ಅರಕೇರಾ ತಾಲೂಕು ಘೋಷಣೆಗೆ ವಿರೋಧ; ಸಿಎಂ ಅಂಗಳಕ್ಕೆ ಹೋದ ಗಬ್ಬೂರು ಜನ

ಗಬ್ಬೂರನ್ನು ತಾಲೂಕು ಕೇಂದ್ರ ಮಾಡಬೇಕು. ಅರಕೇರಾ ತಾಲೂಕು ಘೋಷಣೆ ಹಿಂಪಡೆಯಬೇಕೆಂದು ಕೆಲವರು ಮಂಗಳವಾರ ಮುಖ್ಯಮಂತ್ರಿಗಳ ಬಳಿ ನಿಯೋಗ ಹೋಗಿ ಮನವಿ ಸಲ್ಲಿಸಿದ್ದಾರೆ.

news18-kannada
Updated:September 24, 2020, 11:43 AM IST
ಅರಕೇರಾ ತಾಲೂಕು ಘೋಷಣೆಗೆ ವಿರೋಧ; ಸಿಎಂ ಅಂಗಳಕ್ಕೆ ಹೋದ ಗಬ್ಬೂರು ಜನ
ಸಿಎಂಗೆ ಮನವಿ ಮಾಡುತ್ತಿರುವ ಗಬ್ಬೂರಿನ ಜನ
  • Share this:
ರಾಯಚೂರು(ಸೆ.24):  ಕಳೆದ 20  ದಿನಗಳ ಹಿಂದೆ ರಾಜ್ಯ ಸರಕಾರದ ಸಚಿವ ಸಂಪುಟ ಸಭೆಯಲ್ಲಿ ಅಚ್ವರಿಯಾಗಿ ಅರಕೇರಾ ನೂತನ ತಾಲೂಕು ಎಂದು ಘೋಷಿಸಲಾಯಿತು. ದೇವದುರ್ಗಾ ತಾಲೂಕಿನ ಅರಕೇರಾ ತಾಲೂಕು ಕೇಂದ್ರ ಮಾಡಿಸಲು ಅರಕೇರಾ ಗ್ರಾಮದವರೇ ಆದ ಶಾಸಕ ಶಿವನಗೌಡ ನಾಯಕರ ಒತ್ತಡ ಎನ್ನಲಾಗಿದೆ. ಇದು ಅವೈಜ್ಞಾನಿಕ ವಾಗಿ ತಾಲೂಕು ಘೋಷಣೆಯಾಗಿದೆ. ಅರಕೇರಾ ತಾಲೂಕು ಘೋಷಣೆಯನ್ನು ಹಿಂಪಡೆಯಬೇಕು. ಗಬ್ಬೂರು ನೂತನ ತಾಲೂಕು ಎಂದು ಘೋಷಿಸಬೇಕೆಂದು ಕೆಲ ಗ್ರಾಮಸ್ಥರು ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದ್ದಾರೆ. ದೇವದುರ್ಗಾ ತಾಲೂಕಿನ ಅರಕೇರಾ ಸಣ್ಣ ಗ್ರಾಮವಾಗಿದ್ದು ಇದು ತಾಲೂಕು ಆಗುತ್ತದೆ ಎಂದು ಯಾರು ನಿರೀಕ್ಷಿಸಿರಲಿಲ್ಲ. ಅರಕೇರಾ ತಾಲೂಕು ಕೇಂದ್ರಕ್ಕಾಗಿ ಯಾವುದೇ ಸಮಿತಿಯು ವರದಿ ನೀಡಿಲ್ಲ. ಏಕಾಏಕಿಯಾಗಿ ಅರಕೇರಾ ತಾಲೂಕು ಘೋಷಣೆ ಮಾಡಿದ್ದರಿಂದ ತಾಲೂಕಿಗಾಗಿ ಹೋರಾಟ ಮಾಡಿದ ಗಬ್ಬೂರು ಗ್ರಾಮಸ್ಥರಲ್ಲಿ ಆಕ್ರೋಶ ವ್ಯಕ್ತವಾಗಿದೆ.

ಇದೇ ವೇಳೆ ಈಗ ದೇವದುರ್ಗಾ ತಾಲೂಕಿನ ಜಾಲಹಳ್ಳಿಯನ್ನು ಸಹ ತಾಲೂಕು ಮಾಡಲು ಒತ್ತಾಯ ಆರಂಭವಾಗಿದೆ. ದೇವದುರ್ಗಾದಿಂದ ಕೇವಲ 30 ಕಿ.ಮೀ ದೂರದಲ್ಲಿದೆ. ಈ ತಾಲೂಕಿಗೆ ಗಬ್ಬೂರು, ಜಾಲಹಳ್ಳಿಯ ಹಳ್ಳಿಗಳನ್ನು ಸೇರಿಸಲಾಗಿದೆ, ಕೊತ್ತದೊಡ್ಡಿ ಗ್ರಾಮಸ್ಥರು ಈಗಾಗಲೇ ತಮ್ಮ ಗ್ರಾಮವನ್ನು ಅರಕೇರಾಕ್ಕೆ ಸೇರಿಸಿದ್ದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ ಬೃಹತ್ ಪ್ರತಿಭಟನೆ ನಡೆಸಿದ್ದಾರೆ.

Karnataka Reservoir Water Level: ರಾಜ್ಯದಲ್ಲಿ ತಗ್ಗಿದ ಮಳೆ; ಕರ್ನಾಟಕದ ಜಲಾಶಯಗಳ ಇಂದಿನ ನೀರಿನ ಮಟ್ಟ ಹೀಗಿದೆ

ಈ ಮಧ್ಯೆ ಪ್ರತಿಭಟನಾಕಾರರ ವಿರುದ್ದ ಪ್ರಕರಣವು ದಾಖಲಾಗಿದೆ. ಈ ಮಧ್ಯೆ ಗಬ್ಬೂರನ್ನು ತಾಲೂಕು ಕೇಂದ್ರ ಮಾಡಬೇಕು. ಅರಕೇರಾ ತಾಲೂಕು ಘೋಷಣೆ ಹಿಂಪಡೆಯಬೇಕೆಂದು ಕೆಲವರು ಮಂಗಳವಾರ ಮುಖ್ಯಮಂತ್ರಿಗಳ ಬಳಿ ನಿಯೋಗ ಹೋಗಿ ಮನವಿ ಸಲ್ಲಿಸಿದ್ದಾರೆ.

ಸಚಿವ ಸಂಪುಟ ನಿರ್ಧಾರ ತಪ್ಪು ಶಿವನಗೌಡ ನಾಯಕರ ಇಚ್ಛೆಯಂತೆ ತಾಲೂಕು ಘೋಷಣೆ ಮಾಡಿರುವುದು ಸರಿಯಾದುದಲ್ಲ, ಅದಕ್ಕಾಗಿ ತಾಲೂಕು ಮಾಡಲು ಅರ್ಹತೆ ಯ ಬಗ್ಗೆ ಒಂದು ಸಮಿತಿ ರಚಿಸಿ ವರದಿ ತರಿಸಿಕೊಳ್ಳಬೇಕು. ಗಬ್ಬೂರು ತಾಲೂಕಾ ಕೇಂದ್ರವಾಗಲು ಎಲ್ಲ ಅರ್ಹತೆ ಹೊಂದಿದೆ.

ಈ ಹಿನ್ನಲೆಯಲ್ಲಿ ಗಬ್ಬೂರು ತಾಲೂಕು ಮಾಡಬೇಕೆಂದು ಮನವಿ ಸಲ್ಲಿಸಿದ್ದು, ಮುಖ್ಯಮಂತ್ರಿ ಗಳು ಮುಂದೇನು ಮಾಡುತ್ತಾರೋ ಕಾದು ನೋಡಬೇಕು. ಈ ಮಧ್ಯೆ ಜಿಲ್ಲಾ ಉಸ್ತುವಾರಿ ಸಚಿವ ಲಕ್ಷ್ಮಣ ಸವದಿ, ಶಾಸಕ ಶಿವನಗೌಡ ನಾಯಕರು ಜನರ ಒತ್ತಾಯದ ಮೇಲೆ ಅರಕೇರಾ ತಾಲೂಕು ಮಾಡಲಾಗಿದೆ ಎಂದು ಹೇಳಿದ್ದಾರೆ. ಈಗ ಅರಕೇರಾ ನೂತನ ತಾಲೂಕಿನ ಬಗ್ಗೆ ಪರ ವಿರೋಧ ಅಭಿಪ್ರಾಯ ವ್ಯಕ್ತವಾಗುತ್ತಿದೆ.
Published by: Latha CG
First published: September 24, 2020, 11:43 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading