Full Occupancy In Theaters: ಒಂದೆರಡು ದಿನಗಳಲ್ಲಿ ನಿರ್ಧಾರ ತಿಳಿಸಲಿದೆ ರಾಜ್ಯ ಸರ್ಕಾರ..!

ಕೊರೋನಾದಿಂದಾಗಿ ಸಿನಿರಂಗ, ಮಲ್ಟಿಪ್ಲೆಕ್ಸ್​ ಹಾಗೂ ಚಿತ್ರಮಂದಿರಗಳ ಮಾಲೀಕರು ತುಂಬಾ ನಷ್ಟಅನುಭವಿಸಿದ್ದಾರೆ. ಜೊತೆಗೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇದರಿಂದಾಗಿ ಸಂಪೂರ್ಣ ಆಸನ ಭರ್ತಿ ವಿಷಯವಾಗಿ ಇನ್ನೆರಡು ದಿನಗಳಲ್ಲಿ ರಾಜ್ಯ ಸರ್ಕಾರ ನಿರ್ಧಾರ ತೆಗೆದುಕೊಳ್ಳಲಿದೆಯಂತೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಕೊರೋನಾ ಕಾರಣದಿಂದಾಗಿ ಇನ್ನೂ ಸಹ ಚಿತ್ರಮಂದಿರಗಳು ಹಾಗೂ ಮಲ್ಟಿಪ್ಲೆಕ್ಸ್​ಗಳಲ್ಲಿ ಶೇ 50ರಷ್ಟು ಆಸನ ಭರ್ತಿಗೆ ಅವಕಾಶ ಕಲ್ಪಿಸಲಾಗಿದೆ ಈ ಹಿನ್ನಲೆಯಲ್ಲಿ ಇತ್ತೀಚೆಗಷ್ಟೆ ಕನ್ನಡ ಸಿನಿಮಾ ನಿರ್ಮಾಪಕರು (Kannada Movie Producers) ಆರೋಗ್ಯ ಸಚಿವ ಸುಧಾಕರ್​ (Health Ministwr K Sudhakar) ಅವರನ್ನು ಭೇಟಿಯಾಗಿ ತಮ್ಮ ಕಷ್ಟವನ್ನು ವಿವರಿಸಿದ್ದಾರೆ. ಜೊತೆಗೆ ಆದಷ್ಟು ಬೇಗ ಸಿನಿಮಾ ಮಂದಿರಗಳಲ್ಲಿ ಸಂಪೂರ್ಣ ಆಸನ ಭರ್ತಿಗೆ ಅವಕಾಶ ಕಲ್ಪಿಸುವಂತೆ ಮನವಿ ಮಾಡಿದ್ದರು. ಈ ಸಂಬಂಧ ರಾಜ್ಯ ಸರ್ಕಾರ ಇನ್ನೇನು ಒಂದೆರಡು ದಿನಗಳಲ್ಲಿ ತನ್ನ ನಿರ್ಧಾರ ತಿಳಿಸಲಿದೆಯಂತೆ. ಹೌದು, ಆರೋಗ್ಯ ಸಚಿವ ಕೆ. ಸುಧಾಕರ್​ ಅವರು ಮುಖ್ಯಮಂತ್ರಿಗಳ ಜೊತೆ ಚರ್ಚಿಸಿ ಇನ್ನು 2-3 ದಿನಗಳಲ್ಲಿ ಚಿತ್ರಮಂದಿರಗಳು ಹಾಗೂ ಮಲ್ಪಿಪ್ಲೆಕ್ಸ್​ಗಳಲ್ಲಿ ಸಂಪೂರ್ಣ ಆಸನ ಭರ್ತಿಗೆ ಅವಕಾಶ (Full Occupancy In Theaters) ಕಲ್ಪಿಸುವ ಕುರಿತಾಗಿ ರಾಜ್ಯ ಸರ್ಕಾರದ ನಿರ್ಧಾರ ತಿಳಿಸಲಿದ್ದೇವೆ ಎಂದು ಹೇಳಿದ್ದಾರೆ. 

ಕೊರೋನಾದಿಂದಾಗಿ ಸಿನಿರಂಗ, ಮಲ್ಟಿಪ್ಲೆಕ್ಸ್​ ಹಾಗೂ ಚಿತ್ರಮಂದಿರಗಳ ಮಾಲೀಕರು ತುಂಬಾ ನಷ್ಟಅನುಭವಿಸಿದ್ದಾರೆ. ಜೊತೆಗೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇದರಿಂದಾಗಿ ಸಂಪೂರ್ಣ ಆಸನ ಭರ್ತಿ ವಿಷಯವಾಗಿ ಆದಷ್ಟು ಬೇಗ ನಿರ್ಧಾರ ತೆಗೆದುಕೊಳ್ಳುವುದಾಗಿ ಹೇಳಿರುವ ಸಚಿವರು, ಈಗ ಪ್ರತಿನಿತ್ಯ 600-800 ಕೇಸ್ ಬರ್ತಿದೆ. ಶೇ.1ಕ್ಕಿಂತ ಕಡಿಮೆ ಕೇಸ್ ಇದೆ. ಎಲ್ಲ ಜಿಲ್ಲೆಗಳಲ್ಲಿ ಸೋಂಕು ಕಡಿಮೆಯಾದ್ರೆ ಎಲ್ಲ ಸಡಿಲ ಮಾಡೋದಾಗಿ ಹೇಳಿದ್ದೇವೆ ಎಂದು ಭರವಸೆ ನೀಡಿದ್ದಾರೆ.

Karnataka Unlock 4 0 theaters and Colleges Open from tomorrow
ಸಾಂದರ್ಭಿಕ ಚಿತ್ರ


ನಿರ್ಮಾಪಕರಾದ ಜಯಣ್ಣ, ಸೂರಪ್ಪ ಬಾಬು, ಕೆ.ಪಿ ಶ್ರೀಕಾಂತ್ ಅವರು ಇಂದು ಆರೋಗ್ಯ ಸಚಿವ ಕೆ. ಸುಧಾರಕರ್ ಅವರನ್ನು ಇತ್ತೀಚೆಗಷ್ಟೆ ಭೇಟಿಯಾಗಿದ್ದರು. ಚಿತ್ರಮಂದಿರಗಳಲ್ಲಿ ಪೂರ್ಣ ಪ್ರಮಾಣದಲ್ಲಿ ಸೀಟು ಭರ್ತಿಗೆ ಅವಕಾಶ ನೀಡುವಂತೆ ಮನವಿ ಮಾಡಿದ್ದರು. ನಿರ್ಮಾಪಕರಿಗೆ ತುಂಬಾ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಸಾಲು ಸಾಲು ಚಿತ್ರಗಳು ಬಿಡುಗಡೆಗೆ ಸಿದ್ಧವಾಗಿವೆ. ದೊಡ್ಡ ನಟರ ಸಿನಿಮಾಗಳು ರಿಲೀಸ್​ಗೆ ರೆಡಿಯಾಗಿವೆ. ಆದರೆ, ಶೇ.50ರಷ್ಟು ಮಾತ್ರ ಸೀಟು ಭರ್ತಿಗೆ ಅವಕಾಶ ನೀಡಿರುವುದರಿಂದ ಸಮಸ್ಯೆಯಾಗುತ್ತಿದೆ. ಇದರಿಂದಾಗಿ ನಿರ್ಮಾಪಕರು ತುಂಬಾ ಸಂಕಷ್ಟದಲ್ಲಿ ಇದ್ದಾರೆ. ದೊಡ್ಡ ನಟರ ಸಿನಿಮಾಗಳಿಗೆ ಹೆಚ್ಚು ಹಣ ಹಾಕಿ ಚಿತ್ರ ಬಿಡುಗಡೆ ಮಾಡಲಾಗದೆ ಸಂಕಷ್ಟಕ್ಕೆ ಸಿಲುಕಿದ್ದೇವೆ ಎಂದು ನಿರ್ಮಾಪಕರು ತಮ್ಮ ಕಷ್ಟ ಹೇಳಿಕೊಂಡಿದ್ದರು.

ಇದನ್ನೂ ಓದಿ: ಪೂರ್ಣ ಪ್ರಮಾಣದಲ್ಲಿ ಚಿತ್ರಮಂದಿರ ತೆರೆಯಲು ಸೆಲೆಬ್ರಿಟಿಗಳ ಆಗ್ರಹ: ಪ್ರತಿಕ್ರಿಯಿಸಿದ ಸಚಿವ ಕೆ. ಸುಧಾಕರ್​..!

ಹತ್ತು ದಿನದ ಹಿಂದೆ ನಾವು ಸಿಎಂ ಭೇಟಿ ಮಾಡಿದ್ದೆವು. ರಾಜ್ಯದಲ್ಲಿ ಈಗ ಪೂರಕ ವಾತಾವರಣ ಇದೆ. ಹತ್ತು ದಿನದಿಂದ ಟೆಕ್ನಿಕಲ್ ಟೀಮ್, ಬಿಬಿಎಂಪಿ ಹಾಗೂ ತಜ್ಞರ ಜೊತೆ ಕೂತು ಮಾತನಾಡಿದ್ದಾರೆ. ಸಿನಿ ರಸಿಕರಿಗೆ ಒಳ್ಳೆಯದು ಮಾಡಿಕೊಡಲಿದ್ದಾರೆ. ಶೀಘ್ರವೇ ನಮಗೆ ಅನುಕೂಲ ಮಾಡಿಕೊಡಲಿದ್ದಾರೆ. ಈ ತಿಂಗಳಾಂತ್ಯದಲ್ಲಿ ನಮಗೆ ಅನುಕೂಲ ಮಾಡಿಕೊಡಲಿದ್ದಾರೆ ಅಂತ ಅಂದುಕೊಂಡಿದ್ದೇವೆ ಎಂದುನಿರ್ಮಾಪಕ ಸೂರಪ್ಪ ಬಾಬು ಹೇಳಿದ್ದರು.

ಇದನ್ನೂ ಓದಿ: Cinema Halls Reopening Guidelines: ಚಿತ್ರಮಂದಿರ ತೆರೆಯಲು ಮಾರ್ಗಸೂಚಿ ಪ್ರಕಟ​..!

ಪ್ರತಿನಿತ್ಯ ಕೋವಿಡ್ ನಿರ್ವಹಣೆ ಮಾಡಿಕೊಂಡು ಹೋಗ್ತಿದ್ದೇವೆ. 300 ರಿಂದ 400 ಆಸುಪಾಸಿನಲ್ಲಿ ಕೇಸ್​ಗಳಿವೆ. ನಿತ್ಯ 20 ರಿಂದ ‌30 ಮಂದಿ ಆಸ್ಪತ್ರೆ ಸೇರ್ತಿದ್ದಾರೆ. 368 ಮಂದಿ ಕೋವಿಡ್​ನಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇವರಲ್ಲಿ 260 ಮಂದಿ ಜನರಲ್ ವಾರ್ಡ್​ನಲ್ಲಿದ್ದಾರೆ. ನಗರದಲ್ಲಿ ಕೋವಿಡ್​ ನಿಯಂತ್ರಣದಲ್ಲಿದೆ. ಈಗಾಗಲೇ ಬೇರೆ ಬೇರೆ ಚಟುವಟಿಕೆಗಳನ್ನು ಓಪನ್ ಮಾಡಿದ್ದೇವೆ. ಎಲ್ಲವೂ ಮಿತಿಯಲ್ಲಿದೆ. ಮಾಸ್ಕ್ ಮುಂದುವರೆಸಿಕೊಂಡು ಹೋಗಬೇಕು. ವ್ಯಾಕ್ಸಿನೇಷನ್​ನಲ್ಲಿ ದೊಡ್ಡ ಸಾಧನೆ ಮಾಡಿದ್ದೇವೆ. ಮಹಾನಗರಗಳ ಪೈಕಿ ಬೆಂಗಳೂರು ನಂಬರ್ ಒನ್ ಸ್ಥಾನದಲ್ಲಿದೆ. ಸಿನಿಮಾ ಥಿಯೇಟರ್​ಗೆ ಸಂಬಂಧಿಸಿದ ನಿರ್ಬಂಧ ಸರ್ಕಾರದ ಹಂತದಲ್ಲಿದೆ. ಬಿಬಿಎಂಪಿಯಿಂದ ಯಾವುದೇ ಪ್ರತ್ಯೇಕ ಅಭಿಪ್ರಾಯ ಕೊಟ್ಟಿಲ್ಲ. ಚಿತ್ರಮಂದಿರಗಳಲ್ಲಿ ಸದ್ಯಕ್ಕೆ ಸಂಪೂರ್ಣ ಆಸನ ಭರ್ತಿಗೆ ಅನುಮತಿ ನೀಡುವ ಪ್ರಮೇಯ ಇಲ್ಲ. ತಜ್ಞರ ಅಭಿಪ್ರಾಯ ಪಡೆದು ನಿರ್ಧಾರಕ್ಕೆ ಬರಲಿದ್ದೇವೆ. ಬೇರೆ ದೇಶಗಳಲ್ಲಿ ಸೋಂಕು ಉಲ್ಬಣ ಆಗಿದೆ. ಹೀಗಾಗಿ ಎಚ್ಚರಿಕೆಯಿಂದ ಇರಬೇಕು. ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ ಸ್ಪಷ್ಟಪಡಿಸಿದ್ದರು.
Published by:Anitha E
First published: