ಹಾಸನದಲ್ಲಿ ಆಕಸ್ಮಿಕವಾಗಿ ನಾಗರಹಾವು ಸಾವು: ವಿಶೇಷ ಪೂಜೆ ಸಲ್ಲಿಸಿ ಅಂತ್ಯಸಂಸ್ಕಾರ ಮಾಡಿದ ಭಕ್ತರು


Updated:February 14, 2018, 11:05 AM IST
ಹಾಸನದಲ್ಲಿ ಆಕಸ್ಮಿಕವಾಗಿ ನಾಗರಹಾವು ಸಾವು: ವಿಶೇಷ ಪೂಜೆ ಸಲ್ಲಿಸಿ ಅಂತ್ಯಸಂಸ್ಕಾರ ಮಾಡಿದ ಭಕ್ತರು

Updated: February 14, 2018, 11:05 AM IST
-ಡಿಎಂಜಿ ಹಳ್ಳಿ ಅಶೋಕ್, ನ್ಯೂಸ್18 ಕನ್ನಡ

ಹಾಸನ(ಫೆ.14): ಒಂದೆಡೆ ಶಿವರಾತ್ರಿ ಹಬ್ಬ ಆಚರಣೆ ಮಾಡುತ್ತಿದ್ದರೆ, ಇತ್ತ ಹಾಸನದ ಹೊಳೆನರಸೀಪುರದಲ್ಲಿ ದೇವಾಲಯದ ಹುತ್ತದಲ್ಲಿದ್ದ ಹಾವು ಸತ್ತ ಬಳಿಕ, ಅದಕ್ಕೆ ಮನುಷ್ಯರ ರೀತಿಯಲ್ಲೇ ಅಂತ್ಯಸಂಸ್ಕಾರ ಮಾಡಲಾಗಿದೆ.

ಹೊಳೆನರಸೀಪುರ ಪಟ್ಟಣದ ಹೇಮಾವತಿ ನದಿ ದಂಡೆಯ ಮೇಲೆ ಪುರಾತನ ಕಾಲದ ಮಡಿವಾಳೇಶ್ವರ ದೇಶೀ ಕೇಂದ್ರ ಶಿವಾಚಾರ್ಯ ಆಶ್ರಮವಿದೆ. ಅಲ್ಲಿ ಈಶ್ವರ ಲಿಂಗವಿರುವ ಗದ್ದುಗೆ ಇದ್ದು, ಕಳೆದ 15 ವರ್ಷಗಳಿಂದಲೂ ಇಲ್ಲಿ ನೆಲೆಯೂರಿದ್ದ ನಾಗರಹಾವೊಂದು ಭಕ್ತರಿಗೂ ದರ್ಶನ ನೀಡುತ್ತಿತ್ತು. ಈ ಹಾವು ಯಾರಿಗೂ, ಯಾವುದೇ ಭಕ್ತರಿಗೂ ಯಾವುದೇ ತೊಂದರೆ ನೀಡಿರಲಿಲ್ಲ. ಒಮ್ಮೊಮ್ಮೆ ಗದ್ದುಗೆ ಮೇಲಿನ ಶಿವಲಿಂಗದ ಮೇಲೆ ಕಾಣಿಸಿಕೊಂಡು ಹೆಡೆ ಬಿಚ್ಚಿ‌ ದರ್ಶನ ನೀಡುತ್ತಿತ್ತು. ಈ ಹಾವು ಕಳೆದ ಗುರುವಾರ ಆಕಸ್ಮಿಕವಾಗಿ ಸಾವನ್ನಪ್ಪಿತ್ತು. ಅದನ್ನು ಬೇರೆಲ್ಲಿಗೂ ಎಸೆಯದ ಸ್ಥಳೀಯರು ಹಾಗೂ ಮಠದ ಭಕ್ತರು, ಸತ್ತ ದೇವರ ಹಾವನ್ನು ಅದೇ ಆಶ್ರಮದ ಬಳಿ ಇರುವ ಅರಳೀಕಟ್ಟೆ ಮೇಲೆ ಅಂತ್ಯ ಸಂಸ್ಕಾರ ಮಾಡಿ ಭಕ್ತಿ ಸಮರ್ಪಣೆ ಮಾಡಿದ್ದಾರೆ.

ಆದರೆ ಪುರೋಹಿತರು ಹೇಳುವ ಪ್ರಕಾರ, ಸುಬ್ರಹ್ಮಣ್ಯ ಸ್ವಾಮಿ ಎಂದು ನಂಬಲಾಗಿರುವ ನಾಗರಹಾವು ಮೃತಪಟ್ಟರೆ ಅಥವಾ ಯಾರೋ ಹೊಡೆದು ಸಾಯಿಸಿದರೆ ಅದನ್ನು ದಹಿಸಬೇಕು. ನಂತರ ಅದರ ಅಸ್ಥಿಯನ್ನು ಗಂಗೆಗೆ ಬಿಟ್ಟು ವಿಶೇಷ ಪೂಜೆ ಸಲ್ಲಿಸಿದರೆ ಕರ್ಮಾದಿಗಳು ನಿವಾರಣೆಯಾಗಲಿವೆ ಎಂದು ಅಭಿಪ್ರಾಯಪಟ್ಟಿದ್ದಾರೆ.
First published:February 14, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ