Puneeth Rajkumar: ಗಣೇಶೋತ್ಸವದಲ್ಲೂ ಅಪ್ಪು ಹವಾ; ಪುನೀತ್​ ಜೊತೆಗಿರೋ ಗಣೇಶನ ಮೂರ್ತಿಗಳಿಗೆ ಫುಲ್​ ಡಿಮ್ಯಾಂಡ್

2ವರ್ಷಗಳ ನಂತರ ಗಣೇಶೋತ್ಸವಕ್ಕೆ ಮೊದಲಿನ ಖದರ್​ ಬರಲಾರಂಭಿಸಿದೆ. ಈ ಬಾರಿಯ ಗಣೇಶೋತ್ಸವದಲ್ಲಿ ಹುಬ್ಬಳ್ಳಿಯಲ್ಲಿ ಪುನೀತ್ ಮಿಂಚೋಕೆ ಎಲ್ಲ ಸಿದ್ಧತೆ ನಡೆದಿದೆ. ಅಪ್ಪು ಕೆನ್ನೆ ಹಿಡಿದಿರೋ ಗಣೇಶ ಮೂರ್ತಿಗಳು ಸಿದ್ಧಗೊಂಡಿದ್ದು, ಪ್ರತಿಷ್ಠಾಪನೆಗೆ ದಿನಗಣನೆ ಆರಂಭಗೊಂಡಿದೆ.

ಗಣೇಶನ ಮೂರ್ತಿಗೆ ಡಿಮ್ಯಾಂಡ್​

ಗಣೇಶನ ಮೂರ್ತಿಗೆ ಡಿಮ್ಯಾಂಡ್​

  • Share this:
ಹುಬ್ಬಳ್ಳಿ - ಈ ಬಾರಿಯ ಗಣೇಶೋತ್ಸವದಲ್ಲಿ (Ganesha festival) ಪುನೀತ್ ರಾಜ್ ಕುಮಾರ್ ಹವಾ ಜೋರಾಗಿದೆ. ಪವರ್ ಸ್ಟಾರ್ ಪುನಿತ್ ರಾಜ್ ಕುಮಾರ್ (Power star Puneeth Rajkumar) ಸಾವನ್ನಪ್ಪಿ ಹತ್ತು ತಿಂಗಳು ಗತಿಸಿದರೂ, ಜನರಲ್ಲಿ ಅವರ ಮೇಲಿನ ಅಭಿಮಾನ, ಗೌರವ ಮಾತ್ರ ಕಡಿಮೆಯಾಗಿಲ್ಲ. ಗಣೇಶ ಮೂರ್ತಿಯ ಬಳಿಯೂ ಅಪ್ಪು ರಾರಾಜುಸುತ್ತಿದ್ದಾರೆ. ರಾಜಧಾನಿ ಬೆಂಗಳೂರಿನ ಲಾಲ್ ಬಾಗ್ ನಲ್ಲಿ ಪುಷ್ಪಗಳ (Lalbagh flower show) ಮೂಲಕ ಪುನೀತ್ ರಾಜ್ ಕುಮಾರ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದ್ರು. ಇದೀಗ ವಾಣಿಜ್ಯ ನಗರಿ ಹುಬ್ಬಳ್ಳಿಯ(Hubballi)  ಜನ ಗಣೇಶ ಮೂರ್ತಿಯ ಜೊತೆಗೆ ಅಪ್ಪು ಪ್ರತಿಷ್ಟಾಪಿಸೋಕೆ ಮುಂದಾಗಿದ್ದಾರೆ.

ಗಣೇಶೋತ್ಸವದಲ್ಲಿಯೂ ಅಪ್ಪು ಅಬ್ಬರ

ಹೌದು ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅವರ ನೆನಪು ಸದಾ ಒಂದಿಲ್ಲೊಂದು ಕಾರಣದಿಂದ ಮತ್ತೆ ಮತ್ತೆ ನೆನಪುಸುತ್ತಿದೆ. ಅವರ ಮನೋಜ್ಞ ಅಭಿನಯದಿಂದ ಕರುನಾಡ ಮನೆ ಮನೆಗಳಲ್ಲಿ ಇನ್ನೂ ಅಚ್ಚಳಿಯದೇ ಉಳಿದಿದ್ದಾರೆ. ಅವರ ವಿಶಿಷ್ಟ ಅಭಿನಯ ಕುಟುಂಬ ಸಮೇತ ನೋಡುವ ಚಿತ್ರಗಳು ಈಗಲೂ ಜನ ಮಾನಸದಲ್ಲಿ ಅಚ್ಚಳಿಯದೆ ಉಳಿದಿವೆ. ಪ್ರತಿ ಹಬ್ಬ, ಜಾತ್ರೆ ಸಮಾರಂಭಗಳಲ್ಲಿ ಪುನೀತ್ ರಾಜ್‍ಕುಮಾರ್ ಈಗಲೂ ರಾರಾಜಿಸುತ್ತಿದ್ದಾರೆ. ಇದೀಗ ಗಣೇಶೋತ್ಸವದಲ್ಲಿಯೂ ಅಪ್ಪು ಅಬ್ಬರಿಸೋಕೆ ಸಿದ್ಧವಾಗ್ತಿದಾರೆ.



ಇದನ್ನೂ ಓದಿ: Puneeth Rajkumar: ಗಣೇಶನ ಜೊತೆ ಮನೆಗೆ ಬರ್ತಾರೆ ಪವರ್ ಸ್ಟಾರ್! ಅಪ್ಪು ಕುಟುಂಬಕ್ಕೆ ಮೂರ್ತಿ ನೀಡಲು ಅಭಿಮಾನಿಗಳ ಸಿದ್ಧತೆ

ಅಪ್ಪು ಕೆನ್ನೆ ಹಿಡಿದ ಗಣೇಶನಿಗೆ ಭರ್ಜರಿ ಡಿಮ್ಯಾಂಡ್​

ಅಪ್ಪು ಕೆನ್ನೆ ಹಿಡಿದು ವಿಚಾರಿಸ್ತಿರೋ ಗಣೇಶ ಮೂರ್ತಿಗಳಿಗೆ ಭಾರಿ ಬೇಡಿಕೆ ವ್ಯಕ್ತವಾಗಿದೆ. ಹುಬ್ಬಳ್ಳಿಯ ಬೊಮ್ಮಾಪುರ ಓಣಿಯ ಕಲಾವಿದ ವಿಜಯ್ ಕುಮಾರ್ ಕಾಂಬಳೆ ಅವರಿಂದ ಈ ಬಗೆಯ ಗಣೇಶ ಮೂರ್ತಿಗಳು ಮೂಡಿಬಂದಿವೆ. ಗಣೇಶ ಜೊತೆಗಿನ ಪುನೀತ್ ರಾಜಕುಮಾರ್ ನ ಹತ್ತಾರು ವಿಗ್ರಹಗಳ ತಯಾರಿಕೆ ಮಾಡಲಾಗಿದೆ. ಆ ಮೂಲಕ ಕಲಾವಿದ ಪುನೀತ್ ರಾಜಕುಮಾರ್ ಗೆ ಶ್ರದ್ಧಾಂಜಲಿ ಹಾಗೂ ಗೌರವ ಸಲ್ಲಿಸುತ್ತಿದ್ದಾನೆ. ಕರುನಾಡು ಪ್ರೀತಿಸೋ ಕಲಾವಿದ ಪುನೀತ್ ರಾಜಕುಮಾರ್ ಆಗಿದ್ದರು. ಹೀಗಾಗಿ ಅವರನ್ನು ಸ್ಮರಿಸುವ ಜೊತೆಗೆ, ಗೌರವಿಸಲು ಈ ಮೂರ್ತಿಗಳನ್ನು ತಯಾರಿಸಿರೋದಾಗಿ ವಿಜಯಕುಮಾರ್ ಕಾಂಬಳೆ ಹೇಳಿದ್ದಾರೆ.

ಹಬ್ಬಕ್ಕೆ ಸಿದ್ಧವಾಗಿದೆ ಬಗೆ ಬಗೆ ಗಣಪನ ಮೂರ್ತಿ

ಇದನ್ನ ನೋಡಿದ ಜನರಿಂದ ಅಪ್ಪು ಇರೋ ಗಣೇಶ ವಿಗ್ರಹಕ್ಕೆ ಬೇಡಿಕೆ ವ್ಯಕ್ತವಾಗಿದೆ. ಜನರ ಬೇಡಿಕೆಗೆ ತಕ್ಕಂತೆ ಗಣೇಶ ಮೂರ್ತಿಯೊಂದಿಗಿನ ಅಪ್ಪು ಮೂರ್ತಿಗಳನ್ನು ಪೂರೈಕೆ ಮಾಡೋದು ಕಷ್ಟ ಅನ್ನುತ್ತಿದ್ದಾರೆ ಕಾಂಬಳೆ. ಈಗಾಗಲೇ ಆರ್ಡರ್ ಕೊಟ್ಟವರಿಗೆ ಗಣೇಶ – ಅಪ್ಪು ಮೂರ್ತಿ ರೆಡಿಯಾಗಿ ಕುಳಿತಿವೆ. ಇದರ ಜೊತೆ ಶಿವಾಜಿ ಗಣೇಶ ಸೇರಿ ವೈವಿಧ್ಯಮಯ ಗಣಪತಿಗಳ ತಯಾರಿಕೆ ಮಾಡಲಾಗಿದೆ. ಗಣೇಶ ಹಬ್ಬಕ್ಕೆ ಮೂರ್ತಿ ತಯಾರಿಕೆಯಲ್ಲಿ ತೊಡಗಿರುವ ಕಲಾವಿದರು ವಿವಿಧ ವಿಷಯಗಳ ವಿವಿಧ ಮಾದರಿಯ ಮೂರ್ತಿ ತಯಾರಿಕೆಯಲ್ಲಿ ತೊಡಗಿದ್ದಾರೆ.

ಇದನ್ನೂ ಓದಿ: Puneeth Rajkumar: ಮನೆಗೆ ಬಂದ ಅಭಿಮಾನಿಯ ಮಗುವನ್ನು ಮುದ್ದಾಡಿ ಅಪ್ಪು ಎಂದು ಹೆಸರಿಟ್ಟ ಶಿವಣ್ಣ

ಗಣೇಶ–ಅಪ್ಪು ಮೂರ್ತಿಗಳಿಗೆ ಹುಬ್ಬಳ್ಳಿಯ ಜನತೆ ಫಿದಾ

ಆದ್ರೆ ಕಲಾವಿದ ವಿಜಯಕುಮಾರ್ ಕಾಂಬಳೆ ಕುಟುಂಬದ ನೂರಾರು ವರ್ಷಗಳಿಂದ ಮಣ್ಣಿನ ಗಣಪತಿಯನ್ನೇಷ್ಟೇ ಮಾಡಿಕೊಂಡು ಬರುತ್ತಿದ್ದು, ಪರಿಸರ ಸ್ನೇಯಿ ಗಣೇಶ ಉತ್ಸವಕ್ಕೆ ಒತ್ತು ಕೊಡುತ್ತಾ ಬಂದಿರೋದು ಮತ್ತೊಂದು ವಿಶೇಷ. ಈ ವರ್ಷ ಇಲ್ಲಿಯವರೆಗು ಸುಮಾರು 300 ಕ್ಕೂ ಹೆಚ್ಚು ಜನ ಆರ್ಡರ್ ಮಾಡಿದ್ದು. ಇನ್ನು ಬೇಡಿಕೆ ಹಾಗೇ ಇದೆ. ಆದ್ರೆ ಸಮಯದ ಅಭಾವದಿಂದ ವಿಗ್ರಹ ಮಾಡೋಕೆ ಆಗ್ತಿಲ್ಲ ಎನ್ನುತ್ತಾರೆ ಕಲಾವಿದರು. ಒಟ್ಟಾರೆ ಗಣೇಶ – ಅಪ್ಪು ಮೂರ್ತಿಗಳಿಗೆ ಹುಬ್ಬಳ್ಳಿಯ ಜನತೆ ಫಿದಾ ಆಗಿದ್ದರೆ.
Published by:Pavana HS
First published: