BIFFES: ಮತ್ತೆ ಬಂತು ಸಿನಿಮಾ ಹಬ್ಬ, ಮಾರ್ಚ್ 3 ರಿಂದ ಬೆಂಗಳೂರು ಫಿಲ್ಮ್ ಫೆಸ್ಟಿವಲ್ ಶುರು!

Bengaluru Film Festival: ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸುನೀಲ್ ಪುರಾಣಿಕ್  ಸಿಎಂ ಅವರನ್ನು ಭೇಟಿ ಮಾಡಿದ್ದು, ಈ ಬಗ್ಗೆ ಮಾಧ್ಯಮಗಳ ಜೊತೆ ಮಾತನಾಡಿದ್ದಾರೆ. ಸಿಎಂ ಜತೆ ಬೆಂಗಳೂರು ಅಂತರಾಷ್ಟ್ರೀಯ ಚಲನಚಿತ್ರೋತ್ಸವ ಬಗ್ಗೆ ಚರ್ಚೆ ನಡೆಸಲಾಗಿದ್ದು, ಭಾರತದಲ್ಲಿ ಇದು ಐದನೇ ದೊಡ್ಡ ಚಲನಚಿತ್ರೋತ್ಸವವಾಗಿದೆ, ಚಲನಚಿತ್ರೋತ್ಸವ ನಡೆಸಲು ಸಿಎಂ ಆದೇಶ ಕೊಟ್ಟಿದ್ದಾರೆ ಎಂದರು. 

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಕೊರೊನಾ (Corona)  ಇರುವ ಕಾರಣ ಸಾರ್ವಜನಿಕವಾಗಿ ಯಾವುದೇ ಕಾರ್ಯಕ್ರಮ ಮಾಡುವುದು ನಿಜಕ್ಕೂ ಕಷ್ಟಕರವಾಗಿದೆ. ಸರ್ಕಾರ (Government) ಕೂಡ ಕೊರೊನಾ ಹರಡುವ ಹಿನ್ನೆಲೆಯಲ್ಲಿ ವೀಕೆಂಡ್​ ಕರ್ಫ್ಯೂ (Weekend Curfew) ಹಾಗೂ ನೈಟ್​ ಕರ್ಫ್ಯೂ (Night Curfew) ಜಾರಿ ಮಾಡಿತ್ತು, ಸದ್ಯ ವೀಕೆಂಡ್​ ಕರ್ಫ್ಯೂ  ರದ್ದು ಮಾಡಿದ್ದರೂ ಸಹ ನೈಟ್​ ಕರ್ಫ್ಯೂ ಸಹ ಕೆಲ ನಿರ್ಬಂಧಗಳನ್ನು ಹೇರಿದೆ. ಇನ್ನು ಕೊರೊನಾ ಮೊದಲನೆಯ ಅಲೆಯಿಂದ ಎಲ್ಲಾ ಉದ್ಯಮಗಳ ಮೇಲೂ ಕೆಟ್ಟ ಪರಿಣಾಮ ಬೀರಿದೆ. 

ಸಿನಿಮಾ ಕ್ಷೇತ್ರದ ಮೇಲಂತೂ ಕೊರೊನಾ ಕರಿನೆರಳು ಬೀರಿದೆ. ಸದ್ಯ ಥಿಯೇಟರ್​ಗಳಲ್ಲಿ ಕೇವಲ 50 ರಷ್ಟು ಅವಕಾಶ ನೀಡಿದೆ. ಈ ಮಧ್ಯೆ ಪ್ರತಿ ವರ್ಷದಂತೆ ಈ ವರ್ಷ ಸಹ ಬೆಂಗಳೂರು ಅಂತರಾಷ್ಟ್ರೀಯ ಚಲನಚಿತ್ರೋತ್ಸವ ಆಚರಿಸಲು ಚಲನಚಿತ್ರ ಅಕಾಡೆಮಿ ನಿರ್ಧರಿಸಿದ್ದು, ಈ ಬಗ್ಗೆ ಸರ್ಕಾರದಿಂದ ಸಹ ಅನುಮತಿ ಲಭಿಸಿದೆ.

ಚಲನಚಿತ್ರೋತ್ಸವಕ್ಕೆ ಸರ್ಕಾರದ ಅನುಮತಿ

ಇದನ್ನೂ ಓದಿ: ಹೊಸ ಅವತಾರದಲ್ಲಿ ಮೂಗುತಿ ಸುಂದರಿ.. ಪಡ್ಡೆ ಹೈಕ್ಳ ಕಣ್ಣು ಕುಕ್ಕುತ್ತಿದೆ ಶ್ರದ್ಧಾ ಶ್ರೀನಾಥ್​ ಕ್ಯೂಟ್ ಟ್ಯಾಟು!

ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸುನೀಲ್ ಪುರಾಣಿಕ್  ಸಿಎಂ ಅವರನ್ನು ಭೇಟಿ ಮಾಡಿದ್ದು, ಈ ಬಗ್ಗೆ ಮಾಧ್ಯಮಗಳ ಜೊತೆ ಮಾತನಾಡಿದ್ದಾರೆ. ಸಿಎಂ ಜತೆ ಬೆಂಗಳೂರು ಅಂತರಾಷ್ಟ್ರೀಯ ಚಲನಚಿತ್ರೋತ್ಸವ ಬಗ್ಗೆ ಚರ್ಚೆ ನಡೆಸಲಾಗಿದ್ದು, ಭಾರತದಲ್ಲಿ ಇದು ಐದನೇ ದೊಡ್ಡ ಚಲನಚಿತ್ರೋತ್ಸವವಾಗಿದೆ, ಚಲನಚಿತ್ರೋತ್ಸವ ನಡೆಸಲು ಸಿಎಂ ಆದೇಶ ಕೊಟ್ಟಿದ್ದಾರೆ ಎಂದರು.

ರಾಜ್ಯದಲ್ಲಿ ಸಹ ಕೊರೊನಾ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆ  ಕೋವಿಡ್ ನಿಯಮಾವಳಿ ಪಾಲಿಸಿ ಚಲನಚಿತ್ರೋತ್ಸವ ನಡೆಸುತ್ತೇವೆ.  ಮಾರ್ಚ್  3 ರಂದು 13ನೇ ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವ ಉದ್ಘಾಟನೆ ನಡೆಯಲಿದ್ದು, ಜಿಕೆವಿಕೆಯಲ್ಲಿ ಚಲನಚಿತ್ರೋತ್ಸವದ ಉದ್ಘಾಟನೆ ಇರಲಿದೆ ಎಂದು ಮಾಹಿತಿ ನೀಡಿದ್ದಾರೆ.

ಮಾರ್ಚ್ 3 ರಿಂದ 13 ನೇ ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವ ನಡೆಯಲಿದ್ದು, ಮಾರ್ಚ್ 3 ರಿಂದ 10 ರವರೆಗೆ 8 ದಿನಗಳ ಕಾಲ ಚಲನಚಿತ್ರೋತ್ಸವ ನಡೆಯಲಿದೆ ‌ಎಂದು ಸುನೀಲ್ ಪುರಾಣಿಕ್ ತಿಳಿಸಿದ್ದಾರೆ.

ಅಪ್ಪು ಇಲ್ಲದ ಮೊದಲ ಚಿತ್ರೋತ್ಸವ 

ಇದನ್ನೂ ಓದಿ: ಗಂಡ ಇದ್ರೂ `ಆ’ ನಟನ ಜೊತೆ ನಮಿತಾ ಖುಲ್ಲಂ ಖುಲ್ಲಾ? ಮ್ಯಾಟರ್​ ತಿಳಿದು ರಾಂಗ್​ ಆದ ಪತಿ!

ಪ್ರತಿ ವರ್ಷವೂ ಈ ಕಾರ್ಯಕ್ರಮವನ್ನು ಅದ್ಭುತವಾಗಿ, ವಿಜೃಂಭಣೆಯಿಮದ ಆಚರಣೆ ಮಾಡಲಾಗುತಿತ್ತು. ಈ ಬಾರಿ ಸಹ ಅದೇ ನಿರೀಕ್ಷೆ ಇದೇ. ಆದರೆ ಈ ಬಾರಿ ಕರ್ನಾಟಕ ರತ್ನ ಪುನೀತ್ ರಾಜ್​ಕುಮಾರ್​ ಇಲ್ಲದ  ಮೊದಲ ಕಾರ್ಯಕ್ರಮವಾಗಿದೆ. ಪುನೀತ್​ ಇಲ್ಲದೇ ಚಂದನವನ ಅನಾಥವಾಗಿದ್ದು, ಈ ಬಾರಿ ಕಾರ್ಯಕ್ರಮದಲ್ಲಿ ಪುನೀತ್ ನೆನಪು ಕಾಡದೇ ಇರದು.
Published by:Sandhya M
First published: