• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • G Parameshwara: ಫಲಿತಾಂಶಕ್ಕೂ ಮುನ್ನವೇ ಎಲ್ಲವೂ ಅವರದ್ದೇ ಅಂತ ಅಂದಿದ್ಯಾಕೆ ಮಾಜಿ ಡಿಸಿಎಂ!

G Parameshwara: ಫಲಿತಾಂಶಕ್ಕೂ ಮುನ್ನವೇ ಎಲ್ಲವೂ ಅವರದ್ದೇ ಅಂತ ಅಂದಿದ್ಯಾಕೆ ಮಾಜಿ ಡಿಸಿಎಂ!

ಜಿ ಪರಮೇಶ್ವರ, ಮಾಜಿ ಡಿಸಿಎಂ

ಜಿ ಪರಮೇಶ್ವರ, ಮಾಜಿ ಡಿಸಿಎಂ

Karnataka Election 2023: ಪದೇ ಪದೇ ನಾವು ಹೇಳಿಕೆ ಕೊಡುವುದರಿಂದ ಗೊಂದಲ ಸೃಷ್ಟಿ ಆಗುತ್ತದೆ. ಹೈಕಮಾಂಡ್ ಯಾರು ಸಿಎಂ ಆಗಬೇಕು ಎಂದು ತೀರ್ಮಾನ ಮಾಡ್ತಾರೆ. ನಮ್ಮ ಎಚ್ಚರಿಕೆಯಲ್ಲಿ ನಾವು ಇರುತ್ತೇವೆ ಎಂದರು.

  • Share this:

ಬೆಂಗಳೂರು: ಕಪ್ ನಮ್ಮದೇ ಎಂದು ಹೇಳಿಕೆ ನೀಡಿರುವ ಸಚಿವ ಆರ್.ಅಶೋಕ್ (Minister R Ashok)​ ಅವರಿಗೆ ಮಾಜಿ ಡಿಸಿಎಂ ಜಿ ಪರಮೇಶ್ವರ್ (Former DCM Parameshwara) ತಿರುಗೇಟು ನೀಡಿದ್ದಾರೆ. ಎಲ್ಲವೂ ಅವರದ್ದೇ, ಆದ್ರೆ ಸರ್ಕಾರ ಮಾತ್ರ ನಮ್ಮದು ಎಂದಿದ್ದಾರೆ. ನಾವು 130 ಸ್ಥಾನ ಗೆಲ್ಲುತ್ತೇವೆ. ಜಿಲ್ಲವಾರು ಪಡೆದ ಮಾಹಿತಿ ಅಧಾರಿತವಾಗಿ ಈ ಮಾತನ್ನು ಹೇಳುತ್ತಿದ್ದೇವೆ. ಸ್ವಂತ ಬಲದಿಂದ ನಾವು ಸರ್ಕಾರ (Government) ರಚನೆ ಮಾಡ್ತೇವೆ. ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Congress President Mallikarjun Kharge) ಅವರ ಜೊತೆ ರಾಜಕೀಯ ಮಾತನಾಡಿಲ್ಲ. ವೈಯಕ್ತಿಕವಾಗಿ ಮಾತುಕತೆ ಮಾಡಿದ್ದೇವೆ ಎಂದು ಹೇಳಿದರು.


ಸಿಎಂ ಆಯ್ಕೆ ಬಗ್ಗೆ ನಾನು ಮಾತಾಡುವುದಿಲ್ಲ. ಪದೇ ಪದೇ ನಾವು ಹೇಳಿಕೆ ಕೊಡುವುದರಿಂದ ಗೊಂದಲ ಸೃಷ್ಟಿ ಆಗುತ್ತದೆ. ಹೈಕಮಾಂಡ್ ಯಾರು ಸಿಎಂ ಆಗಬೇಕು ಎಂದು ತೀರ್ಮಾನ ಮಾಡ್ತಾರೆ. ನಮ್ಮ ಎಚ್ಚರಿಕೆಯಲ್ಲಿ ನಾವು ಇರುತ್ತೇವೆ ಎಂದರು.


ಕಾಂಗ್ರೆಸ್ ನಾಯಕರು ಫುಲ್ ಅಲರ್ಟ್


ಸಮೀಕ್ಷೆಗಳಲ್ಲಿ ಕಾಂಗ್ರೆಸ್‌ಗೆ ಬಹುಮತದ ಮುನ್ಸೂಚನೆ ಹಿನ್ನೆಲೆ ಕಾಂಗ್ರೆಸ್​​ ನಾಯಕರು ಫುಲ್ ಅಲರ್ಟ್‌ ಆಗಿದ್ದಾರೆ.  ತಡರಾತ್ರಿ KPCC ಕಚೇರಿಯಲ್ಲಿ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಸುರ್ಜೇವಾಲಾ ನೇತೃತ್ವದಲ್ಲಿ ತುರ್ತು ಸಭೆ ನಡೆಸಿದರು. ಸಭೆಯಲ್ಲಿ ಸಂಸದ ಡಿ.ಕೆ ಸುರೇಶ್, ಕಾರ್ಯಾಧ್ಯಕ್ಷ ಸಲೀಂ ಅಹಮ್ಮದ್ ಭಾಗಿಯಾಗಿದ್ದರು.




ಎಲ್ಲಾ ಕ್ಷೇತ್ರದ ಅಭ್ಯರ್ಥಿಗಳಿಗೆ ಖುದ್ದು ಫೋನ್ ಮಾಡಿ ಸುರ್ಜೇವಾಲಾ ಮಾಹಿತಿ ಪಡೆದುಕೊಂಡಿದ್ದಾರೆ ಎನ್ನಲಾಗಿದೆ. ಇದಕ್ಕೂ ಮುನ್ನ ಸಿದ್ದರಾಮಯ್ಯ ಜೊತೆ ಕೆಲ ಕಾಲ ಚರ್ಚೆಯೂ ನಡೆಸಿದ್ದಾರೆ. ಇನ್ನು ಸಭೆಯಲ್ಲಿ ಎಲ್ಲಾ ಅಭ್ಯರ್ಥಿಗಳಿಗೆ ಕರೆ ಮಾಡಿ ಬೂತ್ ಮಟ್ಟದ ಮಾತದಾನ ವಿವರ ಸಂಗ್ರಹ ಮಾಡ್ತಿದ್ದಾರೆ.


ಇದನ್ನೂ ಓದಿ: Siddaramaiah ಮನೆಗೆ ವೈದ್ಯರ ದೌಡು; ಮನೆಯಲ್ಲಿಯೇ ಮಾಜಿ ಸಿಎಂಗೆ ಚಿಕಿತ್ಸೆ




ಇಂದು ಸಹ ಸೀಕ್ರೆಟ್ ಮೀಟಿಂಗ್


ಇಂದು ಕೂಡ ಕಾಂಗ್ರೆಸ್ ನಾಯಕರ ಸೀಕ್ರೆಟ್ ಮೀಟಿಂಗ್ ನಡೆಯಲಿದ್ದು, ಒಂದು ವೇಳೆ ಅತಂತ್ರ ಬಂದ್ರೆ ಯಾವುದೇ ಕಾರಣಕ್ಕೂ ಬಿಜೆಪಿ ಸರ್ಕಾರ ರಚಿಸಲು ಬಿಡದಿರಲು ಪ್ಲ್ಯಾನ್ ಮಾಡ್ತಿದ್ದಾರೆ.  ಕಾಂಗ್ರೆಸ್ ಜೊತೆಗೆ ಪಕ್ಷೇತರ, ಜೆಡಿಎಸ್ ಅಭ್ಯರ್ಥಿಗಳ ಜೊತೆಗೂ ದೂರವಾಣಿ ಮೂಲಕ ಮಾತಾಡಿ ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿದ್ದಾರಂತೆ ಕಾಂಗ್ರೆಸ್ ನಾಯಕರು.

First published: