• Home
  • »
  • News
  • »
  • state
  • »
  • Karnataka Congress: ಪರಮೇಶ್ವರ್​ ಮನದಲ್ಲೂ ಸಿಎಂ ಕುರ್ಚಿ ಆಸೆ; ಒಳ್ಳೆ ಟೈಮಲ್ಲಿ ಪಲ್ಟಿ ಹೊಡೆಸಿದ್ಯಾರು?

Karnataka Congress: ಪರಮೇಶ್ವರ್​ ಮನದಲ್ಲೂ ಸಿಎಂ ಕುರ್ಚಿ ಆಸೆ; ಒಳ್ಳೆ ಟೈಮಲ್ಲಿ ಪಲ್ಟಿ ಹೊಡೆಸಿದ್ಯಾರು?

ಮಾಜಿ ಡಿಸಿಎಂ ಜಿ ಪರಮೇಶ್ವರ್​

ಮಾಜಿ ಡಿಸಿಎಂ ಜಿ ಪರಮೇಶ್ವರ್​

ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ್ ಅವರು ಕ್ಷೇತ್ರದ ಅಭಿವೃದ್ಧಿ ವಿಚಾರ ಮಾತನಾಡುತ್ತಾ ಮನದಾಳದ ಮಾತು ಬಿಚ್ಚಿಟ್ಟಿದ್ದಾರೆ. ಈ ಕ್ಷೇತ್ರದ ಜನತೆ ನನ್ನನ್ನ ಎರಡು ಭಾರೀ ಆಯ್ಕೆ ಮಾಡಿದ್ದಾರೆ. ಆದ್ರೆ ಒಳ್ಳೆ ಟೈಂನಲ್ಲಿ ಪಲ್ಟಿ ಹೊಡೆಸಿದ್ದಾರೆ ಎಂದು ಹೇಳಿದ್ರು. 

  • News18 Kannada
  • Last Updated :
  • Karnataka, India
  • Share this:

ರಾಜ್ಯ ಕಾಂಗ್ರೆಸ್​ನಲ್ಲಿ (Karnataka Congress) ಕುರ್ಚಿ ಗುದ್ದಾಟ ಜೋರಾಗಿದೆ. ಚುನಾವಣೆಗೂ ಘೋಷಣೆಗೂ ಮುನ್ನ ಕಾಂಗ್ರೆಸ್ ವಲಯದಲ್ಲಿ ನಾನೇ ಸಿಎಂ, ನಾನೂ ಕೂಡ ಸಿಎಂ ಅಭ್ಯರ್ಥಿ ಎನ್ನುವ ಕೂಗು ಕೇಳಿ ಬರ್ತಿದೆ. ಸಿದ್ದರಾಮಯ್ಯ (Siddaramaiah) ಹೋದಲೆಲ್ಲಾ ಮುಂದಿನ ಸಿಎಂ ಅವರೇ ಘೋಷಣೆಗಳು ಕೇಳಿ ಬರ್ತಿದೆ. ಇತ್ತ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ (D.K Shivakumar)​ ಸಹ ಅನೇಕ ಬಾರಿ ನಾನು ಕೂಡ ಸಿಎಂ ಅಭ್ಯರ್ಥಿ ಎಂದು ಹೇಳಿದ್ದು, ನನಗೂ ಒಂದು ಚಾನ್ಸ್​ ಕೊಡಿ ಎಂದು ಕೇಳಿದ್ರು. ಇದೀಗ ಮಾಜಿ ಡಿಸಿಎಂ ಡಾ.ಜಿ ಪರಮೇಶ್ವರ್ (Dr. G Parameshwar)​ ಅವರು ಸಹ ಮುಖ್ಯಮಂತ್ರಿ ಆಗೋ ಮನದಾಸೆ ಬಿಚ್ಚಿಟ್ಟಿದ್ದಾರೆ. 


2 ಬಾರಿ ಗೆಲ್ಲಿಸಿ ಒಳ್ಳೆ ಟೈಮ್​ನಲ್ಲಿ ಪಲ್ಟಿ ಹೊಡೆಸಿದ್ರು


ಸ್ವಕ್ಷೇತ್ರ ಕೊರಟಗೆರೆಯ ತೋವಿನಕೆರೆಯ ಕಾರ್ಯಕ್ರಮದಲ್ಲಿ ಮಾತಾಡಿದ ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ್ ಅವರು ಕ್ಷೇತ್ರದ ಅಭಿವೃದ್ಧಿ ವಿಚಾರ ಮಾತನಾಡುತ್ತಾ ಮನದಾಳದ ಮಾತು ಬಿಚ್ಚಿಟ್ಟಿದ್ದಾರೆ. ಈ ಕ್ಷೇತ್ರದ ಜನತೆ ನನ್ನನ್ನ ಎರಡು ಭಾರೀ ಆಯ್ಕೆ ಮಾಡಿದ್ದಾರೆ. ಆದ್ರೆ ಒಳ್ಳೆ ಟೈಂನಲ್ಲಿ ಪಲ್ಟಿ ಹೊಡೆಸಿದ್ದಾರೆ ಎಂದು ಹೇಳಿದ್ರು.


ಒಂದೇ ಒಂದು ವೋಟ್​ನಲ್ಲಿ ಗೆದ್ದಿದ್ರೆ ಸಿಎಂ ಆಗ್ತಿದೆ


2013 ರಲ್ಲಿ ಒಂದೇ ಒಂದು ವೋಟ್ ನಲ್ಲಿ ಗೆದ್ದಿದ್ರೆ ಈ ರಾಜ್ಯದ ಮುಖ್ಯಮಂತ್ರಿ ಆಗೋ ಅವಕಾಶ ಇತ್ತು. ಆದ್ರೆ ಹಣೆಬರಹ ಇರ್ಬೇಕು ಅಲ್ವಾ? ಸಿಎಂ ಆಗುವ ಅದೃಷ್ಟ ಆಗ ನನಗಿರಲಿಲ್ಲ ಎಂದ್ರು. ಹಾಗಾಗಿ ಇವತ್ತು ನನ್ನ ಕೈಲಾದ ಕೆಲಸ ಮಾಡಿದ್ದೇನೆ ಅನ್ನೋ ಅತ್ಮತೃಪ್ತಿ ನನಗಿದೆ. ತಮಗೆ ಇದೆಯೋ ಇಲ್ವೋ ಗೊತ್ತಿಲ್ಲ ಎಂದು ತೋವಿನಕೆರೆ ಖಾಸಗಿ ಕಾರ್ಯಕ್ರಮದಲ್ಲಿ ಡಾ. ಜಿ ಪರಮೇಶ್ವರ್ ಹೇಳಿದ್ದಾರೆ.


ಇದನ್ನೂ ಓದಿ:  V Somanna: ಬೇಟಿ ಬಚಾವೋ ಘೋಷಣೆ ಗೌರವಿಸೋದಾದ್ರೆ ಸೋಮಣ್ಣರನ್ನು ವಜಾಗೊಳಿಸಿ: ಕಾಂಗ್ರೆಸ್


ಡಿಕೆ ಶಿವಕುಮಾರ್ ಮನದಲ್ಲಿ ಸಿಎಂ ಕುರ್ಚಿ ಆಸೆ


2023ರ ಸಾರ್ವತ್ರಿಕ ಚುನಾವಣೆ ಸಮೀಪಿಸುತ್ತಿದ್ದಂತೆ ಸಿಎಂ ಕುರ್ಚಿಯ ಕನಸು ಎಲ್ಲಾ ನಾಯಕರಲ್ಲಿಯೂ ಹೆಚ್ಚಾಗಿದೆ. ರಾಮನಗರದ (Ramanagara) ಐತಿಹಾಸಿಕ ಚಾಮುಂಡೇಶ್ವರಿ ಕರಗ ಮಹೋತ್ಸವ ಕಾರ್ಯಕ್ರಮದ ವೇದಿಕೆಯಲ್ಲಿ ಹೆಚ್.ಡಿ.ಕುಮಾರಸ್ವಾಮಿ (H. D Kumaraswamy) - ಡಿ.ಕೆ.ಶಿವಕುಮಾರ್ (D.K Shivakumar) ಸಿಎಂ ಕನಸಿನ ಮುನ್ನೋಟ ಬಹಿರಂಗ ಆಗಿತ್ತು. ಚಾಮುಂಡೇಶ್ವರಿ ಕರಗ ಮಹೋತ್ಸವ ಹಿನ್ನೆಲೆ ಕಾಂಗ್ರೆಸ್ ಪಕ್ಷದಿಂದ ರಸಮಂಜರಿ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು. ವೇದಿಕೆಯಲ್ಲಿ ಡಿಕೆಶಿ ಪವರ್ ಫುಲ್ ಭಾಷಣ ಮಾಡಿದ್ರು. ಕುಮಾರಸ್ವಾಮಿಗೂ ಅವಕಾಶ ನೀಡಿದ್ದೀರಿ, ದೇವೇಗೌಡರಿಗೂ (Deve Gowda) ಅವಕಾಶ ನೀಡಿದ್ದೀರಿ. ನೀವು ಈಗ ನನಗೂ ಅವಕಾಶ ಕೊಡಿ ಎಂದು ಕೇಳಿಕೊಂಡಿದ್ದರು.


ದೇವೇಗೌಡರು, ಕುಮಾರಸ್ವಾಮಿ ನಂತರ ನನಗೆ ಅವಕಾಶ - ಡಿಕೆಶಿ


ಮತ್ತೊಂದು ಕಡೆ ಹೆಚ್.ಡಿ.ಕುಮಾರಸ್ವಾಮಿ ಗೆ ಡಿ.ಕೆ.ಶಿವಕುಮಾರ್ ನೇರ ಸವಾಲ್ ಹಾಕಿದರು. ರಾಮನಗರದಲ್ಲೇ ನಿಂತು ಸವಾಲ್ ಹಾಕಿದ ಡಿ.ಕೆ.ಶಿವಕುಮಾರ್ ​ಚಾಮುಂಡೇಶ್ವರಿ ಕರಗ ಮಹೋತ್ಸವ ಹಿನ್ನೆಲೆ ಕಾಂಗ್ರೆಸ್ ಪಕ್ಷದಿಂದ ರಸಮಂಜರಿ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು. ವೇದಿಕೆಯಲ್ಲಿ ಡಿಕೆಶಿ ಪವರ್ ಫುಲ್ ಭಾಷಣ ಮಾಡಿದ್ರು. ಕುಮಾರಸ್ವಾಮಿಗೂ ಅವಕಾಶ ನೀಡಿದ್ದೀರಿ,  ದೇವೇಗೌಡರಿಗೂ ಅವಕಾಶ ನೀಡಿದ್ದೀರಿ. ನೀವು ಈಗ ನನಗೂ ಅವಕಾಶ ಕೊಡಿ.‌ ನನಗೆ ಯಾವ ಹೂವಿನ ಹಾರ ಬೇಡ.‌ ನಾನು ಇಲ್ಲಿ ಅಭ್ಯರ್ಥಿ ನಿಲ್ಲಿಸುತ್ತೇನೆ. ಅವರನ್ನ ವಿಧಾನಸೌಧಕ್ಕೆ ಕಳುಹಿಸಿಕೊಡಿ, ಅದೇ ನನಗೆ ಹೂವಿನಹಾರ ಎಂದಿದ್ರು.


ಇದನ್ನೂ ಓದಿ: BJP MLC: ಕುಮಾರಣ್ಣ ಸಿಎಂ ಆದ್ರೆ ಮೊದಲು ಖುಷಿ ಪಡೋದು ನಾನೇ; ಬಿಜೆಪಿ ಎಂಎಲ್​ಸಿ ಶಾಕಿಂಗ್ ಹೇಳಿಕೆ!


ಯಾರೇ ಸಿಎಂ ಎಂದರೂ ದೇವರ ಇಚ್ಛೆಯೇ ಬೇರೆ - ಹೆಚ್.ಡಿ.ಕೆ


ಇನ್ನು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಮಾತನಾಡಿ ಕಳೆದ 3 ವರ್ಷ ನಿಮ್ಮನ್ನ ನೋಡಲು ಈ ರೀತಿ ಸಾಧ್ಯವಾಗಿರಲಿಲ್ಲ, ಕೋವಿಡ್ ನಿಂದ ಕರಗ ಮಾಡಲು ಸಾಧ್ಯವಾಗಿರಲಿಲ್ಲ. ನನಗೆ ರಾಜಕೀಯ ಜನ್ಮ ಕೊಟ್ಟಿರುವ ನಿಮ್ಮ ಜೊತೆ ಮನಸ್ಸಿನಲ್ಲಿ ಇರುವ ಭಾವನೆ ಹಂಚಿಕೊಳ್ಳಲು ಈ ಕಾರ್ಯಕ್ರಮ. ರೈತರು ನೆಮ್ಮದಿಯಿಂದ ಬದಕಲು ಚಾಮುಂಡೇಶ್ವರಿ ತಾಯಿ ಕರುಣಿಸಲಿ.‌ 2019ರ ಜುಲೈ ರಂದು ನನ್ನ ಅಧಿಕಾರವನ್ನ ಕುತಂತ್ರದಿಂದ ತೆಗೆಯಲಾಗಿತು.‌ ತಾಯಿ ಚಾಮುಂಡೇಶ್ವರಿ ಆಶೀರ್ವಾದ ಪಡೆದು ನಿಮ್ಮ ಸಮ್ಮುಖದಲ್ಲಿ ಪ್ರತಿಜ್ಞೆ ಮಾಡಿ ಹೊರಟಿದ್ದೇನೆ ಎಂದು ಹೇಳಿದ್ರು.

Published by:ಪಾವನ ಎಚ್ ಎಸ್
First published: