ಪದ್ಮಶ್ರೀ ಪುರಸ್ಕೃತೆಗೆ ಸ್ವಂತದ ಸೂರಿಲ್ಲ.. ಕನ್ನಡಿಗರೇ ಜೋಗತಿ ಮಂಜಮ್ಮಗೆ ನೆರವಾಗಿ, ಇದು ನ್ಯೂಸ್18 ಕಳಕಳಿ

#helppadmashreemanjamma: ಜೋಗತಿ ಮಂಜಮ್ಮಗೆ ಸ್ವಂತದ ಸೂರಿಲ್ಲ ಅಂದ್ರೆ ನಂಬಲೇಬೇಕು. ಪುಟ್ಟ ಮನೆಯ ಕನಸು ಕಂಡಿರುವ ಜೋಗತಿ ಮಂಜಮ್ಮ ಅವರ ಬ್ಯಾಂಕ್​ ಖಾತೆಗೆ ದಾನ ನೀಡಬೇಕಿದೆ. ಬ್ಯಾಂಕ್​ ಡೀಟೈಲ್ಸ್​ ಇಲ್ಲಿದೆ.

ಜೋಗತಿ ಮಂಜಮ್ಮ

ಜೋಗತಿ ಮಂಜಮ್ಮ

 • Share this:
  ಜೋಗತಿ ಮಂಜಮ್ಮ (Jogati Manjamma) ಕರುನಾಡಿನಲ್ಲಿ ಈಗ ಚಿರಪರಿಚಿತ ಹೆಸರು. ಕರ್ನಾಟಕ ಜಾನಪದ ಅಕಾಡೆಮಿ (Karnataka Janapada Academy) ಅಧ್ಯಕ್ಷೆ ಆಗಿರುವ ಜೋಗತಿ ಮಂಜಮ್ಮ ಅವರನ್ನು ಪದ್ಮಶ್ರೀ (Padmashri) ಪುರಸ್ಕಾರ ಅರಸಿ ಬಂದಿದೆ. ಆದರೆ ಜೋಗತಿ ಮಂಜಮ್ಮ ಪರಿಸ್ಥಿತಿ ಹೇಗಿದೆ..? ಅವರ ಜೀವನ ಹೇಗೆ ನಡೆಯುತ್ತಿದೆ ಎಂಬ ಕಳಕಳಿಯೊಂದಿಗೆ ನ್ಯೂಸ್​ 18 ಕನ್ನಡ ಅವರನ್ನು ಸಂದರ್ಶಿಸಿತು. ಸಮಾಜದಲ್ಲಿ ತುಳಿತ, ಅಸಡ್ಡೆ, ಭೇದಕ್ಕೆ ಒಳಗಾದವರು ತೃತೀಯ ಲಿಂಗಿಗಳು. ಮಂಗಳಮುಖಿಯರನ್ನು ಕಂಡ್ರೆ ಅಸಹ್ಯವಾಗಿ ನೋಡೋರೇ ಹೆಚ್ಚು. ತುಳಿತಕ್ಕೊಳಗಾದ ದಮನಿತ ಸಮುದಾಯದಿಂದ ದೇಶವೇ ತಿರುಗಿ ನೋಡುವಂತೆ ಬೆಳೆದು ನಿಂತವರು ಜೋಗತಿ ಮಂಜಮ್ಮ.

  ಜೋಗತಿ ಮಂಜಮ್ಮಗೆ ಸ್ವಂತದ ಸೂರಿಲ್ಲ

  ಹಾಡುತ್ತಾ, ಕುಣಿಯುತ್ತಾ, ರಂಗಭೂಮಿ, ಸಿನಿಮಾದಲ್ಲೂ ಛಾಪು ಮೂಡಿಸಿದ ಜೋಗತಿ ಮಂಜಮ್ಮ, ಕರ್ನಾಟಕ ಜನಪದ ಅಧ್ಯಕ್ಷೆ ಕೂಡ ಆಗಿದ್ದಾರೆ. ಜೋಗತಿ ಮಂಜಮ್ಮ ಅವರ ಕೆಲಸವನ್ನು ಗಮನಿಸಿದ ಕೇಂದ್ರ ಸರ್ಕಾರದ ಪದ್ಮಶ್ರೀ ಪುರಸ್ಕಾರ ನೀಡಿ ಗೌರವಿಸಿದೆ. ಆದ್ರೆ ಬದುಕು ಮಾತ್ರ ಇನ್ನೂ ಕೂಡ ಕಷ್ಟದ ಹಾದಿಯಲ್ಲೇ ಇದೆ. ಜೋಗತಿ ಮಂಜಮ್ಮ ತೃತೀಯ ಲಿಂಗಿಗಳ ನಡುವೆ ತನ್ನದೇ ಆದ ಸಾಧನೆಯನ್ನು ದೇಶವೇ ಗೌರವಿಸುತ್ತಿದೆ. ಜನಪದ ಅಧ್ಯಕ್ಷೆ ಅಷ್ಟೇ ಅಲ್ಲ ಸಾಕಷ್ಟು ವಿವಿ ವಿದ್ಯಾರ್ಥಿಗಳು ಜೋಗತಿ ಮಂಜಮ್ಮ ಬಗ್ಗೆ ಓದುತ್ತಿದ್ದಾರೆ. ಆದ್ರೆ ಜೋಗತಿ ಮಂಜಮ್ಮಗೆ ಸ್ವಂತ ಸೂರಿಲ್ಲ ಅಂದ್ರೆ ನಾವು ನಂಬಲೇಬೇಕು. ನಿರ್ಮಾಣ ಹಂತದಲ್ಲೇ ನಿಂತಿರುವ ಮನೆ ಪೂರ್ಣವಾಗಿಲ್ಲ.

  ಸಿನಿಮಾ, ರಂಗಭೂಮಿ, ಜನಪದ, ನೃತ್ಯ, ಸಂಗೀತ ಸೇರಿದಂತೆ ಸಾಕಷ್ಟು ಕ್ಷೇತ್ರಗಳಲ್ಲಿ ಗುರುತಿಸಿಕೊಂಡಿರುವ ಜೋಗತಿ ಮಂಜಮ್ಮ ಅವರಿಗೆ ದಾನಿಗಳು ಸಹಾಯ ಹಸ್ತ ಚಾಚಬೇಕಿದೆ. ಪುಟ್ಟ ಮನೆಯ ಕನಸು ಕಂಡಿರುವ ಜೋಗತಿ ಮಂಜಮ್ಮ ಅವರ ಬ್ಯಾಂಕ್​ ಖಾತೆಗೆ ದಾನ ನೀಡಬೇಕಿದೆ. ಬ್ಯಾಂಕ್​ ಡೀಟೈಲ್ಸ್​ ಹೀಗಿದೆ  ಕರುನಾಡಿನ ಕಲಾವಿದೆ ಜೋಗತಿ ಮಂಜಮ್ಮ ಗಂಡಾಗಿ ಹುಟ್ಟಿ ಹೆಣ್ಣಾಗಿ ಬದಲಾಗಿ ಮಂಗಳಮುಖಿ ಆದ್ಮೇಲೂ ಸಮಾಜದ ಕ್ರೂರ ದೃಷ್ಟಿಯ ನಡುವೆ ಬೆಳೆದು ನಿಂತ ಸಾಧಕಿ. ಈ ಸಾಧಕಿಗೆ ಒಂದು ಸ್ವಂತ ಮನೆ ಆಗಲಿ ಎನ್ನುವುದು ನ್ಯೂಸ್​ 18 ಕನ್ನಡ ಕಳಕಳಿ. ನಿಮ್ಮ ಕೈಲಾದ ಧನ ಸಹಾಯ ಮಾಡಿದ್ರೆ ಜೋಗತಿ ಮಂಜಮ್ಮ ಕನಸು ನನಸಾಗಲಿದೆ.

  ಇದನ್ನೂ ಓದಿ: Champa Shashti 2021: ಅದ್ಧೂರಿಯಾಗಿ ನಡೆದ ಕುಕ್ಕೆ ಸುಬ್ರಹ್ಮಣ್ಯನ ಬ್ರಹ್ಮ ರಥೋತ್ಸವ!

  ಮಂಜಮ್ಮನ ಇತಿಹಾಸ

  ಬಳ್ಳಾರಿ ಜಿಲ್ಲೆಯ ಕಲ್ಲು ಕಂಬ ಗ್ರಾಮದ ಹನಮಂತ ಶೆಟ್ಟಿ ಮತ್ತು ಜಯಲಕ್ಷ್ಮಿಯವರ 21 ಮಕ್ಕಳಲ್ಲಿ ಒಬ್ಬರು ಮಂಜುನಾಥ ಶೆಟ್ಟಿ. ಹರಿಹರ ಮತ್ತು ದಾವಣಗೆರೆ ಜಿಲ್ಲೆಯ ಕುಕ್ವಾಡ ಗ್ರಾಮದಲ್ಲಿ ಮಂಜುನಾಥನಾಗಿ 7ನೇ ತರಗತಿವರೆಗೆ ವಿದ್ಯಾಭ್ಯಾಸ ಮುಗಿಸಿದರು. ಅಲ್ಲಿಯವರೆಗೂ ಗಂಡು ಮಗನಾಗಿ ಬೆಳೆದ ಇವರಿಗೆ ಹೆಣ್ಣು ಮಕ್ಕಳ ಭಾವನೆಗಳು ಬರತೊಡಗಿದವು. ಹೆಣ್ಣು ಮಕ್ಕಳ ಉಡುಗೆ ತೊಡುಗೆಗಳಲ್ಲಿ ಆಸಕ್ತಿ, ಹೆಣ್ಣು ಮಕ್ಕಳಂತೆ ಮಾಡುವ ಕೆಲಸಗಳಲ್ಲಿ ಮನಸ್ಸು ಪ್ರಫುಲ್ಲವಾಗುತ್ತಿತ್ತು. ಬಾಲ್ಯದಲ್ಲಿ ನಾಟಕಗಳಲ್ಲಿ ವಹಿಸುತ್ತಿದ್ದ ಹೆಣ್ಣು ಪಾತ್ರಗಳು ಖುಷಿ ನೀಡುತ್ತಿದ್ದವಾದರೂ ಅದರಿಂದ ಕೆಲವರಿಂದ ಟೀಕೆಗೂ ಒಳಗಾಗಬೇಕಾಯಿತು.

  ಜಾನಪದಕ್ಕೆ ಇವರ ಸೇವೆಯನ್ನು ಗುರುತಿಸಿ ಕರ್ನಾಟಕ ಸರ್ಕಾರ 2010ರಲ್ಲಿ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿದೆ. ಇವರು ಕರ್ನಾಟಕ ಜಾನಪದ ಅಕಾಡೆಮಿಯ ಮೊದಲ ಸದಸ್ಯರಾಗಿದ್ದಲ್ಲದೆ ನಂತರ ಅದೇ ಸಂಸ್ಥೆಯ ಅಧ್ಯಕ್ಷರಾಗಿ ನೇಮಕಗೊಂಡರು. ಇಂತಹ ಉನ್ನತ ಸಂಸ್ಥೆಗೆ ಮುಖ್ಯಸ್ಥರಾದ ಮೊದಲ ತೃತೀಯ ಲಿಂಗಿ ಇವರು ಎಂಬುದು ಹೆಮ್ಮೆಯ ವಿಚಾರ.ಇನ್ನು ಇತ್ತೀಚೆಗೆ ಯುರೋಪ್ ದೇಶಗಳ ಒಕ್ಕೂಟದಲ್ಲಿ ಮೊಟ್ಟ ಮೊದಲ ಬಾರಿಗೆ 'ಮ್ಯೂನಿಕ್‌ ಕನ್ನಡಿಗರು' ಪದ್ಮಶ್ರೀ ಪ್ರಶಸ್ತಿ ವಿಜೇತೆ ಮಾತಾ ಮಂಜಮ್ಮ ಜೋಗತಿಯವರನ್ನು ಸನ್ಮಾನಿಸಿ ಅಭಿನಂದನೆಯನ್ನು ಸಲ್ಲಿಸಿದ್ದಾರೆ. ಇದು ಆನ್‌ಲೈನ್ ಮೂಲಕ ವಿಶ್ವಾದ್ಯಂತ ಸಹೃದಯಿ ಕನ್ನಡಿಗರನ್ನು ತಲುಪಿದೆ.
  Published by:Kavya V
  First published: