News18 India World Cup 2019

ಬೆಳಗಾವಿ ಶಾಸಕರ ಕಿತ್ತಾಟಕ್ಕೆ ಉಪಹಾರ ಕೂಟ ಕೈ ಬಿಟ್ಟ ಡಿಸಿಎಂ

news18
Updated:September 7, 2018, 9:52 PM IST
ಬೆಳಗಾವಿ ಶಾಸಕರ ಕಿತ್ತಾಟಕ್ಕೆ ಉಪಹಾರ ಕೂಟ ಕೈ ಬಿಟ್ಟ  ಡಿಸಿಎಂ
ಜಿ. ಪರಮೇಶ್ವರ್
news18
Updated: September 7, 2018, 9:52 PM IST
ಕೃಷ್ಣಾ ಜಿ.ವಿ, ನ್ಯೂಸ್​ 18 ಕನ್ನಡ

ಬೆಂಗಳೂರು (ಸೆ.7): ಅತ್ತ ಸಿದ್ದರಾಮಯ್ಯ ವಿದೇಶ ಪ್ರವಾಸದಲ್ಲಿರುವಾಗ ಇತ್ತ ಡಿಸಿಎಂ ಜಿ ಪರಮೇಶ್ವರ್​ ಶಕ್ತಿ ಪ್ರದರ್ಶನಕ್ಕೆ ಮುಂದಾಗಿದ್ದಾರೆ. ತಮ್ಮ ಬಳಿಯಿರುವ ನಗರಾಭಿವೃದ್ಧಿ ಖಾತೆಯನ್ನು ಉಳಿಸಿಕೊಳ್ಳುವ ಸಲುವಾಗಿ ಶಾಸಕರಿಗೆ ಉಪಹಾರ ಕೂಟ ಆಯೋಜನೆ ಮಾಡಿದ್ದರು. ಆದರೆ ಈಗ ಬೆಳಗಾವಿ ಶಾಸಕರ ಕಿತ್ತಾಟದಿಂದ ಹಿನ್ನಲೆಯಲ್ಲಿ ನಾಳಿನ ಉಪಹಾರ ಕೂಟವನ್ನು ಪರಮೇಶ್ವರ್​ ರದ್ದು ಮಾಡಲು ನಿರ್ಧರಿಸಿದ್ದಾರೆ.

ಜಾರಕಿಹೊಳಿ- ಹೆಬ್ಬಾಳ್ಕರ್​ ನಡುವೆ ನಡೆದ ಕಿತ್ತಾಟ ಕಾಂಗ್ರೆಸ್​ ನಾಯಕರಿಗೆ ತಲೆನೋವಾಗಿ ಪರಿಣಮಿಸಿತ್ತು. ಈ ಕುರಿತು ರಾಜಿ ಸಂಧಾನಕ್ಕೆ ಕಾಂಗ್ರೆಸ್​ ಉಸ್ತುವಾರಿ ವೇಣುಗೋಪಾಲ್​, ಸಿದ್ದರಾಮಯ್ಯ ಮುಂದಾದರೂ ವಿಫಲವಾಗಿದ್ದರು. ಕಡೆಗೆ ಹೈ ಕಮಾಂಡ್​ ಮಧ್ಯ ಪ್ರವೇಶದ ಹಿನ್ನಲೆ  ಈ ಕಿತ್ತಾಟ ತಾತ್ಕಲಿಕ ಶಮನವಾಗಿದೆ.

ಬೆಳಗಾವಿ ನಾಯಕರ ಜಗಳ ಒಂದೆಡೆಯಾದರೆ, ಸಚಿವ ಸ್ಥಾನ ಕೈ ತಪ್ಪಿದ ಹಿನ್ನಲೆ ಶಾಸಕ ರಾಮಲಿಂಗಾರೆಡ್ಡಿ, ಹ್ಯಾರಿಸ್,‌ಕೆ ಜೆ ಜಾರ್ಜ್, ಮುನಿರತ್ನ, ಭೈರತಿ ಬಸವರಾಜ್ ಸೇರಿದಂತೆ ಹಲವರು ಅಸಮಾಧಾನಗೊಂಡಿದ್ದಾರೆ.

ಈ ಬೆಳವಣಿಗೆ ಹಿನ್ನಲೆಯಲ್ಲಿ ನಾಳೆ ಏರ್ಪಡಿಸಿದ್ದ ಉಪಹಾರ ಕೂಟಕ್ಕೆ  ಜಾರಕಿಹೊಳಿ ಸಹೋದರರು ಅನುಮಾನ ಕೂಡ ಎನ್ನಲಾಗಿದೆ. ಇದರಿಂದಾಗಿ ನಾಳೆಯ ಉಪಹಾರ ಕೂಟವನ್ನು ಪರಮೇಶ್ವರ್​ ಕೈ ಬಿಟ್ಟು ತುಮಕೂರು ಪ್ರವಾಸಕ್ಕೆ ಮುಂದಾಗಿದ್ದಾರೆ ಎಂದು ಮೂಲಗಳು ತಿಳಿಸಿದೆ.
First published:September 7, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...