ಆರ್ಥಿಕ ಸಂಕಷ್ಟ; ಇತಿಹಾಸದ ಪುಟ ಸೇರಿದ ಮಲೆನಾಡಿನ ಸಹಕಾರ ಸಾರಿಗೆ ಬಸ್​

ಕಾರ್ಮಿಕರೇ ಕಟ್ಟಿದ ಸಹಕಾರ ಸಂಸ್ಥೆಯ ಸಾರಿಗೆ ಬಸ್ಸುಗಳು ಮಲೆನಾಡಿನ ಹಳ್ಳಿಹಳ್ಳಿಯ ಜನಜೀವನದ ಭಾಗವಾಗಿ ಹೋಗಿವೆ. ತಮ್ಮ ಪ್ರಾಮಾಣಿಕ ಸೇವೆಯಿಂದ ಜನರ ಮನಸ್ಸಿನಲ್ಲೂ ಸ್ಥಾನ ಪಡೆದಿವೆ.

news18-kannada
Updated:February 17, 2020, 11:11 AM IST
ಆರ್ಥಿಕ ಸಂಕಷ್ಟ; ಇತಿಹಾಸದ ಪುಟ ಸೇರಿದ ಮಲೆನಾಡಿನ ಸಹಕಾರ ಸಾರಿಗೆ ಬಸ್​
ಚಿಕ್ಕಮಗಳೂರಿನ ಟಿಸಿಎಸ್ ಬಸ್ಸುಗಳು
  • Share this:
ಚಿಕ್ಕಮಗಳೂರು (ಫೆ.17): ಜಪಾನ್ ಮೆಚ್ಚಿಕೊಳ್ತು. ಮಂಗಳೂರು ವಿವಿ ಪ್ರಾಧ್ಯಾಪಕರು ಡಾಕ್ಟರೇಟ್ ಪದವಿ ಪಡೆದ್ರು. ಮಣಿಪಾಲ್ ಸ್ನಾತಕೋತ್ತರ ಪದವಿಗೆ ಪಠ್ಯವೇ ಆಯ್ತು. ಕೊಲ್ಲಾಪುರ ಶಿವಾಜಿ ವಿವಿ ಪಿಎಚ್‍ಡಿಯನ್ನೇ ಕೊಡ್ತು. ಕಾರ್ಮಿಕರೇ ಕಟ್ಟಿ ಕಾರ್ಮಿಕರೇ ಮಾಲೀಕರಾಗಿ 30 ವರ್ಷ ಹಳ್ಳಿಗರ ಮನಮುಟ್ಟಿದ ಸಹಕಾರ ಸಂಸ್ಥೆಯ ಸಾಧನೆಗಳಿವು. ಅಂದು ಅನಭಿಷಕ್ತ ದೊರೆಯಂತೆ ಮೆರೆದ ಸಹಕಾರ ಸಂಸ್ಥೆಯಲ್ಲೀಗ ಅಸಹಕಾರ. ಸಿಬ್ಬಂದಿಗಳಿಗೆ ಸಂಬಳ ನೀಡಲು ಸಾಧ್ಯವಾಗದೇ ಇಂದು ಈ ಸಂಸ್ಥೆಗೆ ಬೀಗ ಜಡಿಯುವ ಸ್ಥಿತಿ ಬಂದಿದೆ.

ಕಾರ್ಮಿಕರೇ ಕಟ್ಟಿಬೆಳಸಿದ ಸಂಸ್ಥೆಗೆ ನೆರವು ಕೋರಿ ಕಾರ್ಮಿಕರ ಸಲ್ಲಿಸಿದ ಮನವಿಗೂ ಸರ್ಕಾರದ ಬಳಿ ಉತ್ತರವಿಲ್ಲದೇ ಈ ಸಂಸ್ಥೆ ಇಂದಿನಿಂದ ನೆನಪಿನ ಪುಟ ಸೇರಲಿದೆ.

ಚಿಕ್ಕಮಗಳೂರಿನ ಸಹಕಾರ ಸಾರಿಗೆ ಬಸ್ಸಿನ ಚಕ್ರಗಳು ಕಾಫಿನಾಡು ಸೇರಿ ಮಂಗಳೂರು, ಉಡುಪಿ, ಶಿವಮೊಗ್ಗಾದ ಬೆಟ್ಟಗುಡ್ಡಗಳ ಬಹುತೇಕ ಗ್ರಾಮವನ್ನ ಕಂಡಿವೆ. ಮಲೆನಾಡ ಕುಗ್ರಾಮಗಳ ಮನೆ-ಮನ ಬೆಸೆದೆ ಪರಿಗೆ ಏಷ್ಯಾದಲ್ಲೇ ಉತ್ತಮ ಸಹಕಾರ ಸಂಸ್ಥೆ ಎಂಬ ಹೆಗ್ಗಳಿಕೆ ಕೂಡ ಹೊಂದಿತು. ಕಾರ್ಮಿಕರೇ ಕಟ್ಟಿ, ಕಾರ್ಮಿಕರೇ ಮಾಲೀಕರಾಗಿ ಬೆಳಸಿದ ಈ ಸಂಸ್ಥೆಯಲ್ಲಿ 6 ಬಸ್‍ನಿಂದ 76 ಬಸ್‍ಗಳಿವೆ.

ಇದನ್ನು ಓದಿ: ಕ್ರೀಡಾ ಸಚಿವರ ಆಹ್ವಾನ ನಿರಾಕರಿಸಿದ ಕಂಬಳ ವೀರ ಶ್ರೀನಿವಾಸ್​ ಗೌಡ; ಕಾರಣವೇನು ಗೊತ್ತಾ?

ರಾಜ್ಯಕ್ಕೆ ಕೆ.ಎಸ್.ಆರ್.ಟಿ.ಸಿ., ಮಲೆನಾಡಿಗೆ ಸಹಕಾರ ಸಾರಿಗೆ. ಯಾಕಂದ್ರೆ, ಸ್ವಾತಂತ್ರ್ಯ ಹೋರಾಟಗಾರರು, ಕರ್ನಾಟಕ ಏಕೀಕರಣಕ್ಕೆ ಹೋರಾಡಿದವರು, ವಿದ್ಯಾರ್ಥಿಗಳು, ಸಂಸ್ಥೆಯ ಕಾರ್ಮಿಕ ಮಕ್ಕಳು, ವಿಕಲಚೇತನರು, ಹಿರಿಯ ನಾಗರಿಕರಿಗೆ ಶೇ. 50 ರಿಯಾಯಿತಿ ಕೊಟ್ಟು, ದಟ್ಟಕಾನನ, ಕಲ್ಲು-ಮಣ್ಣಿನ ದುರ್ಗಮ ಹಾದಿಯಲ್ಲೂ ಲಕ್ಷಾಂತರ ಮಕ್ಕಳ ಭವಿಷ್ಯ ರೂಪಿಸಿದ ಹೆಗ್ಗಳಿಕೆ ಈ ಸಂಸ್ಥೆಯದ್ದು. ಅಂತಹ ಸಂಸ್ಥೆ ಈಗ ಸರ್ಕಾರದ ನೀತಿ-ನಿರ್ಧಾರಗಳು, ಡೀಸೆಲ್ ಬೆಲೆ, ವಿಮೆ-ಟ್ಯಾಕ್ಸ್ ಮಧ್ಯೆ ಸಂಬಳ ನೀಡೋಕೂ ಆಗದೇ ಬಾಗಿಲು ಹಾಕುವ ಹೊಸ್ತಿಲಲ್ಲಿದೆ. ಸಹಕಾರ ಕೋರಿ ಸರ್ಕಾರದ ಕದ ಬಡಿದರೂ ಪ್ರಯೋಜನವಾಗಿಲ್ಲ.

ಸಹಕಾರ ಸಂಸ್ಥೆ ಶುರುವಾಗಿದ್ದು ಹೀಗೆ:

1990ರಲ್ಲಿದ್ದ ಶಂಕರ್ ಟ್ರಾನ್ಸ್‍ಪೋರ್ಟ್ ಮುಚ್ಚಿದ ಬಳಿಕ ಅಲ್ಲಿದ್ದ ಕಾರ್ಮಿಕರು ತಮಗೆ ಬಂದ ಪರಿಹಾರದ ಹಣದಿಂದಲೇ ಕಟ್ಟಿಕೊಂಡ ಸಂಸ್ಥೆ. ಅಂದಿನಿಂದ ಈ ಬಸ್ ಮಲೆನಾಡ ಮನೆ-ಮನಗಳ ಮಧ್ಯೆ ಬಾಂಧವ್ಯ ಬೆಸೆದಿತ್ತು. ಆದರಿಂದು ಅವನತಿಯ ಅಂಚಿನಲ್ಲಿದೆ. ತಿಂಗಳಿಗೆ ಡೀಸೆಲ್‍ನಿಂದ 24 ಲಕ್ಷ ರೂ ನಷ್ಟವಾದ್ರೆ, ವರ್ಷಕ್ಕೆ ಒಂದೂವರೆ ಕೋಟಿ ಟ್ಯಾಕ್ಸ್, ಜೊತೆಗೆ, ರಿಯಾಯಿತಿ ಪಾಸ್‍ನ ಹೊರೆ. ಹಾಗಾಗಿ, ಡೀಸೆಲ್ ಸಬ್ಸಿಡಿ, ಟ್ಯಾಕ್ಸ್ ಕಡಿತ ಹಾಗೂ ಪಾಸ್‍ಗಳ ಉಳಿಕೆ ಹಣವನ್ನ ನೀಡುವಂತೆ ಸರ್ಕಾರದ ಸಹಾಯ ಹಸ್ತವನ್ನ ಎದುರುನೋಡ್ತಿದೆ. ಡೀಸೆಲ್ ದರ ಹೆಚ್ಚಾದಾಗಲೂ ಟಿಕೆಟ್ ದರ ಏರಿಸಿಲ್ಲ.  ಏಷ್ಯಾ ಖಂಡದಲ್ಲೇ ಮಾದರಿಯಾಗಿದ್ದ ಸಂಸ್ಥೆ ಬಾಗಿಲು ಹಾಕಿ, 300ಕ್ಕೂ ಅಧಿಕ ಕಾರ್ಮಿಕರು ಬೀದಿಗೆ ಬರುವ ಸ್ಥಿತಿ ನಿರ್ಮಾಣವಾಗಿದೆ.
First published: February 17, 2020, 11:11 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading