• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Karnataka Elections: ‘ಪ್ರಧಾನಿ ಮೋದಿ’ ಹೆಸರಿನಲ್ಲಿ ಟ್ರೋಫಿ: ಯುವಕರ ಮತ ಸೆಳೆಯಲು ಕಾಂಗ್ರೆಸ್-ಬಿಜೆಪಿಯಿಂದ ಕ್ರಿಕೆಟ್ ಪಂದ್ಯ!

Karnataka Elections: ‘ಪ್ರಧಾನಿ ಮೋದಿ’ ಹೆಸರಿನಲ್ಲಿ ಟ್ರೋಫಿ: ಯುವಕರ ಮತ ಸೆಳೆಯಲು ಕಾಂಗ್ರೆಸ್-ಬಿಜೆಪಿಯಿಂದ ಕ್ರಿಕೆಟ್ ಪಂದ್ಯ!

ಕಾಂಗ್ರೆಸ್ ಬಿಜೆಪಿ

ಕಾಂಗ್ರೆಸ್ ಬಿಜೆಪಿ

ಗದಗ ಮತಕ್ಷೇತ್ರದ ಯುವಕರ ಮತ ಸೆಳೆಯಲು IPL ಮಾದರಿಯಲ್ಲಿ ಕ್ರಿಕೆಟ್ ಆಯೋಜನೆ ಮಾಡಲಾಗಿದೆ. ಒಟ್ಟು 2 ತಿಂಗಳ ಕಾಲ ನಡೆಯುವ IPL ಮಾದರಿಯ ಕ್ರಿಕೆಟ್​ ಪಂದ್ಯಾವಳಿ​​ ಇದಾಗಿದೆ.‘ಗದಗ ಹಬ್ಬ' ಹೆಸರಿನಲ್ಲಿ ಬಿಜೆಪಿ ಕ್ರೀಡೆ, ಸಾಂಸ್ಕೃತಿಕ ಕಾರ್ಯಕ್ರಮ ಆಯೋಜನೆ ಮಾಡಿದೆ.

  • News18 Kannada
  • 3-MIN READ
  • Last Updated :
  • Gadag-Betigeri (Gadag-Betageri), India
  • Share this:

ಗದಗ(ಜ.27): 2023ರ ವಿಧಾನಸಭಾ ಚುನಾವಣೆ (Karnataka Assembly Elections) ಸಮೀಪಿಸುತ್ತಿದ್ದಂತೆ ರಾಜಕೀಯ ನಾಯಕರು ಮತ ಬೇಟೆಯಾಡಲು ಸಜ್ಜಾಗಿದ್ದಾರೆ. ಕೆಲವು ನಾಯಕರು ಸೀರೆ, ಕುಕ್ಕರ್ ಕೊಟ್ಟು ಮತ ಕೇಳುತ್ತಾರೆ. ಆದ್ರೆ ಮುದ್ರಣ ಕಾಶಿ ಗದಗ ಮತಕ್ಷೇತ್ರದಲ್ಲಿ (Gadag Constituency) ವಿಭಿನ್ನ ರೀತಿಯಲ್ಲಿ ಬಿಜೆಪಿ -ಕಾಂಗ್ರೆಸ್ ನಾಯಕರು ಹೊರಟ್ಟಿದ್ದಾರೆ. ಯುವಕರಲ್ಲಿ ಕ್ರೀಡಾ ಮನೋಭಾವ ಬೆಳಸುವ ಮೂಲಕ ಕ್ರೀಡೆಗಳ ಆಯೋಜನೆ ಮಾಡಿದ್ದಾರೆ. IPL ಮಾದರಿಯಲ್ಲಿ ಕಾಂಗ್ರೆಸ್-ಬಿಜೆಪಿ ಪಕ್ಷದ ನಾಯಕರು ಕ್ರಿಕೆಟ್ ಆಡಿಸುತ್ತಿದ್ದಾರೆ. ಒಂದು ಮೈದಾನದಲ್ಲಿ ಬಿಜೆಪಿಯವರು ಆಡಿಸಿದ್ದರೆ, ಅದಕ್ಕೆ ಪೈಪೋಟಿ ಕೊಡಲು ಕಾಂಗ್ರೆಸ್ ನವರು ಇನ್ನೊಂದು ಮೈದಾನದಲ್ಲಿ ಕ್ರಿಕೆಟ್ ಆಡಿಸುತ್ತಿದ್ದಾರೆ.


ಹೌದು ಬಿಜೆಪಿಯಿಂದ 'ಗದಗ ಹಬ್ಬ' IPL ಮಾದರಿಯಲ್ಲಿ GCL ಕ್ರಿಕೆಟ್ ಲೀಗ್ ಆಯೋಜನೆ. ಕಾಂಗ್ರೆಸ್​ನಿಂದ ಕೆಎಚ್ ಪಾಟೀಲ್ ಕ್ರಿಕೆಟ್ ಲೀಗ್ ಆಯೋಜನೆ. ಯುವಕರ ಮತ ಸೆಳೆಯಲು ಕಾಂಗ್ರೆಸ್-ಬಿಜೆಪಿ ನಾಯಕರ ಕಸರತ್ತು. ಗದಗ ನಗರದಲ್ಲಿ ಜಿಲ್ಲಾ ಕ್ರೀಡಾಂಗಣದಲ್ಲಿ ಬಿಜೆಪಿ ಪಕ್ಷದ ಅನಿಲ್ ಮೆಣಸಿನಕಾಯಿ GCL ಕ್ರಿಕೆಟ್ ಲೀಗ್ ನಡೆಸುತ್ತಿದ್ದರೆ, ಇತ್ತ ಕಾಂಗ್ರೆಸ್ ಪಕ್ಷದ ಎಚ್ ಕೆ ಪಾಟೀಲ್ ಅವರು ಜಿಲ್ಲಾ ಕ್ರೀಡಾಂಗಣ ಪಕ್ಕದಲ್ಲೇ ಇರುವ VDST ಮೈದಾನದಲ್ಲಿ ಕೆಎಚ್ ಪಾಟೀಲ್ ಪಂದ್ಯಾಟ ನಡೆಸುತ್ತಿದ್ದಾರೆ. ಕಾಂಗ್ರೆಸ್-ಬಿಜೆಪಿಯವರು ಯುವಕರ ಮತ ಪಡೆಯಲು ಜಿದ್ದಾಜಿದ್ದಿಗೆ ಬಿದ್ದಿದ್ದಾರೆ. IPL ಮಾದರಿಯಲ್ಲಿ ಕ್ರಿಕೆಟ್ ಆಡಿಸಲು ಮುಂದಾಗಿದ್ದಾರೆ.


ಇದನ್ನೂ ಓದಿ: Hubballi News: ಹುಬ್ಬಳ್ಳಿಯಲ್ಲಿ ಮೆಣಸಿನಕಾಯಿ ಮೇಳ, ಉತ್ತರ ಕರ್ನಾಟಕ ಭಾಗದ ರೈತರಲ್ಲಿ ಹೆಚ್ಚಿದ ನಿರೀಕ್ಷೆ


ಮತದಾರನ ಸೆಳೆಯಲು ತಂತ್ರ


ಗದಗ ಮತಕ್ಷೇತ್ರದ ಯುವಕರ ಮತ ಸೆಳೆಯಲು IPL ಮಾದರಿಯಲ್ಲಿ ಕ್ರಿಕೆಟ್ ಆಯೋಜನೆ ಮಾಡಲಾಗಿದೆ. ಒಟ್ಟು 2 ತಿಂಗಳ ಕಾಲ ನಡೆಯುವ IPL ಮಾದರಿಯ ಕ್ರಿಕೆಟ್​ ಪಂದ್ಯಾವಳಿ​​ ಇದಾಗಿದೆ.‘ಗದಗ ಹಬ್ಬ' ಹೆಸರಿನಲ್ಲಿ ಬಿಜೆಪಿ ಕ್ರೀಡೆ, ಸಾಂಸ್ಕೃತಿಕ ಕಾರ್ಯಕ್ರಮ ಆಯೋಜನೆ ಮಾಡಿದೆ. ಬಿಜೆಪಿ ಪಕ್ಷದ ಆಕಾಂಕ್ಷಿ ಅನಿಲ್ ಮೆಣಸಿನಕಾಯಿ GCL(GADAG CRICKET LEAGUE) ಮೂರನೇ ಆವೃತ್ತಿ ಆರಂಭಿಸಿದ್ದಾರೆ. 2011-12, 2012-13ರ ಬಳಿಕ 3ನೇ ಬಾರಿಗೆ ಕ್ರಿಕೆಟ್​​​ ಲೀಗ್ ನಡೆಸಲಾಗುತ್ತಿದೆ. ಬಿಜೆಪಿಯ GCL ಕ್ರಿಕೆಟ್ ಲೀಗ್ ವಿಜೇತ ತಂಡಕ್ಕೆ ‘ಪ್ರಧಾನಿ ಮೋದಿ’ ಹೆಸರಿನಲ್ಲಿ ಟ್ರೋಫಿ ಬಹುಮಾನ ಇಟ್ಟಿದ್ದಾರೆ. BJPಯ GCL ಲೀಗ್​​​​ನಲ್ಲಿ 11 ಆಟಗಾರರ ಒಂದು ತಂಡದಂತೆ 130ಕ್ಕೂ ಹೆಚ್ಚು ತಂಡಗಳು ಭಾಗಿಯಾಗಿವೆ.


ಇದನ್ನೂ ಓದಿ: JOB News: ಅಮೆಜಾನ್​ ಕಂಪನಿಯಲ್ಲಿ ಉದ್ಯೋಗ ಮಾಡಲು ಇಲ್ಲಿದೆ ಅವಕಾಶ! ಹುಬ್ಬಳ್ಳಿಯಲ್ಲಿ ಕೆಲಸ


ಇನ್ನು ಗದಗ ಸಿಟಿಯ 35 ವಾರ್ಡ್​​​ಗಳು ಹಾಗೂ ಗ್ರಾಮೀಣ ಭಾಗದ ತಂಡಗಳು ಭಾಗಿಯಾಗಿದ್ದು, ಮಾಜಿ ಸಚಿವ H.K.ಪಾಟೀಲ್ ನೇತೃತ್ವದಲ್ಲಿ K.Hಪಾಟೀಲ್ ಕ್ರಿಕೆಟ್ ಲೀಗ್ ಆರಂಭವಾಗಿದೆ. ಕಾಂಗ್ರೆಸ್ ಪಕ್ಷದಿಂದ ಆಯೋಜಿಸಿರುವ K.H.ಪಾಟೀಲ್ ಕ್ರಿಕೆಟ್ ಲೀಗ್​​​ನಲ್ಲಿ 170 ತಂಡಗಳು ಭಾಗಿಯಾಗಿವೆ. ಹೊನಲು-ಬೆಳಗಿನ ಕ್ರಿಕೆಟ್ ಪಂದ್ಯ ಆಡಿಸಲು ಸಿದ್ದತೆ ನಡೆಸಿರುವ ಉಭಯ ಪಕ್ಷಗಳು ಕಾಂಗ್ರೆಸ್​​​ ಕ್ರಿಕೆಟ್ ಲೀಗ್​​​ನಲ್ಲಿ ಗೆಲುವು ಸಾಧಿಸಿದ ತಂಡಕ್ಕೆ ಟ್ರೋಫಿ ಹಾಗೂ ನಗದು ಬಹುಮಾನ ನೀಡಲು ಸಜ್ಜಾಗಿದ್ದಾರೆ.


ಶ್ರೀರಾಮುಲು ವಿಶೇಷ ಮನವಿ


ಇನ್ನು ಬಿಜೆಪಿ ಪಕ್ಷದ GCL ಓಪನಿಂಗ್ ಸೆರೆಮನಿಯ ದಿನದಂದು ಸಚಿವ ಶ್ರೀರಾಮುಲು ಅವರು ಗದಗ ಮತ ಕ್ಷೇತ್ರ ಮತದಾರರಿಗೆ ಬಿಜೆಪಿ ಪಕ್ಷದಿಂದ ಸ್ಪರ್ಧೆಗೆ ಇಳಿಯುತ್ತಿರುವ ಅನಿಲ್ ಮೆಣಸಿನಕಾಯಿ ಅವರನ್ನ 18 ಸಾವಿರ ಮತಗಳ ಅಂತರದಿಂದ ಅಧಿಕಾರಕ್ಕೆ ತರಬೇಕೆಂದು ಬಹಿರಂಗ ಭಾಷಣದಲ್ಲಿ ತಿಳಿಸಿದ್ದಾರೆ.




ಒಟ್ಟಾರೆಯಾಗಿ ರಾಜಕೀಯ ನಾಯಕರು ಯುವಕರ ಮತ ಸೆಳೆಯಲು ಕ್ರೀಡೆಗಳನ್ನು ಆಡಿಸುವ ಮೂಲಕ ಗಾಳ ಹಾಕಿದ್ದಾರೆ. ಆದ್ರೆ ಮತದಾರರು ಬಿಜೆಪಿಗೆ ಮತ ಹಾಕ್ತಾರಾ, ಅಥವಾ ಕಾಂಗ್ರೆಸ್ ಗೆ ಜೈ ಅಂತಾರ ಕಾದುನೋಡಬೇಕಿದೆ..


-ಸಂತೋಷ ಕೊಣ್ಣೂರ, ನ್ಯೂಸ್ 18 -ಗದಗ

First published: