Full Occupancy In Theaters: ಸಚಿವ ಡಾ.ಕೆ ಸುಧಾಕರ್ ಭೇಟಿ ಮಾಡಿದ ಕನ್ನಡ ಸಿನಿಮಾ ನಿರ್ಮಾಪಕರು

ನಿರ್ಮಾಪಕರಾದ ಜಯಣ್ಣ, ಸೂರಪ್ಪ ಬಾಬು, ಕೆ.ಪಿ ಶ್ರೀಕಾಂತ್ ಅವರು ಇಂದು ಆರೋಗ್ಯ ಸಚಿವ ಕೆ. ಸುಧಾರಕರ್ ಅವರನ್ನು ಭೇಟಿಯಾಗಿದ್ದಾರೆ. ಚಿತ್ರಮಂದಿರಗಳಲ್ಲಿ ಪೂರ್ಣ ಪ್ರಮಾಣದಲ್ಲಿ ಸೀಟು ಭರ್ತಿಗೆ ಅವಕಾಶ ನೀಡುವಂತೆ ಮನವಿ ಮಾಡಿದ್ದಾರೆ.

ಸಚಿವ ಸುಧಾಕರ್ ಅವರನ್ನು ಭೇಟಿ ಮಾಡಿದ ನಿರ್ಮಾಪಕರು

ಸಚಿವ ಸುಧಾಕರ್ ಅವರನ್ನು ಭೇಟಿ ಮಾಡಿದ ನಿರ್ಮಾಪಕರು

  • Share this:
ಕೊರೋನಾ ಎರಡನೇ ಅಲೆ (Corona 2nd Wave) ಸಮಯದಲ್ಲಿ ಸಿನಿಮಾ ಮಂದಿರಗಳ ಬಾಗಿಲು ಹಾಕಲಾಗಿತ್ತು. ಕೊರೋನಾ ಪ್ರಕರಣಗಳಲ್ಲಿ ಇಳಿಕೆ ಕಂಡಾಗ ಥಿಯೇಟರ್​ಗಳನ್ನು ಮತ್ತೆ ತೆರೆಯಲಾಯಿತು. ಆದರೆ, ಮುನ್ನೆಚ್ಚರಿಕೆ ಕಾರಣದಿಂದಾಗಿ ಮಲ್ಟಿಪ್ಲೆಕ್ಸ್ ಹಾಗೂ ಚಿತ್ರಮಂದಿರಗಳಲ್ಲಿ ಶೇ. 50ರಷ್ಟು ಆಸನ ಭರ್ತಿಗೆ ಮಾತ್ರ ಅವಕಾಶ ಕಲ್ಪಿಸಲಾಯಿತು. ಜೊತೆಗೆ ಕೋವಿಡ್​ ನಿಯಮಗಳನ್ನಯ ಕಡ್ಡಾಯವಾಗಿ ಪಾಲಿಸುವಂತೆಯೂ ಆದೇಶಿಸಲಾಯಿತು. ಸದ್ಯ ಕೊರೋನಾ ಮೂರನೇ ಅಲೆ (Corona 3rd Wave) ಆರಂಭವಾಗುವ ಆತಂಕ ಇರುವ ಕಾರಣದಿಂದ ಇನ್ನೂ ಸಹ ಚಿತ್ರಮಂದಿರಗಳಲ್ಲಿ ಸಂಪೂರ್ಣ ಆಸನ ಭರ್ತಿಗೆ (Full Occupancy In Theaters) ಅನುಮತಿ ನೀಡಿಲ್ಲ. ಇದರಿಂದಾಗಿಯೇ ಬಿಗ್ ಬಜೆಟ್ ಸಿನಿಮಾಗಳ ನಿರ್ಮಾಪಕರು ಚಿತ್ರಗಳ ರಿಲೀಸ್ ದಿನಾಂಕವನ್ನು ಪ್ರಕಟಿಸಿಲ್ಲ. ಈಗಾಗಲೇ ಬಿಡುಗಡೆ ದಿನಾಂಕವನ್ನು ಅನೌನ್ಸ್​ ಮಾಡಿದ್ದವರು ಅದನ್ನು ಮುಂದೂಡಿದ್ದಾರೆ. ಚಿತ್ರಮಂದಿರಗಳಲ್ಲಿ ಪೂರ್ಣ ಪ್ರಮಾಣದಲ್ಲಿ ಆಸನ ಭರ್ತಿಗೆ ಅನುಮತಿ ಸಿಕ್ಕ ನಂತರವೇ ತಮ್ಮ ಸಿನಿಮಾ ರಿಲೀಸ್ ಮಾಡುವುದಾಗಿ ಹೇಳುತ್ತಿದ್ದಾರೆ. 

ನಿರ್ಮಾಪಕರಾದ ಜಯಣ್ಣ, ಸೂರಪ್ಪ ಬಾಬು, ಕೆ.ಪಿ ಶ್ರೀಕಾಂತ್ ಅವರು ಇಂದು ಆರೋಗ್ಯ ಸಚಿವ ಕೆ. ಸುಧಾರಕರ್ ಅವರನ್ನು ಭೇಟಿಯಾಗಿದ್ದಾರೆ. ಚಿತ್ರಮಂದಿರಗಳಲ್ಲಿ ಪೂರ್ಣ ಪ್ರಮಾಣದಲ್ಲಿ ಸೀಟು ಭರ್ತಿಗೆ ಅವಕಾಶ ನೀಡುವಂತೆ ಮನವಿ ಮಾಡಿದ್ದಾರೆ. ನಿರ್ಮಾಪಕರಿಗೆ ತುಂಬಾ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಸಾಲು ಸಾಲು ಚಿತ್ರಗಳು ಬಿಡುಗಡೆಗೆ ಸಿದ್ಧವಾಗಿವೆ. ದೊಡ್ಡ ನಟರ ಸಿನಿಮಾಗಳು ರಿಲೀಸ್​ಗೆ ರೆಡಿಯಾಗಿವೆ. ಆದರೆ, ಶೇ.50ರಷ್ಟು ಮಾತ್ರ ಸೀಟು ಭರ್ತಿಗೆ ಅವಕಾಶ ನೀಡಿರುವುದರಿಂದ ಸಮಸ್ಯೆಯಾಗುತ್ತಿದೆ. ಇದರಿಂದಾಗಿ ನಿರ್ಮಾಪಕರು ತುಂಬಾ ಸಂಕಷ್ಟದಲ್ಲಿ ಇದ್ದಾರೆ ಎಂದು ನಿರ್ಮಾಪಕರು ತಮ್ಮ ಕಷ್ಟ ಹೇಳಿಕೊಂಡಿದ್ದಾರೆ.

ದೊಡ್ಡ ನಟರ ಸಿನಿಮಾಗಳಿಗೆ ಹೆಚ್ಚು ಹಣ ಹಾಕಿ ಚಿತ್ರ ಬಿಡುಗಡೆ ಮಾಡಲಾಗದೆ ಸಂಕಷ್ಟಕ್ಕೆ ಸಿಲುಕಿದ್ದೇವೆ. ಈಗ ಕೊರೊನಾ ದಿನೇ ದಿನೇ ಕಡಿಮೆಯಾಗುತ್ತಿದೆ. ಹಾಗಾಗಿ ಪೂರ್ಣಪ್ರಮಾಣದ ಸೀಟು ಭರ್ತಿಗೆ ಅವಕಾಶ ನೀಡಬೇಕೆಂದು ಮನವಿ ಮಾಡಿದ್ದಾರೆ.

ಇದನ್ನೂ ಓದಿ: Hombale 12: ಹೊಂಬಾಳೆ ಫಿಲಂಸ್​ನ 12ನೇ ಸಿನಿಮಾ: ಕುತೂಹಲ ಮೂಡಿಸಿದ ಪೋಸ್ಟರ್​..!

ಸಿನಿಮಾ ನಿರ್ಮಾಪಕರ ಮನವಿ ಸ್ವೀಕರಿಸಿದ ನಂತರ ಮಾತನಾಡಿದ ಸಚಿವ ಸುಧಾಕರ್ ಅವರು,  ಪೂರ್ಣಪ್ರಮಾಣದ ಸೀಟು ಭರ್ತಿಗೆ ಅವಕಾಶ ನೀಡುವುದಕ್ಕೂ ಮೊದಲು ಚರ್ಚೆ ನಡೆಸಬೇಕಿದೆ. ತಾಂತ್ರಿಕ ಸಲಹಾ ಸಮಿತಿ ಜೊತೆ ಚರ್ಚೆ ಮಾಡ್ತೀವಿ. ಬಳಿಕ ಸೋಂಕಿತರ ಸಂಖ್ಯೆ ನೋಡಿಕೊಂಡು ತೀರ್ಮಾನ ಮಾಡಲಿದ್ದೇವೆ. ಸೋಂಕು ಮತ್ತೆ ಹೆಚ್ಚಳವಾಗದಂತೆ ಕ್ರಮ ವಹಿಸಬೇಕಾಗುತ್ತೆ. ಸಿಎಂ, ನಾನು ಹಾಗೂ ಎಲ್ಲರೂ ಚರ್ಚೆ ಮಾಡಿ ಅಂತಿಮ ನಿರ್ಧಾರ ಕೈಗೊಳ್ಳುತ್ತೇವೆ. ಈಗ ಪ್ರತಿನಿತ್ಯ 600-800 ಕೇಸ್ ಬರ್ತಿದೆ. ಶೇ.1ಕ್ಕಿಂತ ಕಡಿಮೆ ಕೇಸ್ ಇದೆ. ಎಲ್ಲ ಜಿಲ್ಲೆಗಳಲ್ಲಿ ಸೋಂಕು ಕಡಿಮೆಯಾದ್ರೆ ಎಲ್ಲ ಸಡಿಲ ಮಾಡೋದಾಗಿ ಹೇಳಿದ್ದೇವೆ ಎಂದು ಭರವಸೆ ನೀಡಿದ್ದಾರೆ.

ಚಲನಚಿತ್ರ ಉದ್ಯಮಕ್ಕೆ ತುಂಬಾ ನಷ್ಟವಾಗಿದೆ. ಸರ್ಕಾರ ಅವರ ಜೊತೆ ನಿಲ್ಲಬೇಕಿದೆ. ಪಾಸಿಟಿವ್ ಆಗಿ ವಿಚಾರ ಮಾಡಿದ್ದೇವೆ. ಪೂರಕ ವಾತಾವರಣ ನಿರ್ಮಾಣ ಮಾಡಬೇಕು. ಅಂತಿಮ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದಿದ್ದಾರೆ ಸುಧಾಕರ್​.

ಇದನ್ನೂ ಓದಿ: Covid Guidelines: ಸಿನಿಮಾ ಕ್ಷೇತ್ರಕ್ಕೆ ಯಾವುದೇ ವಿನಾಯತಿ ಇಲ್ಲ; ಮಾರ್ಗಸೂಚಿ ಪಾಲನೆ ಕಡ್ಡಾಯ: ಸಚಿವ ಸುಧಾಕರ್​

ಹತ್ತು ದಿನದ ಹಿಂದೆ ನಾವು ಸಿಎಂ ಭೇಟಿ ಮಾಡಿದ್ದೆವು. ರಾಜ್ಯದಲ್ಲಿ ಈಗ ಪೂರಕ ವಾತಾವರಣ ಇದೆ. ಹತ್ತು ದಿನದಿಂದ ಟೆಕ್ನಿಕಲ್ ಟೀಮ್, ಬಿಬಿಎಂಪಿ ಹಾಗೂ ತಜ್ಞರ ಜೊತೆ ಕೂತು ಮಾತನಾಡಿದ್ದಾರೆ. ಸಿನಿ ರಸಿಕರಿಗೆ ಒಳ್ಳೆಯದು ಮಾಡಿಕೊಡಲಿದ್ದಾರೆ. ಶೀಘ್ರವೇ ನಮಗೆ ಅನುಕೂಲ ಮಾಡಿಕೊಡಲಿದ್ದಾರೆ. ಈ ತಿಂಗಳಾಂತ್ಯದಲ್ಲಿ ನಮಗೆ ಅನುಕೂಲ ಮಾಡಿಕೊಡಲಿದ್ದಾರೆ  ಅಂತ ಅಂದುಕೊಂಡಿದ್ದೇವೆ ಎಂದುನಿರ್ಮಾಪಕ ಸೂರಪ್ಪ ಬಾಬು ಹೇಳಿದ್ದಾರೆ.

ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ ಸುದ್ದಿಗೋಷ್ಠಿ

ಪ್ರತಿನಿತ್ಯ ಕೋವಿಡ್ ನಿರ್ವಹಣೆ ಮಾಡಿಕೊಂಡು ಹೋಗ್ತಿದ್ದೇವೆ. 300 ರಿಂದ 400 ಆಸುಪಾಸಿನಲ್ಲಿ ಕೇಸ್​ಗಳಿವೆ. ನಿತ್ಯ 20 ರಿಂದ ‌30 ಮಂದಿ ಆಸ್ಪತ್ರೆ ಸೇರ್ತಿದ್ದಾರೆ. 368 ಮಂದಿ ಕೋವಿಡ್​ನಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇವರಲ್ಲಿ 260 ಮಂದಿ ಜನರಲ್ ವಾರ್ಡ್​ನಲ್ಲಿದ್ದಾರೆ. ನಗರದಲ್ಲಿ ಕೋವಿಡ್​ ನಿಯಂತ್ರಣದಲ್ಲಿದೆ. ಈಗಾಗಲೇ ಬೇರೆ ಬೇರೆ ಚಟುವಟಿಕೆಗಳನ್ನು ಓಪನ್ ಮಾಡಿದ್ದೇವೆ. ಎಲ್ಲವೂ ಮಿತಿಯಲ್ಲಿದೆ. ಮಾಸ್ಕ್ ಮುಂದುವರೆಸಿಕೊಂಡು ಹೋಗಬೇಕು. ವ್ಯಾಕ್ಸಿನೇಷನ್​ನಲ್ಲಿ ದೊಡ್ಡ ಸಾಧನೆ ಮಾಡಿದ್ದೇವೆ. ಮಹಾನಗರಗಳ ಪೈಕಿ ಬೆಂಗಳೂರು ನಂಬರ್ ಒನ್ ಸ್ಥಾನದಲ್ಲಿದೆ. ಸಿನಿಮಾ ಥಿಯೇಟರ್​ಗೆ ಸಂಬಂಧಿಸಿದ ನಿರ್ಬಂಧ ಸರ್ಕಾರದ ಹಂತದಲ್ಲಿದೆ. ಬಿಬಿಎಂಪಿಯಿಂದ ಯಾವುದೇ ಪ್ರತ್ಯೇಕ ಅಭಿಪ್ರಾಯ ಕೊಟ್ಟಿಲ್ಲ. ಚಿತ್ರಮಂದಿರಗಳಲ್ಲಿ ಸದ್ಯಕ್ಕೆ ಸಂಪೂರ್ಣ ಆಸನ ಭರ್ತಿಗೆ ಅನುಮತಿ ನೀಡುವ ಪ್ರಮೇಯ ಇಲ್ಲ. ತಜ್ಞರ ಅಭಿಪ್ರಾಯ ಪಡೆದು ನಿರ್ಧಾರಕ್ಕೆ ಬರಲಿದ್ದೇವೆ. ಬೇರೆ ದೇಶಗಳಲ್ಲಿ ಸೋಂಕು ಉಲ್ಬಣ ಆಗಿದೆ. ಹೀಗಾಗಿ ಎಚ್ಚರಿಕೆಯಿಂದ ಇರಬೇಕು. ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ ಸ್ಪಷ್ಟಪಡಿಸಿದ್ದಾರೆ.
Published by:Anitha E
First published: