ನೀವು ಸಿಎಂ ಆಗುವುದಾದರೆ ಮಾತ್ರ ಕಾಂಗ್ರೆಸ್​ಗೆ ವೋಟು: ದಲಿತ ಮತದಾರರ ಮಾತಿಗೆ ಜಿ. ಪರಮೇಶ್ವರ್ ಶಾಕ್

ವಿಶ್ವನಾಥ್ ಗೆದ್ದರೆ ಮಂತ್ರಿ ಆಗುತ್ತಾರೆಂದು ಯಾರೋ ಹೇಳುತ್ತಿದ್ದರು. ಸರ್ಕಾರ ಇದ್ದರಲ್ಲವೇ ಇವರು ಮಂತ್ರಿ ಆಗೋದು. ಚುನಾವಣೆ ಮುಗಿದ ಮೇಲೆ ಬಿಜೆಪಿ ಸರ್ಕಾರ ಬೀಳುತ್ತೆ. ನೂರಕ್ಕೆ ನೂರು ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತೆ ಎಂದು ಜಿ. ಪರಮೇಶ್ವರ್ ಭವಿಷ್ಯ ನುಡಿದಿದ್ದಾರೆ.

news18
Updated:November 25, 2019, 4:12 PM IST
ನೀವು ಸಿಎಂ ಆಗುವುದಾದರೆ ಮಾತ್ರ ಕಾಂಗ್ರೆಸ್​ಗೆ ವೋಟು: ದಲಿತ ಮತದಾರರ ಮಾತಿಗೆ ಜಿ. ಪರಮೇಶ್ವರ್ ಶಾಕ್
ಜಿ. ಪರಮೇಶ್ವರ್
  • News18
  • Last Updated: November 25, 2019, 4:12 PM IST
  • Share this:
ಮೈಸೂರು(ನ. 25): ಮಾಜಿ ಉಪಮುಖ್ಯಮಂತ್ರಿ ಡಾ| ಜಿ. ಪರಮೇಶ್ವರ್ ಅವರಿಗೆ ಹುಣಸೂರಿನ ಬನ್ನಿಕುಪ್ಪೆ ಗ್ರಾಮದಲ್ಲಿ ಸಖೇದಾಶ್ಚರ್ಯಕರ ಸನ್ನಿವೇಶ ಎದುರಾಯಿತು. ಹುಣಸೂರಿನ ಕಾಂಗ್ರೆಸ್ ಅಭ್ಯರ್ಥಿ ಹೆಚ್.ಪಿ. ಮಂಜುನಾಥ್ ಪರವಾಗಿ ಚುನಾವಣಾ ಪ್ರಚಾರಕ್ಕೆ ಹೋಗಿದ್ದ ಜಿ. ಪರಮೇಶ್ವರ್ ಅವರಿಗೆ ಅಲ್ಲಿಯ ದಲಿತ ಯುವಕರು ಪ್ರೀತಿಯಿಂದ ತರಾಟೆಗೆ ತೆಗೆದುಕೊಂಡರು. ನೀವು ಮುಖ್ಯಮಂತ್ರಿ ಆಗಿರಿ ಎಂದು ಆತ್ಮೀಯತೆಯಿಂದ ಅವರಿಗೆ ಘೇರಾವ್ ಹಾಕಿದ ಘಟನೆ ನಡೆಯಿತು. ಇಂಥ ಅನಿರೀಕ್ಷಿತ ಸಂದರ್ಭ ಎದುರಾಗುತ್ತದೆಂದು ನಿರೀಕ್ಷಿಸದ ಜಿ. ಪರಮೇಶ್ವರ್ ಅವರು ದಲಿತರ ಪ್ರೀತಿಯ ಪ್ರಶ್ನೆಗೆ ಉತ್ತರಿಸಲಾಗದೇ ಮೌನಕ್ಕೆ ಶರಣಾಗಬೇಕಾಯಿತು.

ಸಿದ್ದರಾಮಯ್ಯರನ್ನು ಮುಖ್ಯಮಂತ್ರಿ ಮಾಡಲು ನಾವು ಹುಣಸೂರಿನ ಕಾಂಗ್ರೆಸ್ ಅಭ್ಯರ್ಥಿ ಮಂಜುನಾಥ್ ಅವರಿಗೆ ನಾವ್ಯಾಕೆ ಮತ ಹಾಕಬೇಕು. ನೀವು ಸಿಎಂ ಆಗುವುದಾದರೆ ಮಾತ್ರ ನಾವು ವೋಟ್ ಹಾಕುತ್ತೇವೆ ಎಂದು ದಲಿತ ಸಮುದಾಯದ ಜನರು ಪರಮೇಶ್ವರ್ ಅವರಿಗೆ ತಿಳಿಸಿದರು.

ಇದನ್ನೂ ಓದಿ: ಯಡಿಯೂರಪ್ಪ ಅಪರೇಷನ್ ಕಮಲದ ಪಿತಾಮಹ; ಅನಂತಕುಮಾರ್ ಹೆಗಡೆ ಒಬ್ಬ ಹುಚ್ಚ - ಸಿದ್ಧರಾಮಯ್ಯ ಲೇವಡಿ

ನೀವು ಹತ್ತು ವರ್ಷ ಕೆಪಿಸಿಸಿ ಅಧ್ಯಕ್ಷರಾಗಿದ್ದಿರಿ. ಆದರೂ ನಿಮ್ಮನ್ನು ಮುಖ್ಯಮಂತ್ರಿಯನ್ನಾಗಿ ಮಾಡಲಿಲ್ಲ. ನೀವು ಗಟ್ಟಿಯಾಗಿ ಮಾತನಾಡುವುದಿಲ್ಲ ಎಂದು ಜಿ. ಪರಮೇಶ್ವರ್ ಅವರಿಗೆ ಅಲ್ಲಿಯ ಜನರು ಪ್ರೀತಿಯಿಂದ ಟೀಕೆ ಮಾಡಿದರು.

ದಲಿತರು ಸಿಎಂ ಆಗಲು ಸಿದ್ದರಾಮಯ್ಯ ಅವರಿಂದ ಅಡ್ಡಿಯಾಗಿದೆ ಎಂಬ ಆರೋಪಗಳನ್ನ ಜಿ. ಪರಮೇಶ್ವರ್ ಈ ಸಂದರ್ಭದಲ್ಲಿ ತಳ್ಳಿಹಾಕಿದರು. “ನನ್ನನ್ನು ಸಿಎಂ ಮಾಡೋದು ಸಿದ್ದರಾಮಯ್ಯ ಅಲ್ಲ, ಹೈಕಮಾಂಡ್. ಜನರು ನಿರ್ಧಾರ ಮಾಡಿ ಕಾಂಗ್ರೆಸ್​ಗೆ ಅಧಿಕಾರ ಕೊಟ್ಟರೆ ಹೈಕಮಾಂಡ್ ಸಿಎಂ ಸ್ಥಾನ ಯಾರಿಗೆ ಹೋಗಬೇಕೆಂದು ನಿರ್ಧಾರ ಮಾಡುತ್ತದೆ” ಎಂದು ಹಿರಿಯ ಕಾಂಗ್ರೆಸ್ ಮುಖಂಡರು ಸ್ಪಷ್ಟಪಡಿಸಿದರು.

ಇದನ್ನೂ ಓದಿ: ಯಾರಾದ್ರೂ ಉಂಗುರ, ದುಡ್ಡು ಕೊಟ್ಟರೆ ತಗೊಳ್ಳಿ, ಅದು ಮೋಸದ ಸಂಪಾದನೆ; ಪ್ರಚಾರ ವೇಳೆ ಎಂಟಿಬಿಗೆ ಮಾತಲ್ಲೇ ತಿವಿದ ಶರತ್ ಬಚ್ಚೇಗೌಡ

ಹುಣಸೂರಿನ ಬಿಜೆಪಿ ಅಭ್ಯರ್ಥಿ ಹೆಚ್. ವಿಶ್ವನಾಥ್ ವಿರುದ್ಧ ಜಿ. ಪರಮೇಶ್ವರ್ ತಮ್ಮ ವಾಗ್ದಾಳಿ ನಡೆಸಿದರು. “71 ವರ್ಷದ ನಂತರ ದಲಿತರೊಬ್ಬರು ಉಪ ಮುಖ್ಯಮಂತ್ರಿಯಾದರು. ಮುಖ್ಯಮಂತ್ರಿ ಅಲ್ಲ, ಉಪ ಮುಖ್ಯಮಂತ್ರಿಯಾಗಿದ್ದು ಅಷ್ಟೇ. ಸಿಎಂ ಆಗೋಕೆ ಇನ್ನೂ ಸಮಯ ಇದೆ. ಉಪಮುಖ್ಯಮಂತ್ರಿಯಾಗಿದ್ಧೇವೆ. ಇನ್ನೇನು ಮುಖ್ಯಮಂತ್ರಿಯಾಗುತ್ತೇವೆ ಎಂದುಕೊಂಡಿದ್ದೆವು. ಆದರೆ, ನೀವು ಮತ ಹಾಕಿ ಕಳುಹಿಸಿದ ವಿಶ್ವನಾಥ್ ಸರ್ಕಾರ ಬೀಳಿಸಿದರು. ವಿಶ್ವನಾತ್ ನನಗೆ ಆತ್ಮೀಯರು, ಗಳಸ್ಯ ಕಂಠಸ್ಯ ಇದ್ದ ಹಾಗೆ ಇದ್ದರು. ಆದರೆ ಈಗ ಗಳಸ್ಯನೂ ಅಲ್ಲ, ಕಂಠನೂ ಅಲ್ಲ. ಅವರು ಜೆಡಿಎಸ್​ಗೆ ಹೋದಾಗಲೂ ನನ್ನ ಜೊತೆ ಚೆನ್ನಾಗಿದ್ದರು. ಆದರೆ, ದುಡ್ಡು ಇಸ್ಕೋಂಡು ಬಿಜೆಪಿ ಹೋಗಿದ್ದು ಸರಿ ಕಾಣಲಿಲ್ಲ” ಎಂದು ಜಿ. ಪರಮೇಶ್ವರ್ ನೋವು ವ್ಯಕ್ತಪಡಿಸಿದರು.“ನಾನು ದಾರಿಯಲ್ಲಿ ಬರುವಾಗ ಜನರು ನಿಲ್ಲಿಸಿ ಒಂದು ಮಾತು ಹೇಳಿದರು. ವಿಶ್ವನಾಥ್ ಅವರನ್ನು ತಮ್ಮ ಊರಿನ ಒಳಗೆ ಬಿಟ್ಟುಕೊಂಡಿಲ್ಲ ಅಂದರು. ಯಾಕಪ್ಪ ಅಂದರೆ, ಕೆರೆ ಕಟ್ಟಿಸಿಕೊಡ್ತೀನಿ ಅಂದವರು ಇತ್ತ ಕಡೆ ಬರಲೇ ಇಲ್ಲ. ಅದಕ್ಕೆ ಅವರನ್ನು ಊರಿನ ಒಳಗೆ ಬಿಟ್ಟುಕೊಂಡಿಲ್ಲ ಅಂದರು. ನಾನು ಇಲ್ಲಿಗೆ ದಲಿತ ನಾಯಕನಾಗಿ ಬಂದಿಲ್ಲ. ಅನರ್ಹ ಶಾಸಕರ ವಿಚಾರಗಳನ್ನು ನಿಮಗೆ ತಿಳಿಸಲು ಬಂದಿದ್ದೇನೆ” ಎಂದು ಜಿ. ಪರಮೇಶ್ವರ್ ತಮ್ಮ ಭಾಷಣದ ಸಂದರ್ಭದಲ್ಲಿ ಹೇಳಿದರು.

ಇದನ್ನೂ ಓದಿ: ಉಪಚುನಾವಣೆಯಲ್ಲಿ ಬಿಜೆಪಿಗೆ ಸೋಲುಂಟಾದರೆ ಮತ್ತೆ ಆಪರೇಷನ್ ಕಮಲ?; ಜೆಡಿಎಸ್ ವರಿಷ್ಠರಿಗೆ ಲಿಂಬಾವಳಿ ಶಾಕ್

ವಿಶ್ವನಾಥ್ ಗೆದ್ದರೆ ಮಂತ್ರಿ ಆಗುತ್ತಾರೆಂದು ಯಾರೋ ಹೇಳುತ್ತಿದ್ದರು. ಸರ್ಕಾರ ಇದ್ದರಲ್ಲವೇ ಇವರು ಮಂತ್ರಿ ಆಗೋದು. ಚುನಾವಣೆ ಮುಗಿದ ಮೇಲೆ ಬಿಜೆಪಿ ಸರ್ಕಾರ ಬೀಳುತ್ತೆ. ನೂರಕ್ಕೆ ನೂರು ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತೆ ಎಂದು ಜಿ. ಪರಮೇಶ್ವರ್ ಭವಿಷ್ಯ ನುಡಿದರು.

ಆಪರೇಷನ್ ಕಾಂಗ್ರೆಸ್?

ಜಿ. ಪರಮೇಶ್ವರ್ ಅವರ ಭಾಷಣದಲ್ಲಿ ಬಿಜೆಪಿಯ ಆಪರೇಷನ್ ಕಮಲಕ್ಕೆ ಪ್ರತಿಯಾಗಿ ರಿವರ್ಸ್ ಆಪರೇಷನ್ ನಡೆಯುವ ಸುಳಿವು ಕಾಣಿಸಿತು. “ಉಪಚುನಾವಣೆಯಲ್ಲಿ ನಿಮಗೆ 8 ಸ್ಥಾನ ಬೇಕು. ಆಗ ಮಾತ್ರ ಬಿಜೆಪಿ ಸರ್ಕಾರ ಉಳಿಯುವುದು. ನೀವು 9 ಸ್ಥಾನ ಗೆದ್ದು ಒಂದೇ ಒಂದು ಹೆಚ್ಚು ಸ್ಥಾನದೊಂದಿಗೆ ಸರ್ಕಾರ ಮಾಡುತ್ತೀರಾ? ಆವತ್ತು ಸಂಜೆ ಇಬ್ಬರು ಶಾಸಕರು ನಮ್ಮ ಕಡೆ ಬಂದರೆ ಏನು ಮಾಡುತ್ತೀರಾ?” ಎಂದವರು ಪ್ರಶ್ನೆ ಹಾಕಿದರು.

ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್​ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್​ಬುಕ್ ಮೆಸೆಂಜರ್​ನಲ್ಲಿ ಸಬ್ಸ್​ಕ್ರೈಬ್ ಮಾಡಿ.
First published: November 25, 2019, 4:09 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading