ಹುಣಸೂರು ಉಪಚುನಾವಣೆಯಿಂದ ಜಿಟಿಡಿ ದೂರ; ಮಗ ನಿಂತರೂ ಪ್ರಚಾರ ಮಾಡಲ್ಲ ಎಂದ ಮಾಜಿ ಸಚಿವ

ನಾನು ಈ ಹುಣಸೂರು ಉಪಚುನಾವಣೆಯಲ್ಲಿ ಸ್ಪರ್ಧೆ ಮಾಡಲ್ಲ. ನನಗೆ ಯಾವುದೇ ಪಕ್ಷದಿಂದ ಆಫರ್ ಬಂದಿಲ್ಲ ಎಂದು ಜಿಟಿಡಿ ಪುತ್ರ ಜಿ.ಡಿ.ಹರೀಶ್‌ಗೌಡ ಸ್ಪಷ್ಟನೆ ನೀಡಿದ್ದಾರೆ.

Latha CG | news18-kannada
Updated:November 16, 2019, 8:51 PM IST
ಹುಣಸೂರು ಉಪಚುನಾವಣೆಯಿಂದ ಜಿಟಿಡಿ ದೂರ; ಮಗ ನಿಂತರೂ ಪ್ರಚಾರ ಮಾಡಲ್ಲ ಎಂದ ಮಾಜಿ ಸಚಿವ
ಜಿ.ಟಿ. ದೇವೇಗೌಡ
  • Share this:
ಮೈಸೂರು(ನ.16): ಡಿಸೆಂಬರ್​ 5ರಂದು ಹುಣಸೂರು ಕ್ಷೇತ್ರದ ಉಪಚುನಾವಣೆ ನಡೆಯಲಿದೆ. ಈ ಚುನಾವಣೆಯಲ್ಲಿ ನಾನು ಯಾರ ಪರವೂ ಇಲ್ಲ, ಯಾರ ವಿರುದ್ಧವೂ ಇಲ್ಲ. ಯಾರ ಪರವೂ ಪ್ರಚಾರಕ್ಕೆ ಹೋಗಲ್ಲ. ನನ್ನ ಮಗ ನಿಂತರೂ ಸಹ ಈ ಉಪಚುನಾವಣೆಯಲ್ಲಿ ಪ್ರಚಾರ ಮಾಡಲ್ಲ. ಅವನು ಚುನಾವಣೆಗೆ ನಿಲ್ಲಲು ಸ್ವತಂತ್ರ. ನನ್ನ ಬೆಂಬಲಿಗರು ಬುದ್ದಿವಂತರಿದ್ದಾರೆ ಅವರಿಗೆ ಯಾರು ಬೇಕು ಅವರನ್ನು ಆಯ್ಕೆ ಮಾಡಿಕೊಳ್ಳುತ್ತಾರೆ ಎಂದು ಮಾಜಿ ಸಚಿವ ಜಿ.ಟಿ.ದೇವೇಗೌಡ ಹೇಳಿದ್ದಾರೆ.

ಮೈಸೂರಿನಲ್ಲಿ ಮಾತನಾಡಿದ ಅವರು, ನಾನು ನನ್ನ ಮಗನಿಗೆ ಬಿಜೆಪಿಯಿಂದ ಟಿಕೆಟ್​ ಕೇಳಿಲ್ಲ. ಹುಣಸೂರಿನ ಜನ ನನ್ನ ಮೇಲೆ ಅಭಿಮಾನ ಇಟ್ಟಿದ್ದಾರೆ. ನಿಮ್ಮ ಮಗ ಅಥವಾ ನಿಮ್ಮ ಪತ್ನಿಯನ್ನು ನಿಲ್ಲಿಸಿ ಅಂತ ಕೇಳಿದ್ದರು. ಆದರೆ ನನ್ನ ಮಗನನ್ನು ಚುನಾವಣೆಗೆ ನಿಲ್ಲಿಸುವ ಶಕ್ತಿ ನನ್ನಲ್ಲಿಲ್ಲ. ಚುನಾವಣೆ ಎದುರಿಸುವಷ್ಟು ಆರ್ಥಿಕ ವ್ಯವಸ್ಥೆ ನನ್ನಲ್ಲಿಲ್ಲ. ಹೀಗಾಗಿ ಹುಣಸೂರು ಉಪಚುನಾವಣೆಗೆ ನನ್ನ ಮಗನನ್ನು ನಿಲ್ಲಿಸಲ್ಲ. ಇದಕ್ಕಾಗಿ ಹುಣಸೂರಿನ ಜನರಿಗೆ ಕ್ಷಮೆ ಕೇಳಿದ್ದೇನೆ ಎಂದು ಸ್ಪಷ್ಟಪಡಿಸಿದರು.

ಲಕ್ಷ್ಮಣ ಸವದಿಗೆ ಟಿಕೆಟ್ ಕೊಡದೇ ಇರೋದು ಕಾಂಗ್ರೆಸ್​​ಗೆ ಲಾಭವಾಗಲಿದೆ; ಎಂ.ಬಿ.ಪಾಟೀಲ್​

ಹುಣಸೂರು ಉಪಚುನಾವಣೆ ಬಗ್ಗೆ ನನ್ನ ನಿರ್ಧಾರ ಏನೆಂದು ಬಹಳ ಹಿಂದೆಯೇ ಹೇಳಿದ್ದೇನೆ. ನಾನು ಈ ಚುನಾವಣೆಯಲ್ಲಿ ಭಾಗಿಯಾಗಲ್ಲ. ಈ ವಿಚಾರವನ್ನ ದೇವೇಗೌಡರು ಹಾಗೂ ಕುಮಾರಸ್ವಾಮಿಯವರಿಗೂ ತಿಳಿಸಿದ್ದೇನೆ. ನನ್ನ ತಟಸ್ಥ ನಿಲುವಿಗೆ ಇಂದು ಕೂಡ  ನಾನು  ಬದ್ದನಾಗಿದ್ದೇನೆ. ಇಂದಿನ ನಾಮಪತ್ರ ಸಲ್ಲಿಕೆಗೆ ಯಾರೂ ಕರೆದಿಲ್ಲ. ಅಭ್ಯರ್ಥಿ ಬಂದಿದ್ದರು ನಮಸ್ಕಾರ ಮಾಡಿಕೊಂಡು ಹೋದರು ಎಂದರು.

ಈ ಥರದ ಚುನಾವಣೆ ನನಗೂ ಹೊಸದು. ಇಂತದೊಂದು ಚುನಾವಣೆಯನ್ನು ನಾನು ನಿರೀಕ್ಷೆ ಮಾಡಿರಲಿಲ್ಲ. ಎಲ್ಲಾ ದೈವಲೀಲೆ. 1971ರಿಂದ ಎಲ್ಲಾ ಚುನಾವಣೆಯಲ್ಲಿ ಭಾಗಿಯಾಗಿ ಹೋರಾಟ ಮಾಡಿದ್ದೇನೆ. ಬೇರೆಯವರ ಗೆಲುವು ನನ್ನ ಗೆಲುವಿಗೆ ಹೋರಾಟ ಮಾಡಿದ್ದೇನೆ. ಆದರೆ ಈ ಥರ ಸುಮ್ಮನೆ ಇರುವುದು ಇದೇ ಮೊದಲು. ನನಗೆ ಯಾವುದೇ ರಾಜಕೀಯ ಸಂದಿಗ್ಧತೆ  ಇಲ್ಲ, ನೆಮ್ಮದಿಯಾಗಿ ಇರಬೇಕು ಅಂತ ಈ ನಿರ್ಧಾರ ಮಾಡಿದ್ದೇನೆ ಎಂದರು.

ಇದೇ ವೇಳೆ, ಮತ್ತೆ ರಾಜಕೀಯದಲ್ಲಿ ಸಕ್ರೀಯರಾಗುತ್ತೀರಾ ಎಂಬ ಪ್ರಶ್ನೆಗೆ ಮಾರ್ಮಿಕ ಉತ್ತರ ನೀಡಿದರು. ನರಸಿಂಹರಾಯರು ತಮ್ಮ 80ನೇ ವಯಸ್ಸಿನಲ್ಲಿ  ಪ್ರಧಾನಿಯಾಗಿದ್ದರು.  ಆ ಥರ ದೇವರು ಕರುಣಿಸಿದರೆ ಮತ್ತೆ ರಾಜಕೀಯಕ್ಕೆ ಹೋಗಬಹದು. ಇಲ್ಲವಾದರೆ ಇಂದಿನ ರಾಜಕೀಯ ವ್ಯವಸ್ಥೆಯಲ್ಲಿ ನಮ್ಮಂತವರು ಆಗಲ್ಲ ಎಂದು ಹೇಳಿದರು.

ಮಹಾ ನಾಟಕ ಮತ್ತೆ ಒಂದು ದಿನ ಮುಂದಕ್ಕೆ; ನಾಳೆ ರಾಜ್ಯಪಾಲರ ಭೇಟಿಯಾಗಲಿರುವ ಶಿವಸೇನೆ, ಕಾಂಗ್ರೆಸ್, ಎನ್​ಸಿಪಿಸ್ಪರ್ಧೆ ಬಗ್ಗೆ ಜಿಟಿಡಿ ಪುತ್ರ ಹೇಳಿದ್ದೇನು?

ನಾನು ಈ ಹುಣಸೂರು ಉಪಚುನಾವಣೆಯಲ್ಲಿ ಸ್ಪರ್ಧೆ ಮಾಡಲ್ಲ. ನನಗೆ ಯಾವುದೇ ಪಕ್ಷದಿಂದ ಆಫರ್ ಬಂದಿಲ್ಲ ಎಂದು ಜಿಟಿಡಿ ಪುತ್ರ ಜಿ.ಡಿ.ಹರೀಶ್‌ಗೌಡ ಸ್ಪಷ್ಟನೆ ನೀಡಿದ್ದಾರೆ.
ನಮಗೂ ಹುಣಸೂರಿಗು ಅಭಿನಾಭಾವ ಸಂಬಂಧ ಇದೆ. ಆ ಸಂಬಂಧದ ಹಿತದೃಷ್ಟಿಯಿಂದ ಜನರು ನಮ್ಮನ್ನ ಚುನಾವಣೆಗೆ ನಿಲ್ಲಿ ಅಂತ ಪ್ರತಿಭಟನೆ ಮಾಡಿದ್ದಾರೆ.  ಈ ಪ್ರೀತಿ ಹೀಗೆ ಇರಲಿ. ಅವರ ಪ್ರೀತಿಗೆ ನಾನು ಮೋಸ ಮಾಡಲ್ಲ. ಅವರ ಕಷ್ಟ-ಸುಖಗಳಿಗೆ ನಾನು ಇಂದಿಗೂ ಸ್ಪಂದಿಸುತ್ತೇನೆ. ಈಗಲೂ ನಾನು ಹುಣಸೂರಿನಿಂದಲೇ ಎಂಡಿಸಿಸಿ ಬ್ಯಾಂಕ್‌ ಸದಸ್ಯನಾಗಿದ್ದೇನೆ.  ಆ ಕ್ಷೇತ್ರದಲ್ಲಿ ಎಲ್ಲ ಜನರ ಸಂಪರ್ಕದಲ್ಲಿ ಇರುತ್ತೇನೆ. ಆದರೆ  ಚುನಾವಣೆಗೆ ಸ್ಪರ್ಧಿಸಲ್ಲ  ಎನ್ನುವ ತಟಸ್ಥ ನಿಲುವಿಗೆ ಈಗಲೂ ಬದ್ದರಾಗಿದ್ದೇವೆ.
ಅಲ್ಲಿನ ನಮ್ಮ ಬೆಂಬಲಿಗರು ತಮ್ಮಿಷ್ಟ ಬಂದವರನ್ನ ಆಯ್ಕೆ ಮಾಡಲು ಸ್ವತಂತ್ರರು.
ಸ್ಥಳೀಯ ಸಮಸ್ಯೆಗಳ ಹಾಗೂ ರಾಜಕೀಯ ವ್ಯವಸ್ಥೆಯ ಹಿನ್ನೆಲೆಯಲ್ಲಿ ಅವರೇ ಒಳ್ಳೆಯ ವ್ಯಕ್ತಿಯನ್ನು ಆಯ್ಕೆ ಮಾಡುತ್ತಾರೆ. ನಿಮ್ಮ ಚಿಂತನೆಗೆ ತಕ್ಕವರನ್ನು ಆಯ್ಕೆ ಮಾಡಿ ಎನ್ನುವ ಮಾತನ್ನು ಜನರಿಗೆ ಹೇಳುತ್ತೇನೆ ಎಂದರು.

First published:November 16, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ