Drink And Drive Check: ಇಂದಿನಿಂದ ಅಧಿಕೃತವಾಗಿ ಆಲ್ಕೋಮೀಟರ್ ಮೂಲಕ ಡ್ರಿಂಕ್ ಆ್ಯಂಡ್ ಡ್ರೈವ್ ತಪಾಸಣೆ; ಜಂಟಿ ಪೊಲೀಸ್ ಆಯುಕ್ತ ರವಿಕಾಂತೇಗೌಡ

ತಪಾಸಣೆ ವೇಳೆ ಪೊಲೀಸರ ಮೇಲೆ ಹಲ್ಲೆ ಮಾಡಲು‌ ಮುಂದಾದ್ರೆ ಕೇಸ್ ದಾಖಲಿಸಲಾಗುವುದು. ಕೇಸ್ ಜೊತೆಗೆ ರೌಡಿಶೀಟರ್ ಸಹ ತೆರೆಯಲಾಗುತ್ತದೆ. ಪ್ರತಿಯೊಂದನ್ನು ವಿಡಿಯೋ ರೆಕಾರ್ಡ್ ಮಾಡಲು ಸೂಚನೆ ನೀಡಲಾಗಿದೆ. ಬೇಕಾದ್ರೆ ಹಲ್ಲೆ ಮಾಡಿರೋರು ಚಾಲೆಂಜ್ ಮಾಡಿಕೊಳ್ಳಲಿ ಎಂದು ರವಿಕಾಂತೇಗೌಡ ಅವರು ಎಚ್ಚರಿಕೆ ನೀಡಿದರು.

ಡ್ರಿಂಕ್ ಅಂಡ್ ಡ್ರೈವ್ ಟೆಸ್ಟ್.

ಡ್ರಿಂಕ್ ಅಂಡ್ ಡ್ರೈವ್ ಟೆಸ್ಟ್.

 • Share this:
  ಬೆಂಗಳೂರು: ಇಂದಿನಿಂದ ಅಧಿಕೃತವಾಗಿ ಡ್ರಿಂಕ್ ಆ್ಯಂಡ್ ಡ್ರೈವ್ ಚೆಕ್ಕಿಂಗ್ (Drink And Drive Checking) ಆರಂಭವಾಗಲಿದೆ. ಆಲ್ಕೋ ಮೀಟರ್ (Alcometer)  ಮೂಲಕವೇ ಪೊಲೀಸರು ತಪಾಸಣೆ ಮಾಡಲಿದ್ದಾರೆ. ಕೊರೋನಾ (Coronavirus) ಕಾರಣಕ್ಕೆ ಡ್ರಿಂಕ್ ಆ್ಯಂಡ್ ಡ್ರೈವ್ ತಪಾಸಣೆ ನಿಲ್ಲಿಸಲಾಗಿತ್ತು. ಇಂದಿನಿಂದ ಅಧಿಕೃತವಾಗಿ ತಪಾಸಣೆ ಮಾಡಲು ಸಂಚಾರಿ ಪೊಲೀಸರಿಗೆ ಸೂಚನೆ ನೀಡಲಾಗಿದೆ. ಕುಡಿದು ವಾಹನ ಚಾಲನೆ ಮಾಡೋದ್ತಿಂದ ಅಪಘಾತಗಳು ಜಾಸ್ತಿ ಆಗ್ತಾ ಇದೆ. ಅಕ್ಕಪಕ್ಕದ ರಾಜ್ಯದಲ್ಲಿ ಆಲ್ಕೋಮೀಟರ್ ಮೂಲಕ ತಪಾಸಣೆ ಮಾಡಲಾಗ್ತಿದೆ. ಅದರಂತೆ ಈಗ ನಮ್ಮ ರಾಜ್ಯದಲ್ಲಿಯೂ ಇವತ್ತಿಂದ ತಪಾಸಣೆ ಮಾಡಲಾಗುತ್ತದೆ ಎಂದು ಜಂಟಿ ಪೊಲೀಸ್ ಆಯುಕ್ತ ರವಿಕಾಂತೇಗೌಡ (Joint Police Commissioner Ravikanthe Gowda)  ಅವರು ಹೇಳಿದರು.

  ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇಷ್ಟು ದಿನ ಆಸ್ಪತ್ರೆಗೆ ಕರ್ಕೊಂಡು ಹೋಗಿ ತಪಾಸಣೆ ಮಾಡಲಾಗ್ತಾ ಇತ್ತು. ಶುಕ್ರವಾರ, ಶನಿವಾರ ಹಾಗೂ ಭಾನುವಾರ‌ ರಾತ್ರಿ ತಪಾಸಣೆ ಮಾಡಲಾಗುತ್ತದೆ. ಪ್ರತಿಯೊಂದು ಆಲ್ಕೋ‌ಮೀಟರ್ ನ ಈಗಾಗಲೇ ಸ್ಯಾನಿಟೈಸ್ ಮಾಡಲಾಗಿದೆ. ಒಂದು ಠಾಣೆಗೆ 10 ಆಲ್ಕೋ‌ಮೀಟರ್ ಗಳನ್ನು ಕೊಡಲಾಗುತ್ತೆ. ಒಟ್ಟು ನಗರದಲ್ಲಿ 44 ಸಂಚಾರಿ ಪೊಲೀಸ್ ಸ್ಟೇಷನ್ ಗಳಿವೆ. ತಪಾಸಣೆ ವೇಳೆ ಪೊಲೀಸರು ಫೇಸ್ ಮಾಸ್ಕ್, ಫೇಸ್ ಶೀಲ್ಡ್ ಹಾಗೂ ಹ್ಯಾಂಡ್ ಗ್ಲೌಸ್ ಕಡ್ಡಾಯವಾಗಿ ಹಾಕಬೇಕು. ಹಾಲ್ಕೋ ಮೀಟರ್ ನಲ್ಲಿ ಶೇ 30 ರಷ್ಟು ಬಂದ್ರೆ ವಾಹನಗಳನ್ನು ಜಫ್ತಿ ಮಾಡಲಾಗುತ್ತೆ ಎಂದು ತಿಳಿಸಿದರು.

  ಒಂದು ಬಾರಿ ಆಲ್ಕೋ‌ಮೀಟರ್ ಉಪಯೋಗಿಸಿದರೆ ಅವತ್ತು ಅದನ್ನು ಬೇರೆಯವರಿಗೆ ಉಪಯೋಗಿಸಲ್ಲ. 36- 48 ಗಂಟೆ ಆದ ಬಳಿಕ ಮತ್ತೊಮ್ಮೆ ಸ್ಯಾನಿಟೈಸ್ ಮಾಡಿ ಉಪಯೋಗಿಸಲಾಗುತ್ತದೆ. ಕೊರೋನಾ ಅಂತ ಯಾರಾದರೂ ಆಲ್ಕೋ‌ಮೀಟರ್ ಬೇಡ ಅಂದ್ರೆ ರಕ್ತದ ಮಾದರಿ ಪರೀಕ್ಷೆ ಮಾಡಲಾಗುತ್ತೆ. ಒಂದು ವೇಳೆ ಕರ್ತವ್ಯಕ್ಕೆ ಅಡ್ಡಿ ಪಡಿಸಿದರೆ ಕೇಸ್ ದಾಖಲು ಮಾಡ್ತೀವಿ. ಯಾರೊಬ್ಬರು ಪೊಲೀಸರೊಂದಿಗೆ ಮಾತಿನ ಚಕಮಕಿ ನಡೆಸಬಾರದು. ನಮ್ಮ ಬಳಿ 600 ಮಿಷನ್ ಗಳು ಇವೆ, ಒಬ್ಬರಿಗೆ ಒಂದು ಮಿಷನ್ ಬಳಿಸಿದ್ರೆ ಮತ್ತೆ ಮೂರು ದಿನ ಅದನ್ನು ಬಳಸಲ್ಲ. ನಾರ್ಮಲ್ ಆಗಿ 100 ಕೇಸ್ ದಾಖಲಾಗಬಹುದು ಅಷ್ಟೆ. ಕುಡಿದು ವಾಹನ ಚಲಾಯಿಸಿ ಸಿಕ್ಕಿಬಿದ್ರೆ 10 ಸಾವಿರ ರೂ. ದಂಡ ಹಾಕಲಾಗುವುದು. ದಂಡವನ್ನು ಕೋರ್ಟ್ ನಲ್ಲಿ ಕಟ್ಟಿ ವಾಹನ ಬಿಡಿಸಿಕೊಳ್ಳಬೇಕು ಎಂದು ಹೇಳಿದರು.

  ತಪಾಸಣೆ ವೇಳೆ ಪೊಲೀಸರ ಮೇಲೆ ಹಲ್ಲೆ ಮಾಡಲು‌ ಮುಂದಾದ್ರೆ ಕೇಸ್ ದಾಖಲಿಸಲಾಗುವುದು. ಕೇಸ್ ಜೊತೆಗೆ ರೌಡಿಶೀಟರ್ ಸಹ ತೆರೆಯಲಾಗುತ್ತದೆ. ಪ್ರತಿಯೊಂದನ್ನು ವಿಡಿಯೋ ರೆಕಾರ್ಡ್ ಮಾಡಲು ಸೂಚನೆ ನೀಡಲಾಗಿದೆ. ಬೇಕಾದ್ರೆ ಹಲ್ಲೆ ಮಾಡಿರೋರು ಚಾಲೆಂಜ್ ಮಾಡಿಕೊಳ್ಳಲಿ ಎಂದು ರವಿಕಾಂತೇಗೌಡ ಅವರು ಎಚ್ಚರಿಕೆ ನೀಡಿದರು.

  ಇದನ್ನು ಓದಿ: Explained: Cold Pressed Oil, ಗಾಣದ ಎಣ್ಣೆ ಏಕೆ ಸೇವಿಸಬೇಕು, ರಿಫೈಂಡ್ ಆಯಿಲ್ ಏಕೆ ಬಳಸಬಾರದು?

  ಟೋಯಿಂಗ್ ವಿಚಾರದಲ್ಲಿ ಸಾರ್ವಜನಿಕರೊಂದಿಗೆ ಜಟಾಪಟಿ ವಿಚಾರವಾಗಿ ಮಾತನಾಡಿದ ರವಿಕಾಂತೇಗೌಡ ಅವರು, ಟೋಯಿಂಗ್ ಮಾಡುವಾಗ ಸಂಚಾರ ಪೊಲೀಸ್ ಇಲಾಖೆಗೆ ಲೈವ್ ಸ್ಟ್ರೀಮಿಂಗ್ ನೀಡಬೇಕು. ಓರ್ವ ಎಎಸ್ಐ ಸಮವಸ್ತ್ರದಲ್ಲಿ ಟೋಯಿಂಗ್ ವಾಹನದಲ್ಲಿ ಇರಬೇಕು. ಟೋಯಿಂಗ್ ಆಪರೇಷನ್ ಗೂ ಮುನ್ನ ಅನೌನ್ಸ್ ಮಾಡಬೇಕು. ವಾಹನದ ನಾಲ್ಕೂ ಭಾಗದಿಂದ ಫೋಟೋ ಕ್ಲಿಕ್ಕಿಸಬೇಕು. ಬಳಿಕ ವಾಹನವನ್ನು ಟೋಯಿಂಗ್ ಮಾಡಬೇಕು. ಟೋಯಿಂಗ್ ಮಾಡುವ ಮುನ್ನವೇ ಮಾಲೀಕ ಬಂದ್ರೆ ನೋ ಪಾರ್ಕಿಂಗಿಗೆ ದಂಡ ವಿಧಿಸಬೇಕು. ಟೋಯಿಂಗ್ ವಾಹನಕ್ಕೆ ಹಾಕಿದ ಬಳಿಕ ಬಂದ್ರೆ ಟೋಯಿಂಗ್ ಚಾರ್ಜ್ ಪಾವತಿಸಬೇಕು. ಟೋಯಿಂಗ್ ಮಾಡಿದ ವಾಹನಗಳನ್ನು ನಿಲ್ಲಿಸುವ ಜಾಗದಲ್ಲಿ ಸಂಚಾರಿ ಸಿಬ್ಬಂದಿ ಇರಬೇಕು. ಈ ನಿಯಮಗಳನ್ನು ಪಾಲಿಸದ ಟೋಯಿಂಗ್ ಸಿಬ್ಬಂದಿಗಳನ್ನು ಕಪ್ಪುಪಟ್ಟಿಗೆ ಸೇರಿಸಲಾಗುತ್ತದೆ. ಇದುವರೆಗೂ ನಿಯಮಗಳನ್ನ ಪಾಲಿಸದ ಐವರು ಟೋಯಿಂಗ್ ಸಿಬ್ಬಂದಿಗಳು ಕಪ್ಪು ಪಟ್ಟಿಗೆ ಸೇರಿಸಲಾಗಿದೆ ಎಂದು ಮಾಹಿತಿ ನೀಡಿದರು.
  Published by:HR Ramesh
  First published: