Siddaganga Matt: ಸಿದ್ದಗಂಗಾ ಮಠದಲ್ಲಿ ಇನ್ಮುಂದೆ ಡಾಕ್ಟರ್​​​ ಕೂಡ ಓದ್ಬೋದು, ಕೇಂದ್ರದಿಂದ ವೈದ್ಯಕೀಯ ಕಾಲೇಜು ಮಂಜೂರು

ಸಿದ್ದಗಂಗಾ ಮಠ ತ್ರಿವಿಧ ದಾಸೋಹಕ್ಕೆ ಖ್ಯಾತಿ. ಈಗ ಸಿದ್ದಗಂಗಾ ಮಠದಲ್ಲಿ ನೀವು ಡಾಕ್ಟರ್​ ಕೂಡ ಓದಬಹುದು. ಯಸ್. ನಾಡಿನ ಪ್ರತಿಷ್ಠಿತ ಮಠಗಳಲ್ಲಿ ಒಂದಾದ ತುಮಕೂರಿನ ಸಿದ್ದಗಂಗಾ ಮಠಕ್ಕೆ ವೈದ್ಯಕೀಯ ಕಾಲೇಜು ಮಂಜೂರು ಮಾಡಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ. ಮೊದಲ ವರ್ಷದ ಎಂಬಿಬಿಎಸ್ ತರಗತಿಗಳನ್ನು ಈ ಶೈಕ್ಷಣಿಕ ವರ್ಷದಿಂದಲೇ ಆರಂಭಿಸಲು ಅನುಮತಿ ನೀಡಿದೆ.

ಸಿದ್ದಗಂಗಾ ಮಠ

ಸಿದ್ದಗಂಗಾ ಮಠ

  • Share this:
ತುಮಕೂರಿನಲ್ಲಿರುವ ಪ್ರೇಕ್ಷಣೀಯ ಹಾಗೂ ಧಾರ್ಮಿಕ ತಾಣಗಳಲ್ಲಿ ಸಿದ್ದಗಂಗಾ ಮಠ (Siddaganga Matt) ಕೂಡಾ ಒಂದು. ಶಿವಕುಮಾರ ಸ್ವಾಮಿಗಳ (Shivakumara swamiji) ಬಗ್ಗೆ ಎಲ್ಲರಿಗೂ ಗೊತ್ತೇ ಇದೆ. ಮಹಾನುಭಾವರಿದ್ದ ಸಿದ್ಧಗಂಗಾ ಮಠಕ್ಕೆ ಬಹಳಷ್ಟು ಮಂದಿ ಭೇಟಿ ನೀಡಿ ಸ್ವಾಮೀಯವರ ದರ್ಶನ ಪಡೆದಿದ್ದಾರೆ. ತುಮಕೂರಿನಲ್ಲಿ (Tumakuru) ಪ್ರತಿಯೊಬ್ಬರೂ ನೋಡಲೇ ಬೇಕಾದಂತಹ ಸ್ಥಳಗಳಲ್ಲಿ ಇದೂ ಒಂದು. ಶಿವಕುಮಾರ ಶ್ರೀಗಳು ವಿದ್ಯಾದಾಸೋಹಿಗಳಾಗಿ ಎಲ್ಲರಿಗೂ ಅಕ್ಷರದ ಬೆಳಕು (Education)  ಚೆಲ್ಲಿದವರು. ಇಂತಹ ಪ್ರಸಿದ್ಧ ಸಿದ್ದಗಂಗಾ ಮಠಕ್ಕೆ ಮತ್ತೊಂದು ಶೈಕ್ಷಣಿಕ ಕಾಲೇಜು (Collage) ಪ್ರಾಪ್ತಿಯಾಗಿದೆ. ಎಂಬಿಬಿಎಸ್ ಕಾಲೇಜು (Siddaganga Medical Collage) ಮಂಜೂರು ಮಾಡಿ ಕೇಂದ್ರ ಸರ್ಕಾರ (Central government)  ಆದೇಶ ಹೊರಡಿಸಿದೆ. ಈ ಮೂಲಕ ಸಿದ್ದಗಂಗೆಯಲ್ಲಿ ವೈದ್ಯರ ಸೃಷ್ಟಿಗೆ ಕೇಂದ್ರ ಮುದ್ರೆ ಒತ್ತಿದೆ.

ನಾಡಿನ ಪ್ರತಿಷ್ಠಿತ ಮಠಗಳಲ್ಲಿ ಒಂದಾದ ತುಮಕೂರಿನ ಸಿದ್ದಗಂಗಾ ಮಠಕ್ಕೆ ವೈದ್ಯಕೀಯ ಕಾಲೇಜು ಮಂಜೂರು ಮಾಡಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ. ರಾಷ್ಟ್ರೀಯ ವೈದ್ಯಕೀಯ ಆಯೋಗವು ಸಿದ್ದಗಂಗಾ ವೈದ್ಯಕೀಯ ಮತ್ತು ಸಂಶೋಧನಾ ಸಂಸ್ಥೆಗೆ ಮೊದಲ ವರ್ಷದ ಎಂಬಿಬಿಎಸ್ ತರಗತಿಗಳನ್ನು ಈ ಶೈಕ್ಷಣಿಕ ವರ್ಷದಿಂದಲೇ ಆರಂಭಿಸಲು ಅನುಮತಿ ನೀಡಿದೆ.

From this year Siddaganga Math will also train doctors central government approves medical college
ಸಿದ್ದಗಂಗಾ ಮಠ


ಮೊದಲ ಬ್ಯಾಚ್​​ನಲ್ಲಿ 150 ವಿದ್ಯಾರ್ಥಿಗಳಿಗೆ ಅವಕಾಶ

ತುಮಕೂರಿನ ಸಿದ್ದಗಂಗಾ ಮಠ ಮೆಡಿಕಲ್ ಕಾಲೇಜು ಪ್ರಾರಂಭಿಸಲು ಅನುಮತಿ ಕೋರಿ ಸಲ್ಲಿಸಲಾಗಿತ್ತು. ಈ ಅರ್ಜಿ ಮತ್ತು ಮೂಲಭೂತ ಸೌಕರ್ಯಗಳ ಪರಿಶೀಲನೆ ನಡೆಸಲಾಗಿದೆ. ಬಳಿಕ ರಾಷ್ಟ್ರೀಯ ವೈದ್ಯಕೀಯ ಆಯೋಗ ಅನುಮತಿ ನೀಡಿದೆ. ಅಲ್ಲದೇ ಪ್ರಥಮ ಬ್ಯಾಚ್ನಲ್ಲಿ 150 ಎಂಬಿಬಿಎಸ್ ವಿದ್ಯಾರ್ಥಿಗಳ ಪ್ರವೇಶಕ್ಕೆ ಅನುಮತಿ ನೀಡಿ ಸಿದ್ದಗಂಗಾ ಮಠದ ಆಡಳಿತ ಮಂಡಳಿಗೆ ಪತ್ರ ಬರೆದಿದೆ.

ಇದನ್ನೂ ಓದಿ: ಕೊಪ್ಪಳದಲ್ಲಿದೆ 72 ಅಂಗನವಾಡಿ ಹುದ್ದೆ; ಇಲ್ಲಿದೆ ನೇಮಕಾತಿ ವಿವರ

ವೈದ್ಯಕೀಯ ಕಾಲೇಜು ನಡೆಸುತ್ತಿರುವ ಮಠಗಳ ಪಟ್ಟಿಗೆ ಸಿದ್ದಗಂಗಾ ಮಠ

ವೈದ್ಯಕೀಯ ಕಾಲೇಜು ಹೊಂದುವ ಮೂಲಕ ಸಿದ್ದಗಂಗಾ ಮಠ ಕೂಡ ಮೆಡಿಕಲ್ ಕಾಲೇಜು ಹೊಂದಿದ ಪ್ರತಿಷ್ಠಿತ ಮಠಗಳ ಸಾಲಿಗೆ ಸೇರಿದೆ. ಮೈಸೂರಿನ ಜೆಎಸ್ಎಸ್, ಸಿರಿಗೆರೆಯ ತರಳಬಾಳು, ಆದಿಚುಂಚನಗಿರಿ ಮತ್ತು ಚಿತ್ರದುರ್ಗದ ಬೃಹನ್ಮಠಗಳು ಈಗಾಗಲೇ ವೈದ್ಯಕೀಯ ಕಾಲೇಜುಗಳನ್ನು ನಡೆಸುತ್ತಿವೆ.

From this year Siddaganga Math will also train doctors central government approves medical college
ಸಿದ್ದಲಿಂಗ ಶ್ರೀಗಳು


ತುಮಕೂರಿನಲ್ಲಿ 3 ವೈದ್ಯಕೀಯ ಕಾಲೇಜು

ಸಿದ್ದಗಂಗಾ ಮಠಕ್ಕೆ ಮೆಡಿಕಲ್ ಕಾಲೇಜು ಮಂಜೂರಾಗಿದ್ದರಿಂದ ತುಮಕೂರು ಜಿಲ್ಲೆಗೆ ಒಟ್ಟು 3 ಮೆಡಿಕಲ್ ಕಾಲೇಜು ಸಿಕ್ಕಂತಾಗಿದೆ. ಮಾಜಿ ಉಪ ಮುಖ್ಯಮಂತ್ರಿ ಡಾ.ಜಿ ಪರಮೇಶ್ವರ್ ಅವರ ಸಂಸ್ಥೆಗೆ ಸೇರಿದ 2 ಮೆಡಿಕಲ್ ಕಾಲೇಜುಗಳು ಈಗಾಗಲೇ ಕಾರ್ಯಾರಂಭ ಮಾಡುತ್ತಿವೆ.

ಸಿದ್ದಗಂಗಾ ಮಠದ ಶಿಕ್ಷಣ ಸಂಸ್ಥೆಗಳು

ಸಿದ್ದಗಂಗಾ ಮಠದಲ್ಲಿ ಸಾವಿರಾರು ಮಕ್ಕಳು ವಿದ್ಯಾರ್ಜನೆ ಮಾಡುತ್ತಾರೆ. ಸಿದ್ದಗಂಗಾ ಮಠದಿಂದಲೇ ಸಾವಿರಾರು ಮಕ್ಕಳಿಗೆ ತ್ರಿವಿಧ ದಾಸೋಹ ಇರುತ್ತೆ. ಇಲ್ಲಿನ ಶಿಸ್ತು ಎಲ್ಲೆಡೆ ಖ್ಯಾತಿ ಪಡೆದಿದೆ. ಈಗಾಗಲೇ ಇಲ್ಲಿ ಹಿರಿಯ ಪ್ರಾಥಮಿಕ ಶಾಲೆ, ಪ್ರೌಢಶಾಲೆ ಶಿಕ್ಷಕ ತರಬೇತಿ ಸಂಸ್ಥೆ, ಸಂಸ್ಕೃತ ಕಾಲೇಜು, ಕನ್ನಡ ಪಂಡಿತ ತರಗತಿ ವಿಭಾಗ ಇದೆ.

ಮಾತ್ರವಲ್ಲದೇ ದೈಹಿಕ ತರಬೇತಿ ಕಾಲೇಜು, ಸಂಗೀತ ಪಾಠಶಾಲೆ, ಸಮನ್ವಯ ಶಿಕ್ಷಣ ಸಂಸ್ಥೆ, ದೈಹಿಕ ಶಿಕ್ಷಣ ತರಬೇತಿ ಕಾಲೇಜು, ಸಂಗೀತ ಪಾಠಶಾಲೆ ಮಠದಿಂದ ನಡೆಯುತ್ತಿದೆ. ನಾಡಿನ ನಾನಾ ಭಾಗಗಳ ನಗರ, ಗ್ರಾಮೀಣ ಪ್ರದೇಶದಲ್ಲಿ ಮಠ ಸಾಕಷ್ಟು ಶಿಕ್ಷಣ ಸಂಸ್ಥೆಗಳನ್ನು ಹೊಂದಿದೆ.

ಇದನ್ನೂ ಓದಿ: ಪದವೀಧರರಿಗೆ ಗುಡ್ ನ್ಯೂಸ್: ರೈಲ್ವೆ ಇಲಾಖೆಯಲ್ಲಿ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ

8 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಬೋರ್ಡಿಂಗ್ ವ್ಯವಸ್ಥೆ

ಸಿದ್ದಗಂಗಾ ಮಠದಲ್ಲಿ 8 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಬೋರ್ಡಿಂಗ್, ಶಿಕ್ಷಣ ಮತ್ತು ವಸತಿ ಸೌಲಭ್ಯವನ್ನು ಒದಗಿಸಲಾಗುತ್ತಿದೆ. ಇದು ತುಮಕೂರಿನ ಸಿದ್ದಗಂಗಾ ಮಠದ ಮುಖ್ಯ ಆಕರ್ಷಣೆಗಳಲ್ಲಿ ಒಂದಾಗಿದೆ. ಮಠವು ಅಂಧ ಮಕ್ಕಳ ಶಾಲೆಯನ್ನು ಸಹ ನಡೆಸುತ್ತಿದೆ. ಅಲ್ಲಿ ಸುಮಾರು 100 ವಿದ್ಯಾರ್ಥಿಗಳು ಶಿಕ್ಷಣವನ್ನು ಪಡೆಯುತ್ತಿದ್ದಾರೆ. ಸಿದ್ಧಗಂಗಾ ತಾಂತ್ರಿಕ ವಿಶ್ವವಿದ್ಯಾನಿಲಯವೂ ಇದೆ. ಇಂಜಿನಿಯರಿಂಗ್ ಕಾಲೇಜು, ಸಿದ್ಧಗಂಗಾ ವುಮೆನ್ಸ್ ಕಾಲೇಜ್, ಲಾ ಕಾಲೇಜು ಕೂಡಾ ಇದೆ.
Published by:Thara Kemmara
First published: