• Home
  • »
  • News
  • »
  • state
  • »
  • School Re-Open: ಅಕ್ಟೋಬರ್ 21ರಿಂದ ಪ್ರಾಥಮಿಕ ಶಾಲೆಗಳು ಆರಂಭ- ಸಂಜೆ ಒಳಗೆ ಗೈಡ್​ಲೈನ್ಸ್​ ಬಿಡುಗಡೆ

School Re-Open: ಅಕ್ಟೋಬರ್ 21ರಿಂದ ಪ್ರಾಥಮಿಕ ಶಾಲೆಗಳು ಆರಂಭ- ಸಂಜೆ ಒಳಗೆ ಗೈಡ್​ಲೈನ್ಸ್​ ಬಿಡುಗಡೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

School Reopen: ಇನ್ನು ಪ್ರಾಥಮಿಕ ಶಾಲೆ ಆರಂಭದ ಬಗ್ಗೆ ಕಂಪ್ಲೀಟ್ ಗೈಡ್ ಲೈನ್ ಸಂಜೆಯೊಳಗೆ ಬಿಡುಗಡೆ ಮಾಡಲಾಗುತ್ತದೆ.  ತಾಂತ್ರಿಕ ಸಲಹಾ ಸಮಿತಿ ಸಲಹೆ ಮೇರೆಗೆ ಶಾಲೆ ಆರಂಭ ಮಾಡುತ್ತಿದ್ದು, ತಜ್ಞರ ಸಲಹೆ ಪಡೆದೇ ಶಾಲೆ ಆರಂಭ ಮಾಡಿ ಅಂತ ಸಿಎಂ ಹೇಳಿದ್ದಾರೆ.

  • Share this:

ಕೊರೊನಾ(coronavirus) ಕಾರಣದಿಂದ ನಿಲ್ಲಿಸಲಾಗಿದ್ದ ಪ್ರಾಥಮಿಕ ಶಾಲೆಯನ್ನು(Primary School) ಅಕ್ಟೋಬರ್ 21 ರಿಂದ ಆರಂಭಿಸಲು ಶಿಕ್ಷಣ ಇಲಾಖೆ ನಿರ್ಧರಿಸಿದ್ದು, ಈ ಬಗ್ಗೆ ಶಿಕ್ಷಣ ಸಚಿವ ಬಿಸಿ ನಾಗೇಶ್(Nagesh) ಮಾಹಿತಿ ನೀಡಿದ್ದಾರೆ.  ಇಂದು ಮಧ್ಯಾಹ್ನದ ಬಳಿಕ ಈ ಬಗ್ಗೆ ಅಧಿಕೃತ ನಿರ್ಧಾರ ಮಾಡಲಾಗುವುದು, ತಾಂತ್ರಿಕ ಸಲಹಾ ಸಮಿತಿ‌ ಸಲಹೆ ಈಗಾಗಲೇ ವರದಿ ಕೊಟ್ಟಿದೆ. ಎಲ್ಲವನ್ನೂ ವಿಮರ್ಶೆ ಮಾಡಿ ಇಂದು ಸಂಜೆಯೊಳಗೆ ನಿರ್ಧಾರ ಪ್ರಕಟ ಮಾಡಲಾಗುವುದು ಎಂದಿದ್ದಾರೆ. ಅಲ್ಲದೇ ಈ ಬಾರಿ ಶಾಲೆಗಳನ್ನು ಆರಂಭಿಸಿದ ನಂತರ ಎರಡು ಹಂತ ಇರುವುದಿಲ್ಲ. ಒಂದೇ ಹಂತದಲ್ಲಿ‌ 1 ರಿಂದ 5 ತರಗತಿ ಆರಂಭ ಮಾಡಲಾಗುವುದಿಲ್ಲ. ಆರಂಭದಲ್ಲಿ ಮಧ್ಯಾಹ್ನದ ವರೆಗೆ ಮಾತ್ರ ತರಗತಿ ನಡೆಸಲಾಗುವುದು,ಅದಾದ ಬಳಿಕ ಸ್ಥಿತಿಗತಿ ನೋಡಿಕೊಂಡು ಪೂರ್ಣಾವಧಿ ತರಗತಿಗಳನ್ನು ನಡೆಸಲಾಗುವುದು ಎಂದು ಸಚಿವರು ತಿಳಿಸಿದ್ದಾರೆ.  


ಮಕ್ಕಳಿಗೆ ಬೇಗ ಲಸಿಕೆ ಕೊಟ್ಟು ಮುಗಿಸುತ್ತೇವೆ


ಇನ್ನು ಪ್ರಾಥಮಿಕ ಶಾಲೆ ಆರಂಭದ ಬಗ್ಗೆ ಕಂಪ್ಲೀಟ್ ಗೈಡ್ ಲೈನ್ ಸಂಜೆಯೊಳಗೆ ಬಿಡುಗಡೆ ಮಾಡಲಾಗುತ್ತದೆ.  ತಾಂತ್ರಿಕ ಸಲಹಾ ಸಮಿತಿ ಸಲಹೆ ಮೇರೆಗೆ ಶಾಲೆ ಆರಂಭ ಮಾಡುತ್ತಿದ್ದು, ತಜ್ಞರ ಸಲಹೆ ಪಡೆದೇ ಶಾಲೆ ಆರಂಭ ಮಾಡಿ ಅಂತ ಸಿಎಂ ಹೇಳಿದ್ದಾರೆ. ಹಾಗಾಗಿ ಅಕ್ಟೋಬರ್ 21ಕ್ಕೆ ಶಾಲೆ ಒಂದೇ ಹಂತದಲ್ಲಿ ಶಾಲೆ ಆರಂಭಿಸಲಾಗುತ್ತದೆ.  ಮಕ್ಕಳಿಗೆ ಲಸಿಕೆ ನೀಡುವ ವಿಚಾರವಾಗಿ ಮಾತನಾಡಿದ ಅವರು,  ಮಕ್ಕಳಿಗೆ ಲಸಿಕೆ ಸಿಗುತ್ತಿರುವುದು ನಿಜಕ್ಕೂ ಸಿಹಿ ಸುದ್ದಿ. ಮಕ್ಕಳಿಗೆ ಲಸಿಕೆ ಬಂದರೆ ಬೇಗನೇ ಕೊಟ್ಟು ಮುಗಿಸುತ್ತೇವೆ. ಶಾಲೆಯಲ್ಲಿಯೇ ಲಸಿಕೆ‌ ಕೊಡುವ ಚಿಂತನೆ ಇದೆ ಎಂದಿದ್ದಾರೆ.


ಏಕೋಪಾಧ್ಯಾಯ ಶಾಲೆಗಳ ಸುಧಾರಣೆಗೆ ಕ್ರಮ


ಹಾಗೆಯೇ ರಾಜ್ಯದಲ್ಲಿನ ಏಕೋಪಾಧ್ಯಾಯ ಶಾಲೆ ವಿಚಾರವಾಗಿ ಸಹ ಇಲಾಖೆ ಗಮನ ಹರಿಸುತ್ತದೆ. ಏಕೋಪಾಧ್ಯಾಯ ಶಾಲೆಗಳಲ್ಲಿ ಮಕ್ಕಳ ಕೊರತೆಯೂ ಇದೆ. ಮೊದಲು ಮಕ್ಕಳ ಸಂಖ್ಯೆ ಹೆಚ್ಚಳ ಮಾಡಬೇಕು ಆ ಬಳಿಕ ಶಿಕ್ಷಕರ ಸಂಖ್ಯೆ ಹೆಚ್ಚಳ ಮಾಡುತ್ತೇವೆ ಎಂದು ಶಿಕ್ಷಣ ಸಚಿವ ನಾಗೇಶ್ ತಿಳಿಸಿದ್ದಾರೆ.


ಇದನ್ನೂ ಓದಿ: ಒಟಿಪಿ ಸಾವಿರಾರು ರೂ ಹಣ ಕಳೆದುಕೊಂಡ ಮಾಜಿ ಡಿಜಿಪಿ- ಕಳೆದುಕೊಂಡ ಹಣ ಎಷ್ಟು ಗೊತ್ತಾ?


ಕಳೆದ 2020ರಲ್ಲೊ ಕೊರೊನಾ ಮೊದಲ ಅಲೆ ಆರಂಭವಾದ ನಂತರ  ಸೋಂಕು ಹರಡುವ ಕಾರಣ ತರಗತಿಗಳನ್ನು ನಿಲ್ಲಿಸಲಾಗಿತ್ತು. ಮಕ್ಕಳಿಗೆ ಆನ್​ಲೈನ್​ ಕ್ಲಾಸ್ ಆರಂಭ ಮಾಡಿದ್ದಲ್ಲದೆ, ಪರೀಕ್ಷೆ ಇಲ್ಲದೆ ಮುಂದಿನ ತರಗತಿಗೆ ತೇರ್ಗಡೆ ಸಹ  ಮಾಡಲಾಗಿತ್ತು.  ಆದರೆ ಸರ್ಕಾರ ಸೋಂಕು ಇಳಿದ ನಂತರ ಶಾಲೆಗಳನ್ನು ಆರಂಭಿಸಲು ನಿರ್ಧರಿಸಿತ್ತು. ಆದರೆ ಸೋಂಕು ಸಂಪೂರ್ಣವಾಗಿ ಕಡಿಮೆಯಾಗದ ಹಾಗೂ ಮಕ್ಕಳಿಗೆ ಲಸಿಕೆ ಸಿಗದ ಕಾರಣ ಶಾಲೆಗಳನ್ನು ಆರಂಭ ಮಾಡಿರಲಿಲ್ಲ.


ಇದೀಗ ಮಕ್ಕಳಿಗೂ ಸಹ ಲಸಿಕೆ ನೀಡಲು ಅನುಮೋದನೆ ಸಿಕ್ಕಿದ್ದು, ಪೋಷಕರಿಗೂ ಮಕ್ಕಳನ್ನು ಶಾಲೆಗೆ ಕಳುಹಿಸಲು ಹೆಚ್ಚು ಭಯಪಡುವ ಅವಶ್ಯಕತೆ ಇರುವುದಿಲ್ಲ. ಇನ್ನು ರಾಜ್ಯದಲ್ಲಿ ಈಗಾಗಲೇ ಡಿಗ್ರಿ , ಪಿಯುಸಿ ಸೇರಿದಂತೆ ಪ್ರೌಢ ಶಾಲೆಗಳನ್ನು ಆರಂಭ ಮಾಡಲಾಗಿದೆ.


ಇದನ್ನೂ ಓದಿ: ಉತ್ತರ ಒಳನಾಡಿನಲ್ಲಿ ಇಂದು ಮಳೆ, ದೀಪಿಕಾ ಪಡುಕೋಣೆ ಗರ್ಭಿಣಿ?; ಬೆಳಗಿನ ಟಾಪ್​ ನ್ಯೂಸ್​ಗಳು


ಆದರೆ ರಾಜ್ಯದಲ್ಲಿ ಕೊರೊನಾ ಸೋಂಕಿನ ಪ್ರಕರಣಗಳು ಇನ್ನೂ ಕಡಿಮೆಯಾಗಿಲ್ಲ. ಅಲ್ಲದೇ ದೇಶದಲ್ಲಿ ಮೂರನೇ ಅಲೆ ಬರುತ್ತದೆ, ಅದು ಮಕ್ಕಳ ಮೇಲೆ ಹೆಚ್ಚು ಪರಿಣಾಂ ಬೀರುತ್ತದೆ ಎಂದು ಹೇಳಲಾಗುತ್ತಿತ್ತು. ಆದರೆ ಸಧ್ಯ ಪ್ರಕರಣಗಳು ನಿಯಂತ್ರಣದಲ್ಲಿದ್ದು, ರಾಜ್ಯದಲ್ಲಿ ವಯರಲ್ ಫ್ಲ್ಯೂ  ಹೆಚ್ಚಿದ್ದು, ಎಚ್ಚರಿಕೆಯಿಂದ ಇರುವುದು ಅಗತ್ಯ.

Published by:Sandhya M
First published: