ಪೆಟ್ರೋಲ್​, ಡೀಸೆಲ್ ದರ 2 ರೂಪಾಯಿ ಇಳಿಕೆ ಮಾಡಿ ರಾಜ್ಯದ ಜನರಿಗೆ ಸಿಹಿಸುದ್ದಿ ನೀಡಿದ ಸಿಎಂ ಎಚ್ಡಿಕೆ

news18
Updated:September 17, 2018, 11:03 AM IST
ಪೆಟ್ರೋಲ್​, ಡೀಸೆಲ್ ದರ 2 ರೂಪಾಯಿ ಇಳಿಕೆ ಮಾಡಿ ರಾಜ್ಯದ ಜನರಿಗೆ ಸಿಹಿಸುದ್ದಿ ನೀಡಿದ ಸಿಎಂ ಎಚ್ಡಿಕೆ
ಪೆಟ್ರೋಲ್​ ಬಂಕ್
  • News18
  • Last Updated: September 17, 2018, 11:03 AM IST
  • Share this:
ನ್ಯೂಸ್ 18 ಕನ್ನಡ

ಬೆಂಗಳೂರು/ಕಲಬುರಗಿ (ಸೆ.17): ದಿನದಿಂದ ಗಗನಮುಖಿಯಾಗುತ್ತಿರುವ ಪೆಟ್ರೋಲ್ ಮತ್ತು ಡೀಸೆಲ್​ ಬೆಲೆಯನ್ನು 2 ರೂಪಾಯಿ ಇಳಿಕೆ ಮಾಡಿ, ಮುಖ್ಯಮಂತ್ರಿ ಕುಮಾರಸ್ವಾಮಿ ಸೋಮವಾರ ಘೋಷಣೆ ಮಾಡಿದ್ದಾರೆ. ಈ ಮೂಲಕ ರಾಜ್ಯದ ಜನರಿಗೆ ಮುಖ್ಯಮಂತ್ರಿ ಸಿಹಿ ಸುದ್ದಿ ನೀಡಿದ್ದಾರೆ.

ಪೆಟ್ರೋಲ್ ಮತ್ತು ಡೀಸೆಲ್ ದರ ಕಡಿಮೆ ಮಾಡಲು ಪೂರಕವಾಗುವಂತೆ ತೈಲದ ಮೇಲಿನ ಮೇಲಿನ ತೆರಿಗೆಯನ್ನು ಇಳಿಸಲು ಭಾನುವಾರ ಹಣಕಾಸು ಇಲಾಖೆಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ತೆರಿಗೆ ದರ ಇಳಿಕೆ ಮಾಡಿ ಸೋಮವಾರ ಪ್ರಸ್ತಾವನೆ ಸಲ್ಲಿಸುವಂತೆ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಅದರಂತೆ ಹಣಕಾಸು ಇಲಾಖೆ ಅಧಿಕಾರಿಗಳು ತೈಲದ ಮೇಲಿನ ತೆರಿಗೆ ಕಡಿಮೆಗೊಳಿಸಿ, ಮುಖ್ಯಮಂತ್ರಿಗಳಿಗೆ ಪ್ರಸ್ತಾವನೆ ಸಲ್ಲಿಸಿದ್ದರು. ನಿರೀಕ್ಷೆಯಂತೆ ಸೋಮವಾರ ಪ್ರತಿ ಲೀಟರ್ ಪೆಟ್ರೋಲ್, ಡೀಸೆಲ್ ಮೇಲೆ 2 ರೂಪಾಯಿ ಇಳಿಕೆ ನಿರ್ಧಾರ ಪ್ರಕಟಿಸಿದರು.

ಕಲಬುರಗಿಯಲ್ಲಿ ಹೈದರಾಬಾದ್-ಕರ್ನಾಟಕ ವಿಮೋಚನಾ ದಿನಾಚರಣೆಯಲ್ಲಿ ಪಾಲ್ಗೊಂಡು, ಈ ಘೋಷಣೆ ಪ್ರಕಟಿಸಿದ ಮುಖ್ಯಮಂತ್ರಿ ಕುಮಾರಸ್ವಾಮಿ, ಜನರ ಬವಣೆ ಅರಿತು, ರಾಜ್ಯ ಸರ್ಕಾರ ಪೆಟ್ರೋಲ್ ಮತ್ತು ಡೀಸೆಲ್ ದರ ಇಳಿಕೆ ಮಾಡಿದೆ ಎಂದು ತಿಳಿಸಿದರು.

ಜುಲೈ 5ರಂದು ಕುಮಾರಸ್ವಾಮಿ ಅವರು ಮಂಡಿಸಿದ ಬಜೆಟ್​ನಲ್ಲಿ ರೈತರ ಸಾಲ ಮನ್ನಾ ಸೇರಿ ರಾಜ್ಯದ ಅಭಿವೃದ್ಧಿ ಚಟುವಟಿಕೆಗೆ ಅಗತ್ಯವಾದ ಸಂಪನ್ಮೂಲ ಕ್ರೂಡೀಕರಣ ದೃಷ್ಟಿಯಿಂದ ಪೆಟ್ರೋಲ್ ಮೇಲಿನ ತೆರಿಗೆಯನ್ನು ಶೇ.30ರಿಂದ 32ಕ್ಕೆ ಹಾಗೂ ಡೀಸೆಲ್ ಮೇಲಿನ ತೆರಿಗೆಯನ್ನು ಶೇ.19ರಿಂದ 21ಕ್ಕೆ ಏರಿಕೆ ಮಾಡಿದ್ದರು. ಇದರಿಂದಾಗಿ ಪ್ರತಿ ಲೀಟರ್​ ಪೆಟ್ರೋಲ್​ ದರ 1.14 ರೂ. ಹಾಗೂ ಡೀಸೆಲ್ ದರ 1.12 ರೂ. ರಾಜ್ಯದಲ್ಲಿ ಹೆಚ್ಚಳವಾಗಿತ್ತು.

ಎರಡು ದಿನಗಳ ಹಿಂದೆ ಮುಖ್ಯಮಂತ್ರಿಗಳು ಅಬಕಾರಿ, ಸಾರಿಗೆ, ಗಣಿ ಮತ್ತು ಭೂ ವಿಜ್ಞಾನ, ನೋಂದಣಿ ಮತ್ತು ಮುದ್ರಾಂಕ  ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆ ನಡೆಸಿದ್ದರು. ಪ್ರಸಕ್ತ ಆರ್ಥಿಕ ಸಾಲಿನಲ್ಲಿ ಎಲ್ಲ ಇಲಾಖೆಗಳಲ್ಲೂ ಗುರಿ ಮೀರಿ ತೆರಿಗೆ ಸಂಗ್ರಹವಾಗಿರುವುದನ್ನು ಹಾಗೂ ಅಭಿವೃದ್ಧಿ ಚಟುವಟಿಕೆ ಸೇರಿ ರೈತರ ಸಾಲ ಮನ್ನಾ ಹಣಕಾಸಿಗೆ ಯಾವುದೇ ತೊಂದರೆಯಾಗುವುದಿಲ್ಲ ಎಂಬ ಮಾಹಿತಿ ಇಲಾಖಾವಾರು ಅಧಿಕಾರಿಗಳಿಂದ ಸಿಕ್ಕ ನಂತರ ಮುಖ್ಯಮಂತ್ರಿಗಳು ತೈಲದ ಮೇಲಿನ ತೆರಿಗೆಯನ್ನು ಕಡಿಮೆ ಮಾಡಲು ನಿರ್ಧರಿಸಿದ್ದರು.

ಇದನ್ನು ಓದಿ: ಪೆಟ್ರೋಲ್​ ಬಂಕ್​ ಬಳಿ ಧಗಧಗನೆ ಹೊತ್ತಿ ಉರಿದ ಬೈಕ್​; ಸಿಸಿಟಿವಿಯಲ್ಲಿ ದೃಶ್ಯ ಸೆರೆತೈಲ ದರ ಏರಿಕೆ ಖಂಡಿಸಿ, ಕಳೆದ ವಾರ ದೇಶಾದ್ಯಾಂತ ಕಾಂಗ್ರೆಸ್​ ನೇತೃತ್ವದಲ್ಲಿ ವಿರೋಧ ಪಕ್ಷಗಳು ಬಂದ್​ ಆಚರಿಸಿದ್ದವು. ಇದೇ ವೇಳೆ ನೆರೆ ಪರಿಹಾರ ಕೋರಿ ದೆಹಲಿಯಲ್ಲಿ ಪ್ರಧಾನಿ ಮೋದಿ ಅವರನ್ನು ಭೇಟಿಯಾಗಿದ್ದ ಮುಖ್ಯಮಂತ್ರಿ ಎಚ್​.ಡಿ.ಕುಮಾರಸ್ವಾಮಿ ಅವರು ರಾಜ್ಯದಲ್ಲಿ ಪೆಟ್ರೋಲ್​ ಮತ್ತು ಡೀಸೆಲ್ ದರ ಇಳಿಕೆ ಮಾಡುವ ಸುಳಿವು ನೀಡಿದ್ದರು.

ನಿರೀಕ್ಷೆಯಂತೆ ಇಂದು ಮುಖ್ಯಮಂತ್ರಿಗಳು ತೈಲದ ಮೇಲಿನ ತೆರಿಗೆಯನ್ನು ಕಡಿತಗೊಳಿಸಿದ್ದಾರೆ. ಅದರಂತೆ ರಾಜ್ಯದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರ 2 ರೂಪಾಯಿ  ಇಳಿಕೆಯಾಗಲಿದೆ.
First published: September 17, 2018, 9:28 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading