್ರಧಾನಮಂತ್ರಿಯಾಗಿ ನರೇಂದ್ರ ಮೋದಿಯವರು ಎಂಟು ವರ್ಷ ಯಶಸ್ವಿಯಾಗಿ ಪೂರೈಸಿದ ಹಿನ್ನೆಲೆಯಲ್ಲಿ ಅವರ ಹೆಸರಿನಲ್ಲಿ ಈ ಬಾರಿ ಜಿಸಿಎಲ್ ಟೂರ್ನಿಗಳಲ್ಲಿ ವಿಜೇತರಾದ ತಂಡಗಳಿಗೆ, ವಿಜೇತ ಕ್ರೀಡಾಪಟುಗಳಿಗೆ ಟ್ರೋಫಿಗಳನ್ನು ವಿತರಿಸಲಾಗುತ್ತಿದೆ. ಇದಕ್ಕೆ ‘ಪ್ರಧಾನಿ ನರೇಂದ್ರ ಮೋದಿ ಟ್ರೋಫಿ ಎಂದು ಹೆಸರಿಡಲಾಗಿದೆ.

ಗದಗ ಕ್ರಿಕೆಟ್ ಲೀಗ್

ಗದಗ ಕ್ರಿಕೆಟ್ ಲೀಗ್

  • Share this:
ಗದಗ: ಹತ್ತು ವರ್ಷಗಳ ಹಿಂದೆ ಇಡೀ ರಾಜ್ಯ ತಿರುಗಿ ನೋಡುವಂತೆ ಮಾಡಿದ್ದ ಗದಗ ಕ್ರಿಕೆಟ್ ಲೀಗ್‌ನ (GCL) ಮೂರನೇ ಆವೃತ್ತಿಗೆ ದಿನಗಣನೆ ಶುರುವಾಗಿದೆ. ಬಿಜೆಪಿ (BJP) ನಾಯಕ ಅನಿಲ್ ಮೆಣಸಿನಕಾಯಿ ನೇತೃತ್ವದಲ್ಲಿ ಗದಗ (Gadag) ಹಬ್ಬದ ಸಂಭ್ರಮಕ್ಕಾಗಿ ಮೂರು ತಿಂಗಳ ಮೊದಲೇ ಭರ್ಜರಿ ಸಿದ್ಧತೆ ನಡೆಯುತ್ತಿದೆ. ಗದಗದಲ್ಲಿ ನಡೆಯುವ ಜಿಸಿಎಲ್ ಮೂರನೇ ಸೀಸನ್‌ನ್ನು ಈ ಬಾರಿ ಗದಗ ಸ್ಪೋರ್ಟ್ಸ್ ಆಂಡ್ ಕಲ್ಚರಲ್ ಅಕಾಡೆಮಿಯು ವಿಶಿಷ್ಟವಾಗಿ ಆಚರಿಸಲು ತಯಾರಿ ನಡೆಸುತ್ತಿದೆ. ವಿದೇಶಿ ಆಟ ಕ್ರಿಕೆಟ್ (Cricket) ಜೊತೆಗೆ ದೇಶಿಯ ಕ್ರೀಡೆಗಳನ್ನು (Games) ಆಯೋಜಿಸಲು ತಯಾರಿ ನಡೆಸುತ್ತಿದೆ. ಈ ಮೂಲಕ ದೇಶಿಯ ಕ್ರೀಡೆಗಳನ್ನು ಉಳಿಸಿ, ಬೆಳೆಸುವ ನಿಟ್ಟಿನಲ್ಲಿ ಅನಿಲ್ ಆಂಡ್ ಟೀಂ ಪಣತೊಟ್ಟಿದೆ.

ಜಿಸಿಎಲ್‌ 3ನೇ ಆವೃತ್ತಿಗೆ ಸಿದ್ಧತೆ

ಅಸ್ಸಾಂ ಮಾದರಿಯಲ್ಲಿ ದಕ್ಷಿಣ ಭಾರತದಲ್ಲಿಯೇ ಗದಗ ನಗರದಲ್ಲಿ ಪ್ರತಿನಿತ್ಯ ಕ್ರೀಡಾ ಹಬ್ಬದ ವಾತಾವರಣ ಸೃಷ್ಠಿಸಲು ಸ್ಪೋರ್ಟ್ಸ್ ಸಿಟಿ (ಕ್ರೀಡಾ ವಿಶ್ವವಿದ್ಯಾಲಯ) ನಿರ್ಮಾಣದ ಬಹುದೊಡ್ಡ ಕನಸು ಕಟ್ಟಿಕೊಂಡಿರುವ ಬಿಜೆಪಿ ಯುವ ಮುಖಂಡ ಅನಿಲ್ ಮೆಣಸಿನಕಾಯಿ, ಗದಗ ಸ್ಪೋರ್ಟ್ಸ್ ಆಂಡ್ ಕಲ್ಚರಲ್ ಅಕಾಡೆಮಿ ವತಿಯಿಂದ ಈಗಾಗಲೇ ಎರಡು ಬಾರಿ ಗದಗನಲ್ಲಿ ಜಿಸಿಎಲ್ ಟೂರ್ನಿ ಆಯೋಜಿಸಿ ಯಶಸ್ವಿಯಾಗಿದ್ದಾರೆ. ಅದರಂತೆ, ಜಿಸಿಎಲ್-2022 ಮೂರನೇ ಆವೃತ್ತಿ ಆಯೋಜನೆಗೆ ಸಜ್ಜುಗೊಳಿಸುತ್ತಿದ್ದು, ಅದಕ್ಕೆ ಬೇಕಾಗಿರುವ ಅಗತ್ಯ ತಯಾರಿ ನಡೆಸುತ್ತಿದ್ದಾರೆ.

ಆಗಸ್ಟ್‌ನಿಂದ ಕ್ರಿಕೆಟ್ ಹಬ್ಬ

ಆಗಸ್ಟ್‌ನಿಂದ ಡಿಸೆಂಬರ್‌ವರೆಗೆ ನಿರಂತರವಾಗಿ ನಡೆಯುವ ಗದಗ ಕ್ರೀಡಾ ಹಬ್ಬದಲ್ಲಿ ಪಾಲ್ಗೊಳ್ಳಲು ಇದೇ ಜೂನ್ ತಿಂಗಳಲ್ಲಿ ಕ್ರೀಡಾ ತಂಡಗಳಿಗಾಗಿ ಅಕಾಡೆಮಿಯು ಅರ್ಜಿ ಆಹ್ವಾನಿಸಲಿದೆ. ಜುಲೈನಲ್ಲಿ ತಂಡಗಳು ಸಲ್ಲಿಸಿದ ಅರ್ಜಿಗಳ ಪರಿಶೀಲನೆ ನಡೆಯಲಿದ್ದು, ಆಗಸ್ಟ್‌ನಿಂದ ಗದಗ ಹಬ್ಬ ಆರಂಭವಾಗಲಿದೆ. ಇನ್ನು ಗದಗ-ಬೆಟಗೇರಿ ನಗರಕ್ಕಷ್ಟೇ ಸೀಮಿತವಾಗಿದ್ದ ಗದಗ ಹಬ್ಬವನ್ನು ಈ ಬಾರಿ ಗದಗ ತಾಲೂಕಿನಾದ್ಯಂತ ವಿಸ್ತರಿಸುತ್ತಿರುವುದು ವಿಶೇಷ.

ಇದನ್ನೂ ಓದಿ: Karwar: ಕಡಲ ತಡಿಯಲ್ಲಿ ಗಾಳ ಹಾಕಿ ಮೀನು ಹಿಡಿಯುವ ಸ್ಪರ್ಧೆ! ನೋಡುಗರಿಗೆ ಭರಪೂರ ಮನರಂಜನೆ

ಈ ಬಾರಿ ಮೂರನೇ ಆವೃತ್ತಿ ಆಯೋಜನೆ

ಗದಗನ ಯುವಕರಲ್ಲಿ ಕ್ರೀಡಾ ಮನೋಭಾವನೆ ಉತ್ತೇಜಿಸಲು, ಪ್ರತಿಭೆಗಳನ್ನು ಅನಾವರಣಗೊಳಿಸುವ ಸಲುವಾಗಿ 2011ರಲ್ಲಿ ಜಿಸಿಎಲ್ ಮೊದಲನೇ ಆವೃತ್ತಿ ಆರಂಭಿಸಲಾಯಿತು. ಅದರಂತೆ, ಎರಡನೇ ಆವೃತ್ತಿಯನ್ನು 2012ರಲ್ಲಿ ನಡೆಸಲಾಯಿತು. ಆದರೆ, ಕಾರಣಾಂತರಗಳಿಂದ ಮೂರನೇ ಸೀಸನ್ ಆಯೋಜನೆ ಸಾಧ್ಯವಾಗಿರಲಿಲ್ಲ. ಸದ್ಯ ಮೂರನೇ ಆವೃತ್ತಿಗೂ ಕಾಲ ಕೂಡಿ ಬಂದಿದ್ದು, ಗದಗ ಸ್ಪೋರ್ಟ್ಸ್ ಆಂಡ್ ಕಲ್ಚರಲ್ ಅಕಾಡೆಮಿ ವತಿಯಿಂದ ಆಗಸ್ಟ್‌ನಲ್ಲಿ ಜಿಸಿಎಲ್ ಹಬ್ಬ ಮರುಕಳಿಸಲಿದೆ.

ಗೆದ್ದವರಿಗೆ ಪ್ರಧಾನಿ ಮೋದಿ ಟ್ರೋಫಿ

ಪ್ರಧಾನಮಂತ್ರಿಯಾಗಿ ನರೇಂದ್ರ ಮೋದಿಯವರು ಎಂಟು ವರ್ಷ ಯಶಸ್ವಿಯಾಗಿ ಪೂರೈಸಿದ ಹಿನ್ನೆಲೆಯಲ್ಲಿ ಅವರ ಹೆಸರಿನಲ್ಲಿ ಈ ಬಾರಿ ಜಿಸಿಎಲ್ ಟೂರ್ನಿಗಳಲ್ಲಿ ವಿಜೇತರಾದ ತಂಡಗಳಿಗೆ, ವಿಜೇತ ಕ್ರೀಡಾಪಟುಗಳಿಗೆ ಟ್ರೋಫಿಗಳನ್ನು ವಿತರಿಸಲಾಗುತ್ತಿದೆ. ಇದಕ್ಕೆ ‘ಪ್ರಧಾನಿ ನರೇಂದ್ರ ಮೋದಿ ಟ್ರೋಫಿ ಎಂದು ಹೆಸರಿಡಲಾಗಿದೆ. ಇನ್ನು ಈ ಟ್ರೋಫಿಯನ್ನು ವಿಶೇಷ ರೀತಿಯಲ್ಲಿ ಡಿಸೈನ್ ಮಾಡಿಸಲಾಗುತ್ತಿದ್ದು, ಶೀಘ್ರದಲ್ಲೇ ಅನಾವರಣಗೊಳ್ಳುವ ಸಾಧ್ಯತೆ ಇದೆ.

ಜಿಸಿಎಲ್ ಹಬ್ಬದಲ್ಲೇನಿರಲಿದೆ?

ಹೆಚ್ಚು ಜನಪ್ರಿಯತೆ ಪಡೆದಿರುವ ಕ್ರಿಕೆಟ್‌ಗೆ ಜಿಸಿಎಲ್‌ನಲ್ಲಿ ಮೊದಲಾದ್ಯತೆ ನೀಡಲಾಗುತ್ತಿದೆ. ಜೊತೆಗೆ ಕುಸ್ತಿ, ಕಬಡ್ಡಿ, ಖೋಖೋ, ವಾಲಿಬಾಲ್, ಪುಟ್ಬಾಲ್ ಸೇರಿದಂತೆ ಹಲವು ದೇಶಿಯ ಕ್ರೀಡೆಗಳನ್ನು ಆಯೋಜಿಸಲಾಗುತ್ತಿದೆ. ಈ ಬಾರಿ ಗದಗ ತಾಲ್ಲೂಕಿನ ಪ್ರತಿ ಹಳ್ಳಿಗಳಲ್ಲೂ ಗ್ರಾಮದ ಜನರ ಆಸಕ್ತಿಗೆ ತಕ್ಕಂತೆ ಕ್ರೀಡಾಕೂಟಗಳನ್ನು ಏರ್ಪಡಿಸಲು ಗದಗ ಸ್ಫೋಟ್ಸ್ ಅಕಾಡೆಮಿಯು ತೀರ್ಮಾನಿಸಿದೆ.

ಇದನ್ನೂ ಓದಿ: Madikeri Mango: ಹತ್ತಕ್ಕೂ ಹೆಚ್ಚು ಬಗೆಯ ಸೈಸರ್ಗಿಕ ಮಾವಿನ ಹಣ್ಣುಗಳು! ಕೊಳ್ಳಲು ಮುಗಿಬಿದ್ದ ಜನ

ಆಗಸ್ಟ್‌ನಿಂದ ಡಿಸೆಂಬರ್‌ವರೆಗೆ ಅತ್ಯಂತ ವಿಜೃಂಭಣೆಯಿಂದ ನಡೆಯುವ ಕ್ರೀಡಾ ಹಬ್ಬದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು, ಸಾಹಿತ್ಯಗೋಷ್ಠಿಗಳು, ವಿವಿಧ ಸ್ಪರ್ಧೆಗಳು, ಮನರಂಜನಾ ಕಾರ್ಯಕ್ರಮಗಳನ್ನು ಆಯೋಜಿಸಲು ನಿರ್ಧರಿಸಲಾಗಿದೆ ಎಂದು ಅನಿಲ್ ಮೆಣಸಿನಕಾಯಿ ತಿಳಿಸಿದ್ದಾರೆ.

(ವರದಿ: ಸಂತೋಷ ಕೊಣ್ಣೂರ, ಗದಗ)
Published by:Annappa Achari
First published: