ಜನವರಿಯಿಂದ ಇಂದಿರಾ ಕ್ಯಾಂಟೀನ್​ನಲ್ಲಿ ಸಿಗಲಿದೆ ಕಾಫಿ, ಟೀ; ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್

ಇಂದಿರಾ ಕ್ಯಾಂಟೀನ್ ನಲ್ಲಿ ಬೆಳಗ್ಗೆ ತಿಂಡಿ ಹಾಗೂ ಮಧ್ಯಾಹ್ನದ ಊಟವನ್ನು ಕ್ರಮವಾಗಿ 5 ಮತ್ತು 10 ರೂಪಾಯಿಗೆ ನೀಡಲಾಗುತ್ತಿದೆ. ಈಗ ಸಮ್ಮಿಶ್ರ ಸರ್ಕಾರದಲ್ಲಿ ಬೆಳಗ್ಗಿನ ತಿಂಡಿಯ ಜೊತೆಗೆ ಕಾಫಿ, ಟೀ ನೀಡಲು ನಿರ್ಧರಿಸಲಾಗಿದೆ. ನೂತನ ವ್ಯವಸ್ಥೆ ಜನವರಿಯಿಂದ ಜಾರಿಗೆ ಬರಲಿದೆ.

HR Ramesh | news18
Updated:November 16, 2018, 2:18 PM IST
ಜನವರಿಯಿಂದ ಇಂದಿರಾ ಕ್ಯಾಂಟೀನ್​ನಲ್ಲಿ ಸಿಗಲಿದೆ ಕಾಫಿ, ಟೀ; ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್
ಇಂದಿರಾ ಕ್ಯಾಂಟೀನ್(ಸಾಂದರ್ಭಿಕ ಚಿತ್ರ)
  • News18
  • Last Updated: November 16, 2018, 2:18 PM IST
  • Share this:
ಬೆಂಗಳೂರು (ನ.16): ಮುಂದಿನ ವರ್ಷದ ಜನವರಿಯಿಂದ ಇಂದಿರಾ ಕ್ಯಾಂಟೀನ್​ನಲ್ಲಿ ಕಾಫಿ, ಟೀ ಕೂಡ ಸಿಗಲಿದೆ ಎಂದು ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ತಿಳಿಸಿದರು.

ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ ಇಂದಿರಾ ಕ್ಯಾಂಟೀನ್​ನಲ್ಲಿ 5 ರೂಪಾಯಿಗೆ ಬೆಳಗ್ಗಿನ ತಿಂಡಿ ವ್ಯವಸ್ಥೆ ಕಲ್ಪಿಸಲಾಗಿದೆ. ಇದರೊಂದಿಗೆ ಬೆಳಗ್ಗೆ 5 ರೂಪಾಯಿಗೆ ಟೀ, ಕಾಫಿ ಜೊತೆಗೆ ವಡೆ ನೀಡುವ ವ್ಯವಸ್ಥೆ ಮಾಡಲಾಗಿದೆ. ಜನರಿಂದ ಕೇಳಿಬಂದ ಈ ಸಲಹೆ ಆಧರಿಸಿ, ಕಾಫಿ, ಟೀ ನೀಡುವ ತೀರ್ಮಾನ ತೆಗೆದುಕೊಳ್ಳಲಾಗಿದೆ ಎಂದು ಪರಮೇಶ್ವರ್​ ತಿಳಿಸಿದರು.

ಬಡ ಜನರಿಗ ಕಡಿಮೆ ವೆಚ್ಚದಲ್ಲಿ ಶುಚಿ-ರುಚಿಯಾದ ಊಟ-ಉಪಾಹಾರ ದೊರೆಯಲೆಂಬ ಉದ್ದೇಶದಿಂದ ಈ ಹಿಂದೆ ಸಿದ್ದರಾಮಯ್ಯನವರು ಮುಖ್ಯಮಂತ್ರಿಗಳಾಗಿದ್ದ ಸಂದರ್ಭದಲ್ಲಿ ಬೆಂಗಳೂರಿನಲ್ಲಿ ವಾರ್ಡ್​ಗೊಂದರಂತೆ ಇಂದಿರಾ ಕ್ಯಾಂಟೀನ್ ಗಳನ್ನು ಆರಂಭಿಸಿದ್ದು, ಬಳಿಕ ಅವುಗಳನ್ನು ರಾಜ್ಯಾದ್ಯಂತ ವಿಸ್ತರಿಸಲಾಗಿತ್ತು.

ಇದನ್ನುಓದಿ: ಇಂದಿರಾ ಕ್ಯಾಂಟೀನ್ ನ ಊಟದ ಲೆಕ್ಕದಲ್ಲೂ ಬರೀ ಲೂಟಿ: ನ್ಯೂಸ್18 ಕನ್ನಡ ವಿಶೇಷ ವರದಿ

ಇಂದಿರಾ ಕ್ಯಾಂಟೀನ್ ನಲ್ಲಿ ಬೆಳಗ್ಗೆ ತಿಂಡಿ ಹಾಗೂ ಮಧ್ಯಾಹ್ನದ ಊಟವನ್ನು ಕ್ರಮವಾಗಿ 5 ಮತ್ತು 10 ರೂಪಾಯಿಗೆ ನೀಡಲಾಗುತ್ತಿದೆ. ಈಗ ಸಮ್ಮಿಶ್ರ ಸರ್ಕಾರದಲ್ಲಿ ಬೆಳಗ್ಗಿನ ತಿಂಡಿಯ ಜೊತೆಗೆ ಕಾಫಿ, ಟೀ ನೀಡಲು ನಿರ್ಧರಿಸಲಾಗಿದೆ. ನೂತನ ವ್ಯವಸ್ಥೆ ಜನವರಿಯಿಂದ ಜಾರಿಗೆ ಬರಲಿದೆ.

First published: November 16, 2018, 2:02 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading